Annayya Serial: ‘ಅಣ್ಣಯ್ಯ’ ಧಾರಾವಾಹಿಯಲ್ಲಿ ಸೀನನ ಬುದ್ದಿ ಗೊತ್ತಾದ ಬಳಿಕ ರಶ್ಮಿಯನ್ನು ಶಿವು ಮನೆಗೆ ಕರೆದುಕೊಂಡು ಬಂದಿದ್ದಾನೆ. ಆದರೆ ಮಾದಪ್ಪ ಮಾತ್ರ ನನ್ನ ಸೊಸೆಯನ್ನು ಮನೆಗೆ ಕರೆದುಕೊಂಡು ಬರಲು ಧರಣಿ ಕೂತಿದ್ದಾನೆ. ಮಾದಪ್ಪನಂತಹ ಮಾವ ಎಲ್ಲರಿಗೂ ಸಿಗಲಿ ಎಂದು ಜನ ಹಾರೈಸುತ್ತಿದ್ದಾರೆ. 

ಅಣ್ಣಯ್ಯ ಸೀರಿಯಲ್ ಮಾದಪ್ಪ

‘ಅಣ್ಣಯ್ಯ’ ಧಾರಾವಾಹಿಯಲ್ಲಿ ಸದ್ಯ ಇಮೋಶನಲ್ ಎಪಿಸೋಡ್ ಪ್ರಸಾರವಾಗುತ್ತಿದೆ. ಒಂದು ಕಡೆ ಶಿವಣ್ಣನ ಮುಂದೆ ಸೀನನ ನಿಜ ಮುಖದ ಅನಾವರಣ ಆಗಿದೆ. ದೇವಸ್ಥಾನದಲ್ಲಿ ಸೀನಾ, ಪಿಂಕಿ ಕುತ್ತಿಗೆಗೆ ತಾಳಿ ಕಟ್ಟುವುದನ್ನು ನೋಡಿ ಸಿಟ್ಟಾದ ಶಿವಣ್ಣ, ಸೀನಾಗೆ ಬಿಗಿದು, ಕೊನೆಗೆ ತನ್ನ ತಂಗಿಯ ಜೀವನ ಹಾಳಾಗಿದೆ ಎಂದು ತಿಳಿದು, ಸೀನಾ ಮನೆಯಿಂದ ರಶ್ಮಿಯನ್ನು ವಾಪಾಸ್ ಕರೆದುಕೊಂಡು ಮನೆಗೆ ಬಂದಿದ್ದಾನೆ. ಸೊಸೆಯನ್ನು ಕರೆದುಕೊಂಡು ಹೋದ ಶಿವುನ ಮನ ಒಲಿಸಿ. ಮತ್ತೆ ತನ್ನ ಮುದ್ದಿನ ಸೊಸೆಯನ್ನು ಮನೆಗೆ ಕರೆದುಕೊಂಡು ಹೋಗಿ ದೀಪ ಹಚ್ಚಲು, ಶಿವು ಮನೆ ಮುಂದೆ ಧರಣಿ ಕುತ್ತಿದ್ದಾನೆ ಮಾದಪ್ಪ.

Add Asianetnews Kannada as a Preferred SourcegooglePreferred

ಮಾದಪ್ಪನಂತಹ ಮಾವ ಸಿಗಲು ಪುಣ್ಯ ಮಾಡಿದ್ಲು ರಶ್ಮಿ

ಸೊಸೆಗಾಗಿ ಮಗನನ್ನೇ ದುರು ಹಾಕಿ, ರಶ್ಮಿಯನ್ನು ಮಗಳಂತೆ ಕಾಣುತ್ತಿರುವ ಹಾಗೂ ಸೊಸೆಯನ್ನು ಮತ್ತೆ ಮನೆಗೆ ಕರೆದುಕೊಂಡು ಬರಲು ತಯಾರಿ ನಡೆಸಿರುವ ಮಾದಪ್ಪನನ್ನು ನೋಡಿ ವೀಕ್ಷಕರು ಖುಷಿಯಾಗಿದ್ದಾರೆ. ಇಂತಹ ಮಾವ ಎಲ್ಲರಿಗೂ ಸಿಗಲಪ್ಪಾ ಎಂದು ಹಾರೈಸಿದ್ದಾರೆ. ಮಾವ ಎಂದರೆ ಸೊಸೆಯರ ಮುಂದೆ ಅಧಿಕಾರ ಚಲಾಯಿಸುವವರ ಮಧ್ಯೆ, ಮಾದಪ್ಪನಂತಹ ಸೊಸೆಗೆ ಸದಾ ಬೆಂಗಾವಲಾಗಿರುವ ಮಾವನನ್ನು ನೋಡಿ ವೀಕ್ಷಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಆಸ್ತಿಗೋಸ್ಕರ ಸೀನಾ ಮದುವೆಯಾಗ್ತಿದ್ದಾರೆ ಪಿಂಕಿ

ಅಂದ ಹಾಗೆ ಪಿಂಕಿ ಸೀನಾನನ್ನು ಲವ್ ಮಾಡಿದ್ದು ಮತ್ತು ಮದುವೆಯಾಗಲು ತುದಿಕಾಲಲ್ಲಿ ನಿಂತಿರುವುದು ಎಲ್ಲವೂ ಆಸ್ತೊಗೋಸ್ಕರ. ಆದರೆ ಸೀನಾಗೆ ಆಸ್ತಿಯೇ ಇಲ್ಲ ಅಂದರೆ, ನಿಜವಾಗಿಯೂ ಪಿಂಕಿ ಮದುವೆಗೆ ಒಪ್ಪಿಗೆ ಸೂಚಿಸುತ್ತಾಳೆಯೇ ಖಂಡಿತಾ ಇಲ್ಲ. ಈಗ ಮಾದಪ್ಪನ ಮುಂದೆ ಪಿಂಕಿಯ ಅಸಲಿ ಮುಖ ಬಯಲಾಗಿದೆ. ಮಾದಪ್ಪ ಮತ್ತು ಪಾರು ಇಬ್ಬರೂ ಜೊತೆ ಸೇರಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುತ್ತಾರೆಯೇ ನೋಡಬೇಕು.

ವೀಕ್ಷಕರು ಮಾದಪ್ಪನ ಬಗ್ಗೆ ಹೇಳುತ್ತಿರೋದು ಏನು?

  • ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಈ ಥರ ಮಾವ ಇರಬೇಕು. ಹೆಣ್ಣು ಹೆತ್ತವರು ಮಾದಪ್ಪಣ್ಣನಂತ ಮಾವ ಸಿಗಲಿ ಅಂತ ಇಚ್ಚಿಸುವವರೇ ಹೆಚ್ಚು. ಇಂತ ಮಾವಾ ಲಕ್ಷಕ್ಕೆ ಒಬ್ಬರು ಎಂದಿದ್ದಾರೆ.
  • ಮಾದಪ್ಪನಂಥ ಮಾವ, ಶಿವಣ್ಣ ಅಂಥ ಮಾವ, ಗೌತಮ್ ಅಂಥ ಗಂಡ ಎಲ್ಲ ಹೆಣ್ಣುಮಕ್ಕಳಿಗೂ ಸಿಗಬೇಕು, ಎಲ್ಲದಕ್ಕೂ ಪುಣ್ಯ ಮಾಡಿರಬೇಕು
  • ಇಂಥ ಮಾವ ಸಿಕ್ರೆ ಯಾವ ಹೆಣ್ಣು ತವರು ಮನೆಗೆ ಹೋಗಲ್ಲ ಗಂಡ ಇಲ್ಲ ಅಂದ್ರೆ ಧೈರ್ಯದಿಂದ ದುಡುಕೊಂಡ್ ತಿಂತಾಳೆ
  • ಮಾದಪ್ಪಣ್ಣ ಮತತ್ತು ಪಾರು ಒಂದು ಪ್ಲಾನ್ ಮಾಡಿ ಪಿಂಕಿ ಮನೆ ತುಂಬಿಸ್ಕೊಂಡು ಸೀನ ನ ಮುಂದೆ ನಿಂಗೆ ಆಸ್ತಿ ಬೇಕ ಅಥವಾ ಸೀನ ಬೇಕಾ ಅಂತ ಅಂದಾಗ ಆಲ್ಮೋಸ್ಟ್ ಸೀನಾ ಅಂತಾಳೆ. ಆಗ ಸರಿಯಾಗಿದ್ರೆ ನನ್ ಸೊಸೆಗೆ ನಾನ್ ಆಸ್ತಿಯೆಲ್ಲ ಬರ್ಕೊಡ್ತೀನಿ, ನೀನು ಸೀನಾ ಮದುವೆಯಾಗು ಅಂದರೆ ಮುಗೀತು ಅವಾಗ ಅವ್ಳು ಅಸ್ಲಿ ಮುಖ ಹೊರಗೆ ಬರುತ್ತೆ ಎಂದು ಸಲಹೆ ಕೂಡ ಕೊಟ್ಟಿದ್ದಾರೆ.