ಬಿಗ್ ಬಾಸ್ ಕನ್ನಡ 9; ಅಣ್ಣಾವ್ರ ಶೈಲಿಯಲ್ಲಿ ಅರುಣ್ ಸಾಗರ್ ಮಾಡಿರುವ ಮಿಮಿಕ್ರಿ ಪ್ರೇಕ್ಷಕರ ಹೃದಯ ಗೆದ್ದಿದೆ. ಡಾ.ರಾಜ್‌ಕುಮಾರ್ ಧ್ವನಿಯಲ್ಲಿ ಅರುಣ್ ಸಾಗರ್ ಉಳಿದ ಸ್ಪರ್ಧಿಗಳಿಗೆ ಸಲಹೆ ನೀಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 9 ಮೊದಲ ವಾರ ಯಶಸ್ವಿಯಾಗಿ ಮುಕ್ತಾಯವಾಗಿದೆ. ಈ ಬಾರಿ ಒಟ್ಟು 18 ಮಂದಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದು ಪ್ರತಿಯೊಬ್ಬರು ತಮ್ಮತಮ್ಮ ಅಸಲಿ ಆಟ ಪ್ರಾರಂಭ ಮಾಡದ್ದಾರೆ. ಟಾಸ್ಕ್ ಜೊತೆ ಅಳು, ನಗು, ಕಿತ್ತಾಟ, ವಾಗ್ವಾದಕ್ಕೆ ಬಿಗ್ ಬಾಸ್ ಮೊದಲ ವಾರ ಸಾಕ್ಷಿ ಆಗಿದೆ. ಮೊದಲ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಹೋಗ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಮೊದಲ ವಾರವೆ ನಟಿ ಕಾವ್ಯಶ್ರೀ ಮನೆಯಿಂದ ಹೊರಬರುವ ಮೂಲಕ ಬಿಗ್ ಬಾಸ್ ಪಯಣ ಮುಗಿಸಿದ್ದಾರೆ. ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸ್ಪರ್ದಿಗಳ ತಪ್ಪು ಒಪ್ಪುಗಳ ಬಗ್ಗೆ ಸುದೀಪ್ ತಿಳಿಸುತ್ತಾರೆ. ಶನಿವಾರ (ಅಕ್ಟೋಬರ್ 1)ದ ಸಂಚಿಕೆಯಲ್ಲಿ ಸುದೀಪ್, ಅರುಣ್ ಸಾಗರ್ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ವಿದೂಷಕನಾಗುವಲ್ಲಿ ನಾಯಕನಾಗಬೇಡಿ. ನಾಯಕನಾಗುವಲ್ಲಿ ವಿದೂಷಕನಾಗಬೇಡಿ ಎಂದು ಕಿವಿ ಮಾತು ಹೇಳಿದರು.
ಇದೀಗ ಪ್ರೇಕ್ಷಕರು ಭಾನುವಾರ ಸಂಚಿಕೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಪ್ರೋಮೋ ರಿಲೀಸ್ ಆಗಿದ್ದು ಅರುಣ್ ಸಾಗರ್ ಮಿಮಿಕ್ರಿ ಪ್ರೇಕ್ಷಕರ ಹೃದಯ ಗೆದ್ದಿದೆ.ಕಿಚ್ಚ ಸುದೀಪ್ ಅವರು ಅರುಣ್ ಸಾಗರ್ ಅವರಿಗೆ ಅಣ್ಣಾವ್ರಾ ಶೈಲಿಯಲ್ಲಿ ಸ್ಪರ್ಧಿಗಳಿಗೆ ಸಲಹೆ ನೀಡಿ ಎಂದು ಹೇಳಿದರು. ಅರುಣ್ ಸಾಗರ್ ಅಣ್ಣಾವ್ರ ಶೈಲಿಯಲ್ಲಿ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರಗಿ ಅವರಿಗೆ ನೀಡಿದ ಸಲಹೆ ಪ್ರೇಕ್ಷಕರ ಹೃದಯ ಗೆದ್ದಿದೆ. ಥೇಟ್ ಅಣ್ಣಾವ್ರ ಹಾಗೆ ಮಾತನಾಡಿದ್ದು ನೋಡಿ ಉಳಿದ ಸ್ಪರ್ಧಿಗಳು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು. ಕಿಚ್ಚ ಸುದೀಪ್ ಕೂಡ ಸಂಭ್ರಮಿಸಿದರು.
ಅರುಣ್ ಸಾಗರ್ ಅವರ ಮಿಮಿಕ್ರಿಗೆ ಪ್ರೇಕ್ಷಕರು ಸಹ ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಸಕಲಾಕಲಾವಲ್ಲಭ ಎಂದು ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಅದ್ಭುತ ಪ್ರತಿಭೆ ಎಂದು ಹೊಗಳುತ್ತಿದ್ದಾರೆ. ಇವತ್ತಿನ ಸಂಚಿಕೆ ಕುತೂಹಲಕಾರಿಯಾಗಿದ್ದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
BBK9: ಕಿಚ್ಚನ ಮೊದಲನೇ ಪಂಚಾಯಿತಿಯಲ್ಲಿ ಅರುಣ್ ಸಾಗರ್ ಗೆ ಕ್ಲಾಸ್!
ಅಂದಹಾಗೆ ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ನಟಿ ಮಯೂರಿ, ದೀಪಿಕಾ ದಾಸ್, ನವಾಜ್, ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ, ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದಾರೆ. ಮೊದಲ ವಾರ ಕಾವ್ಯಾಶ್ರೀ ಮನೆಯಿಂದ ಹೊರಹೋಗಿದ್ದು ಸದ್ಯ 17 ಮಂದಿ ಬಿಗ್ ಬಾಸ್ ಮನೆಯಲ್ಲಿದ್ದಾರೆ.
BBK9 ಒಂದೇ ಮಗು ಸಾಕಾಗಿದೆ; ನಟಿ ಮಯೂರಿಗೆ ಅರುಣ್ ಸಾಗರ್ ಕ್ಲಾಸ್!
ಈ ಬಿಗ್ ಬಾಸ್ ಆವೃತ್ತಿಯಲ್ಲಿ ಈಗಾಗಲೇ ಒಮ್ಮೆ ಪಾಲ್ಗೊಂಡಿದ್ದ ಸ್ಪರ್ಧಿಗಳು ಹಾಗೂ ಇತ್ತೀಚೆಗೆ ಒಟಿಟಿ ಬಿಗ್ ಬಾಸ್‌ನಲ್ಲಿ ಗೆದ್ದ ನಾಲ್ಕು ಸ್ಪರ್ಧಿಗಳು ಹಾಗೂ ಕೆಲವು ಹೊಸ ಮುಖಗಳು ಸೇರಿರುವುದು ವಿಶೇಷ. ಎಂದಿನಂತೆ ಸ್ಯಾಂಡಲ್‌ವುಡ್ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದು, ಅಭಿಮಾನಿಗಳು ವಾರದ ಕಥೆ ಕಿಚ್ಚನ ಜೊತೆ ನೋಡಲು ಕಾತುರರಾಗಿರುತ್ತಾರೆ. ಮೊದಲ ಆವೃತ್ತಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ, ವೀಕ್ಷಕರ ಹೃದಯ ಗೆದ್ದ ಅರುಣ್ ಸಾಗರ್‌ಗೆ ಲಕ್ ಕೈ ಹಿಡಿದಿರಲಿಲ್ಲ. ಅದಕ್ಕೆ ಈ ಬಾರಿಯಾದರೂ ಗೆಲ್ಲುತ್ತಾರಾ ಎಂದು ಕಾದುನೋಡಬೇಕಿದೆ.
