ನಟಿ ಸೋನಾಕ್ಷಿ ಸಿನ್ಹಾ ಮತಾಂತರ? ಭಾವಿ ಪತಿ ಜಹೀರ್‌ ಇಕ್ಬಾಲ್‌ ತಂದೆ ಮಾತೀಗ ವೈರಲ್‌!

ನಟಿ ಸೋನಾಕ್ಷಿ ಸಿನ್ಹಾ ಮದುವೆಯಾದ ಮೇಲೆ ಮತಾಂತರವಾಗ್ತಾರಾ? ನಟಿಯ ಭಾವಿ ಪತಿ ಜಹೀರ್‌ ಇಕ್ಬಾಲ್‌ ತಂದೆ ಹೇಳಿದ್ದೇನು? 
 

Zaheer Iqbals father dismissed reports claiming Sonakshi Sinha convert to Islam after wedding suc

ಸೋನಾಕ್ಷಿ ಸಿನ್ಹಾ ಮತ್ತು ಆಕೆಯ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಾಳೆ ಅಂದರೆ ಜೂನ್ 23 ರಂದು ಈ ಮದುವೆ ನಡೆಯಲಿದೆ. ಈ ಕುರಿತು ಖುದ್ದು  ಜಹೀರ್‌ ತಂದೆ ಇಕ್ಬಾಲ್ ರತನ್ಸಿ ಬಹಿರಂಗಪಡಿಸಿದ್ದಾರೆ. “ಇದು ಹಿಂದೂ ಅಥವಾ ಮುಸ್ಲಿಂ ಆಚರಣೆಗಳನ್ನು ಹೊಂದಿರುವುದಿಲ್ಲ. ಇದು ನಾಗರಿಕ ವಿವಾಹವಾಗಲಿದೆ ಎಂದು ಈ ಸಂದರ್ಭದಲ್ಲಿ  ತಂದೆ ಹೇಳಿದ್ದಾರೆ. ಇದೇ ವೇಳೆ ಹಿಂದೂ-ಮುಸ್ಲಿಂ ಮದುವೆಯಾಗಿರುವ ಹಿನ್ನೆಲೆಯಲ್ಲಿ ಇವರ ಮದುವೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಟಿ ಮದುವೆಯಾದ ಮೇಲೆ ಮತಾಂತರವಾಗುತ್ತಾರೆ ಎಂದೂ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಾಗಿದೆ.

ಇದೀಗ ಜಹೀರ್ ಇಕ್ಬಾಲ್ ತಂದೆ ಈ ಸುದ್ದಿಗೆ ತೆರೆ ಎಳೆದಿದ್ದಾರೆ. ಸೋನಾಕ್ಷಿ  ಮದುವೆಯ ನಂತರ ಇಸ್ಲಾಂಗೆ ಮತಾಂತರಗೊಳ್ಳುತ್ತಾಳೆ ಎಂಬ ವರದಿಯಲ್ಲಿ ಸತ್ಯವಿಲ್ಲ. ಇದು ಸತ್ಯಕ್ಕೆ ದೂರವಾದ ವಿಷಯ ಎಂದಿದ್ದಾರೆ. "ಅವಳು ಮತಾಂತರಗೊಳ್ಳುತ್ತಿಲ್ಲ. ಇದು ನಿಶ್ಚಿತ. ಅವರಿಬ್ಬರದ್ದೂ  ಹೃದಯಗಳು ಒಂದಾಗಿವೆ. ಇದರ ನಡುವೆ  ಧರ್ಮವು ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಸೋನಾಕ್ಷಿ ಮತಾಂತರವಾಗುವುದಿಲ್ಲ" ಎಂದಿದ್ದಾರೆ.  "ನಾನು ಮಾನವೀಯತೆಯನ್ನು ನಂಬುತ್ತೇನೆ. ದೇವರನ್ನು ಹಿಂದೂಗಳು ಭಗವಾನ್ ಮತ್ತು ಮುಸ್ಲಿಮರು ಅಲ್ಲಾ ಎಂದು ಕರೆಯುತ್ತಾರೆ. ಆದರೆ ದಿನದ ಕೊನೆಯಲ್ಲಿ, ನಾವೆಲ್ಲರೂ ಮನುಷ್ಯರು. ನನ್ನ ಆಶೀರ್ವಾದ ಜಹೀರ್ ಮತ್ತು ಸೋನಾಕ್ಷಿ ಅವರ ಮೇಲಿದೆ. ಸುಮ್ಮನೇ ಸುಳ್ಳು ಸುದ್ದಿ ಹರಡಿಸಬೇಡಿ ಎಂದು ಅವರು ಹೇಳಿದ್ದಾರೆ. 

ಐಶ್ವರ್ಯಳನ್ನು ಕಂಡ್ರೆ ಅಮಿತಾಭ್​ಗೆ ಆಗೋದಿಲ್ಲ ಅನ್ನೋದು ನಿಜವಾಗೋಯ್ತಾ? ಸತ್ಯ ಒಪ್ಪಿಕೊಂಡ್ರಾ ಬಿಗ್​-ಬಿ?

ಸದ್ಯ ನಟಿ ಸೋನಾಕ್ಷಿ ಹೀರಾಮಂಡಿ ವೆಬ್‌ ಸೀರಿಸ್ ಸಕ್ಸಸ್ ಖುಷಿಯಲ್ಲಿದ್ದಾರೆ. ನಾಳೆ ಮುಂಬೈನಲ್ಲಿ ನಡೆಯಲಿರುವ  ಮದುವೆಯಲ್ಲಿ  ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ.  ಸೋನಾಕ್ಷಿ ಮದುವೆ ಆಗ್ತಿರೋ ಹುಡುಗ ಮುಸ್ಲಿಂ ಆಗಿರೋ ಕಾರಣ ಇದು ಲವ್ ಜಿಹಾದ್ ಎಂಬ ಮಾತುಗಳು ಕೇಳಿ ಬಂದಿವೆ. ಕಳೆದ ಕೆಲವು ವರ್ಷಗಳಿಂದ ಸೋನಾಕ್ಷಿ ಮತ್ತು ಜಹೀರ್ ಜೊತೆಯಾಗಿ ಸುತ್ತಾಡುತ್ತಿದ್ದಾರೆ. ಸಲ್ಮಾನ್ ಖಾನ್ ಮೂಲಕ ಸೋನಾಕ್ಷಿಗೆ ಜಹೀರ್ ಇಕ್ಬಾಲ್ ಪರಿಚಯವಾಗಿತ್ತು. ಪರಿಚಯ ಸ್ನೇಹ, ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಆದ್ರೆ ಈವರೆಗೂ ನಾವು ಒಳ್ಳೆಯ ಸ್ನೇಹಿತರು ಎಂದು ಇಬ್ಬರೂ ಹೇಳಿಕೊಂಡಿದ್ದಾರೆ.

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮದುವೆ ಸುದ್ದಿ ಹೊರ ಬಂದಾಗಿನಿಂದ ಹಿಂದೂ ನಟಿಯರು ಮುಸ್ಲಿಂ ನಟರನ್ನು ಮದುವೆ ಆಗೋದೇಕೆ? ಇದು ಲವ್ ಜಿಹಾದ್ ಅಲ್ಲವೇ? ರಾಮಾಯಣ ಹೆಸರಿನ ಮನೆಗೆ ಮುಸ್ಲಿಂ ಅಳಿಯ ಎಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಅದಕ್ಕೆ ನಟಿ, ಇದು ನನ್ನ ವೈಯಕ್ತಿಕ ವಿಷಯ ಮತ್ತು ನನ್ನದೇ ಆಯ್ಕೆ. ಈ ವಿಷಯದಲ್ಲಿ ಬೇರೆಯವರ ಹಸ್ತಕ್ಷೇಪ ಬೇಕಿಲ್ಲ. ನನ್ನ ಪೋಷಕರಿಗಿಂತ ಜನರು ಯಾಕೆ ಇಷ್ಟು ಕುತೂಹಲ ಹೊಂದಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಮದುವೆ ಬಗ್ಗೆ ಪೋಷಕರಿಗಿಂತ ಬೇರೆಯವರೇ ಹೆಚ್ಚು ಕೇಳುತ್ತಾರೆ. ಹಾಗಾಗಿ ಇದು ನನಗೆ ತುಂಬಾ ತಮಾಷೆಯಾಗಿ ಕಾಣುತ್ತದೆ ಎಂದಿದ್ದಾರೆ. ಇದೀಗ ಮತಾಂತರದ ವದಂತಿಗೆ ಭಾವಿ ಮಾವ ತೆರೆ ಎಳೆದಿದ್ದಾರೆ. ಆದರೆ ಟ್ರೋಲಿಗರೂ ಇಲ್ಲೂ ಬಿಡುತ್ತಿಲ್ಲ. ಮತಾಂತರ ಮಾಡಲ್ಲ ಸರಿ, ಫ್ರಿಜ್‌ನಲ್ಲಿ ಮಾತ್ರ ಇಡಬೇಡಿ ಎನ್ನುತ್ತಿದ್ದಾರೆ. 

ಹೆಣ್ಣು ಮಗು ಬೇಕೋ ಗಂಡೊ ಎಂದು ಕೇಳಿದ ಪ್ರಶ್ನೆಗೆ ಲಡ್ಡು-ಪೇಡಾ ಉದಾಹರಣೆ ಕೊಟ್ಟ ರಣವೀರ್ ಸಿಂಗ್!

 

Latest Videos
Follow Us:
Download App:
  • android
  • ios