Annayya Kannada Serial Episode: 'ಅಣ್ಣಯ್ಯ' ಧಾರಾವಾಹಿಯಲ್ಲಿ ಜಿಮ್‌ ಸೀನನಿಗೆ ಪಿಂಕಿ ವಾರ್ನಿಂಗ್‌ ಕೊಟ್ಟಿದ್ದಾಳೆ. ಅವನೀಗ ಧರ್ಮ ಸಂಕಟಕ್ಕೆ ಸಿಲುಕಿದ್ದಾನೆ.

'ಅಣ್ಣಯ್ಯ' ಧಾರಾವಾಹಿಯಲ್ಲಿ ( Annayya Serial ) ಜಿಮ್‌ ಸೀನನನ್ನು ಮದುವೆ ಆಗಲೇಬೇಕು ಅಂತ ಪಿಂಕಿ ಪಣ ತೊಟ್ಟಿದ್ದಾಳೆ. ಜಿಮ್‌ ಸೀನನನ್ನು ಕಂಡರೆ ಪಿಂಕಿಗೆ ನಿಜಕ್ಕೂ ಪ್ರೀತಿಯೇ ಇಲ್ಲ. ಆದರೂ ಅವಳು ಹಠಕ್ಕೆ ಬಿದ್ದು, ಅವನನ್ನು ಮದುವೆ ಆಗೋ ಪ್ಲ್ಯಾನ್‌ ಮಾಡುತ್ತಿದ್ದಾಳೆ.

ರಶ್ಮಿ, ಜಿಮ್‌ ಸೀನ ಮದುವೆ ಆಯ್ತು!

ಅನಿರೀಕ್ಷಿತವಾಗಿ ಜಿಮ್‌ ಸೀನ ಹಾಗೂ ರಶ್ಮಿ ಮದುವೆ ನಡೆದೋಯ್ತು. ಸೀನ ಎಷ್ಟೇ ಬೇಡ ಎಂದರೂ ಕೂಡ ತಂದೆ ಮಾದಪ್ಪಣ್ಣನ ಒತ್ತಾಯದ ಮೇಲೆ ಮದುವೆ ಆಯ್ತು. ತನ್ನ ಮನೆಯ ಮರ್ಯಾದೆ ಉಳಿಸಿಕೊಳ್ಳಲು ರಶ್ಮಿ ಕೂಡ ಈ ಮದುವೆ ನನಗೆ ಇಷ್ಟ ಎಂದು ಸುಳ್ಳು ಹೇಳಿದ್ದಳು. ಹಸೆಮಣೆ ಮೇಲೆ ಕೂತ ನನ್ನ ತಂಗಿ ಮದುವೆ ಆಗದೆ ಹಾಗೆ ಎದ್ದರೆ ಅವಳನ್ನು ಯಾರೂ ಮದುವೆ ಆಗೋದಿಲ್ಲ ಎಂದು ಶಿವು ಭಯಪಟ್ಟಿದ್ದನು. ಹೀಗಾಗಿ ಅವನು ಕೂಡ ಜಿಮ್‌ ಸೀನನ ಜೊತೆ ಮದುವೆ ಆಗಲು ಒಪ್ಪಿಗೆ ಕೊಟ್ಟಿದ್ದನು.

ಪಿಂಕಿಗೆ ಬೆಂಬಲ ಕೊಡ್ತಿರೋ ಸೀನನ ತಾಯಿ!

ಜಿಮ್‌ ಸೀನ ಹಾಗೂ ರಶ್ಮಿ ಮದುವೆ ಆಯ್ತು ಅಂತ ಪಿಂಕಿ ಸಿಟ್ಟಿಗೆದ್ದಿದ್ದಾಳೆ. ಇದಕ್ಕೆ ಸೀನನ ತಾಯಿ ಲೀಲಾ ಕುಮ್ಮಕ್ಕು ಇದೆ. ನನ್ನ ಬಾಮೈದ ಸೀನನಿಂದ ದೂರ ಇರು ಅಂತ ಶಿವು ವಾರ್ನ್‌ ಮಾಡಿದರೂ ಕೂಡ ಲೀಲಾ ಮಾತ್ರ ನೀನೆ ನಮ್ಮ ಮನೆ ಸೊಸೆ ಆಗಬೇಕು ಅಂತ ಚಾಡಿ ಹೇಳಿಕೊಟ್ಟಿದ್ದಳು.

ಸೀನನಿಗೆ ಅವಮಾನ ಮಾಡ್ತಿರೋ ಪಿಂಕಿ!

ಈಗಾಗಲೇ ಜಿಮ್‌ ಸೀನನಿಗೆ ಬಾಯಿಗೆ ಬಂದಹಾಗೆ ಬೈದಿರೋ ಪಿಂಕಿ ಸಿಕ್ಕಾಪಟ್ಟೆ ಅವಮಾನ ಮಾಡಿದ್ದಾಳೆ. “ನಿನ್ನ ಮುಖ ನೋಡಿದ್ಯಾ? ನಿನ್ನ ಮುಖಕ್ಕೆ ನಾನು ಸಿಕ್ಕಿರೋದು ಹೆಚ್ಚು. ನಿನ್ನ ಯೋಗ್ಯತೆ ಏನು ಅಂತ ಗೊತ್ತಾ?” ಅಂತೆಲ್ಲ ಸೀನನಿಗೆ ಪಿಂಕಿ ಬಾಯಿಗೆ ಬಂದಹಾಗೆ ಬೈದಿದ್ದಳು. ಒಂದು ಕಡೆ ರಶ್ಮಿ ನನ್ನನ್ನು ಆರಾಧಿಸುತ್ತಾಳೆ, ಗೌರವಿಸ್ತಾಳೆ, ಇನ್ನೊಂದು ಕಡೆ ಪಿಂಕಿ ಅವಮಾನ ಮಾಡ್ತಾಳೆ ಎನ್ನೋದು ಸೀನನಿಗೆ ಅರ್ಥ ಆಗಿದೆ.

ಜಿಮ್‌ ಸೀನನಿಗೆ ಧರ್ಮಸಂಕಟ!

ಜಿಮ್‌ ಸೀನ ಹಾಗೂ ಪಿಂಕಿ ಲವ್‌ ಸ್ಟೋರಿ ಏನಾದರೂ ರಶ್ಮಿಗೋ ಅಥವಾ ಶಿವು, ಪಾರುಗೆ ಗೊತ್ತಾದರೆ ಮಾತ್ರ ದೊಡ್ಡ ಯುದ್ಧವೇ ನಡೆಯುತ್ತದೆ. ಈ ಭಯ ಸೀನನಿಗೆ ಇದೆ. ಈಗಾಗಲೇ ರಶ್ಮಿಯನ್ನು ಮದುವೆ ಆಗಿರೋ ಸೀನನಿಗೆ ಪಿಂಕಿಯನ್ನು ಮದುವೆ ಆಗೋದು ಇಷ್ಟ ಇಲ್ಲ. ಪಿಂಕಿಯನ್ನು ತಿರಸ್ಕರಿಸಲಾಗದೆ, ರಶ್ಮಿಯನ್ನು ಬಿಡಲಾಗದೆ ಅವನು ಒದ್ದಾಡುತ್ತಿದ್ದಾನೆ.

ಬೆದರಿಕೆ ಹಾಕಿದ ಪಿಂಕಿ!

ಈಗ ಪಿಂಕಿಯು ಸೀನನಿಗೆ ವಾರ್ನಿಂಗ್‌ ಮಾಡಿದ್ದು, “ಕಾಮಿಡಿ ಸಿನಿಮಾವನ್ನು ನಿನ್ನ ಲೈಫ್‌ನಲ್ಲಿ ಟ್ರ್ಯಾಜಿಡಿ ಮಾಡ್ತೀನಿ. ಊರು ತುಂಬ ನಿನ್ನ, ನನ್ನ ಹೆಸರು ಬರೆಯುತ್ತೇನೆ. ನೀನು ನನ್ನ ಮದುವೆ ಆದರೆ ಓಕೆ, ಇಲ್ಲ ಅಂದ್ರೆ ನಮ್ಮಿಬ್ಬರ ಪ್ರೀತಿ ಎಲ್ಲರಿಗೂ ಗೊತ್ತಾಗುತ್ತದೆ” ಎಂದು ಎಚ್ಚರಿಕೆ ಕೊಟ್ಟಿದ್ದಾನೆ. ‌

ಜಿಮ್‌ ಸೀನ ಏನ್‌ ಮಾಡ್ತಾನೆ?

ಜಿಮ್‌ ಸೀನ ಮುಂದೆ ಏನ್‌ ಮಾಡ್ತಾನೋ ಏನೋ! ಪಿಂಕಿಯನ್ನು ಮದುವೆ ಆದರೆ ಅವನು ರಶ್ಮಿಗೆ ಮಾಡಿದ ಮೋಸ ಆಗುತ್ತದೆ. ಪಿಂಕಿಯನ್ನು ಮದುವೆ ಆಗದಿದ್ರೆ ಅವಳು ಇನ್ನೇನು ಮಾಡ್ತಾಳೋ ಏನೋ! ಜಿಮ್‌ ಸೀನನನ್ನು ದೇವರೇ ಕಾಪಾಡಬೇಕಿದೆ. ಒಟ್ಟಿನಲ್ಲಿ ಮುಂಬರುವ ಈ ಧಾರಾವಾಹಿ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.

ಪಾತ್ರಧಾರಿಗಳು

ಪಿಂಕಿ- ಸಹನಾ ಶೆಟ್ಟಿ

ಜಿಮ್‌ ಸೀನ- ಸುಷ್ಮಿತ್‌ ಜೈನ್‌

ರಶ್ಮಿ-ಪ್ರತೀಕ್ಷಾ ಶ್ರೀನಾಥ್‌

ಶಿವು-ವಿಕಾಶ್‌ ಉತ್ತಯ್ಯ

ಪಾರು-ನಿಶಾ ರವಿಕೃಷ್ಣನ್