ಅಣ್ಣಯ್ಯ ಸೀರಿಯಲ್‌ನಲ್ಲಿ (Annayya kannada serila) ರಿಯಲ್ ಹೀರೋ ಆಗಿ ಗುಂಡಮ್ಮ ಮಿಂಚ್ತಿದ್ದಾಳೆ. ಅವಳ ಶೌರ್ಯ ಶಕ್ತಿ ನೋಡಿ ಈ ಸೀರಿಯಲ್ ಅಭಿಮಾನಿಗಳು ಬಹುಪರಾಕ್ ಅಂತಿದ್ದಾರೆ.
ಅಣ್ಣಯ್ಯ ಸೀರಿಯಲ್ ನೋಡೋ ವೀಕ್ಷಕರಿಗೆ ಗುಂಡಮ್ಮನ ಪಾತ್ರ ಬಂದರೆ ಕೂತಲ್ಲಿಂದ ಅಲ್ಲಾಡಂಗಿರಲ್ಲ. ಬೇಕಿದ್ರೆ ಶಿವು, ವಿಲನ್ ಪಾತ್ರ ಬಂದಾಗ ಬೇಕಿದ್ರೆ ಎದ್ದು ಅಡುಗೆ ಮನೆಗೆ ಹೋಗಿ ಆಗ್ಲೇ ಮೂರ್ ವಿಶಲ್ ಕೂಗಿದ ಕುಕ್ಕರ್ ಮೇಲೆ ನೀರಾಕಿ ಸ್ಟೌ ಆಫ್ ಮಾಡಿ ಬಂದಾರು, ಆದರೆ ಗುಂಡಮ್ಮ ಪಾತ್ರ ಬಂದಾಗ ಕುಕ್ಕರ್ ಕೂಗಿ ಕೂಗಿ ಸುಸ್ತಾಗಿ ಅನ್ನ ಪಾಯಸ ಆದರೂ ಕಮಕ್ ಕಿಮಕ್ ಅನ್ನಲ್ಲ. ಮನೆ ಹೆಂಗಸರ ಈ ಅವತಾರ ನೋಡಿ ತಲೆ ತಲೆ ಚಚ್ಕೊಳ್ಳೋ ಗಂಡಸ್ರು, ಈ ಗುಂಡಮ್ಮ ಯಾವಾಗ ಮಾತು ಆಕ್ಷನ್ ನಿಲ್ಲಿಸ್ತಾಳೋ ಅಂತ ಮೂಗು ಮುರೀತಾರೆ. ಹಾಗಂತ ಬಾಯ್ ಬಿಟ್ಟು ಹೇಳಿದ್ರೆ, ಮನೆ ಹೆಂಗಸ್ರ ಮೈಯಾಗೂ ಗುಂಡಮ್ಮನ ಆವಾಹನೆ ಆಗಿ ಅವರೆಲ್ಲಿ ಬೇರೆ ಥರನೇ ಕ್ಲಾಸ್ ತಗೊಳ್ತಾರೋ ಅಂತ ಭಯ.
ಸದ್ಯಕ್ಕಂತ ಗುಂಡಮ್ಮ ಚಿಂದಿ ಉಡಾಯಿಸ್ತಿದ್ದಾಳೆ. ಮೊದಲೆಲ್ಲ ಶೀನನ್ ನೆರಳು ಕಂಡ್ರೆ ನೆಗೆದು ಬಂದು ಜಗಳ ಕಾಯ್ತಿದ್ದ ಅವಳು ಈಗ ಅವನನ್ನೇ ಕಟ್ಟಿಕೊಂಡಿದ್ದಾಳೆ. ವಿಲನ್‌ಗಳಾಗಿ ಬಡಿದಾದ್ಕೊಂಡಿದ್ದವರು ಲೈಫ್ ಪಾರ್ಟನರ್‌ಗಳಾಗೋ ಹಂಗೆ ಮಾಡಿದ್ದು ವಿಧಿ. ಇನ್ಮೇಲೆ ಕೇಸ್ ಉಲ್ಟಾ ಆಗಬೇಕಿದೆ. ಯಾಕೆಂದರೆ ಇಲ್ಲೀವರೆಗೆ ಸೀನನ್ನ ಕಂಡ್ರೆ ಉರಿದೇಳುತ್ತಿದ್ದವಳು ಈಗ ಸಿಟ್ಟು ಗಿಟ್ಟೆಲ್ಲ ಸೈಡಿಗಿಟ್ಟು ಜಗಳಕ್ಕೂ ಬ್ರೇಕ್ ಹಾಕಿ ತುಂಟತನ, ಚೇಷ್ಟೆ ಮಾಡೋ ಲೆವೆಲ್‌ಗೆ ಇಳಿದಿದ್ದಾಳೆ. ಮೊದಲಿಂದಲೂ ಈ ಪಾತ್ರವನ್ನು ಎನ್‌ಜಾಯ್ ಮಾಡುತ್ತ ಗುಂಡಮ್ಮನೂ ಸೀನನೂ ಹಾವು ಮುಂಗುಸಿ ಥರ ಜಗಳ ಆಡುತ್ತಿದ್ದರೂ ಇವರಿಬ್ಬರೂ ಒಳ್ಳೆ ಪೇರ್ ಆಗ್ತಾರೆ ಎಂದು ವಿಶ್ ಮಾಡಿದ್ದು ಈ ಸೀರಿಯಲ್ ವೀಕ್ಷಕರು. ಅವರ ನಿರೀಕ್ಷೆಯನ್ನು ಸಿನಿಮಾ ಟೀಮ್ ಕೊನೆಗೂ ಸತ್ಯ ಮಾಡಿದಾಗ ಭಾಳ ಖುಷಿ ಪಟ್ಟರು.
ಈಗ ವಿಷ್ಯ ಅದಲ್ಲ. ಗುಂಡಮ್ಮ ಅರ್ಥಾತ್ ರಶ್ಮಿ ಪಾತ್ರಕ್ಕೆ ಈ ಲೆವೆಲ್‌ಗೆ ಬಿಲ್ಡಪ್ ಕೊಟ್ಟಿರೋದಕ್ಕೂ ರೀಸನ್ ಇದೆ. ಸದ್ಯ ಅವಳಿಲ್ಲಿ ಗಂಡ ನರಪೇತಲ ಸೀನ ಮತ್ತು ಹಾಸ್ಪಿಟಲ್ ಸೇರಿರುವ ಶಿವನ ಸಹಾಯಕ ಗೋಡಂಬಿ ಇಬ್ಬರನ್ನೂ ಕಾಪಾಡಿದ್ದಾಳೆ. ತನ್ನ ಕೊಲೆ ರಹಸ್ಯ ಎಲ್ಲಿ ಹೊರಬೀಳುವುದೋ ಅನ್ನುವ ಭಯದಲ್ಲಿ ಗೋಡಂಬಿ ಕೊಲೆ ಮಾಡಲು ಹೊರಟಿದ್ದ ಪಾರು ಅಣ್ಣ ಇದೀಗ ಮತ್ತೆ ಆಸ್ಪತ್ರೆಯಲ್ಲಿ ಗೋಡಂಬಿ ಕೊಲ್ಲಲು ಹೋಗಿ ಗುಂಡಮ್ಮನ ಕೈಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಾಕಿಕೊಂಡಿದ್ದಾನೆ. ಆಸ್ಪತ್ರೆಯಲ್ಲಿ ಶಿವು ಮತ್ತು ಪಾರು ಇಬ್ಬರನ್ನೂ ಮನೆಗೆ ಕಳಿಸಿ ತಾನು ಗೋಡಂಬಿಯ ದೇಖಾರೇಖಿ ನೋಡ್ಕೊಳ್ಳೋದಾಗಿ ಹೇಳಿದ್ದ ಸೀನನ್ನ ಹೊಡೆದು ತಳ್ಳಿ ಗೋಡಂಬಿಗೆ ಚುಚ್ಚಿ ಸಾಯಿಸಲು ಹೊರಟಿದ್ದ. ಅಷ್ಟೊತ್ತಿಗೆ ಅದೆಲ್ಲಿಂದಲೋ ಚಾಮುಂಡಿ ಥರ ಬಂದು ಗಂಡನನ್ನು ಸಾಯಲಿದ್ದ ಗೋಡಂಬಿಯನ್ನು ಪಾರು ಮಾಡಿದ್ದಾಳೆ ಗುಂಡಮ್ಮ. ಇವಳ ಧೈರ್ಯ, ಸಾಹಸ ಕಂಡು ಭಲೇ ಖುಷಿ ಆಗಿರೋ ಈ ಸೀರಿಯಲ್ ವೀಕ್ಷಕರು, 'ನಮ್ ಗುಂಡಮ್ಮಗೊಮ್ಮೆ ಉಘೇ ಅನ್ರಪ್ಪೋ..' ಅಂತಿದ್ದಾರೆ.
ಅಲ್ಲಿ ಭಾರ್ಗವಿ, ಇಲ್ಲಿ ಶಾರ್ವರಿ... ಖೇಲ್ ಕಥಮ್! ಎರಡೂ ಸೀರಿಯಲ್ ದಿ ಎಂಡ್...
ಇನ್ನು ಈ ಸೀರಿಯಲ್‌ನಲ್ಲಿ ಪಾರುವಿಗೆ ಗೋಡಂಬಿ ಮೇಲೆ ದಾಳಿ ಮಾಡಿರೋದು ತನ್ನ ಅಣ್ಣ ಮತ್ತು ಅಪ್ಪನ ಕಡೆಯವರು ಇರಬಹುದಾ ಅಂತ ಡೌಟು ಬಂದಿದೆ. ಅದನ್ನು ಅವಳು ತನ್ನ ಗಂಡ ಶಿವು ಮುಂದೆ ಹೇಳ್ಕೊಂಡಿದ್ದಾಳೆ. ಆದರೆ ಈ ಶಿವು ಪರಮ ಮುಗ್ಧ. ವ್ಯವಹಾರ ಚತುರತೆ ಇಲ್ಲದ ಹಸುಗೂಸಿನ ವ್ಯಕ್ತಿತ್ವದವ. ಆತ ಪಾರು ಮಾತು ಕೇಳಿ ಏನೋ ವೀರಾವೇಶದಿಂದ ಗೋಡಂಬಿ ಮೇಲೆ ದಾಳಿ ಮಾಡಿದೋರನ್ನ ಸುಮ್ಮನೆ ಬಿಡಲ್ಲ ಅಂತ ಡೈಲಾಗೇನೋ ಹೊಡೆದಿದ್ದಾನೆ. ಆದರೆ ಅದು ಸಾಧ್ಯ ಆಗೋದು ಕಷ್ಟ ಇದೆ. ಅದಕ್ಕೂ ಮೊದಲೇ ಗುಂಡಮ್ಮ ಕೈಲಿ ಇಲಿ ಥರ ಸಿಕ್ಕಾಕ್ಕೊಂಡಿರೋ ಪಾರು ಅಣ್ಣ ಈಗ ಹೇಗೆ ಪಾರಾಗ್ತಾನೆ ಅನ್ನೋದೇ ಸದ್ಯದ ಕುತೂಹಲ.
Amruthadhaare Serial: ಭೂಮಿಯನ್ನು ಓವರ್‌ಟೇಕ್ ಮಾಡಿ ಜೀವನ್‌ಗೆ ಮಾಂಜಾ ಕೊಟ್ಟ ಅಪೇಕ್ಷಾ!


