ಸುಷ್ಮಾರ ಭರತನಾಟ್ಯ ಮತ್ತೊಮ್ಮೆ ಕಣ್ತುಂಬಿಸಿಕೊಳ್ಳೋ 'ಭಾಗ್ಯ'! ಆರ್ಯಭಟ ಪ್ರಶಸ್ತಿ ನಟಿಯ ಲೈಫ್ ಸ್ಟೋರಿ ಇಲ್ಲಿದೆ...
ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಸುಷ್ಮಾ ಕೆ.ರಾವ್ ಅವರ ಭರತನಾಟ್ಯವನ್ನು ಮತ್ತೊಮ್ಮೆ ಕಣ್ತುಂಬಿಸಿಕೊಳ್ಳುವ ಅವಕಾಶ ಅವರ ಅಭಿಮಾನಿಗಳಿಗೆ ಸಿಕ್ಕಿದೆ.
ಭಾಗ್ಯಳಿಗೆ ಹೆಜ್ಜೆ ಹೆಜ್ಜೆಗೂ ಅವಮಾನವೇ ಎದುರಾಗುತ್ತಿದೆ. ಭಾಗ್ಯಳನ್ನು ಹೇಗಾದರೂ ಮಾಡಿ ಗಂಡ ತಾಂಡವ್ ಒಪ್ಪಿಕೊಳ್ಳುವಂತೆ ಮಾಡುವ ಪಣ ತೊಟ್ಟಿದ್ದಾಳೆ ಅತ್ತೆ ಕುಸುಮಾ. ಇದಾಗಲೇ ಅವಳನ್ನು ಬದಲಾಯಿಸಲು ಡಾನ್ಸ್ ಕ್ಲಾಸ್ಗೂ ಹಾಕಿದ್ದಳು. ಆದರೆ ಅಲ್ಲಿಯೂ ಅವಳಿಗೆ ಅವಮಾನ ತಪ್ಪಲಿಲ್ಲ. ಡಾನ್ಸ್ ಟೀಚರ್ ಶ್ರೇಷ್ಠಾಳ ಅಣತಿಯಂತೆ ಭಾಗ್ಯಳಿಗೆ ಇನ್ನಿಲ್ಲದ ಟಾರ್ಚರ್ ಕೊಟ್ಟು ಡಾನ್ಸ್ ಕ್ಲಾಸ್ನಿಂದ ಅವಮಾನ ಮಾಡಿ ಕಳುಹಿಸಿದ್ದಾಳೆ. ಆದರೆ ಅದೇ ವೇಳೆಗೆ ಭಾಗ್ಯಳ ಭರಟನಾಟ್ಯವನ್ನೂ ಸೀರಿಯಲ್ನಲ್ಲಿ ತೋರಿಸಲಾಗಿದೆ. ಸೀರಿಯಲ್ ಏನೇ ಇರಲಿ, ಭರತನಾಟ್ಯ ಕಲಾವಿದೆ ಆಗಿರುವ ಭಾಗ್ಯ ಅರ್ಥಾತ್ ಸುಷ್ಮಾ ಕೆ. ರಾವ್ ಅವರ ಶಾಸ್ತ್ರೀಯ ನೃತ್ಯಕ್ಕೆ ವೀಕ್ಷಕರು, ನೆಟ್ಟಿಗರು ಮನ ಸೋತಿದ್ದಾರೆ.
ಇದೀಗ ಖುದ್ದು ಸುಷ್ಮಾ ಅವರೇ ಈ ವಿಡಿಯೋ ಅನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಂದಹಾಗೆ ಇಂದು ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಅತ್ತೆ ಕುಸುಮಾಳ ಹುಟ್ಟುಹಬ್ಬದಂದು ಮತ್ತೊಮ್ಮೆ ಭಾಗ್ಯಳ ಭರತನಾಟ್ಯ ನೋಡುವ ಅವಕಾಶ ಕೂಡ ಲಭಿಸಲಿದೆ ಎನ್ನುವುದು ತಿಳಿಯುತ್ತದೆ. ಭಾಗ್ಯಳಿಗೆ ಭರತನಾಟ್ಯದ ಡ್ರೆಸ್ ಹಾಕಿಕೊಂಡು ಬರುವಂತೆ ಅತ್ತೆ ಕುಸುಮಾ ಹೇಳಿದ್ದಾಳೆ. ಬಹುಶಃ ಡಾನ್ಸ್ ಟೀಚರ್ಗೆ ಟಾಂಗ್ ಕೊಡುವ ನಿಟ್ಟಿನಲ್ಲಿ, ತನ್ನ ಸೊಸೆಗೆ ಆಕೆ ಮಾಡಿರುವ ಅವಮಾನವನ್ನು ತೀರಿಸಿಕೊಳ್ಳಲು ಅತ್ತೆ ಕುಸುಮಾ ಈ ರೀತಿ ಸ್ಕೆಚ್ ಹಾಕಿಬಹುದು ಎನ್ನುವುದು ನೆಟ್ಟಿಗರ ಅಭಿಮತ. ಅದೇನೇ ಇರಲಿ, ಒಟ್ಟಿನಲ್ಲಿ ಸುಷ್ಮಾ ಅವರ ಭರತನಾಟ್ಯವನ್ನು ಈ ರೀತಿಯಾದರೂ ಸೀರಿಯಲ್ ಮೂಲಕ ನೋಡುವ ಅವಕಾಶ ಅವರ ಅಭಿಮಾನಿಗಳಿಗೆ ಸಿಗುತ್ತಿದೆ.
ಬ್ರಹ್ಮಗಂಟು ಚಿರು-ದೀಪಾ ರೊಮಾಂಟಿಕ್ ಡಾನ್ಸ್ : ಇಲ್ಲಾದ್ರೂ ಸೋಡಾ ಗ್ಲಾಸ್ ತೆಗೀಬಾರ್ದಾ ಕೇಳ್ತಿರೋ ಫ್ಯಾನ್ಸ್
ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.
ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಅಷ್ಟಕ್ಕೂ ಕುಸುಮಾ ಒಂದು ತಿಂಗಳಿನಲ್ಲಿ ಭಾಗ್ಯಳನ್ನು ಬದಲಾಯಿಸುವ ಪಣ ತೊಟ್ಟಿದ್ದಾಳೆ. ಭಾಗ್ಯ ನಿನಗೆ ಹೇಗೆ ಬೇಕೋ ಹಾಗೆ ಇರ್ತಾಳೆ. ಇವಳೇ ನನ್ನ ಹೆಂಡತಿ ಅನ್ನೋ ರೀತಿಯಲ್ಲಿ ಭಾಗ್ಯ ಬದಲಾಗ್ತಾಳೆ. ಭಾಗ್ಯಳನ್ನು ಬಿಟ್ಟು ಯಾರನ್ನೂ ನೀನು ನೋಡಲ್ಲ ಹಾಗೆ ಇರ್ತಾಳೆ ಎಂದೆಲ್ಲಾ ಹೇಳಿದ್ದಾಳೆ. ಅದೇ ರೀತಿ ಭಾಗ್ಯಳನ್ನು ಚೆನ್ನಾಗಿ ರೆಡಿ ಮಾಡಿದ್ದಳು. ಅರೆ ಕ್ಷಣ ಭಾಗ್ಯಳ ಸೌಂದರ್ಯ ನೋಡಿ ತಾಂಡವ್ ಖುಷಿ ಪಟ್ಟರೂ ಕೊನೆಗೆ ಇನ್ನಿಲ್ಲದ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದ. ಗೂಬೆ, ಕತ್ತೆ ಎಂದಿದ್ದ. ಗೂಬೆಗೆ ಸೌಂದರ್ಯ ಮಾಡಿದರೆ ನವಿಲು ಆಗಲ್ಲ. ಮಾಡುವ ನಾಲ್ಕು ದೋಸೆ, ಚಪಾತಿಗೆ ಏಪ್ರಾನ್ ಸಾಕು, ಇದೆಲ್ಲಾ ಯಾಕೆ ಎಂದು ನಿಂದಿಸಿದ್ದ. ಆದರೂ ಈಗ ತಾಂಡವ್ ಭಾಗ್ಯಳನ್ನು ಒಪ್ಪಿಕೊಳ್ಳುವಂತೆ ಮಾಡುವ ಪಣ ಬಿಡಲಿಲ್ಲ ಕುಸುಮಾ. ಭಾಗ್ಯಳಿಗೆ ಈಗ ಮಾವ ಸಾಥ್ ನೀಡಿದ್ದು, ಕಾರು ಕಲಿಸಲು ಹೊರಟಿದ್ದಾನೆ. ಅಡುಗೆ ಮಾಡ್ತಿರೋ ಭಾಗ್ಯಳನ್ನು ಅರ್ಧಕ್ಕೆ ಕರೆದು ಕಾರು ಕಲಿಸಲು ಕರೆದುಕೊಂಡು ಹೋಗಿದ್ದಾನೆ ಮಾವ. ಆದರೆ ಇನ್ನೂ ಭಾಗ್ಯಳಿಗೆ ಯಾಕೆ ಇವರೆಲ್ಲಾ ಹೀಗೆ ಮಾಡ್ತಾ ಇದ್ದಾರೆ ಎನ್ನುವುದೇ ತಿಳಿದಿಲ್ಲ. ಒಂದು ವೇಳೆ ನಿನ್ನ ಗಂಡನೇ ಹೀಗೆ ಮಾಡಿದ್ರೆ ಎಂದು ಬಾಯಿಬಿಟ್ಟು ಅತ್ತೆ ಕೇಳಿದಾಗಲೂ ಭಾಗ್ಯಳಿಗೆ ವಿಷಯ ತಿಳಿದಿಲ್ಲ. ಇಂಥ ವಿಚಿತ್ರ ರೀತಿಯಿಂದಲೇ ಸೀರಿಯಲ್ ಮುಂದೆ ಸಾಗಿರುವುದಕ್ಕೆ ವೀಕ್ಷಕರಿಂದ ಅಸಮಾಧಾನವೂ ಕೇಳಿಬರುತ್ತಿದೆ.
ಅಮೃತಧಾರೆ ಗೌತಮ್ ದಿವಾನ್ ರಿಯಲ್ ಮನೆ 'ಮ Na' ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ...