Asianet Suvarna News Asianet Suvarna News

ಕಟ್ಕೊಂಡವಳನ್ನು ಬಿಟ್ಟು ಇಟ್ಕೊಂಡವಳ ಹತ್ರ ಹೋದ್ರೆ ಇದೇ ಆಗೋದಪ್ಪಾ... ತಾಂಡವ್​ಗೆ ನೆಟ್ಟಿಗರ ಕ್ಲಾಸ್​!

ಪತ್ನಿ, ಮುದ್ದಾದ ಮಕ್ಕಳನ್ನು ಬಿಟ್ಟು ಇನ್ನೊಬ್ಬಳ ಹಿಂದೆ ಹೋದ್ರೆ ಏನಾಗುತ್ತೆ ಗತಿ ಎನ್ನುವ ಉದಾಹರಣೆಯನ್ನು ತಾಂಡವ್​ಗೆ ನೀಡ್ತಿದ್ದಾರೆ ಭಾಗ್ಯಲಕ್ಷ್ಮಿ ಫ್ಯಾನ್ಸ್​...
 

Bhagyalakshmi fans taking class to Tandav what  happens if he goes after someone else suc
Author
First Published Jul 4, 2024, 2:39 PM IST

ಭಾಗ್ಯಲಕ್ಷ್ಮಿ ಸೀರಿಯಲ್​ ದಿನದಿಂದ ದಿನಕ್ಕೆ ಟ್ವಿಸ್ಟ್​ ಪಡೆದುಕೊಳ್ತಿದೆ. ತನಗೆ ಸಿಕ್ಕಿರೋ ಗೌರವವನ್ನು ಅತ್ತೆಗೆ ಕೊಟ್ಟಿದ್ದಾಳೆ ಭಾಗ್ಯ. ಅತ್ತೆ ಇಲ್ಲದೇ ಹೋಗಿದ್ದರೆ ನಾನು ಜೀರೋ ಎನ್ನುತ್ತಲೇ ಅತಿಥಿ ನಟಿ ಶ್ರೀನಾಥ್​ ಅವರ ಕೈಯಿಂದ ಅತ್ತೆ ಕುಸುಮಾಗೆ ಸನ್ಮಾನ ಮಾಡಿಸಿದ್ದಾಳೆ. ತಾನು ಇಂದು ಹೀಗೆ ಇರಲು ಕಾರಣ, ನನ್ನ ಅತ್ತೆ. ಇಂಥ ಅತ್ತೆ ಇದ್ದರೆ ಏನು ಬೇಕಾದರೂ ಮಾಡಲು ಸಾಧ್ಯ ಎನ್ನುತ್ತಲೇ ನೋಡುಗರನ್ನು ಭಾವುಕಳಾಗಿಸಿದ್ದಾಳೆ ಭಾಗ್ಯ. ಸೊಸೆ ತನಗೆ ತಿಳಿಸದೇ ಕೆಲಸಕ್ಕೆ ಹೋಗಿದ್ದಾಳೆ ಎನ್ನುವ ಕುಸುಮಾಳ ಕೋಪ ಶಾಂತವಾಗಿದೆ. ಭಾಗ್ಯಳ ಸಾಧನೆಗೆ ಕಣ್ಣೀರಾಗಿದ್ದಾಳೆ. ಇದನ್ನು ನೋಡಿ ತಾಂಡವ್​ ಇಂಗು ತಿಂದ ಮಂಗನಂತಾಗಿದ್ದಾನೆ. ಕಾರ್ಯಕ್ರಮದಲ್ಲಿ ಎಲ್ಲರೂ ಚಪ್ಪಾಳೆ ತಟ್ಟುತ್ತಿರುವಾಗ ಮನಸ್ಸಿಲ್ಲದ ಮನಸ್ಸಿನಿಂದ ತಾನೂ ಚಪ್ಪಾಳೆ ತಟ್ಟಿದ್ದಾನೆ. ತನ್ನ ಪತ್ನಿ ಇಷ್ಟೊಂದು ಮುಂದುವರೆಯುತ್ತಾಳೆ ಎಂದು ಆತ ಕನಸಿನಲ್ಲೂ ಊಹಿಸಿರಲಿಲ್ಲ. ನಯಾಪೈಸೆಗೆ ಬರದ ಹೆಂಗಸು ನೀನು ಎಂದು ಜೀವನಪೂರ್ತಿ ಮೂದಲಿಸುತ್ತಲೇ ಇದ್ದವ ಸುಂದರಿ ಶ್ರೇಷ್ಠಾ ಸಿಕ್ಕಳೆಂದು ಅವಳ ಹಿಂದೆ ಹೋಗಿ ಈಗ ಪಡಬಾರದ ಪಾಡು ಪಡುತ್ತಿದ್ದಾನೆ.

ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ನೆಟ್ಟಿಗರು ತಾಂಡವ್​ಗೆ ಕ್ಲಾಸ್​ ತೆಗೆದುಕೊಳ್ಳಲು ಶುರು ಮಾಡಿದ್ದಾರೆ. ಈಗ ಏನು ಮಾಡುತ್ತಿಯಾ? ಇಟ್ಟುಕೊಂಡಿರೋಳನ್ನು ಬಿಟ್ಟು ಕಟ್ಟುಕೊಂಡವಳ ಹಿಂದೆ ಹೋದ್ರೆ ಇದೇ ಗತಿಯಾಗೋದು ಎಂದು ಮೂದಲಿಸುತ್ತಲೇ ಹಾಲಿ ಕೆಲವು ಉದಾಹರಣೆಗಳನ್ನೂ ನೀಡುತ್ತಿದ್ದಾರೆ ನೆಟ್ಟಿಗರು. ಅಂದಹಾಗೆ, ಭಾಗ್ಯಳಿಗೆ ಒತ್ತುಶ್ಯಾವಿಗೆ ಅದೃಷ್ಟ ತಂದುಕೊಟ್ಟಿದೆ. ಫೈವ್​ಸ್ಟಾರ್​ ಹೋಟೆಲ್​ನಲ್ಲಿ ಚೀಫ್​ಶೆಫ್​ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಮೊದಲಿಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು ಭೇಷ್​ ಎನ್ನಿಸಿಕೊಂಡಿದ್ದ ಗೃಹಿಣಿ ಭಾಗ್ಯ ಇದೀಗ ಲಕ್ಷ ರೂಪಾಯಿ ಸಂಬಳ ಪಡೆಯುವ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಹಲವಾರು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾಳೆ. ಗೃಹಿಣಿ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ ಎನ್ನುವುದು ಒಂದೆಡೆಯಾದರೆ, ಅಡುಗೆಯಲ್ಲಿ ನುರಿತರಾದರೆ ಬದುಕು ಕೈಹಿಡಿಯುತ್ತದೆ ಎನ್ನುವುದಕ್ಕೆ ಇದಾಗಲೇ ಹಲವಾರು ಮಂದಿ ನಿಜ ಜೀವನದಲ್ಲಿಯೂ ತೋರಿಸಿಕೊಟ್ಟಿದ್ದಾರೆ. ಅಡುಗೆ ಒಂದು ಚೆನ್ನಾಗಿ ಮಾಡುವ ಮೂಲಕವೇ ಲಕ್ಷಾಧಿಪತಿಗಳಾದವರೂ ನಮ್ಮ ಎದುರೇ ಇದ್ದಾರೆ. ಬೀದಿಬದಿಗಳಲ್ಲಿ ಅಡುಗೆ ಊಟ ಬಡಿಸುವವರು ದೊಡ್ಡ ದೊಡ್ಡ ಹೋಟೆಲ್​ಗಳ ಮಾಲೀಕರಾಗಿರುವ ಸಾಕಷ್ಟು ಉದಾಹರಣೆಗಳನ್ನೂ ಕಾಣಬಹುದು. ಇದೀಗ ಅಂಥದ್ದೇ ಒಂದು ಮಾದರಿಯಾಗಿ ನಿಂತಿದ್ದಾಳೆ ಭಾಗ್ಯ.

ಲಕ್ಷ್ಮಿ ಪ್ರತ್ಯಕ್ಷಳಾದರೆ ನಟರಾದ ರಮೇಶ್​, ಪ್ರೇಮಾ ನಿರ್ದೇಶಕ ತರುಣ್​ ಹೀಗೆಲ್ಲಾ ವರ ಕೇಳ್ತಾರಂತೆ!

ಭಾಗ್ಯಳ ಈ ಸಾಧನೆಯನ್ನು ಗಮನಿಸಿ, ಅವಳಿಗೆ ಸೀರಿಯಲ್​ನಲ್ಲಿ ಶ್ರೀನಾಥ್​ ಅವರು ಅವಾರ್ಡ್​ ಕೊಡಲು ಬಂದಿದ್ದಾರೆ. ಆದರೆ ಸೊಸೆ ಉದ್ಯೋಗಕ್ಕೆ ಹೋಗಬಾರದು ಎನ್ನುವುದು ಅತ್ತೆ ಕುಸುಮಾಳ ಇಚ್ಛೆ. ಇದೇ ಕಾರಣಕ್ಕೆ ಕುಸುಮಾ ಅವಳಿಗೆಕೆಲಸ ಸಿಕ್ಕಿರುವ ವಿಷಯ ಹೇಳಿರಲಿಲ್ಲ. ಇದು ಸರಿಯಲ್ಲ ಎನ್ನುವುದು ಬಹುತೇಕ ಸೀರಿಯಲ್​ ವೀಕ್ಷಕರ ಅಭಿಮತ. ಭಾಗ್ಯಳ ವಿಷಯ ಟಿ.ವಿಯಲ್ಲಿ ಬಂದು, ಅವಳಿಗೆ ಸನ್ಮಾನ ಮಾಡುತ್ತಿರುವುದನ್ನು ಕುಸುಮಾ ಟಿವಿಯಲ್ಲಿ ನೋಡಿ ಅವಳ ಸನ್ಮಾನ ಕಾರ್ಯಕ್ರಮಕ್ಕೆ ಬರುತ್ತಾಳೆ. ಆದರೆ ಅಲ್ಲಿ ಗಣ್ಯಾತಿಗಣ್ಯರು ಬಂದಿರುವ ಕಾರಣ, ಕುಸುಮಾಳಿಗೆ ಎಂಟ್ರಿ ಕೊಡುವುದಿಲ್ಲ. ಸೆಕ್ಯುರಿಟಿ ಅವರ ಬಳಿ ಜಗಳವಾಡಿದಾಗ ಅವಳನ್ನು ತಳ್ಳಲಾಗುತ್ತದೆ. ಅತ್ತೆ ಬಿದ್ದಿದ್ದನ್ನು ನೋಡಿ ಅವಾರ್ಡ್​ ತೆಗೆದುಕೊಳ್ಳುವುದನ್ನು ಬಿಟ್ಟು ಭಾಗ್ಯ ಓಡೋಡಿ ಬರುತ್ತಾಳೆ. ತನ್ನ ಅತ್ತೆಯನ್ನು ವೇದಿಕೆಗೆ ಕರೆತಂದು ಶ್ರೀನಾಥ್​ ಅವರ ಕೈಯಿಂದ ತನಗೆ ಸಂದಬೇಕಿದ್ದ ಸನ್ಮಾನವನ್ನು ಅತ್ತೆಗೆ ಮಾಡಿಸುತ್ತಾಳೆ. 
 

ಅಷ್ಟಕ್ಕೂ, ಈ ಸೀರಿಯಲ್​ ಕುರಿತು ಹೇಳುವುದಾದರೆ, ಎಲ್ಲಾ ಅಡೆತಡೆಗಳನ್ನು ಮೀರಿ ಭಾಗ್ಯ ಸ್ಟಾರ್​ ಹೋಟೆಲ್​ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾಳೆ. ಇಂಗ್ಲಿಷ್​ ಬರದಿದ್ದರೂ ಅಡುಗೆ ಮೂಲಕವೇ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ. ನಿನ್ನಿಂದ ಐದು ಪೈಸೆಯೂ ದುಡಿಯಲು ಸಾಧ್ಯವಿಲ್ಲ ಎಂದು ಹಂಗಿಸುತ್ತಿದ್ದ ಗಂಡ ತಾಂಡವ್​ಗೆ ತಿರುಗೇಟು ನೀಡುವ ರೀತಿಯಲ್ಲಿ, ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಇವಳನ್ನು ಅಭಿನಂದಿಸಲು ಶ್ರೀನಾಥ್​ ಅವರ ಎಂಟ್ರಿಯಾಗಿದೆ. ಇಂದು ಸೀರಿಯಲ್​ಗಳು ಕೇವಲ ಸೀರಿಯಲ್​ಗಳಾಗಿ ಉಳಿದಿಲ್ಲ. ಅದು ಮನೆಮನೆಯ ಕಥೆಗಳಾಗಿವೆ. ಇದರಿಂದ ಸ್ಫೂರ್ತಿ ಪಡೆಯುವ ಅದೆಷ್ಟೋ ಜನರು ಇದ್ದಾರೆ. ಅದಕ್ಕೆ ಉದಾಹರಣೆಯಾಗಿ ಭಾಗ್ಯಳನ್ನು ನೋಡಿ ಕೆಲವು ಮಹಿಳೆಯರು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾರೆ. ಇದೀಗ ಮಹಿಳೆ ಮನಸ್ಸು ಮಾಡಿದರೆ ಏನು ಮಾಡಲು ಸಾಧ್ಯ ಎನ್ನುವ ಭಾಗ್ಯ ಹಲವು ಮಹಿಳೆಯರಿಗೆ ಸ್ಫೂರ್ತಿ ಕೂಡ ಆಗಿದ್ದಾಳೆ.

ಮಧ್ಯರಾತ್ರಿ ವಿಚಿತ್ರ ಕೂಗು- ಬೆಳಗಾದರೆ ಸ್ವರ್ಗ ತೋರುವ ಸುಂದರಿ: ಕೌತುಕಗಳ ನಡುವೆ ಡಾ.ಬ್ರೋ


Latest Videos
Follow Us:
Download App:
  • android
  • ios