25 ವರ್ಷಗಳ ಕಾಲ ಬಣ್ಣದ ಪ್ರಪಂಚದಲ್ಲಿರುವ ನಟ ನಿತೇಶ್ ಪಾಂಡೆ ಹೃದಯಾಘಾತದಿಂದ ಅಗಲಿದ್ದಾರೆ. 

ಸ್ಟಾರ್ ಪ್ಲಸ್‌ ವಾಹಿನಿಯ ಜನಪ್ರಿಯ ಶೋ ಅನುಪಮಾದಲ್ಲಿ ಧೀರಜ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿತೇಶ್ ಪಾಂಡೆ ಹೃದಯಾಘಾತದಿಂದ ಅಗಲಿದ್ದಾರೆ. ಇಗತ್ಪುರಿಗೆ ಹೋಗಿದ್ದ ಅವರು 1.30ರ ಸುಮಾರಿಗೆ ಸಂಭವಿಸಿದ ‘ಕಾರ್ಡಿಯಾಕ್‌ ಅರೆಸ್ಟ್‌’ (ಹೃದಯ ಸ್ತಂಭನ) ನಿಂದ ಕೊನೆಯುಸಿರೆಳೆದಿದ್ದಾರೆ. ನಿರ್ಮಾಪಕ ಜೆಡಿ ಮಜೇಥಿಯಾ ಮತ್ತು ನಿತೇಶ್ ಆತ್ಮೀಯರು, ಗೆಳೆಯ ಇನ್ನಿಲ್ಲ ಎನ್ನುವ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದರು. 

ಖಾಸಗಿ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ನಿತೇಶ್ ಪಾಂಡಿ ಹೋಟೆಲ್‌ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರಂತೆ ಹೀಗಾಗಿ ತನಿಖೆ ನಡೆಯುತ್ತಿದೆ. 'ಟಿವಿ ನಟ ನಿತೇಶ್ ಪಾಂಡೆ ಮಹಾರಾಷ್ಟ್ರದ ನಾಸಿಕ್‌ನ ಇಗತ್‌ಪುರಿ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಥಮಾ ತನಿಖೆ ಪ್ರಕಾರ ನಿತೇಶ್ ಸಾವಿಗೆ ಹೃದಯಾಘಾತ ಕಾರಣ ಎಂದು ತಿಳಿದು ಬಂದಿದೆ. ಹೋಟೆಲ್‌ನಲ್ಲಿ ಘಟನೆ ನಡೆದಿರುವ ಕಾರಣ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೀವಿ. ಹೋಟೆಲ್ ಸಿಬ್ಬಂದಿ ಮತ್ತು ನಿತೇಶ್ ಆಪ್ತರಿಗೆ ತನಿಖೆ ನಡೆಯುತ್ತಿದೆ' ಎಂದು ಪೊಲೀಸರು ತಿಳಿಸಿದ್ದಾರೆ. 

ಸುಮಾರು 25 ವರ್ಷಗಳ ಕಾಲ ನಿತೀಶ್ ಪಾಂಡೆ ಹಿಂದಿ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 90ರ ದಶಕದಲ್ಲಿ ಥಿಯೇಟರ್‌ನಲ್ಲಿ ಜರ್ನಿ ಆರಂಭಿಸಿದ ನಟ ವೃತ್ತಿ ಜೀವನ ಆರಂಭದಲ್ಲೇ ಒಳ್ಳೆ ಒಳ್ಳೆ ಆಫರ್‌ಗಳನ್ನು ಪಡೆದರು. ತೇಜಸ್, ಮಂಜಿಲೀನ್ ಅಪಾನಿ ಅಪಾನಿ, ಸಾಯಾ, ಅಸ್ತಿತ್ವ ಏಕ್ ಪ್ರೇಮ್ ಕಹಾನಿ, ಜುಸ್ತಜೂ ಮತ್ತು ದುರ್ಗೇಶ್ ನಂದಿನಿಯಂತಹ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿತೇಶ್ ನಿರ್ಮಾಣ ಸಂಸ್ಥೆ ಕೂಡ ನಡೆಸುತ್ತಿದ್ದರು. ಬಧಾಯಿ ದೋ, ಓಂ ಶಾಂತಿ ಓಂ ಮತ್ತು ಖೋಸ್ಲಾ ಕಾ ಘೋಸ್ಲಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನುಪಮಾ ಮತ್ತು ಪ್ಯಾರ್ ಕಾ ದರ್ದ್ ಹೈ ಮೀಥಾ ಮೀಥಾ ಪ್ಯಾರಾ ಪ್ಯಾರಾ ಅವರ ಕೊನೆಯ ಟಿವಿ ಧಾರಾವಾಹಿ. 

ಕೆಲವೊಂದು ಸಿನಿಮಾಗಳಲ್ಲಿ ನಿತೇಶ್ ಪಾಂಡೆ ಮಾಡಿರುವ ಕಾಮಿಡಿ ಸೂಪರ್ ಹಿಟ್ ಅಗಿದೆ. 'ನಮ್ಮ ಕೋ-ಸ್ಟಾರ್‌ಗಳ ಜೊತೆ ಸರಿಯಾದ ಟೈಮಿಂಗ್‌ ನೋಡಿಕೊಂಡೆ ಕಾಮಿಡಿ ಹಿಟ್ ಆಗುತ್ತೆ. ಈ ರೀತಿ ಟೈಮಿಂಗ್ ನೋಡಿಕೊಂಡರೆ ಮಾತ್ರ ಜನರು ಹೊಟ್ಟೆ ನೋವು ಬರುವಂತೆ ನಗುತ್ತಾರೆ' ಎಂದು ಈ ಹಿಂದೆ ನಿತೇಶ್ ಹೇಳಿದ್ದರು. 

THE KERALA STORY ನಟಿ ಅದಾ ಶರ್ಮಾ ಮೊಬೈಲ್‌ ನಂಬರ್‌ ಆನ್‌ಲೈನ್‌ನಲ್ಲಿ ಸೋರಿಕೆ

'ನಿತೇಶ್ ಅಗಲಿರುವ ವಿಚಾರ ನಂಬಲು ಅಗುತ್ತಿಲ್ಲ ಆದರೆ ವಿಧಿ ನಮ್ಮ ಕೈಯಲ್ಲಿಲ್ಲ. ಆಪ್ತ ಸ್ನೇಹಿತ, ಒಳ್ಳೆಯ ಸಹೋದ್ಯೋಗಿ ಹಾಗೂ ತುಂಬಾ ಟ್ಯಾಲೆಂಟ್ ಇರುವ ವ್ಯಕ್ತಿ ಹೃದಯಾಘಾತದಿಂದ ರಾತ್ರಿ 2 ಗಂಟೆಗೆ ಅಗಲಿದ್ದಾರೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ನಿತೇಶ್. ಇಂದು ನಮ್ಮ ದಿನ ಎರಡು ಬೇಸರದ ವಿಚಾರಗಳನ್ನು ಕೇಳುವ ಮೂಲಕ ಆರಂಭವಾಗಿದೆ. ಸಾರಾಭಾಯ್ ವರ್ಸಸ್ ಸಾರಾಭಾಯ್ ದಲ್ಲಿ ವೈಭವಿ ಉಪಾಧ್ಯಾಯ ಜಾಸ್ಮಿನ್ ಆಗಿ ಸ್ಟಾರ್ ನೆಟ್‌ವರ್ಕ್‌ನ ಪೌರಾಣಿಕ ಧಾರಾವಾಹಿ..ಇಬ್ಬರು ಸ್ಟಾರ್ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಾರ್ಥ್‌ ಇಂಡಿಯಾದಲ್ಲಿ ವೈಭವಿಗೆ ರಸ್ತೆ ಅಪಘಾತವಾಗಿದೆ ಇಲ್ಲಿ ನೋಡಿದರೆ ನಿತೇಶ್‌ಗೆ ಹೃದಯಾಘಾತವಾಗಿದೆ. ಜೀವನ ಹೇಗೆ ಅಂತಾನೇ ತಿಳಿಯುವುದಿಲ್ಲ. ಇಬ್ಬರ ಕುಟುಂಬಕ್ಕೆ ದೇವರ ಶಕ್ತಿ ನೀಡಬೇಕು' ಎಂದು ದೇವೆನ್ ಭೋಜನಿ ಟ್ವೀಟ್ ಮಾಡಿದ್ದಾರೆ.