Asianet Suvarna News Asianet Suvarna News

ಲಾಯರ್ ಜಗದೀಶ್ ಎಕ್ಸ್‌ಕ್ಲೂಸಿವ್ ಸಂದರ್ಶನ: ಬಿಗ್ ಬಾಸ್ ಸ್ಪರ್ಧೆ ಬಗ್ಗೆ ಉಲ್ಟಾ ಹೊಡೆದ ವಕೀಲ!

ಬಿಗ್ ಬಾಸ್ ಮನೆಯಿಂದ ಹೊರಬಂದ ವಕೀಲ ಜಗದೀಶ್, ಮತ್ತೆ ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಬಿಗ್ ಬಾಸ್ ಒಂದು ಉತ್ತಮ ಅನುಭವ ಎಂದ ಜಗದೀಶ್, ಮನೆಯಿಂದ ತುಂಬಾ ಕಲಿತಿದ್ದೇನೆ ಎಂದಿದ್ದಾರೆ. ಆದರೆ ಬಿಗ್ ಬಾಸ್ ಮನೆಗೆ ಹೋಗುವ ವಿಚಾರದಲ್ಲಿ ಇದೀಗ ಜಗದೀಶ್ ಉಲ್ಟಾ ಹೊಡೆದಿದ್ದಾರೆ.

Lawyer Jagadish backlash about going to Bigg Boss house sat
Author
First Published Oct 20, 2024, 2:42 PM IST | Last Updated Oct 20, 2024, 4:43 PM IST

ಬೆಂಗಳೂರು (ಅ.20): ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಲ್ಲಿ ವಕೀಲ ಜಗದೀಶ್ ಹಾಗೂ ರಂಜಿತ್ ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಆದರೆ, ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ವಕೀಲ ಜಗದೀಶ್ ಕುಮಾರ್ ಅವರು ನಾನು ಮತ್ತೆ ಬಿಗ್ ಬಾಸ್ ಮನೆಗೆ ಹೋಗುವ ಯೋಚನೆಯನ್ನೇ ಮಾಡಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.

ಹೌದು, ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರಿಗೆ ಕೆಟ್ಟದಾಗಿ ಮಾತನಾಡಿ, ಇತರೆ ಸಹ ಸ್ಪರ್ಧಿಗಳಿಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ ಎಂಬ ಆಧಾರದಲ್ಲಿ ವಕೀಲ ಜಗದೀಶ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಲಾಗಿದೆ. ಇದರ ಬೆನ್ನಲ್ಲಿಯೇ ಇಂದು ಬೆಳಗ್ಗೆ ಸಹಕಾರ ನಗರದಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಆದರೆ, ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರ ತಾಯಿ ನಿಧನದಿಂದ ಇಡೀ ಚಿತ್ರರಂಗ ಮತ್ತು ಬಿಗ್ ಬಾಸ್ ಮನೆಯಲ್ಲಿ ಕರಿಛಾಯೆ ಆವರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಗ್ ಬಾಸ್ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿ ರದ್ದು ಮಾಡಲಾಗಿದೆ ಎಂದು ಹೇಳಿದ್ದಾರೆ.

ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಅವರು, ನಟ ಸುದೀಪ್ ಸರ್ ತಾಯಿ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಬಿಗ್ ಬಾಸ್ ಒಂದು ಕನ್ನಡಿ ಇದ್ದ ಹಾಗೆ. ನಮ್ಮನ್ನ ನೋಡಿಕೊಳ್ಳೋಕೆ ಸಹಾಯವಾಗುತ್ತದೆ. ನಾನು ಹೊರಗಡೆ ಬಂದ ಮೇಲೆ ಎಲ್ಲಾ ವಿಡಿಯೋ ನೋಡಿದೆ. ಬಿಗ್ ಬಾಸ್ ಒಂದು ಉತ್ತಮ ಜರ್ನಿಯಾಗಿದೆ. ಬಿಗ್ ಬಾಸ್ ಮನೆಯಿಂದ ನಾನು ತುಂಬಾ ಕಲಿತಿದ್ದೇನೆ. ಬಿಗ್ ಬಾಸ್ ಮನೆಯೊಳಗೆ ಹೋಗೋದಕ್ಕೆ ಎಲ್ಲರಿಗೂ ಚಾನ್ಸ್ ಸಿಗಲ್ಲ. ನನಗೆ ಸಿಕ್ಕಿರೋದು ಖುಷಿ ತಂದಿದೆ. ಬಿಗ್ ಬಾಸ್ ಮನೆಯಲ್ಲಿ ಇರುವ ಎಲ್ಲಾ ಸ್ಪರ್ಧಿಗಳು ಸೂಪರ್. ಅವರೆಲ್ಲಾ ಫಿಲಂ ಫೀಲ್ಡ್ ಯಿಂದ ಬಂದಿರೋರು. ನಾನು 15 ವರ್ಷ ವಕೀಲ ವೃತ್ತಿಯಲ್ಲಿ ಮಾಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಸಾಧ್ಯ ಆದ್ರೆ ನನ್ನನ್ನು ಮತ್ತೆ ಕರೆಸಿಕೊಳ್ಳಿ: ಸುದೀಪ್ ಮುಂದೆ ಬಿಗ್‌ಬಾಸ್‌ ಗೆ ಕ್ಷಮೆ ಕೇಳಿದ ಜಗದೀಶ್

ಬಿಗ್ ಬಾಸ್ ಮನೆಯಲ್ಲಿ ನಟರಾದ ರಂಜಿತ್ ಹಾಗೂ ತ್ರಿವಿಕ್ರಂ ಮಾಡಿದ್ದು ಸರಿ ಇಲ್ಲ. ಬಿಗ್ ಬಾಸ್ ನಿಯಮಗಳಲ್ಲಿಯೇ ದೈಹಿಕವಾಗಿ ಯಾರೊಬ್ಬರೂ ಯಾರಿಗೂ ಹಲ್ಲೆ ಮಾಡಬಾರದು (ಮ್ಯಾನ್ ಹ್ಯಾಡಿಲಿಂಗ್)ಅಂತ ಇದೆ. ಆದರೆ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅವರಿಗೆ ಎಲ್ಲಾ ಒಳ್ಳೆದಾಗಲಿ, ನನಗೆ ಯಾರ ಬಗ್ಗೆಯು ಕೋಪ ಇಲ್ಲ. ಮುಖ್ಯವಾಗಿ ಹಂಸ, ಭವ್ಯ ಗೌಡ, ಮಾನಸ, ಚೈತ್ರಾ ಕುಂದಾಪುರ ಎಲ್ಲಾರ ಬಗ್ಗೆ ದ್ವೇಷ ಇಲ್ಲ‌. ಬಿಗ್ ಬಾಸ್ ನನ್ನನ್ನು ನಾನು ತಿದ್ದಿಕೊಳ್ಳೋದಕ್ಕೆ ಒಳ್ಳೇ ವೇದಿಕೆ ಆಗಿತ್ತು ಎಂದು ಹೇಳಿದರು.

ಬಿಗ್ ಬಾಸ್ ಧ್ವನಿ ಕೇಳಿದರೆ ಭಯ ಆಗುತ್ತಿತ್ತು:  ಬಿಗ್ ಬಾಸ್ ಬಗ್ಗೆ ಮೊದ ಮೊದಲು ನೆಗೆಲೆಟ್ ಮಾಡಿದ್ದೆ. ಮನೆಯಲ್ಲಿದ್ದ 3 ದಿನದ ಬಳಿಕ ನನಗೆ ಭಯ ಆರಂಭವಾಯಿತು. ಬಿಗ್ ಬಾಸ್ ವಾಯ್ಸ್ ಕೇಳಿದ್ರೆ ಭಯ ಆಯ್ತು. ಬಿಗ್ ಬಾಸ್ ಕರೆದು ತುಂಬಾ ಸಲಹೆ ಹಾಗೂ ಸೂಚನೆ ಕೊಟ್ಟರು. ಇನ್ನು ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದ ಕಿಚ್ಚ ಸುದೀಪ್ ಸಾರ್ ಅವರು ತುಂಬಾ ಗ್ರೇಟ್. ಮತ್ತೆ ವಾಪಸ್ ಬಿಗ್ ಬಾಸ್ ಹೋಗುವ ಬಗ್ಗೆ ಯೋಚನೆ ಮಾಡಿಲ್ಲ. ಕರ್ನಾಟಕ ಜನತೆಗೆ ನನ್ನ ಧನ್ಯವಾದಗಳು. ಬಿಗ್ ಬಾಸ್ ನಲ್ಲಿ ಅವಕಾಶಕೊಟ್ಟ ಎಲ್ಲಾರಿಗೂ ಧನ್ಯವಾದ ಎಂದು ಹೇಳಿದರು.

ಉಲ್ಟಾ ಹೊಡೆದರೇ ಜಗದೀಶ್:
ಬಿಗ್ ಬಾಸ್ ಮನೆಯ 3ನೇ ವಾರದ ಪಂಚಾಯಿತಿ ನಡೆಸಿಕೊಡುವಾಗ ಕಿಚ್ಚ ಸುದೀಪ್ ಅವರು ವಕೀಲ ಜಗದೀಶ್ ಬಗ್ಗೆ ಮನೆಯಲ್ಲಿ ನಡೆದುಕೊಂಡ ಇತರೆ ಸಹ ಸ್ಪರ್ಧಿಗಳಿಗೆ ತರಾಟೆ ತೆಗೆದುಕೊಂಡಿದ್ದರು. ಇದಾದ ನಂತರ ಬಿಗ್ ಬಾಸ್ ಮನೆಯಿಂದ ವಕೀಲ ಜಗದೀಶ್ ಅವರಿದ ವಿಡಿಯೋ ಕರೆ ಮೂಲಕ ಮಾತನಾಡಿಸಲಾಗಿದ್ದು, ಅವರು ಎಲ್ಲ ಸಹ ಸ್ಪರ್ಧಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಜೊತೆಗೆ, ಒಂದು ವೇಳೆ ಅವಕಾಶ ಇದ್ದಲ್ಲಿ ನನ್ನನ್ನು ಬಿಗ್ ಬಾಸ್ ಮನೆಯೊಳಗೆ ವಾಪಸ್ ಕರೆದುಕೊಳ್ಳಬಹುದೇ ಎಂದು ಕೇಳಿದ್ದಾರೆ. ಈ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಇದೀಗ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡುವಾಗ ಬಿಗ್ ಬಾಸ್ ಮನೆಗೆ ವಾಪಸ್ ಹೋಗುವುದಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.

ಇದನ್ನೂ ಓದಿ: ರಂಜಿತ್, ಮಾನಸ ಮತ್ತು ಎಲ್ಲರೂ ನನ್ನನ್ನು ಕ್ಷಮಿಸಿ: ಬಿಗ್‌ಬಾಸ್‌ಗೆ ಕೃತಜ್ಞತೆ ಸಲ್ಲಿಸಿದ ಜಗದೀಶ್

Latest Videos
Follow Us:
Download App:
  • android
  • ios