ಬಿಗ್ಬಾಸ್ನಲ್ಲಿ ಸ್ಪರ್ಧಿಗಳ ಹರಾಜು! ಕಾರ್ತಿಕ್ಗೆ ಭಾರಿ ಡಿಮಾಂಡ್- ಕೊನೆಗೂ ಯಾರ ಕೈ ಸೇರಿದ್ರು?
ಐಪಿಎಲ್ ರೀತಿಯಲ್ಲಿಯೇ ಬಿಗ್ಬಾಸ್ನಲ್ಲಿ ಹರಾಜು ಪ್ರಕ್ರಿಯೆ ಶುರುವಾಗಿದೆ. ಯಾವ ಆಟಗಾರರಿಗೆ ಯಾರು ಸಿಕ್ಕರು ಎನ್ನುವುದು ಈಗಿರುವ ಕುತೂಹಲ...
ಇಂದು ಐಪಿಎಲ್ 2024ರ ಮಿನಿ ಹರಾಜು ನಡೆಯುತ್ತಿದೆ. ಐಪಿಎಲ್ ಇತಿಹಾಸದಲ್ಲಿ ಭಾರತದ ಹೊರಗೆ ಮೊದಲ ಬಾರಿಗೆ ಈ ಹರಾಜು ನಡೆಯುತ್ತಿದೆ. ದುಬೈನ ಕೋಕಾ-ಕೋಲಾ ಅರೆನಾದಲ್ಲಿ ಪ್ರಕ್ರಿಯೆ ಆರಂಭವಾಗಿದ್ದು, ಕುತೂಹಲ ತಣಿಸುತ್ತಿದ್ದರೆ, ಇತ್ತ ಬಿಗ್ಬಾಸ್ ಮನೆಯಲ್ಲಿಯು ಸ್ಪರ್ಧಿಗಳ ಹರಾಜು ನಡೆಯುತ್ತಿದೆ. ಇದರ ಪ್ರೊಮೋ ಅನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇದಾಗಲೇ ಹಲವು ದಿನಗಳಿಂದ ವಿಭಿನ್ನ ರೀತಿಯ ಟಾಸ್ಕ್ಗಳು ನಡೆಯುತ್ತಿದ್ದು, ಜಗಳಗಳ ಭರಾಟೆಯೂ ಜೋರಾಗಿ ಇದೆ. ಕಾದಾಟ, ಕಿತ್ತಾಟ, ಡ್ಯಾಮೇಜಿಂಗ್ ಎಲ್ಲವೂ ಹೇರಳವಾಗಿ ಬಿಗ್ಬಾಸ್ ಮನೆಯಲ್ಲಿ ಇದಾಗಲೇ ನಡೆಯುತ್ತಿದೆ. ಇದೀಗ ಆಟಗಾರರ ಖರೀದಿ ಬಲು ಜೋರಾಗಿ ನಡೆದಿದೆ.
ಐಪಿಎಲ್ ಹರಾಜು ಪ್ರಕ್ರಿಯೆಯಂತೆ, ಇವರಿಬ್ಬರೂ ಕೂಡ ಪ್ರತ್ಯೇಕವಾಗಿ ತಮ್ಮ ತಮ್ಮ ತಂಡಕ್ಕೆ ಆಟಗಾರರನ್ನು ಖರೀದಿಸಬೇಕು ಎಂದು ಬಿಗ್ಬಾಸ್ ಸೂಚಿಸಿದ್ದು, ಇದಕ್ಕಾಗಿ ಸಂಗೀತಾ ಮತ್ತು ತನಿಷಾ ಇಬ್ಬರಿಗೂ ಟಿಕೆಟ್ ನೀಡಲಾಗಿದೆ. ಈ ಟಾಸ್ಕ್ ಹೇಳುವುದಕ್ಕೂ ಮುನ್ನ ಮಾಮೂಲಿನಂತೆಯೇ ಗಲಾಟೆ ಭರ್ಜರಿಯಾಗಿಯೇ ನಡೆಯುತ್ತಿದೆ. ಈ ಟಾಸ್ಕ್ಗೆ ಸಂಗೀತಾ ಮತ್ತು ತನಿಷಾ ಅವರನ್ನು ನಾಯಕರನ್ನಾಗಿ ಮಾಡಿರುವುದಕ್ಕೂ ತುಸು ಬಿರುಸಿನ ಚರ್ಚೆ ನಡೆದಿದೆ. ಆದರೆ ಬಿಗ್ಬಾಸ್ ಅಣತಿಯಂತೆ ಇವರಿಬ್ಬರೂ ಪ್ರತ್ಯೇಕವಾಗಿ ತಮ್ಮ ತಮ್ಮ ತಂಡಕ್ಕೆ ಆಟಗಾರರನ್ನು ಖರೀದಿಸಬೇಕಿದೆ.
'ಬೀಗ್ ಬಾಸ್' ಮನೆಯಲ್ಲಿ ಲೂಸ್-ಟೈಟ್ ಮಾಡಲು ಎಂಟ್ರಿ ಕೊಟ್ಟ ಪ್ಲಂಬರ್! ಸ್ಪರ್ಧಿಗಳು ಶಾಕ್...
ಸಂಗೀತಾ ಅವರಿಂದ ಖರೀದಿ ಪ್ರಕ್ರಿಯೆ ಶುರುವಾಗಿದೆ. ಸಂಗೀತಾ ಮೊದಲಿಗೆ ನಮ್ರತಾ ಅವರನ್ನು ಖರೀದಿ ಮಾಡಿದ್ದರೆ ತನಿಷಾ ವಿನಯ್ ಅವರನ್ನು ಖರೀದಿಸಿದ್ದಾರೆ. ತನಿಷಾ ಮತ್ತು ಸಂಗೀತಾ ಇಬ್ಬರೂ ತಮ್ಮ ತಂಡಕ್ಕೆ ಬರುವಂತೆ ಕಾರ್ತಿಕ್ನನ್ನು ಮನವೊಲಿಸಿದ್ದಾರೆ. ನಂತರ ಭಾರಿ ಚರ್ಚೆ ನಡೆದಿದ್ದು, ಕೊನೆಗೆ ಕಾರ್ತಿಕ್ ಸಂಗೀತಾ ತಂಡಕ್ಕೆ ಹೋಗುವ ಮನಸ್ಸು ಮಾಡಿದ್ದಾರೆ. ಆದರೆ ಇದು ಅಷ್ಟು ಸುಲಭ ಅಲ್ಲ ಎನ್ನುವುದು ಪ್ರೊಮೋದಲ್ಲಿ ನೋಡಬಹುದು. ಹೀಗೆ ಸಂಗೀತಾ ಅವರ ತಂಡಕ್ಕೆ ಕಾರ್ತಿಕ್ ಹೋಗುವ ಮೊದಲು ಇಬ್ಬರ ಮಧ್ಯೆ ಸಾಕಷ್ಟು ಚರ್ಚೆಗಳು ನಡೆದಿವೆ.
ಇಷ್ಟಾಗುತ್ತಿದ್ದಂತೆಯೇ, ಸಂಗೀತಾ ’ಬೇಕಾದ್ರೆ ನೀವು ಹೋಗಿ, ನೋ ಪ್ರಾಬ್ಲಮ್ ಎಂದು ಹೇಳುತ್ತಾರೆ. ಸಂಗೀತಾ ಅವರ ಈ ಮಾತು ಕೇಳಿ ಕಾರ್ತಿಕ್ಗೆ ಕೋಪ ಬರುತ್ತದೆ. ಇಷ್ಟೆಲ್ಲಾ ಇಗೋ ಇದ್ರೆ ನಿಲ್ಲಲ್ಲ ಎನ್ನುತ್ತಲೇ ತಮ್ಮವ ಕೈಯಲ್ಲಿದ್ದ ಟಿಕೆಟ್ ಅನ್ನು ಮತ್ತೆ ಸಂಗೀತಾ ಕೈಗೆ ಕೊಟ್ಟು ಹೊರಟೇ ಹೋಗುತ್ತಾರೆ. ಆಗ ವಿನಯ್ಗೆ ಖುಷಿಯಾಗುತ್ತದೆ. ಆಗ ಅವರು ‘ಜೋಡೆತ್ತು, ಜೋಡೆತ್ತುಗಳು’ ಅಂತ ಹೇಳಿಕೊಂಡು ಒಬ್ಬರಿಗೊಬ್ಬರು ಮಾತನಾಡಿಕೊಂಡು ಗ್ರೂಪ್ ಜೊತೆ ನಿಲ್ಲುತ್ತಾರೆ. ಅಷ್ಟಕ್ಕೂ ಬಿಗ್ ಬಾಸ್ ಮನೆಯಲ್ಲಿ ಯಾರು ಯಾವಾಗ ಯಾರ ಪರ ನಿಲ್ಲುತ್ತಾರೆ ಎಂದು ಹೇಳುವುದು ಕಷ್ಟ. ಈ ಸ್ಪರ್ಧಿಗಳು ಏನಿದ್ದರೂ ಬಿಗ್ಬಾಸ್ ಕೈಗೊಂಬೆಗಳಷ್ಟೇ. ಎಲ್ಲವೂ ಸ್ಕ್ರಿಪ್ಟೆಡ್ನಂತೆ ಮಾಡುವುದು ಅವರ ಕೆಲಸವಷ್ಟೇ. ಈ ಕಾರಣದಿಂದ ಸ್ಪರ್ಧಿಗಳ ಮನಸ್ಥಿತಿ ಯಾವಾಗ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸದಾ ಕಚ್ಚಾಡಿಕೊಳ್ಳುತ್ತಿರುವ ವಿನಯ್ ಹಾಗೂ ಕಾರ್ತಿಕ್ ಒಂದೇ ಟೀಂ ಸೇರಿಕೊಂಡಿದ್ದು ಸದ್ಯ ಜೋಡೆತ್ತು ಆಗಿದ್ದಾರೆ.
ಹೇಗಿದ್ದೋರು ಹೇಗಾಗೋದ್ರು! ದೇವ್ರೆ ಕರುಣೆ ಇಲ್ವಾ, ಯಾರ್ ಕಣ್ಣು ಬಿತ್ತಪ್ಪಾ ಅಂತಿದ್ದಾರೆ ಬಿಗ್ಬಾಸ್ ಫ್ಯಾನ್ಸ್!