Asianet Suvarna News Asianet Suvarna News

ಭಾಗ್ಯಲಕ್ಷ್ಮಿ ಆದರ್ಶ ಕುಸುಮತ್ತೆಗೆ ಹುಟ್ಟುಹಬ್ಬದ ಸಂಭ್ರಮ: ಜೈಲುಪಾಲಾಗದಿರಲಿ ಎಂದು ಹಾರೈಸ್ತಿರೋ ಫ್ಯಾನ್ಸ್​

ಕಲರ್ಸ್​ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಕುಸುಮಾ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಪದ್ಮಜಾ ರಾವ್​ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಚೆಕ್​ಬೌನ್ಸ್​ ಕೇಸ್​ನಲ್ಲಿ ಸಿಲುಕಿರೋ ನಟಿಗೆ ಜೈಲಾಗದಿರಲಿ ಎಂದು ಹಾರೈಸುತ್ತಿದ್ದಾರೆ ಅಭಿಮಾನಿಗಳು.
 

Bhagyalakshmi serial mother in law Kusuma ie Padmaja Rao celebrating birthday suc
Author
First Published Sep 10, 2024, 1:22 PM IST | Last Updated Sep 10, 2024, 1:23 PM IST

ಪದ್ಮಜಾ ರಾವ್​ ಎಂದರೆ ಬಹುಶಃ ಈಗಿನ ಬಹುತೇಕರಿಗೆ ತಿಳಿಯಲಿಕ್ಕಿಲ್ಲ. ಆದರೆ, ಕಲರ್ಸ್​ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿಯ   ಕುಸುಮತ್ತೆ ಎಂದರೆ ಸಾಕು ಆದರ್ಶ ಮಾತೆ ಕಣ್ಣೆದುರಿಗೆ ಬರುತ್ತಾಳೆ. ಇದ್ದರೆ ಇಂಥ ಅತ್ತೆ ಇರಬೇಕು, ಎಲ್ಲರಿಗೂ ಇಂಥ ಅತ್ತೆ ಸಿಗಬೇಕು ಎನ್ನುವ ಕ್ಯಾರೆಕ್ಟರ್​ ಕುಸುಮಳದ್ದು. ಸೊಸೆಗಾಗಿ ಮಗನ ವಿರುದ್ಧವೇ ತಿರುಗಿ ಬೀಳುವ ಅತ್ತೆಯಂದಿರು ಬಹಳ ಕಡಿಮೆ ಎಂದೇ ಹೇಳಬಹುದು. ಆದರೆ ರೆಬಲ್​ ಅತ್ತೆ ಈಕೆ. ಸೊಸೆ ಭಾಗ್ಯಳಿಗಾಗಿ ಮಗ ತಾಂಡವ್​ ವಿರುದ್ಧ ಅದೆಷ್ಟು ಬಾರಿ ತಿರುಗಿ ಬಿದ್ದಿದ್ದಾಳೋ ಗೊತ್ತಿಲ್ಲ. ಆದರೆ ಒಂದೇ ಒಂದು ನೋವು ಎಂದರೆ, ಇಂತ ರೆಬಲ್​ ಅತ್ತೆಗೆ ತನ್ನ ಮಗ ಇನ್ನೊಂದು ಮದ್ವೆಯಾಗ್ತಿರೋ ವಿಷಯ ತಿಳಿಯದೇ ಹೋದದ್ದು. ಆದರೆ ಇದೀಗ ಅದು ಕೂಡ ಬಹಿರಂಗಗೊಂಡಿದೆ. ಮಗನ ಮದುವೆ ಪತ್ರಿಕೆ ಕೈಸೇರಿದೆ. ಅದನ್ನು ನೋಡಿ ಬರಸಿಡಿಲು ಬಡಿದವಳಂತೆ ಕುಸುಮಾಳಿಗೆ ತಲೆತಿರುಗಿದೆ. ಅಬ್ಬಾ! ಅದೆಂಥ ಆ್ಯಕ್ಟಿಂಗ್​ ಎಂದು ಸೋಷಿಯಲ್​ ಮೀಡಿಯಾದಲ್ಲಿ ಒಂದೇ ಸಮನೆ ಚಪ್ಪಾಳೆಗಳು ಸುರಿಮಳೆಯಾಗಿದೆ. 

ಕುಸುಮಳ ಪಾರ್ಟ್ ನೋಡಿ ಈಗಿನ ಅತ್ತೆಯಂದಿರು ಬದಲಾದರೆ ಅಷ್ಟೇ ನನಗ ಸಿಗುವ ಬಹುಮಾನ ಎಂದು ಹೇಳುವ ನಟಿಯೇ  ಪದ್ಮಜಾ ರಾವ್​. ಇಂದು ಇವರಿಗೆ ಹುಟ್ಟುಹಬ್ಬದ ಸಂಭ್ರಮ. ಕನ್ನಡ ಚಿತ್ರರಂದಲ್ಲಿಯೂ ಆ್ಯಕ್ಟೀವ್​ ಆಗಿರೋ ಪದ್ಮಜಾ ಅವರು ಕಿರುತೆರೆಯಲ್ಲಿ ಅದ್ಭುತ ಕಲಾವಿದೆಯಾಗಿ ಗುರುತಿಸಿಕೊಂಡವರು. ಜೊತೆಗೆ  ನಿರ್ದೇಶಕಿ ಕೂಡ. ಚಿತ್ರರಂಗಕ್ಕೆ ಬರುವ ಮುನ್ನ ಚಿತ್ರ ನಿರ್ಮಾಪಕ ಮತ್ತು ಕಿರುತೆರೆ ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಿರೋ ಅನುಭವ ಇರುವ ನಟಿಗೆ ಬ್ರೇಕ್​ ಸಿಕ್ಕಿದ್ದು,  ವೈಶಾಲಿ ಕಾಸರವಳ್ಳಿಯವರ `ಮೂಡಲ ಮನೆ' ಸೀರಿಯಲ್​ ಮೂಲಕ. ಇಲ್ಲಿಂದ ಅವರು ಮುಖ್ಯ ರೋಲ್​ನಲ್ಲಿ ಹಲವು ಸೀರಿಯಲ್​ಗಳಲ್ಲಿ ನಟಿಸಿದ್ದಾರೆ.   ಬಳಿಕ ರವಿಚಂದ್ರನ್ ರವರ ಹಠವಾದಿ ಚಿತ್ರದ ಮೂಲಕ ಬೆಳ್ಳಿಪರದೆಗೂ ಎಂಟ್ರಿ ಕೊಟ್ಟರು.  ಇವರಿಗೆ ತುಂಬಾ ಹೆಸರು ತಂದುಕೊಟ್ಟ ಚಿತ್ರ  `ಮುಂಗಾರು ಮಳೆ'. ಬಳಿಕ ಸೀರಿಯಲ್​ ನಿರ್ದೇಶನಕ್ಕೂ ಇಳಿದಿದ್ದಾರೆ. 

ಕೊನೆಗೂ ಮಗ ತಾಂಡವ್‌ನ ವೆಡ್ಡಿಂಗ್‌ ಕಾರ್ಡ್ ಸಿಕ್ಕೇ ಬಿಡ್ತು! ಕೋಮಾಕ್ಕೆ ಹೋಗ್ತಾಳಾ ಕುಸುಮಾ?

ಇನ್ನು ಇವರ ಪರ್ಸನಲ್​ ಲೈಫ್​  ಕುರಿತು ಹೇಳುವುದಾದರೆ, ಇವರು ಮನೆಯಲ್ಲಿ ಹಿರಿಯ ಮಗಳು. ಮೊದಲ ಮದುವೆ ಮುರಿದು ಬಿತ್ತು. ಗಂಡನ ಮನೆಯಲ್ಲಿ ಕಿರುಕುಳ ಆಗಿತ್ತು ಜೊತೆಗೆ ನಟನೆಗೆ ಅವಕಾಶ ಸಿಗಲಿಲ್ಲ ಎಂದು ಹಿಂದೊಮ್ಮೆ ಇವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.  ಡಿವೋರ್ಸ್​ ತೆಗೆದುಕೊಂಡು ಮತ್ತೊಂದು ಮದುವೆಯಾಗಿದ್ದಾರೆ.  ಮೊದಲ ಮದುವೆಯಿಂದ ಸಂಜೀವ್‌ ಎನ್ನುವ ಮಗ ಇದ್ದಾರೆ. ಇವರು ಪ್ರಾಣಿ ಅಭಯ ಕೇಂದ್ರ ನಡೆಸುತ್ತಿದ್ದು, ನೂರಾರು  ವಿವಿಧ ಪ್ರಾಣಿಗಳನ್ನು ಸಾಕುತ್ತಿದ್ದಾರೆ.  ಎರಡನೆಯ ಮದುವೆಯಾದ ಬಳಿಕವಷ್ಟೇ ಇವರು ಕಿರುತೆರೆಗೆ ಮತ್ತೆ ವಾಪಸಾದರು.  ಮೂಡಲ ಮನೆ ಧಾರಾವಾಹಿಯಲ್ಲಿ ಪಾತ್ರ ಗಿಟ್ಟಿಸಿಕೊಂಡರು. ಅಲ್ಲಿಂದ ಅವರು ಸಾಕಷ್ಟು ಕಿರುಚಿತ್ರಗಳಲ್ಲಿ ನಟಿಸಿದ್ದು ಮನೆ ಮಾತಾಗಿದ್ದಾರೆ.

ಆದರೆ ಈಗ ಇವರ ಸುತ್ತಲೂ ಚೆಕ್​ಬೌನ್ಸ್​ ಪ್ರಕರಣ ಸುತ್ತುವರೆದಿದ್ದು, ಮೂರು ತಿಂಗಳ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. ಜೊತೆಗೆ 40.20 ಲಕ್ಷ ರೂಪಾಯಿ ದಂಡ ಕೂಡ ಕೋರ್ಟ್​ ವಿಧಿಸಿದೆ. ‘ವೀರೂ ಟಾಕೀಸ್’ ಸಂಸ್ಥೆಯ ಮಾಲೀಕ ವೀರೇಂದ್ರ ಶೆಟ್ಟಿ ಅವರ ಬಳಿ ನಟಿ  40 ಲಕ್ಷ ರೂಪಾಯಿ ಸಾಲ ಪಡೆದಿದ್ದರು.  ಆದರೆ ಪದ್ಮಜಾ  ಹಣ ಪಾವತಿ ಮಾಡಿಲ್ಲ ಎನ್ನಲಾಗಿದ್ದು, ವಿರೇಂದ್ರ ಶೆಟ್ಟಿ ಅವರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.  ಆದರೆ ವಿಚಾರಣೆ ವೇಳೆ ವಿಭಿನ್ನ ಹೇಳಿಕೆ ನೀಡಿದ್ದರೂ ತಮ್ಮ ಹೇಳಿಕೆಗಳಿಗೆ ಸಾಕ್ಷಿ ನೀಡಲು ವಿಫಲರಾದರು.  ಆದ್ದರಿಂದ ಕೋಟ್​ರ್ ಅವರಿಗೆ ದಂಡ ಮತ್ತು ಮೂರು ತಿಂಗಳ ಶಿಕ್ಷೆ ವಿಧಿಸಿದೆ. ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟಿ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಕುಸುಮಾ ಪಾತ್ರದಲ್ಲಿ ಪದ್ಮಜಾ ರಾವ್​ ಇಲ್ಲದ ಭಾಗ್ಯಲಕ್ಷ್ಮಿ ಸೀರಿಯಲ್​ ನೆನೆಸಿಕೊಳ್ಳಲೂ ಸಾಧ್ಯವಿಲ್ಲ ಎನ್ನುತ್ತಿರುವ ಅಭಿಮಾನಿಗಳು, ಇವರಿಗೆ ಜೈಲು ಶಿಕ್ಷೆ ಆಗದಿರಲಪ್ಪಾ ಎಂದು ಹಾರೈಸುತ್ತಿದ್ದಾರೆ. ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಈಗಷ್ಟೇ ಮಗನ ವಿಷಯ ಕುಸುಮಾಗೆ ತಿಳಿದಿದ್ದು, ಇನ್ನು ಸೀರಿಯಲ್​ ಏನೆಲ್ಲಾ ಟರ್ನ್​ ತೆಗೆದುಕೊಳ್ಳಲಿದೆಯೋ ನೋಡಬೇಕಿದೆ. ಅದರ ನಡುವೆಯೇ ಜೈಲು ಶಿಕ್ಷೆಯ ತೀರ್ಪು ಬಂದಿರುವುದು ಫ್ಯಾನ್ಸ್​ಗೆ ಶಾಕ್​ ಕೊಟ್ಟಿದೆ! 
 

ಗೌರಿ ವಾರ್ನ್​ ಮಾಡಿದ್ರೂ ಎಲ್ಲರೆದುರು ಪ್ರಿಯಾಂಕಾಳ ಬಟ್ಟೆ ಬಿಚ್ಚಿ ಕಿಸ್​ ಕೊಟ್ಟ ಶಾರುಖ್! ವಿಡಿಯೋ ವೈರಲ್​

Latest Videos
Follow Us:
Download App:
  • android
  • ios