Asianet Suvarna News Asianet Suvarna News

ಶ್ರೀರಸ್ತು ಶುಭಮಸ್ತು ಅವಿಗೆ ಹುಟ್ಟುಹಬ್ಬದ ಸಂಭ್ರಮ: ಅರ್ಫಾತ್​ ಶರೀಫ್​ರ ಇಂಟರೆಸ್ಟಿಂಗ್​ ವಿಷ್ಯ ಇಲ್ಲಿದೆ...

ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಅವಿನಾಶ್​ ಆಗಿ ಮಿಂಚುತ್ತಿರುವ ಅರ್ಫಾತ್​ ಶರೀಫ್​ ಅವರ ಹುಟ್ಟುಹಬ್ಬವಿಂದು. ಅವರ ಜೀವನದ ಕೆಲವು ವಿಷ್ಯಗಳು ಇಲ್ಲಿದೆ...
 

Arfat Sharif who is acting as Avinash in Shreerastu Shubhamastu birthday special suc
Author
First Published Dec 20, 2023, 2:44 PM IST

ಮುಖದಲ್ಲಿ ಸದಾ ಗಂಭೀರತೆ, ಆಗಾಗ್ಗೆ ತುಸು ನಗು. ಪತ್ನಿಯ ಜೊತೆ ರೊಮ್ಯಾನ್ಸ್​ ವಿಷಯ ಬಂದಾಗ ಮಾತ್ರ ಮುಖದಲ್ಲಿ ಮಂದಹಾಸ, ಅಪ್ಪ ಎಂದರೆ ವಿಪರೀತ ಸಿಟ್ಟು, ಹಾಗಂತ ಯಾವುದೋ ಮೂಲೆಯಲ್ಲಿ ಪ್ರೀತಿಯ ಅಲೆಯೂ ಇಲ್ಲದಿಲ್ಲ. ಇನ್ನು ಅಪ್ಪನನ್ನು ಮದ್ವೆಯಾಗಿ ಬಂದಿರೋ ಹೆಣ್ಣಿನ ಮೇಲೂ ಕೋಪ, ಆದರೆ ಹಾಗಂತ ಅದು ತಾತ್ಕಾಲಿಕವಷ್ಟೇ. ಆಕೆಯನ್ನು ಕಂಡರೂ ಅಷ್ಟೇ ಗೌರವ... ಹೆಣ್ಣಿನ ವಿಷಯ ಬಂದಾಗ ಗೌರವದ ಭಾವ... ಪತ್ನಿ ಎಂದರೆ ಬಹಳ ಪ್ರೀತಿ... ಆಕೆಯ ಮಾತನ್ನು ಮೀರದ ಪತಿಯೀತ...

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ  ಶ್ರೀರಸ್ತು ಶುಭಮಸ್ತು ಸೀರಿಯಲ್​ನ ಅವಿನಾಶ್​ ಅಂದ್ರೆ ಅವಿ ಕ್ಯಾರೆಕ್ಟರ್​. ಪಾತ್ರಕ್ಕೆ ತಕ್ಕಂತೆ ಗಂಭೀರತೆ, ಗಂಟುಮುಖ, ಆಗಾಗ್ಗೆ ಮಾತ್ರ ಮಂದಸ್ಮಿತನಾಗಿ ಕಾಣಿಸಿಕೊಳ್ಳುವ ಅವಿನಾಶ್​ನ ನಿಜವಾದ ಹೆಸರು ಅರ್ಫಾತ್​ ಶರೀಫ್​. ಇಂದು ಅರ್ಫಾತ್​ ಅವರಿಗೆ ಜನ್ಮದಿನದ ಸಂಭ್ರಮ. ಕುಟುಂಬದವರ ಜೊತೆಗೆ ತುಂಬಾ ಪ್ರೀತಿ ಹೊಂದಿರುವ ಅವಿಗೆ ಈ ಸೀರಿಯಲ್​ನಲ್ಲಿ  ಪತ್ನಿ ಪೂರ್ಣಿ ಅಂದರೆ ಬಹಳ ಪ್ರೀತಿ. ಆಕೆ ಸಂತೋಷವಾಗಿ ಇರುವುದಕ್ಕೆ ಏನು ಬೇಕಾದರೂ ಮಾಡುವ ಪಾತ್ರ ಅವಿಯದ್ದು. ಯಾವುದೇ ತಪ್ಪು ತಿಳಿವಳಿಕೆಯಿಂದಾಗಿ ಅವಿನಾಶ್‌ಗೆ ತಂದೆ ಮಾಧವನನ್ನು ಕಂಡರೆ ಸಿಟ್ಟು,  ತನ್ನ ತಾಯಿಯ ಸಾವಿಗೇ ತನ್ನ ತಂದೆಯೇ ಕಾರಣ ಎಂಬುದು ಇದಕ್ಕೆ ಕಾರಣ. ಹೀಗೆ ಒಂದೇ ಕ್ಯಾರೆಕ್ಟರ್​ನಲ್ಲಿ ವಿಭಿನ್ನ ಗುಣಗಳನ್ನು ಹೊಂದುವಂಥ ನಟನಾ ಕೌಶಲ ಹೊಂದಿರುವ ಅರ್ಫಾತ್​ ಅವರಿಗೆ  ಈ ಬಗ್ಗೆ ಜೀ ಕನ್ನಡ ವಾಹಿನಿ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಇವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವನ್ನೇ ಹರಿಸಿರುವ ಅಭಿಮಾನಿಗಳು, ನಟನ ನಟನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಹಲವರು ಇವರ ಹೆಸರು ನೋಡಿ ಅಚ್ಚರಿಯನ್ನೂ ವ್ಯಕ್ತಪಡಿಸುತ್ತಿದ್ದಾರೆ. ಮುಸ್ಲಿಂ ಕಲಾವಿದನಾದರೂ ಅಚ್ಚ ಕನ್ನಡದ ಭಾಷೆಯ ಬಗ್ಗೆ ಹೆಮ್ಮೆ ಪಡುವ ಕಮೆಂಟ್​ಗಳನ್ನು ಹಾಕುತ್ತಿದ್ದಾರೆ. 

ಬಿಗ್​ಬಾಸ್​ ವಿನಯ್​ ಪರ ಮಾತನಾಡಿ ಟ್ರೋಲ್​ ಆದ ನಟಿ ಅನು ಪೂವಮ್ಮ: ನೆಟ್ಟಿಗರು ಹೀಗೆಲ್ಲಾ ಹೇಳೋದಾ?

ಅಂದಹಾಗೆ ಅವಿ ಅಂದ್ರೆ ಅರ್ಫಾತ್​ ಈ ಹಿಂದೆಯೂ ಕೆಲವು ಧಾರಾವಾಹಿಗಳಲ್ಲಿ ಮಿಂಚಿದ್ದಾರೆ.  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ ಸೀರಿಯಲ್​ನಲ್ಲಿ  ನಾಯಕಿ ಇಂಚರಾಳ ಮಾವನ ಮಗನಾಗಿದ್ದರು. ಆಗ ವಿಲನ್​ ಆಗಿ ನಟಿಸಿ ಜನಮನ ಗೆದ್ದಿದ್ದರು. ಇದೀಗ ಅತ್ತ ವಿಲನ್ನೂ ಅಲ್ಲ, ಇತ್ತ ನಾಯಕನೂ ಅಲ್ಲದ ಕ್ಯಾರೆಕ್ಟರ್​ ಅನ್ನು ತುಂಬಾ ಸೊಗಸಾಗಿ ನಿಭಾಯಿಸುತ್ತಿದ್ದಾರೆ. ಅಂದಹಾಗೆ ಅರ್ಫಾತ್​ ಅವರು ಸೀರಿಯಲ್​ ಮಾತ್ರವಲ್ಲದೇ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ.  ಯಶ್ ಅಭಿ‌ನಯದ  'ಕೆಜಿಎಫ್ 2'ನಲ್ಲಿ ಇವರು ಪೊಲೀಸ್​ ಪಾತ್ರ ಮಾಡಿದ್ದಾರೆ. ಅಷ್ಟೇ ಅಲ್ಲದೇ  ಸಸ್ಪೆನ್ಸ್ ಥ್ರಿಲ್ಲರ್ ಕಥೆಯಿರುವ  'ಕಥಾಲೇಖನ' ಸಿನಿಮಾದಲ್ಲಿ ನಾಯಕನ ಪಾತ್ರ ಮಾಡಿದ್ದಾರೆ.  'ಚಾರ್ಕೋಲ್' ಎಂಬ ವೆಬ್ ಸೀರಿಸ್‌ನಲ್ಲಿ ನಟಿಸಿದ್ದಾರೆ. ಇದರ ಜೊತೆಗೆ, ಮಾಡೆಲಿಂಗ್​ ಕ್ಷೇತ್ರದಲ್ಲಿಯೂ ಅರ್ಫಾತ್​ ಸಾಕಷ್ಟು ಹೆಸರು ಮಾಡಿದ್ದಾರೆ. ಟೊಯೋಟಾ, ಪೈಂಟ್, ಟಿವಿಎಸ್, ಬ್ರಾಂಡ್ ಎಫ್​ಎಂಎಸ್​ಜಿಎಂ  ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. 

ಇದೀಗ ಶ್ರೀಮಸ್ತು ಶುಭಮಸ್ತು ಸೀರಿಯಲ್​ನಲ್ಲಿ ಪೂರ್ಣಿಯ ಪತಿ ಅವಿಯಾಯಿ ಪರಿಪೂರ್ಣ ನಟನಾಗಿ ಹೊರಹೊಮ್ಮುತ್ತಿದ್ದಾರೆ. ಯಾವ ಪಾತ್ರಕ್ಕೂ ಸೈ ಎಂದು ತೋರಿಸಿಕೊಂಡು ಮನೆಮಾತಾಗುತ್ತಿದ್ದಾರೆ. ಫ್ಯಾನ್ಸ್​ ಹುಟ್ಟುಹಬ್ಬದ ಶುಭಾಶಗಳನ್ನು ತಿಳಿಸುತ್ತಲೇ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ತಂದೆಯ ಸತ್ಯದ ಬಗ್ಗೆ ಆದಷ್ಟು ಬೇಗ ತಿಳಿದುಕೋ ಎನ್ನುತ್ತಿದ್ದಾರೆ. ವಿಲನ್​ ಶಾರ್ವರಿಯ ಬಗ್ಗೆ ಆದಷ್ಟು ಬೇಗ ಅರಿವಾಗಲಿ, ತುಳಸಿಯನ್ನು ಅಮ್ಮನೆಂದು ಸ್ವೀಕರಿಸುವ ಎಂದೆಲ್ಲಾ ಹೇಳುತ್ತಿದ್ದಾರೆ. 

ನಂಬಿಕೆಗಿಂತ ಮುಖ್ಯ ದಾಂಪತ್ಯದಲ್ಲಿ ಇನ್ನೇನಿದೆ? ಥ್ಯಾಂಕ್ಯೂ ಗೌತಮ್​ ಸರ್​ ಅಂತಿದ್ದಾರೆ ಅಮೃತಧಾರೆ ಫ್ಯಾನ್ಸ್​

Follow Us:
Download App:
  • android
  • ios