ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಭಾಗ್ಯಳನ್ನು ಹೇಗೆ ಸೋಲಿಸಬೇಕು ಅಂತ ತಾಂಡವ್‌ ಪ್ಲ್ಯಾನ್‌ ಮಾಡುತ್ತಿರುತ್ತಾನೆ. ಈಗ ಅವನಿಗೆ ಹೊಸ ಅಸ್ತ್ರವೊಂದು ಸಿಕ್ಕಿದೆ. ಈಗ ಭಾಗ್ಯ ಬಚಾವ್‌ ಆಗೋದು ಕಷ್ಟ ಇದೆ. 

‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಗುಂಡಣ್ಣ ‌ಅಲಿಯಾಸ್ ತನ್ಮಯ್‌ ಶೂ ಪಾಲಿಶ್‌ ಮಾಡಿ ಹಣ ಮಾಡ್ತಿರೋದು ತಾಂಡವ್‌ ಕಣ್ಣಿಗೆ ಬಿದ್ದಿದೆ. ಮಗ ಈ ರೀತಿ ಕೆಲಸ ಮಾಡೋದು ನೋಡಿ ಅವನು ಫುಲ್‌ ಸಿಟ್ಟಾಗಿದ್ದಾನೆ. ಇವನೀಗ ಇದನ್ನು ಕೂಡ ಭಾಗ್ಯ ಹಣೆಗೆ ಕಟ್ಟುತ್ತಾನೋ ಏನೋ! 

ಭಾಗ್ಯಗೆ ಪ್ರತಿ ತಿಂಗಳು ಇಎಂಐ ಕಟ್ಟಿ ಮನೆ ಉಳಿಸಿಕೊಳ್ಳಬೇಕಿದೆ. ಅಷ್ಟೇ ಅಲ್ಲದೆ ಇಡೀ ಮನೆಯ ಖರ್ಚು ವೆಚ್ಚು ನೋಡಿಕೊಳ್ಳಬೇಕಿದೆ. ಅಷ್ಟೇ ಅಲ್ಲದೆ ತನ್ಮಯ್‌, ತನ್ವಿ ಓದಿನ ಖರ್ಚು ಕೂಡ ನೋಡಿಕೊಳ್ಳಬೇಕು. ಇಷ್ಟೆಲ್ಲ ಸವಾಲುಗಳನ್ನು ಭಾಗ್ಯ ಎದುರಿಸಬೇಕು. ಭಾಗ್ಯ ಗೆಲ್ಲಬಾರದು ಅಂತ ತಾಂಡವ್‌-ಶ್ರೇಷ್ಠ ಕೂಡ ಒದ್ದಾಡುತ್ತಿದ್ದಾರೆ.

Kannada Tv Serial TRP: 'ಅಣ್ಣಯ್ಯ', 'ಲಕ್ಷ್ಮೀ ನಿವಾಸ' ಬದಿಗೊತ್ತಿ NO 1 ಸ್ಥಾನ ಪಡೆದ ಹೊಸ ಸೀರಿಯಲ್‌ ಯಾವುದು?

ಭಾಗ್ಯಗೆ ಸತ್ಯ ಗೊತ್ತಿಲ್ಲ!

ಶಾಲೆ ಬಳಿ ತನ್ಮಯ್‌ ಶೂ ಪಾಲಿಶ್‌ ಮಾಡ್ತಿರೋದು ನೋಡಿ ತಾಂಡವ್‌ ಸಿಟ್ಟಾಗಿದ್ದಾನೆ. ಮಗನ ಮುಂದೆ ಅವನು ಕೂಗಾಡಿದ್ದಾನೆ. ತಂದೆ ಕೂಗಾಡಿದ್ದು ನೋಡಿ ತನ್ಮಯ್‌ ಕೂಡ ಬೆಚ್ಚಿ ಬಿದ್ದಿದ್ದಾನೆ, ಇನ್ನೊಂದು ಕಡೆ ಮಗನ ಶರ್ಟ್‌ ಎಲ್ಲ ಗಲೀಜಾಗಿರೋದು ನೋಡಿ ಭಾಗ್ಯ ಕೂಡ ಶಾಕ್‌ ಆಗಿದ್ದಾಳೆ. ಮಗನ ಶರ್ಟ್‌ನಲ್ಲಿ ಶೂ ಪಾಲಿಶ್‌ ಮಾಡೋ ಕಿಟ್‌ ನೋಡಿ ಅವಳಿಗೂ ಆಶ್ಚರ್ಯ ಆಗಿದೆ. ಭಾಗ್ಯಗೂ ಕೂಡ ಮಗ ಶೂ ಪಾಲಿಶ್‌ ಮಾಡೋ ವಿಚಾರ ಇನ್ನೂ ಗೊತ್ತಾಗಬೇಕಿದೆ. 

ಇದೇ ವಿಷಯ ಇಟ್ಕೊಂಡು ಮಕ್ಕಳನ್ನು ನನ್ನ ಜೊತೆ ಕಳಿಸು, ನಿನಗೆ ಅವರನ್ನು ಸಾಕೋ ಯೋಗ್ಯತೆ ಇಲ್ಲ. ನೀನು ಚಾಲೆಂಜ್‌ನಲ್ಲಿ ಗೆಲ್ಲಬೇಕು ಅಂತ ಮಗನನ್ನು ಈ ರೀತಿ ಕೆಲಸ ಮಾಡಿಸೋಕೆ ಕಳಿಸ್ತೀಯಾ ಅಂತ ತಾಂಡವ್‌, ಭಾಗ್ಯಳಿಗೆ ಬೈಯ್ಯಬಹುದು. ಒಟ್ಟಿನಲ್ಲಿ ಭಾಗ್ಯ ಒಂದಿಲ್ಲೊಂದು ಸಮಸ್ಯೆ ಬರೋದು, ಆಮೇಲೆ ಅವಳು ಅದನ್ನು ಎದುರಿಸೋದೇ ಆಗಿದೆ. 

'ಭಾಗ್ಯಲಕ್ಷ್ಮೀ' ಧಾರಾವಾಹಿ; ಭಾಗ್ಯ ಶ್ರೀಮಂತೆಯಾಗೋದು ಕನಸು ಅನ್ಕೋಬೇಡಿ! ಇಲ್ಲೇ ಇರೋದು ಅಸಲಿ ಮ್ಯಾಟರ್!‌

ಈ ಎಪಿಸೋಡ್‌ ನೋಡಿ ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

  • ಮುಟ್ಟಾಳ ತಂದೆ ಅನ್ಕೊಂಡಿರುವವನೇ ಈಗ ಖುಷಿಯಾಗಿರಬೇಕು, ಕಣ್ಣುತುಂಬಾ ನೋಡ್ಕೋ, ಅಮ್ಮನ ಕಷ್ಟ ನೋಡಿ, ಆ ಮಗು ಮನಸ್ಸಿಗೆ ಎಷ್ಟು ನೋವಾಗಿದೆ.
  • ತಾಂಡವ್‌ಗೆ ಈಗಲಾದರೂ ಬುದ್ಧಿ ಬರಬೇಕು
  • ನಿನ್ನಂತ ಅಪ್ಪ ಇದ್ರೆ ಎಲ್ಲ ಮಕ್ಕಳಿಗೂ ಇದೆ ಪರಿಸ್ಥಿತಿ
  • ಇದನ್ನೂ ತಗೊಂಡು ಹೋಗಿ ಭಾಗ್ಯಳಿಗೆ ಹೇಳಿ, ನಿನ್ನಿಂದಲೇ ನನ್ನ ಮಗ ಶೂ ಪಾಲಿಶ್ ಮಾಡೋಕೆ ಹೋಗಿದ್ದು ಎಮ್ಮೆ ಅಂತ ಬೈತಾನೆ. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌, ಭಾಗ್ಯಳಿಗೆ ಎಮ್ಮೆ ಅಂತ ಬೈಯೋದು, ಭಾಗ್ಯ ಅಳೋದು, ಅವರ ಅತ್ತೆ ಮಾವ ಭಾಗ್ಯಳನ್ನು ಬಿಟ್ಟು ಎಲ್ಲಿಗೂ ಹೋಗಲ್ಲ ಅನ್ನೋದು, ಇಷ್ಟೇ ಆಯ್ತು. ಡೈರೆಕ್ಟರ್ ಮುಂದೆ ಕಥೆ ಗೊತ್ತಿಲ್ಲ ಅಂದ್ರೆ ಧಾರಾವಾಹಿಯನ್ನು ಮುಗಿಸಬೇಕು ಅಲ್ವಾ?
  • ನೋಡೋಲೋ, ಅಮ್ಮ ಕಷ್ಟಪಡ್ತಾಳೆ ಅಂತ ಎಷ್ಟು ಕಷ್ಟಪಡ್ತಾನೆ. ತನ್ಮಯ್‌ ಅಂತಹ ಮಗ ಎಲ್ಲ ತಂದೆ ತಾಯಿಗೆ ಸಿಗಲಿ.
  • ನಿನ್ನಂತ ಅಪ್ಪ ಇದ್ರೆ ಇದೆ ರೀತಿ ಕಷ್ಟ ಪಟ್ಟು ಬದುಕಬೇಕು
  • ಅಪ್ಪ ದಾರಿ ತಪ್ಪಿದ್ರೆ ಮಕ್ಕಳ ಪರಿಸ್ಥಿತಿ ಹೇಗೆ ಇರುತ್ತೆ ಅಂತ ತೋರಿಸಿದ್ದಾರೆ.
  • ಗುಂಡಣ್ಣ ಈ ರೀತಿ ಮಾಡೋದಕ್ಕೆ ತಾಂಡವ್ ಕಾರಣ , ಭಾಗ್ಯ ಮೇಲೆ ಗೂಬೆ ಕೂರಿಸೋದಿಕ್ಕೆ ರೆಡಿಯಾಗಿದಾರೆ.
  • ನೀನೊಬ್ಬ ಕಿತ್ತೋದಪ್ಪ ನಿನ್ನಂತವನಿಗೆ ಯಾಕೋ ಬೇಕು, ಮದುವೆ ಮಕ್ಕಳು. ನಿನಗೆ ಸೆಕೆಂಡ್ ಹ್ಯಾಂಡ್ ಬೇಕು, ಮಕ್ಕಳು ನೆನಪಿಲ್ಲ, ಹೆಂಡ್ತಿನ ನೆನಪಿಲ್ಲ 
View post on Instagram