Asianet Suvarna News Asianet Suvarna News

ಬಿಗ್ ಬಾಸ್ 11 ಮನರಂಜನೆ ಕಡಿಮೆ, ವಿವಾದ ಜಾಸ್ತಿ: ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಗಾಯಕ ಹನುಮಂತು ಎಂಟ್ರಿ!

ಬಿಗ್ ಬಾಸ್ ಸೀಸನ್ 11ರಲ್ಲಿ ಹಿಂದಿನ ಸೀಸನ್‌ಗಳ ಸಂಪ್ರದಾಯ ಮುರಿದು ಕೇವಲ ಧಾರಾವಾಹಿ ಮತ್ತು ಸಿನಿಮಾ ಕಲಾವಿದರಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಗಾಯಕರ ಅನುಪಸ್ಥಿತಿಯನ್ನು ಟೀಕಿಸಿದ ನಂತರ, ಗಾಯಕ ಹನುಮಂತು ಅವರನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕರೆತರಲಾಗಿದೆ. ಹಾಸ್ಯ ಕಲಾವಿದರ ಕೊರತೆ ಮತ್ತು ಇಬ್ಬರು ಸ್ಪರ್ಧಿಗಳನ್ನು ಹೊರಹಾಕಿರುವುದು ಸಹ ಚರ್ಚೆಯಲ್ಲಿದೆ.

Asianet Suvarna News report is reason for singer Hanumantha coming to Bigg Boss sat
Author
First Published Oct 20, 2024, 7:26 PM IST | Last Updated Oct 20, 2024, 7:26 PM IST

ಬೆಂಗಳೂರು (ಅ.20): ಕನ್ನಡದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾದ ನಂತರ ಯಾವುದೇ ಸೀಸನ್‌ನಲ್ಲಿಯೂ ಮಾಡದಂತಹ ಎಡವಟ್ಟನ್ನು ಈ ಬಿಗ್ ಬಾಸ್ ಸೀಸನ್ 11ರಲ್ಲಿ ಮಾಡಲಾಗಿತ್ತು. ಅದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವರದಿಗಾರ್ತಿ ವಿನುತಾ ಪರಮೇಶ್ ಅವರು ಬರೆದುಕೊಂಡಿದ್ದರು. '10 ಸೀಸನ್ಸ್ ಸಂಪ್ರದಾಯ ಕೈಬಿಟ್ಟ ಕಲರ್ಸ್ ಕನ್ನಡ; ಯಾಕಿಂಗ್ ಮಾಡಿದ್ರಿ ಬಿಗ್‌ಬಾಸ್?' ಎಂದ ಶೀರ್ಷಿಕೆಯೊಂದಿಗೆ ವರದಿ ಪ್ರಕಟಿಸಿದ್ದರು. ಇದರ ಬೆನ್ನಲ್ಲಿಯೇ ತನ್ನ ತಪ್ಪಿನ ಅರಿವಾಗಿ ಕೇವಲ ಮೂರು ವಾರಕ್ಕೆ ಗಾಯಕ ಹನುಮಂತು ಅವರನ್ನು ಬಿಗ್ ಬಾದ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕಳುಹಿಸಿದ್ದಾರೆ.

ಹೌದು, ಬಿಗ್ ಬಾಸ್ ಮನೆ ಎಂದಾಕ್ಷಣ ಕೇವಲ ಧಾರಾವಾಹಿ, ಕೇವಲ ಸಿನಿಮಾ, ಹಾಸ್ಯ ನಟರು ಅಥವಾ ಸಮಾಜದಲ್ಲಿ ವೈರಲ್ ಆಗಿರುವವರನ್ನು ಮನೆಗೆ ಕರೆದುಕೊಳ್ಳದೇ ಎಲ್ಲ ವರ್ಗಕ್ಕೂ ಆದ್ಯತೆ ಕೊಡಲಾಗುತ್ತಿತ್ತು. ಆದರೆ, ಈ ಬಾರಿ ಧಾರಾವಾಹಿ ಮತ್ತು ಸಿನಿಮಾ ಬಿಟ್ಟರೆ ಬೇರೆ ಕ್ಷೇತ್ರಗಳಿಗೆ ಆದ್ಯತೆಯನ್ನೇ ಕೊಡಲಾಗಿಲ್ಲ. ಕಳೆದ 10 ಸೀಸನ್‌ಗಳಲ್ಲಿ ಪಾಲಿಸಲಾಗುತ್ತಿದ್ದ ನಿಯಮಾವಳಿಗಳನ್ನು ಹಾಗೂ ಸಂಪ್ರದಾಯಗಳನ್ನು ಈ ಬಾರಿ ಬಿಗ್ ಬಾಸ್ ಸೀಸನ್‌ 11ರಲ್ಲಿ ಕೈ ಬಿಡಲಾಗಿತ್ತು. ಇದರಿಂದ ಬಿಗ್ ಬಾಸ್ ವೀಕ್ಷಕರಿಗೆ ಭರಪೂರ ಮನರಂಜನೆ ಸಿಗುವುದಿಲ್ಲ ಎಂಬ ಬೇಸರವೂ ವ್ಯಕ್ತವಾಗಿತ್ತು.

ಫಲಶ್ರುತಿ ವರದಿ ಇಲ್ಲಿದೆ ನೋಡಿ: 10 ಸೀಸನ್ಸ್ ಸಂಪ್ರದಾಯ ಕೈಬಿಟ್ಟ ಕಲರ್ಸ್ ಕನ್ನಡ; ಯಾಕಿಂಗ್ ಮಾಡಿದ್ರಿ ಬಿಗ್‌ಬಾಸ್?

ಗಾಯಕರೇ ಇಲ್ಲದ ಬಿಗ್ ಬಾಸ್ ಮನೆ:
ಪ್ರತಿ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗಾಯಕರಾಗಲೀ, ಸಾಹಿತ್ಯ ಬರೆಯುವವರಾಗಲೂ ಇರುತ್ತಿದ್ದರು. ಹೀಗಾಗಿ, ಬಿಗ್ ಬಾಸ್ ಮನೆಯಲ್ಲಿ ಹಾಡುಗಳಿಗೆ ಬರವೇ ಇರುತ್ತಿರಲಿಲ್ಲ. ಇದೀಗ ಬೆಳಗ್ಗೆ ಏಳುವಾಗ ಹಾಕುವ ಹಾಡುಗಳನ್ನು ಬಿಟ್ಟರೆ ಬೇರೆ ಹಾಡುಗಳು ಕೇಳಿಸುವುದೇ ಇಲ್ಲವಾಗಿತ್ತು. ಇದರ ಬೆನ್ನಲ್ಲಿಯೇ ಬಿಗ್ ಬಾಸ್ ವೀಕ್ಷಕರ ಮನದ ಮಿಡಿತವನ್ನು ಅರಿತ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗಾರ್ತಿ ವಿನುತಾ ಪರಮೇಶ್ ಅವರು '10 ಸೀಸನ್ಸ್ ಸಂಪ್ರದಾಯ ಕೈಬಿಟ್ಟ ಕಲರ್ಸ್ ಕನ್ನಡ; ಯಾಕಿಂಗ್ ಮಾಡಿದ್ರಿ ಬಿಗ್‌ಬಾಸ್?' ಎಂಬ ವರದಿ ಪ್ರಕಟಿಸಿ ಅದರಲ್ಲಿ ಸುದೀರ್ಘವಾಗಿ ಗಾಯಕರ ಅಗತ್ಯತೆಯ ಬಗ್ಗೆ ಬಿಗ್ ಬಾಸ್ ತಂಡಕ್ಕೆ ಮನದ್ಟು ಮಾಡಿಕೊಟ್ಟಿದ್ದರು. ಇದರ ಬೆನ್ನಲ್ಲಿಯೇ ಗಾಯಕ ಹನುಮಂತು ಅವರಿಗೆ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಕಳಿಸಲಾಗಿದೆ. ಇನ್ನು ಹನುಮಂತು ಅವರ ಮುಗ್ದ ಮಾತುಗಳು ಮತ್ತು ಹಾಡಿಗೆ ವೀಕ್ಷಕರು ಮರುಳಾಗುವುದು ಖಂಡಿತ..

Asianet Suvarna News report is reason for singer Hanumantha coming to Bigg Boss sat

ಹಾಸ್ಯವನ್ನು ಭೂತಗನ್ನಡಿಯಲ್ಲಿ ಹುಡುಕಬೇಕು: 
ಬಿಗ್ ಬಾಸ್ ಸೀಸನ್ 11 ಆರಂಭವಾದ ನಂತರ ಅಲ್ಲಿ ಒಬ್ಬ ಹೇಳಿಕೊಳ್ಳುವಂತಹ ಹಾಸ್ಯ ಕಲಾವಿದರೇ ಇಲ್ಲ. ಈಗ ಧನರಾಜ್ ಅವರು ಹಾಸ್ಯ ಕಲಾವಿದರಾಗಿದ್ದರೂ ಹಾಸ್ಯವನ್ನೇ ಮರತಂತೆ ಕಾಣಿಸುತ್ತದೆ. ಇನ್ನು ಕಳೆದ ಬಾರಿಯ ಹಾಸ್ಯ ಕಲಾವಿದ ತುಕಾಲಿ ಸಂತೋಷ್ ಅವರ ಸ್ಥಾನವನ್ನು ಇವರು ತುಂಬುತ್ತಿಲ್ಲ. ಈ ಸೀಸನ್‌ಗೆ ತುಕಾಲಿ ಸಂತೋಷ್ ಅವರ ಪತ್ನಿ ಹಾಸ್ಯ ಕಲಾವಿದೆ ಆಗಿ ಮನೆಗೆ ಬಂದಿದ್ದರೂ, ಅವರು ಮಾತನಾಡುವ ಎಲ್ಲ ಮಾತುಗಳು ಕೂಡ ತುಂಬಾ ಗಂಭೀರ ಆಗಿಯೇ ಇರುತ್ತವೆ. ಅವರ ಮಾತಿನಲ್ಲಿ ಹಾಸ್ಯವನ್ನು ಭೂತಗನ್ನಡಿ ಹಾಕಿ ಹುಡುಕಬೇಕು. ಇನ್ನು ಕ್ರೀಡಾ ವಿಭಾಗದಿಂದ ಯಾರೊಬ್ಬರಿಗೂ ಅವಕಾಶ ನೀಡಲಾಗಿಲ್ಲ. ಮನೆಗೆ ಒಬ್ಬ ಹಿರಿಯರು ಎನ್ನಿಸಿಕೊಳ್ಳುವಂತಹ ನಟಿ ಯಮುನಾ ಶ್ರೀನಿಧಿ ಅವರು ಬಂದಿದ್ದೂ ಅವರನ್ನು ಮೊದಲ ವಾರಕ್ಕೇ ಎಲಿಮಿನೇಷನ್ ಮಾಡಿ ಹೊರಗೆ ಕಳುಹಿಸಲಾಗಿದೆ. ಇದಾದ ನಂತರದ ವಾರ ಯಾರೂ ಎಲಿಮಿನೇಟ್ ಆಗಲಿಲ್ಲ. ಅವರನ್ನು ಹೊರಗೆ ಕಳಿಸುವ ತುರ್ತು ಅದೇನಿತ್ತೋ ಬಿಗ್ ಬಾಸ್ ಒಬ್ಬರಿಗೇ ಗೊತ್ತಾಗಬೇಕು.

ಇದನ್ನೂ ಓದಿ: ಲಾಯರ್ ಜಗದೀಶ್ ಎಕ್ಸ್‌ಕ್ಲೂಸಿವ್ ಸಂದರ್ಶನ: ಬಿಗ್ ಬಾಸ್ ಸ್ಪರ್ಧೆ ಬಗ್ಗೆ ಉಲ್ಟಾ ಹೊಡೆದ ವಕೀಲ!

ಇಬ್ಬರನ್ನು ಹೊರಗೆ ಕಳಿಸಿದ ಬಿಗ್ ಬಾಸ್ ವಾಪಸ್‌ಗೆ ಅವಕಾಶ ನೀಡ್ತಾರಾ?:
ಈವರೆಗೆ ಕನ್ನಡದಲ್ಲಿ ಪ್ರಸಾರವಾದ ಕಳೆದ ಎಲ್ಲ 10 ಬಿಗ್ ಬಾಸ್ ಸೀಸನ್‌ಗಳ ಪೈಕಿ ಒಟ್ಟಿಗೆ ಇಬ್ಬರನ್ನು ಮನೆಯಿಂದ ಹೊರಗೆ ಹಾಕಿದ್ದ ಉದಾಹರಣೆಗಳೇ ಇರಲಿಲ್ಲ. ಆದರೆ, ಇದೀಗ ಮಹಿಳೆಯರಿಗೆ ಕೆಟ್ಟದಾಗಿ ಮಾತನಾಡಿದ್ದಾರೆಂದು ವಕೀಲ ಜಗದೀಶ್ ಅವರನ್ನು ಹಾಗೂ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸೂರ್ಯ ರಂಜಿತ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಆದರೆ, ಕಿಚ್ಚ ಸುದೀಪ್ ಅವರು ವರಾದ ಪಂಚಾಯಿತಿ ನಡೆಸಿಕೊಡುವಾಗ ವಕೀಲ ಜಗದೀಶ್ ಅವರು ಬಿಗ್ ಬಾಸ್ ಮನೆಯ ನಿಯಮ ಉಲ್ಲಂಘನೆ ಮಾಡಿ ಹೊರಗೆ ಹೋಗಿಲ್ಲ ಎಂಬ ಮಾತನ್ನು ಮೂರ್ನಾಲ್ಕು ಬಾರಿ ಬಳಕೆ ಮಾಡಿದ್ದಾರೆ. ಹೀಗಾಗಿ, ವಕೀಲ ಜಗದೀಶ್ ಅವರನ್ನು ಪುನಃ ಬಿಗ್ ಬಾಸ್ ಮನೆಗೆ ವಾಪಸ್ ಕೊರೆಸಿಕೊಳ್ಳುವ ಚಿಂತನೆಯೂ ಇತ್ತು ಎಂದು ಹೇಳಬಹುದು. ಆದರೆ, ಈ ಅವಕಾಶಕ್ಕೂ ಮೊದಲೇ ವಕೀಲ ಜಗದೀಶ್ ಅವರು ಸುದ್ದಿಗೋಷ್ಠಿ ಕರೆದು ಬಿಗ್ ಬಾಸ್ ಮನೆಯ ಘಟನೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮುಂದಾದ ಘಟನೆಯು ಅವರನ್ನು ಮನೆಗೆ ವಾಪಸ್ ಕರೆಸಿಕೊಳ್ಳುವುದಕ್ಕೆ ಇದ್ದ ಅವಕಾಶವನ್ನು ಮುಚ್ಚಿ ಹಾಕಿದೆ. ಇನ್ನು ಸೂರ್ಯ ರಂಜಿತ್ ಅವರು ಸ್ಪಷ್ಟವಾಗಿ ಬಿಗ್ ಬಾಸ್ ಮನೆಯ ನಿಯಮ ಉಲ್ಲಂಘನೆ ಮಾಡಿದ್ದರಿಂದ ಅವರಿಗೆ ಮರಳಿ ಹೋಗುವುದಕ್ಕೆ ಅವಕಾಶ ಇಲ್ಲವೆಂದೇ ಹೇಳಬಹುದು.

Latest Videos
Follow Us:
Download App:
  • android
  • ios