ಸಂಗೀತಾ ಮತ್ತು ತನಿಷಾ ಎರಡು ಗುಂಪುಗಳಲ್ಲಿ ಮನೆಯ ಸದಸ್ಯರೆಲ್ಲ ವಿಂಗಡಣೆಗೊಂಡು ಕ್ಯಾಪ್ಟನ್ಸಿಗಾಗಿ ಸ್ಪರ್ಧಿಸುತ್ತಿದ್ದಾರೆ. ಈ ಸಲ ಬಿಗ್ ಬಾಸ್ ನಾಯಕಿಯರಿಗೆ ತಮ್ಮ ಮನೆಯ ಒಳ್ಳೆಯ ಸದಸ್ಯರ‌ನ್ನು ಹಣ ಕೊಟ್ಟು ಖರೀದಿಸುವ ಅವಕಾಶ ನಡೆದಿತ್ತು. 

ಸಂಗೀತಾ ಮತ್ತು ತನಿಷಾ ಎರಡು ಗುಂಪುಗಳಲ್ಲಿ ಮನೆಯ ಸದಸ್ಯರೆಲ್ಲ ವಿಂಗಡಣೆಗೊಂಡು ಕ್ಯಾಪ್ಟನ್ಸಿಗಾಗಿ ಸ್ಪರ್ಧಿಸುತ್ತಿದ್ದಾರೆ. ಈ ಸಲ ಬಿಗ್ ಬಾಸ್ ನಾಯಕಿಯರಿಗೆ ತಮ್ಮ ಮನೆಯ ಒಳ್ಳೆಯ ಸದಸ್ಯರ‌ನ್ನು ಹಣ ಕೊಟ್ಟು ಖರೀದಿಸುವ ಅವಕಾಶ ನಡೆದಿತ್ತು. ಯಾರಿಗೆ ಎಷ್ಟು ಗಣ ಕೊಡಲಾಗಿದೆ, ಟಾಸ್ಕ್ ಗಳಲ್ಲಿ ಗೆದ್ದಾಗ ಎಷ್ಟು ಶೇರ್ ಕೊಡಲಾಗುತ್ತಿದೆ ಎಂಬುದರ ಕುರಿತು ಎರಡೂ ಗುಂಪುಗಳ ಸದಸ್ಯರಲ್ಲಿ ಅಸಮಧಾನಗಳಿವೆ. ಈ ಅಸಮಧಾನ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. 

ಈವತ್ತು ಎರಡೂ ತಂಡದ ಕ್ಯಾಪ್ಟನ್ ಗಳನ್ನು ಕೂಡಿಸಿಕೊಂಡು, ಅವರ ತಂಡದ ಸದಸ್ಯರಿಂದಲೇ ಅಭಿಪ್ರಾಯ ಹಂಚಿಕೊಳ್ಳಲು ಬಿಗ್ ಬಾಸ್ ಸೂಚಿಸಿದ್ದಾರೆ. ಈ ಸಮಯದಲ್ಲಿ ಮೈಕಲ್ ನೇರವಾಗಿಯೇ 'ಸಂಗೀತಾ ಟಾಸ್ಕ್ ಗೆದ್ದಾಗ ಸದಸ್ಯರ ಜೊತೆಗೆ ಬಂದ ಹಣದಲ್ಲಿ ಶೇರ್ ಸರಿಯಾಗಿ ಕೊಡುತ್ತಿಲ್ಲ' ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಂಗೀತಾ ಕೂಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಬ್ಬರ ಮಧ್ಯ ಮಾತಿಗೆ ಮಾತು ಬೆಳೆದಿದೆ. ತಂಡದೊಳಗೆ ಕಾಣಿಸಿಕೊಂಡಿರುವ ಈ ಬಿರುಕು ಗೆಲುವಿಗೆ ಅಡ್ಡಗಾಲಾಗಬಹುದಾ? ಉಳಿದ ಸದಸ್ಯರೂ ತಮ್ಮ ತಂಡದ ನಾಯಕರ ವಿರುದ್ಧ ಮಾತಾಡಬಹುದಾ? ಎಲ್ಲದಕ್ಕೂ ಇವತ್ತಿನ ಬಿಗ್‌ಬಾಸ್ ಸಂಚಿಕೆಯನ್ನು ನೋಡಬೇಕು.

View post on Instagram


ಡೋಂಟ್ ಕೇರ್' ವರ್ತನೆ ತೋರಿದ ಮೈಕಲ್: ಬಿಗ್ ಬಾಸ್ ಮನೆಯಲ್ಲಿ ಮೈಕಲ್ ಅವರು ಉಳಿದ ಸ್ಪರ್ಧಿಗಳ ಜೊತೆ ಅಹಂಕಾರದಿಂದ ಮಾತನಾಡುತ್ತಿದ್ದಾರೆ ಎಂಬ ಆರೋಪವಿದೆ. ಇನ್ನುಳಿದಂತೆ ಅವರು ಸ್ಕೂಲ್ ಟಾಸ್ಕ್‌ವೊಂದರಲ್ಲಿ 'ಐ ಡೋಂಟ್ ಗಿವ್ ಅ ಡ್ಯಾಮ್' ಎಂದು ಕೂಡ ಹೇಳಿದ್ದರು. ಇದು ಎಲ್ಲ ಸ್ಪರ್ಧಿಗಳಿಗೂ ಸಿಟ್ಟು ತರಿಸಿತ್ತು. ಮೈಕ್ ಹಾಕಿಕೊಳ್ಳೋದರಲ್ಲಿ ಮೈಕಲ್ ಹಿಂದುಳಿದಿದ್ದಾರೆ. ಕಿಚ್ಚ ಸುದೀಪ್ ಅವರೇ ಈ ವಿಷಯಕ್ಕೆ ಮೈಕಲ್‌ಗೆ ಎಚ್ಚರಿಕೆ ಕೊಟ್ಟಿದ್ದರು. ಮನೆಯಲ್ಲಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವ ಸಿರಿಗೆ ಇದನ್ನೆಲ್ಲ ನೋಡಿಕೊಂಡು ಶಿಕ್ಷೆ ಕೂಡ ಕೊಡಿ ಅಂತ ಹೇಳಿದ್ದರು. ಸಿರಿ ಅವರಿಗೆ ವಿಶೇಷ ಅಧಿಕಾರ ಸಿಕ್ಕಮೇಲೆ ಕೂಡ ಮೈಕಲ್ ಮತ್ತೆ ಮೈಕ್ ಧರಿಸದೆ ಮಾತನಾಡಿದ್ದಾರೆ. 

BBK10 ಚಡ್ಡಿ ಉದ್ರೋಗುತ್ತೆ ಹೋಗೋ: ಕಾರ್ತಿಕ್‌ಗೆ ತುಕಾಲಿ ಸಂತು ಮೇಷ್ಟ್ರು ಹೀಗಾ ಹೇಳೋದು...

ಇದೇ ವಿಚಾರಕ್ಕೆ ಬಿಗ್ ಬಾಸ್ ಮೂರು ಬಾರಿ ಎಚ್ಚರಿಕೆ ಕೊಟ್ಟಿದ್ದಾರೆ. ಮೈಗೆ ಎಣ್ಣೆಯನ್ನೋ ಅಥವಾ ಮಾಯಿಶ್ಚರೈಸರ್ ಹಚ್ಚಿಕೊಳ್ತಿದ್ದ ಮೈಕಲ್ ಎಚ್ಚರಿಕೆ ಕೊಟ್ಟ ಬಳಿಕವೂ ಅವರು ತಕ್ಷಣ ಮೈಕ್ ಧರಿಸಿಲ್ಲ. ಬಿಗ್ ಬಾಸ್ ಆದೇಶ ಕೊಟ್ಟ ಕೂಡಲೇ ಸ್ಪರ್ಧಿಗಳು ಗೌರವದಿಂದ ತಲೆ ಬಾಗಿ ಆದೇಶ ಪಾಲನೆ ಮಾಡುತ್ತಾರೆ. ಆದರೆ ಮೈಕಲ್ ಕೇರ್ ಮಾಡ್ತಿಲ್ಲ. ರೋಡೀಸ್‌ನಂತಹ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ ಮೈಕಲ್ ಅವರು ನಟರಲ್ಲ, ಮಾಡೆಲ್, ಫಿಟ್‌ನೆಸ್ ಟ್ರೇನರ್ ಆಗಿ ಗುರುತಿಸಿಕೊಂಡಿದ್ದಾರೆ. 'ಬಿಗ್ ಬಾಸ್ ಕನ್ನಡ 10' ಶೋನಲ್ಲಿ ಟಾಸ್ಕ್‌ಗಳಲ್ಲಿ ಒಳ್ಳೆಯ ಪ್ರದರ್ಶನ ತೋರುತ್ತಿರುವ ಮೈಕಲ್ ಇನ್ನೂ ಸರಿಯಾದ ಬಿಗ್ ಬಾಸ್ ಆಟ ಆಡಲು ಆರಂಭಿಸಿಲ್ಲ ಎನ್ನಬಹುದು.