Asianet Suvarna News Asianet Suvarna News

BBK10: 'ನನಗೆ ಏರು ಧ್ವನಿಯಲ್ಲಿ ಮಾತಾಡ್ತೀರಾ': ವಿನಯ್​ಗೆ ಖಡಕ್​ ವಾರ್ನಿಂಗ್​ ಕೊಟ್ಟ ಶ್ರುತಿ!

ಶ್ರುತಿ ನ್ಯಾಯಾಧೀಶ ಕುರ್ಚಿಯಲ್ಲಿ ಕೂತಿದ್ದಾರೆ. ಸ್ಪರ್ಧಿಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ಮಾಡಿದ್ದಾರೆ. ವಿನಯ್ ಅವರು ವಾರಾಂತ್ಯದಲ್ಲಿ ಸುದೀಪ್ ಅವರ ಎದುರಿಗೇ ಒಂದು ರೀತಿ ಇರುತ್ತಾರೆ.

bbk10 shruti gave a warning to vinay who raised his voice gvd
Author
First Published Dec 23, 2023, 10:59 AM IST

ವೀಕೆಂಡ್‌ನಲ್ಲಿ ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ಅಚ್ಚರಿಯೊಂದು ಎದುರಾಗಿದೆ. ಆ ಅಚ್ಚರಿ ಏನೆಂಬುದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ. ಬೆಳಿಗ್ಗೆ ಎಲ್ಲ ಸ್ಪರ್ಧಿಗಳೂ ನೋಡುತ್ತಿದ್ದ ಹಾಗೆಯೇ ಮನೆಯ ಮುಖ್ಯದ್ವಾರ ತೆರೆದುಕೊಂಡಿದೆ. ಅದರಿಂದ ಹಿರಿಯ ನಟಿ, ಬಿಗ್‌ಬಾಸ್‌ ಸ್ಪರ್ಧೆಯ ವಿಜೇತೆಯೂ ಆಗಿರುವ ಶ್ರುತಿ ಅವರು ಮನೆಯೊಳಗೆ ಪ್ರವೇಶಿಸಿದ್ದಾರೆ. 

ಅವರನ್ನು ನೋಡುತ್ತಿದ್ದ ಹಾಗೆಯೇ ಮನೆಯ ಸದಸ್ಯರೆಲ್ಲರೂ ಖುಷಿಯಿಂದ ಕುಣಿದಾಡಿದ್ದಾರೆ. ಎಲ್ಲರೂ ಸಂತೋಷದ ಅಲೆಯಲ್ಲಿ ತೇಲುತ್ತಿರುವ ಹಾಗೆಯೇ ಕಟಕಟೆಯಲ್ಲಿ ನಿಲ್ಲುವ ಗಳಿಗೆ ಎದುರಾಗಿದೆ. ಶ್ರುತಿ ನ್ಯಾಯಾಧೀಶ ಕುರ್ಚಿಯಲ್ಲಿ ಕೂತಿದ್ದಾರೆ. ಸ್ಪರ್ಧಿಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ಮಾಡಿದ್ದಾರೆ. ‘ವಿನಯ್ ಅವರು ವಾರಾಂತ್ಯದಲ್ಲಿ ಸುದೀಪ್ ಅವರ ಎದುರಿಗೇ ಒಂದು ರೀತಿ ಇರುತ್ತಾರೆ, ವಾರವಿಡೀ ಮನೆಯ ಸದಸ್ಯರ ಜೊತೆಗೇ ಇನ್ನೊಂದು ರೀತಿ ಇರುತ್ತಾರೆ?’ ಎಂಬ ಪ್ರಶ್ನೆಗೆ ಸಂಗೀತಾ ತುಂಬ ಪ್ರಬಲವಾಗಿ ಹೌದು ಎಂದಿದ್ದಾರೆ. 
 


ಅಷ್ಟೇ ಅಲ್ಲ, ಇಷ್ಟು ದಿನಗಳ ಕಾಲ ವಿನಯ್ ಆಪ್ತಬಳಗದಲ್ಲಿ ಗುರ್ತಿಸಿಕೊಂಡಿದ್ದ ನಮ್ರತಾ ಕೂಡ, ‘ನನಗೂ ಹಾಗೇ ಅನಿಸುತ್ತದೆ. ಸುದೀಪ್ ಸರ್ ಎದುರಿಗೆ ಅವರು ಧ್ವನಿತಗ್ಗಿಸಿ ಮಾತಾಡುತ್ತಾರೆ’ ಎಂದು ಹೇಳಿದ್ದಾರೆ.  ಇದಕ್ಕೆ ಪ್ರತಿಕ್ರಿಯಿಸಿದ ವಿನಯ್, ತಮ್ಮ ಎಂದಿನ ಉಡಾಪೆಯ ಧ್ವನಿಯಲ್ಲಿ, ‘ಇವ್ರತ್ರೆಲ್ಲ ನಾಟಕ ಮಾಡ್ಕೊಂಡು ನನಗೆ ಏನೂ ಆಗ್ಬೇಕಾಗಿಲ್ಲ’ ಎಂದಿದ್ದಾರೆ. 

BBK10: ಬಿಗ್‌ಬಾಸ್‌ ಮನೆಯಲ್ಲಿರುವ ದೊಡ್ಡ ನೆಗೆಟಿವ್ ಎನರ್ಜಿ ಸಂಗೀತಾ: ಮೈಕಲ್

ಅವರ ಟೋನ್‌ ಬಗ್ಗೆ ನ್ಯಾಯಾಧೀಶೆ ಶ್ರುತಿ, ‘ನನ್ನ ಬಳಿ, ನ್ಯಾಯಾಧೀಶರ ಬಳಿಯೇ ಧ್ವನಿ ಎತ್ತರಿಸಿ ಮಾತಾಡ್ತೀರಾ?’ ಎಂದು ಅಸಮಧಾನ ಹೊರಹಾಕಿದ್ದಾರೆ. ಬಿಗ್‌ಬಾಸ್ ಮನೆಯೊಳಗೇ ಸೃಷ್ಟಿಯಾದ ಈ ನ್ಯಾಯಾಲಯದಲ್ಲಿ ಯಾರು ತಪ್ಪಿತಸ್ಥರಾಗುತ್ತಾರೆ? ಯಾರು ಬಿಡುಗಡೆಯಾಗುತ್ತಾರೆ? ಯಾರಿಗೆ ಜಾಮೀನು? ಯಾರಿಗೆ ಜೈಲು? ಕೊನೆಯಲ್ಲಿ ಈ ವಾರ ಯಾರು ಮನೆಯಿಂದಲೇ ಬಿಡುಗಡೆಯಾಗಿ ಹೋಗುತ್ತಾರೆ? ಈ ಎಲ್ಲ ಪ್ರಶ್ನೆಗೆ ಉತ್ತರ ಸಿಗಲು ಬಿಗ್‌ಬಾಸ್ ನೋಡಬೇಕಿದೆ.

Follow Us:
Download App:
  • android
  • ios