ʼಅಣ್ಣಯ್ಯʼ ಧಾರಾವಾಹಿಯಲ್ಲಿ ಮಾರಿಗುಡಿ ಶಿವು ತಂಗಿ ಗುಂಡಮ್ಮ ಪಾತ್ರದಲ್ಲಿ ಪ್ರತೀಕ್ಷಾ ನಟಿಸುತ್ತಿದ್ದಾರೆ. 

ʼಅಣ್ಣಯ್ಯʼ ಧಾರಾವಾಹಿಯಲ್ಲಿ ಶಿವು ತಂಗಿ ರಶ್ಮಿಗೆ ಎಲ್ಲರೂ ಗುಂಡಮ್ಮ ಅಂತಲೇ ಕರೆಯುತ್ತಾರೆ. ಪಿಯುಸಿ ಪಾಸ್‌ ಮಾಡಲು ಒದ್ದಾಡುವ ಗುಂಡಮ್ಮ ಮೂರು ಹೊತ್ತು ಊಟದ ಬಗ್ಗೆ ಧ್ಯಾನ ಮಾಡ್ತಾಳೆ. ಈಗ ಗುಂಡಮ್ಮ ಜಿಮ್‌ ಸೀನನನ್ನು ಮದುವೆ ಆಗ್ತಾಳೆ. ಜಿಮ್‌ ಸೀನಗೆ ಇಷ್ಟ ಇಲ್ಲದೆ ಈ ಮದುವೆ ನಡೆದಿದೆ. ಹೀಗೆಲ್ಲ ಇರುವಾಗ ಗುಂಡಮ್ಮ ಪಾತ್ರ ಮಾಡ್ತಿರುವ ನಟಿ ಪ್ರತೀಕ್ಷಾ ರಿಯಲ್‌ ಆಗಿ ಹೇಗೆ ಎಂಬ ಪ್ರಶ್ನೆ ಮೂಡಬಹುದು, ಇದಕ್ಕೆ ಉತ್ತರ ಇಲ್ಲಿದೆ.

ದುಡ್ಡು ಮಾಡಿ ಸೆಟಲ್‌ ಆಗ್ಬೇಕು ಅಂತಿದ್ರು! 
“ಆರೇಳು ವರ್ಷಗಳಿಂದ ನಾನು ರಂಗಭೂಮಿಯಲ್ಲಿದ್ದೆ. ಕಾರ್ಪೋರೇಟ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರತೀಕ್ಷಾ ಅವರು ದುಡ್ಡು ಮಾಡಬೇಕು, ಸೆಟಲ್‌ ಆಗಬೇಕು ಅಂತ ಅಂದುಕೊಂಡಿದ್ದೆ. ಅಷ್ಟೇ ಅಲ್ಲದೆ ಮನೆಯಲ್ಲಿಯೂ ಕೂಡ ಹೀಗೆ ಇರಬೇಕು ಅಂತ ಒತ್ತಡ ಇತ್ತು” ಎಂದು ಪ್ರತೀಕ್ಷಾ ಹೇಳಿದ್ದರು. 

ಶಿವಣ್ಣನ ಮನೆ ಹರಾಜಿನಿಂದ ಉಳಿಸಿದ ಪಾರು; ಈ ವಾರದ ಕಿಚ್ಚನ ಚಪ್ಪಾಳೆ ಶಾರದಮ್ಮಗೆ ಎಂದ ಫ್ಯಾನ್ಸ್!

ಕೆಲಸಕ್ಕೆ ರಾಜೀನಾಮೆ ಕೊಟ್ಟರು! 
ರಂಗಸೌರಭ ತಂಡದಲ್ಲಿ ಪ್ರತೀಕ್ಷಾ ಆಕ್ಟಿವ್‌ ಆಗಿದ್ದರು. ಸುಪ್ರೀತಾ ಅವರು ಪ್ರತೀಕ್ಷಾರನ್ನು ಅಲ್ಲಿ ನೋಡಿದ್ದರಂತೆ. ಪ್ರತೀಕ್ಷಾ ಚೆನ್ನಾಗಿ ನಟಿಸ್ತಾಳೆ ಎನ್ನುವ ನಂಬಿಕೆಯಲ್ಲಿ ಅವರು ಆಡಿಷನ್‌ ಮಾಡಿದ್ದರು. ಆಮೇಲೆ ಪ್ರತೀಕ್ಷಾ ಅವರು ಕೆಲಸಕ್ಕೆ ರಾಜೀನಾಮೆ ಕೊಟ್ಟು, ʼಅಣ್ಣಯ್ಯʼ ತಂಡ ಸೇರಿಕೊಂಡಿದ್ದರು.

ಅಭಿಮಾನಿಗಳಿಗಾಗಿ ವಿಕಾಶ್ -ನಿಶಾ ಡುಯೆಟ್…. ಬೇಗನೆ ಗುಡ್ ನ್ಯೂಸ್ ಹೇಳ್ಬಿಡಿ ಅಂತಿದ್ದಾರೆ ಫ್ಯಾನ್ಸ್

ಸಮಾಜಕ್ಕೆ ಒಳ್ಳೆಯದು! 
“ನನಗೆ ತಾಳ್ಮೆ ಇಲ್ಲ, ತಾಳ್ಮೆಯಿಂದ ಇರಬೇಕು. ಬೇರೆಯವರ ನೋವಿಗೆ ಸ್ಪಂದಿಸುವ ಮನೋಭಾವ ಇರಬೇಕು. ಇಗೋ ಸೈಡ್‌ಗಿಟ್ಟು ತನ್ನ ತಪ್ಪುಗಳನ್ನು ಒಪ್ಪಿಕೊಂಡು ಮುಂದುವರೆಯವ ಮನೋಭಾವ ಇದ್ದರೆ ನನಗೂ ಒಳ್ಳೆಯದು, ಸಮಾಜಕ್ಕೆ ಒಳ್ಳೆಯದು” ಎಂದು ಪ್ರತೀಕ್ಷಾ ಹೇಳಿದ್ದಾರೆ. 

ಪಿಂಕಿಗೆ ನ್ಯಾಯ ಸಿಗತ್ತಾ?
ಇಂದು ಎಲ್ಲರೂ ಗುಂಡಮ್ಮ ಅಂತ ಕರೆಯೋದು, ಜನರಿಗೆ ಹತ್ತಿರ ಆಗಿರೋದು ಪ್ರತೀಕ್ಷಾಗೆ ತುಂಬ ಖುಷಿಯಾಗಿದೆ. “ಜನರು ಪ್ರೀತಿ ಕೊಡ್ತಿರೋದು, ನನ್ನ ಹಾಗೂ ಜಿಮ್‌ ಸೀನ ಕಾಂಬಿನೇಶನ್‌ನ್ನು ತುಂಬ ಇಷ್ಟಪಡ್ತಿದ್ದಾರೆ. ಇನ್ನೊಂದು ಕಡೆ ಪಿಂಕಿ ನನ್ನ ಬೆಸ್ಟ್‌ಫ್ರೆಂಡ್.‌ ಪಿಂಕಿಗೆ ನ್ಯಾಯ ಸಿಗತ್ತಾ ಎಂಬ ಪ್ರಶ್ನೆ ಎದ್ದಿದೆ. ಏನಾಗಲಿದೆ ಎಂದು ಕಾದು ನೋಡಬೇಕಿದೆ” ಎಂದು ಪ್ರತೀಕ್ಷಾ ಅವರು ಹೇಳಿದ್ದಾರೆ.

ʼಅಣ್ಣಯ್ಯʼ ಧಾರಾವಾಹಿಯಲ್ಲಿ ಈಗ ಜಿಮ್‌ ಸೀನ ಮನೆಯಲ್ಲಿ ಗುಂಡಮ್ಮ ಒದ್ದಾಡುತ್ತಿದ್ದಾಳೆ. ಮುಂದೆ ಅವಳು ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾಳೋ ಏನೋ! ಇನ್ನು ಪಿಂಕಿ ಕೂಡ ಜಿಮ್‌ ಸೀನ ಭವಿಷ್ಯವನ್ನು ಹಾಳು ಮಾಡುವ ಆಲೋಚನೆ ಮಾಡಿದ್ದಾಳೆ.