Asianet Suvarna News Asianet Suvarna News

ತುಂಬು ಗರ್ಭಿಣಿ ನೇಹಾಗೆ ಸಿಹಿಕಹಿ ಚಂದ್ರು ಸ್ಪೆಷಲ್ ದಡ್ ಬಡ್ ದೋಸೆ! ಫಟಾಫಟ್​ ದೋಸೆ ನೀವೂ ಮಾಡಿ ನೋಡಿ...

ತುಂಬು ಗರ್ಭಿಣಿ ನೇಹಾ ಗೌಡಗೆ ಸಿಹಿಕಹಿ ಚಂದ್ರು ಸ್ಪೆಷಲ್ ದಡ್ ಬಡ್ ದೋಸೆ!  ಫಟಾಫಟ್​ ದೋಸೆ ಮಾಡುವ ವಿಧಾನ ಹೇಳಿಕೊಟ್ಟಿದ್ದಾರೆ ನೋಡಿ. ನೀವೂ ಟ್ರೈ ಮಾಡಿ ನೋಡಿ... 
 

Sihi Kahi Chandru prepared dud bud instant dosa for pregnant Neha Gowda video viral suc
Author
First Published Aug 26, 2024, 6:07 PM IST | Last Updated Aug 26, 2024, 6:07 PM IST

‘ಬಿಗ್ ಬಾಸ್’ ಖ್ಯಾತಿಯ ನಟಿ  ನೇಹಾ ಗೌಡ (Neha Gowda) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಿರುತೆರೆಯ ಜನಪ್ರಿಯ ಜೋಡಿಗಳಾದ ನೇಹಾ ಮತ್ತು ಚಂದನ್ ಗೌಡ ಈಚೆಗಷ್ಟೇ ಭರ್ಜರಿ ಫಂಕ್ಷನ್​ ಮಾಡಿದ್ದಾರೆ. ಇದರಲ್ಲಿ ನೇಹಾ ಅವರಿಗೆ ಸೀಮಂತ ಮಾಡಲಾಗಿದೆ.   ಈ ಕಾರ್ಯಕ್ರಮಕ್ಕೆ ಕನ್ನಡ ಕಿರುತೆರೆಯ ನಟ ನಟಿಯರು ಆಗಮಿಸಿ ಶುಭ ಹಾರೈಸಿದ್ದಾರೆ.  ಅದರ ನಡುವೆಯೇ ಅವರಿಗೆ ಸಿಹಿಕಹಿ ಚಂದ್ರು ಅವರು, ನಟಿಗೆ ಸ್ಪೆಷಲ್ ದಡ್ ಬಡ್ ದೋಸೆ ಮಾಡಿಕೊಟ್ಟಿದ್ದಾರೆ. ಸ್ಟಾರ್​ ಸುವರ್ಣದಲ್ಲಿ ಪ್ರಸಾರ ಆಗ್ತಿರೋ ಬೊಂಬಾಟ್​ ಭೋಜನ ಕಾರ್ಯಕ್ರಮಕ್ಕೆ ಆಗಮಿಸಿರುವ ಗರ್ಭಿಣಿ ನೇಹಾ ಅವರಿಗೆ ವಿಶೇಷ ರೀತಿಯಲ್ಲಿ ಆತಿಥ್ಯ ಮಾಡಿರುವ ಚಂದ್ರು ಅವರು, ವಿಶೇಷ ಭೋಜನ ಮಾಡಿಕೊಟ್ಟಿದ್ದಾರೆ. 

ಗರ್ಭಿಣಿಯರಿಗೆ ಏನೇನೋ ಆಸೆಯಾಗುವುದು ಇದೆ. ನೇಹಾ ಅವರಿಗೆ ದೋಸೆ ತಿನ್ನೋ ಆಸೆಯಂತೆ. ದೋಸೆಯಂದ್ರೆ ನನಗೆ ಆಗ್ತಿರಲಿಲ್ಲ. ಇದೀಗ ದೋಸೆ ಖಾಲಿ ಆದ ತಕ್ಷಣ ಮತ್ತೆ ರೀಸ್ಟಾಕ್​ ಅಂದಿದ್ದಾರೆ. ಅದಕ್ಕಾಗಿ ಫಟಾಫಟ್​ ಮಾಡುವ ದೋಸೆಯನ್ನು ಮಾಡಿಕೊಟ್ಟಿದ್ದಾರೆ ಸಿಹಿಕಹಿ ಚಂದ್ರು. ಈ ದೋಸೆ ಮಾಡುವ ವಿಧಾನ ಹೀಗಿದೆ:

ಬ್ಯಾಚುಲರ್​ ಚಿತ್ರಾನ್ನ ಮಾಡಿದ ಚಂದನ್ ಶೆಟ್ಟಿ: ಬೇಗ್​ ಮದ್ವೆಯಾಗಿ ಗುರೂ ಅಂತಿರೋ ಫ್ಯಾನ್ಸ್​

ಮಿಕ್ಸಿ ಜಾರಿಗೆ ಸಮಪ್ರಮಾಣದಲ್ಲಿ ಬಅಂಬೆ ರವೆ ಮತ್ತು ಅಕ್ಕಿ ಹಿಟ್ಟು ಹಾಕಿ ಎರಡನ್ನೂ ನೂಸ್​ ಆದ ಪಭಡರ್​ ಆಗುವಂತೆ  ಪೌಡರ್​ ಮಾಡಿಕೊಳ್ಳಬೇಕು. ಆ ಮಿಶ್ರಣಕ್ಕೆ ಒಂದು ಕಪ್​ ಮೊಸರು ಹಾಕಿ ಚೆನ್ನಾಗಿ ರುಬ್ಬಬೇಕು. ಒಂದು ಮಿಕ್ಸಿಂಗ್​ ಬೌಲ್​ಗೆ ರುಬ್ಬಿದ ಮಿಶ್ರನ ಹಾಕಿ, ದೋಸೆ ಹಿಟ್ಟಿಗೆ ಬೇಕಾದಷ್ಟು ನೀರನ್ನು ಹಾಕಿ 10 ನಿಮಿಷ ಹಾಗೆಯೇ ಇಡಿ. ಮಸಾಲೆಯ ಕೆಂಪು ಕೆಂಪು ಚಟ್ವಿ ತಯಾರಿಸಿಕೊಳ್ಳಲು ಗುಂಟೂರು ಮೆಣಸಿಕ ಕಾಯಿ ಮೂರು, ಬ್ಯಾಡಗಿ ಮೆಣಿನಕಾಯಿ 5-6, 5-6 ಬೆಳ್ಳುಳ್ಳಿ ಎಸಳು, ಅರ್ಧ ಚಮಚ ಜೀರಿಗೆ, ಸ್ವಲ್ಪ ತೆಂಗಿನಕಾಯಿ ತುರಿ, ಸ್ವಲ್ಪ ಉಪ್ಪು ಹಾಗೂ ನೀರು ಹಾಕಿ ಹುಡಿಗಡಲೆ ಹಾಕಿ ರಿಬ್ಬಿದರೆ ಮಸಾಲೆ ಚಟ್ನಿ ರೆಡಿ.

ಕಲಸಿಟ್ಟ ದೋಸೆ ಹಿಟ್ಟಿಗೆ ಅರ್ಧ ಚಮಚ ಸಕ್ಕರೆ, ರುಚಿಗೆ ಉಪ್ಪು, ಸ್ವಲ್ಪ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಬೇಕು. ಮಸಾಲೆಯ ಕೆಂಪು ಚಟ್ನಿಯನ್ನು ತೆಳುವಾಗಿ ಸವರಿ, ಸ್ವಲ್ಪ ತುಪ್ಪ ಹಾಕಿ ಬೇಸಿಸಬೇಕು. ಮಧ್ಯದಲ್ಲಿ ಆಲೂಗಟ್ಟೆ ಪಲ್ಯ ಸ್ವಲ್ಪ ಇಟ್ಟು ದೋಸೆಯನ್ನು ಅರ್ಧ ಭಾಗವಾಗುವಂತೆ ಮಡಿಚಿದರೆ ಗರಿಗರಿ ಬಿಸಿಬಿಸಿ ದೋಸೆ ರೆಡಿ. 

ದ್ವಾಪರ ಹಾಡಿಗೆ 'ಕನ್ನಡತಿ' ರಮೋಲಾ ಬೆಲ್ಲಿ ಡಾನ್ಸ್​: ನಾಯಕಿಯಾಗಿ ನೋಡೋದು ಯಾವಾಗ ಕೇಳ್ತಿದ್ದಾರೆ ಫ್ಯಾನ್ಸ್​

Latest Videos
Follow Us:
Download App:
  • android
  • ios