"ಅಣ್ಣಯ್ಯ" ಧಾರಾವಾಹಿಯು ಅಣ್ಣಯ್ಯ ಮತ್ತು ಪಾರು ಸುತ್ತ ಸುತ್ತುತ್ತದೆ. ಪಾರು ವೈದ್ಯೆಯಾಗಿದ್ದು, ಅನಿವಾರ್ಯವಾಗಿ ಶಿವುನನ್ನು ಮದುವೆಯಾಗುತ್ತಾಳೆ. ಶಿವು ತನ್ನ ತಂಗಿಯ ಮದುವೆ ಜವಾಬ್ದಾರಿ ಹೊತ್ತಿದ್ದಾನೆ. ವರದಕ್ಷಿಣೆ ಕಳೆದುಹೋದ ಕಾರಣ ಗುಂಡಮ್ಮನ ಮದುವೆ ರದ್ದಾಗುತ್ತದೆ, ನಂತರ ಸೀನ ಅವಳನ್ನು ಮದುವೆಯಾಗುತ್ತಾನೆ. ಸೀನ ಮತ್ತು ಗುಂಡಮ್ಮನ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರಿಂದ ನಿರ್ದೇಶಕರು ಈ ನಿರ್ಧಾರ ತೆಗೆದುಕೊಂಡರು ಎಂದು ನಟಿ ಅಪೇಕ್ಷಾ ಹೇಳಿದ್ದಾರೆ.
ಮಾಕಾಳಮ್ಮನ ಪರಮ ಭಕ್ತ ಈ ಅಣ್ಣಯ್ಯ. ತನ್ನ ನಾಲ್ವರು ತಂಗಿಯರು ಈತನಿಗೆ ಪಂಚ ಪ್ರಾಣ. ನೋವು ನುಂಗಿ ನಗು ಹಂಚುವ ಕ್ಯಾರೆಕ್ಟರ್ ಇವನದ್ದು. ಅದೇ ಇನ್ನೊಂದೆಡೆ, ವಿಷಕಾರೋ ವೀರಭದ್ರನ ಮನೆತನ. ವೀರಭದ್ರನ ಮೊದಲನೇ ಹೆಂಡತಿ ಸೌಭಾಗ್ಯಳ ಮಗಳೇ ಪಾರ್ವತಿ ಉರ್ಫ್ ಪಾರು. ವೃತ್ತಿಯಲ್ಲಿ ವೈದ್ಯೆ. ಅಣ್ಣಯ್ಯನ ಬಾಲ್ಯದ ಲವ್ ಈಕೆ. ಆದರೆ ಶಿಕ್ಷಣವೇ ಎಲ್ಲ ಅಂತಿರೋ ಪಾರ್ವತಿ, ಅದ್ಯಾವುದೋ ಘಳಿಗೆಯಲ್ಲಿ ಶಿವುನ ಮದುವೆಯಾಗ ಬೇಕಾಗಿ ಬರುತ್ತದೆ. ಆದರೆ ಅವಳು ಲವ್ ಮಾಡ್ತಿರೋದೇ ಬೇರೆಯವನನ್ನು. ಕೊನೆಗೆ ಅವನು ಮೋಸಗಾರ ಎಂದು ತಿಳಿಯುತ್ತದೆ. ಈಗ ಪಾರುಗೆ ಶಿವು ಮೇಲೆ ಲವ್ ಶುರುವಾಗಿದೆ. ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ. ಇದು ಜೀ ಕನ್ನಡದ ಅಣ್ಣಯ್ಯ ಸೀರಿಯಲ್ ಸ್ಟೋರಿ.
ಇದೀಗ, ನಾಲ್ವರು ತಂಗಿಯ ಮದುವೆಯ ಜವಾಬ್ದಾರಿ ಹೊತ್ತಿರೋ ಶಿವು ಒಬ್ಬಳು ತಂಗಿಯ ಮದ್ವೆ ಮಾಡುವುದರಲ್ಲಿಯೇ ಸುಸ್ತಾಗಿ ಹೋಗಿದ್ದಾನೆ. ದೊಡ್ಡವಳನ್ನು ನೋಡಲು ಬಂದವರು ಗುಂಡಮ್ಮ ಅಂದ್ರೆ ರಶ್ಮಿಯನ್ನು ಒಪ್ಪಿಕೊಂಡಿದ್ದರು. ಕೊನೆಗೆ ಅವನ ಜೊತೆ ಮದ್ವೆಯಾಗಬೇಕಿತ್ತು. ಆದರೆ ಮದುವೆಯ ದಿನವೇ ವರದಕ್ಷಿಣೆಯ ಹಣ ಕಳೆದುಹೋಯಿತು. ಈ ಮದುವೆಯನ್ನು ತಪ್ಪಿಸುವುದಕ್ಕಾಗಿ ಶಿವುನ ಅಮ್ಮನೇ ಬೇರೆ ರೂಪದಲ್ಲಿ ಬಂದು ಹಣ ತೆಗೆದುಕೊಂಡು ಹೋಗಿದ್ದಾಳೆ. ಆದರೆ ವರದಕ್ಷಿಣೆ ಹಣ ಜೋಪಾನವಾಗಿ ಇಟ್ಟುಕೊಳ್ಳುವ ಜವಾಬ್ದಾರಿಯನ್ನು ಜಿಮ್ ಸೀನನಿಗೆ ನೀಡಲಾಗಿತ್ತು. ಬಟ್ಟೆ ಬದಲಿಸುವಾಗ ಬ್ಯಾಗ್ ಮರೆತದ್ದರಿಂದ ಈ ಅವಾಂತರವಾಗಿ, ಹಣ ಕಳುವಿಗೆ ಅವನೇ ಕಾರಣ ಎಂಬ ಆರೋಪ ಬಂತು. ಅತ್ತ ವರದಕ್ಷಿಣೆ ಕೊಡದ ಕಾರಣ ವರನ ಮನೆಯವರು ಮದುವೆ ಕ್ಯಾನ್ಸಲ್ ಮಾಡಿದರು. ಕೊನೆಗೆ ಸೀನನೇ ಗುಂಡಮ್ಮನಿಗೆ ತಾಳಿ ಕಟ್ಟುವಂತಾಯಿತು. ಬೇರೆಯವಳನ್ನು ಲವ್ ಮಾಡ್ತಿರೋ ಸೀನನ ಮುಂದಿನ ನಡೆ ಏನು ಎನ್ನುವುದು ಸದ್ಯದ ಪ್ರಶ್ನೆ.
ಮೊದಲ ರಾತ್ರಿಯಂದೇ ಮಂಚ ಮುರಿದ ಗುಂಡಮ್ಮನ ರಿಯಲ್ ಪತಿ ಹೇಗಿರಬೇಕು? ಅಣ್ಣಯ್ಯ ನಟಿಯ ಕನಸು ಕೇಳಿ...
ಆದರೆ, ಜಿಮ್ ಸೀನ ಮತ್ತು ಗುಂಡಮ್ಮನ ಮದುವೆಗೆ ಕಾರಣವಾಗಿದ್ದರು ಸೀರಿಯಲ್ ನಿರ್ದೇಶಕರು, ರೈಟರ್ ಕಾರಣ ಅಲ್ಲ. ಬದಲಿಗೆ ಸೋಷಿಯಲ್ ಮೀಡಿಯಾ ನೆಟ್ಟಿಗರು ಕಾರಣ ಎನ್ನುವ ವಿಷಯವನ್ನು ಗುಂಡಮ್ಮ ಪಾತ್ರಧಾರಿ ಅಪೇಕ್ಷಾ ಶ್ರೀನಾಥ್ ಹೇಳಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, ನನ್ನ ಮತ್ತು ಸೀನನ ಜೋಡಿಯ ಬಗ್ಗೆ ಕಮೆಂಟಿಗರು ಸಿಕ್ಕಾಪಟ್ಟೆ ಮಾತನಾಡುತ್ತಿದ್ದರು. ಈ ಸೀರಿಯಲ್ ಪ್ರೊಮೋ ಹಾಕಿದಾಗಲೆಲ್ಲಾ ನಮ್ಮಿಬ್ಬರ ಮದುವೆಯಾಬೇಕು ಎನ್ನುತ್ತಿದ್ದರು. ಅದಕ್ಕಾಗಿಯೇ, ನಮ್ಮಿಬ್ಬರ ಜೋಡಿ ಸೂಪರ್ಹಿಟ್ ಎನ್ನುವುದು ತಿಳಿದು ನಿರ್ದೇಶಕರು, ಸ್ಟೋರಿ ರೈಟರ್ ಎಲ್ಲಾ ಸೇರಿ ಕುಳಿತು ಸೀನನ ಜೊತೆ ನನ್ನ ಮದುವೆ ಮಾಡಿಸಿದ್ದಾರೆ. ಮುಂದೇನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ ಎಂದಿದ್ದಾರೆ.
ಇದೇ ವೇಳೆ, ಮದುವೆ ಸೀನ್ ಸಂದರ್ಭದಲ್ಲಿ ಅಣ್ಣಯ್ಯನ ಕಣ್ಣೀರು ನೋಡಿ, ನಿಜಕ್ಕೂ ಅಲ್ಲೊಂದು ಭಾವುಕ ಸನ್ನಿವೇಶ ಸೃಷ್ಟಿಯಾಗಿತ್ತು. ಶೂಟಿಂಗ್ ಸೆಟ್ನಲ್ಲಿ ಎಮೋಷನ್ ಕ್ರಿಯೇಟ್ ಆಗಿತ್ತು. ಈ ಸೀನ್ ಮಾಡುವಾಗ ಕೆಲವು ಸಲ ಕಟ್ ಕಟ್ ಎಂದು ರೀಶೂಟ್ ಮಾಡಿದ್ದರೂ, ಎಮೋಷನ್ ಮಾತ್ರ ತುಂಬಾ ಆಗಿತ್ತು ಎಂದಿದ್ದಾರೆ. ಸೀರಿಯಲ್ನಲ್ಲಿ ಮದ್ವೆಯಾಗಿದೆ. ಇನ್ನು ರಿಯಲ್ ಲೈಫ್ನಲ್ಲಿ ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟಿ, ಹೇಗಿರಬೇಕು ಎಂದು ಇಂದಿಗೂ ಯೋಚನೆ ಮಾಡಿಲ್ಲ. ನನಗೆ ಪೇಷನ್ಸ್ ಇಲ್ಲ, ಆದ್ದರಿಂದ ಅವನಿಗೆ ತುಂಬಾ ಪೇಷನ್ಸ್ ಇರಬೇಕು. ಬೇರೆಯವ ಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿತ್ವ ಇರಬೇಕು. ಇಗೋ ಪಕ್ಕಕ್ಕೆ ಇಟ್ಟು ತನ್ನ ತಪ್ಪು ಒಪ್ಪಿಕೊಳ್ಳಬೇಕು. ಇದರಿಂದ ನಮ್ಮ ಸಂಸಾರಕ್ಕೂ, ಸಮಾಜಕ್ಕೂ ಒಳ್ಳೆಯದು ಎಂದಿದ್ದಾರೆ. ಇನ್ನು ನಟಿ ಅಪೇಕ್ಷಾ ಕುರಿತು ಹೇಳುವುದಾದರೆ, ರಂಗಭೂಮಿ ಹಿನ್ನೆಲೆಯಿಂದ ಬಂದ ಇವರು, ಯಕ್ಷಗಾನ ಕಲಾವಿದೆಯೂ ಹೌದು. ಇದೀಗ ಗುಂಡಮ್ಮನ ಪಾತ್ರದಲ್ಲಿ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಶಿವಣ್ಣನ ಮೂರನೇ ತಂಗಿಯಾಗಿ ಇವರು ಮಿಂಚುತ್ತಿದ್ದಾರೆ.
ರಿಯಲ್ ಲೈಫ್ ಲವ್ ಬಗ್ಗೆ ಕೊನೆಗೂ ಗುಟ್ಟು ಬಿಚ್ಚಿಟ್ಟ ಅಣ್ಣಯ್ಯ: ಲವರ್ ವಿಷ್ಯ ಕೇಳಿ ಅಭಿಮಾನಿಗಳಿಗೆ ಶಾಕ್!
