ಗಂಡನ ಜೊತೆ ಮದ್ವೆಯಾಗಲು ರೆಡಿಯಾದ ಶ್ರೇಷ್ಠಾಳಿಗಾಗಿ ಹೂವಿನ ಹಾಸಿಗೆ ಸಿದ್ಧಪಡಿಸ್ತಿರೋ ಭಾಗ್ಯ!
ತನ್ನ ಗಂಡನನ್ನೇ ಬುಟ್ಟಿಗೆ ಹಾಕಿಕೊಂಡಿರೋ ಶ್ರೇಷ್ಠಾಳ ಮದುವೆಗೆ ಹೇಗೆಲ್ಲಾ ನೆರವಾಗ್ತಿದ್ದಾಳೆ ನೋಡಿ ಭಾಗ್ಯ! ವಿಡಿಯೋ ನೋಡಿ ನೆಟ್ಟಿಗರು ಏನೆಲ್ಲಾ ಹೇಳಿದ್ರು?
ಭಾಗ್ಯ ಗುಲಾಬಿ ಹೂವುಗಳ ಎಸಳು ಬಿಡಿಸುತ್ತಿದ್ದಾಳೆ. ಬುಟ್ಟಿ ತುಂಬಾ ಗುಲಾಬಿ ಹೂವಿನ ಪಕಳೆಗಳ ರಾಶಿರಾಶಿ ಮಾಡಿ ಹಾಕಿದ್ದಾಳೆ. ಅಷ್ಟಕ್ಕೂ ಹೂವಿನ ಎಸಳು ಬಿಡಿಸುತ್ತಿರುವುದು ತನ್ನ ಸವತಿಯಾಗಲು ಹೊರಟಿರುವ ಶ್ರೇಷ್ಠಾಳಿಗೆ! ಹೌದು. ಭಾಗ್ಯಳ ಸವತಿಯಾಗಲು ರೆಡಿಯಾಗಿರುವವಳು ಶ್ರೇಷ್ಠಾ. ಭಾಗ್ಯಳ ಗಂಡನನ್ನೇ ಬುಟ್ಟಿಗೆ ಹಾಕಿಕೊಂಡು ಎಂಗೇಜ್ಮೆಂಟ್ ಅನ್ನೂ ಮಾಡಿಕೊಂಡಾಗಿದೆ. ಈಗ ಮದುವೆಯ ತಯಾರಿ ಭರ್ಜರಿಯಾಗಿ ನಡೆದಿದೆ. ಇದಕ್ಕಾಗಿ ಪ್ರೀ ವೆಡ್ಡಿಂಗ್ ಶೂಟ್ ನಡೆಯುತ್ತಿದೆ. ಈ ಶೂಟಿಂಗ್ನಲ್ಲಿ ಹೂವಿನ ಎಸಳುಗಳನ್ನು ಚೆಲ್ಲುತ್ತಲೇ ವಿಡಿಯೋ ಮಾಡಲು ಶ್ರೇಷ್ಠಾ ತಯಾರಿ ನಡೆಸಿದ್ದಾಳೆ. ಹೂವಿನ ಹಾಸಿಗೆಯ ಮೇಲೆ ಈ ಜೋಡಿ ನಡೆಯಲು ರೆಡಿಯಾಗಿದೆ. ಹೂವಿನ ಹಾಸಿಗೆಗಾಗಿ ಎಸಳನ್ನು ಬಿಡಿಸುವಲ್ಲಿ ಭಾಗ್ಯ ನಿರತಳಾಗಿದ್ದು ಅದರ ವಿಡಿಯೋ ವೈರಲ್ ಆಗಿದೆ. ಅಬ್ಬಾ! ಸವತಿಯ ಮೇಲೆ ಅದೆಷ್ಟು ಪ್ರೀತಿ ಎಂದು ಹಲವರು ನಟಿಯ ಕಾಲೆಳೆದರೆ, ಅಯ್ಯೋ ಕಣಮ್ಮಾ ಅವಳು ಮದ್ವೆಯಾಗ್ತಿರೋ ನಿನ್ನ ಗಂಡನನ್ನೇ, ಬೇಗ ಗೊತ್ತು ಮಾಡಿಕೋ ಎಂದು ಭಾಗ್ಯಳಿಗೆ ಹೇಳುತ್ತಿದ್ದಾರೆ.
ಈ ವಿಡಿಯೋ ಶೇರ್ ಮಾಡಿರುವುದು ಭಾಗ್ಯ ಪಾತ್ರಧಾರಿ ಸುಷ್ಮಾ ಕೆ.ರಾವ್. ಪ್ರೀ ವೆಡ್ಡಿಂಗ್ ಶೂಟಿಂಗ್ನ ತಯಾರಿಗಾಗಿ ಹೂವಿನ ಎಸಳು ಬಿಡಿಸುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ಸುಷ್ಮಾ. ನೋಡಿ ನನ್ನ ಸವತಿಗಾಗಿ ಎಲ್ಲಾ ರೆಡಿ ಮಾಡ್ತಾ ಇದ್ದೇನೆ ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗಿದೆ. ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಭಾಗ್ಯಳಿಂದಲೇ ಕದ್ದಿರೋ ಎರಡು ಲಕ್ಷ ರೂಪಾಯಿಗಳನ್ನು ಅವಳಿಗೇ ನೀಡಿ ಅದನ್ನು ಮತ್ತೆ ವಾಪಸ್ ಕೇಳಿದ್ದಾಳೆ ಶ್ರೇಷ್ಠಾ. ಮೇಲಾಗಿ ಒಂದು ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದಾಳೆ ಭಾಗ್ಯ. ತನ್ನ ಕಿತಾಪತಿ ಯಾರಿಗೂ ತಿಳಿಯಲ್ಲ ಎಂದುಕೊಂಡಿದ್ದ ಶ್ರೇಷ್ಠಾಳಿಗೆ ಶಾಕ್ ಆಗೋಗಿದೆ. ಭಾಗ್ಯಳಿಗೆ ಈ ಕಿತಾಪತಿಯ ಹಿಂದಿನ ಮಾಸ್ಟರ್‌ಮೈಂಡ್ ತನ್ನ ಪತಿಯೇ ಎನ್ನುವ ಅರಿವಿಲ್ಲ. ಆದರೆ ಪೂಜಾಳಿಂದ ಶ್ರೇಷ್ಠಾಳ ಕುತಂತ್ರವಷ್ಟೇ ಬಹಿರಂಗಗೊಂಡಿದೆ.
ಚಂದನ್ ಶೆಟ್ಟಿ ಮತ್ತೊಂದು ಮದ್ವೆಯಾಗ್ತಿದ್ದಾರಾ? ಕಾರಿನ ವಿಷಯ ಹೇಳುತ್ತಲೇ ಮನದಾಳದ ಮಾತು ಬಿಚ್ಚಿಟ್ಟ ಗಾಯಕ
ತಾಂಡವ್ ಜೊತೆ ಪ್ರೀ ವೆಡ್ಡಿಂಗ್ ಶೂಟ್‌ನಲ್ಲಿ ಶ್ರೇಷ್ಠಾ ಬಿಜಿಯಾಗಿದ್ದಾಳೆ. ಇದಾಗಲೇ ಸಕಲ ಸಿದ್ಧತೆ ನಡೆಯುತ್ತಿದೆ. ಅಷ್ಟೊತ್ತಿಗಾಗಲೇ ಪೂಜಾಳಿಂದ ದುಡ್ಡಿನ ವಿಷಯ ಅರಿತ ಭಾಗ್ಯ ಶೂಟಿಂಗ್ ಮಾಡ್ತಿರೋ ಜಾಗಕ್ಕೆ ಬಂದು ಶ್ರೇಷ್ಠಾಳ ಕೆನ್ನೆಗೆ ರಪರಪ ಬಾರಿಸಿದ್ದಾಳೆ. ಒಂದು ಹೊಡೆದ ದುಡ್ಡು ಕದ್ದಿರೋದಕ್ಕೆ, ಇನ್ನೊಂದು ಕದ್ದ ದುಡ್ಡನ್ನು ನನಗೇ ಸಾಲ ಎಂದು ಕೊಟ್ಟಿರೋದಕ್ಕೆ, ಮತ್ತೊಂದು ಮನೆಯವರ ಎದುರು ದುಡ್ಡು ಕೊಡು ಎಂದ ಬೆದರಿಕೆ ಹಾಕಿದ್ದಕ್ಕೆ... ಎನ್ನುತ್ತಲೇ ರಪರಪ ಹೊಡೆದಿದ್ದಾಳೆ. ಈ ಏಟಿಗೆ ತತ್ತರಿಸಿರೋ ಶ್ರೇಷ್ಠಾ ಕೆಳಗೆ ಬಿದ್ದಿದ್ದಾಳೆ.
ಭಾಗ್ಯಳ ಈ ಕಾಳಿ ಅವತಾರ ನೋಡಿ ನೆಟ್ಟಿಗರು ಭೇಷ್ ಭೇಷ್ ಎನ್ನುತ್ತಿದ್ದಾರೆ. ಇದೀಗ ಶ್ರೇಷ್ಠಾ ಮದುವೆಯಾಗುತ್ತಿರುವುದು ತನ್ನ ಗಂಡನನ್ನೇ ಎನ್ನೋ ಸತ್ಯ ಯಾವಾಗ ಈ ಪೆದ್ದು ಭಾಗ್ಯಳಿಗೆ ಗೊತ್ತಾಗೋದು ಎಂದು ಕೇಳುತ್ತಿದ್ದಾರೆ ನೆಟ್ಟಿಗರು. ಅಷ್ಟಕ್ಕೂ ಭಾಗ್ಯಳ ಗೋಳು ಮುಗಿದಿದೆ. ಸ್ಟಾರ್ ಹೋಟೆಲ್ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಒಂದು ಲಕ್ಷ ರೂಪಾಯಿ ಮುಂಗಡ ಹಣ ಅವಳ ಕೈಗೆ ಸಿಕ್ಕಿದೆ. ಸಾಮಾನ್ಯವಾಗಿ ಸ್ಟಾರ್ ಹೋಟೆಲ್ಗಳ ಶೆಫ್ಗಳಿಗೆ ನೀಡುವಂತೆ ಲಕ್ಷ ಸಂಬಳ ಪಡೆಯುತ್ತಾಳೆ ಇನ್ನುಮುಂದೆ ಭಾಗ್ಯ. ಒತ್ತುಶ್ಯಾವಿಗೆಯ ಸ್ಪೆಷಲಿಸ್ಟ್ ಆದ ಭಾಗ್ಯಳ ಕೈಗೆ ಒಂದು ಲಕ್ಷ ರೂಪಾಯಿ ಚೆಕ್ ಬಂದಿದ್ದು, ಅದನ್ನು ಬ್ಯಾಂಕ್ಗೆ ಹೋಗಿ ಹಣ ತಂದಿದ್ದಾಳೆ. ಒಂದು ಪೈಸೆ ದುಡಿಯುವ ತಾಕತ್ತು ಇಲ್ಲ ಎಂದು ಪದೇ ಪದೇ ಹೀಯಾಳಿಸುತ್ತಿದ್ದ ಪತಿ ತಾಂಡವ್. ಆದರೆ ಒಂದೇ ಸಲಕ್ಕೆ ಒಂದು ಲಕ್ಷ ರೂಪಾಯಿ ದುಡಿದಿದ್ದಾಳೆ. ಮನೆಗೆ ಇಎಂಐ ಕೊಡಲು ಭಾಗ್ಯಳಿಂದ ಸಾಧ್ಯವಿಲ್ಲ ಎಂದು ಹಂಗಿಸಿದ್ದ ಪತಿಯ ಕೈಗೆ ದುಡ್ಡನ್ನು ಇಟ್ಟ ಭಾಗ್ಯ, ಎರಡು ತಿಂಗಳ ಇಎಂಐ ತಗೋಳಿ ಎಂದಿದ್ದಾಳೆ.
ನಟಿ ಸೋನಾಕ್ಷಿ ಸಿನ್ಹಾ ಮತಾಂತರ? ಭಾವಿ ಪತಿ ಜಹೀರ್ ಇಕ್ಬಾಲ್ ತಂದೆ ಮಾತೀಗ ವೈರಲ್!