ಎಲ್ಲಾ ಆ್ಯಂಕರ್ಗಳನ್ನು ರಿಜೆಕ್ಟ್ ಮಾಡಿ ಶಾಕ್ ಕೊಟ್ಟ ನಟ ಜಗ್ಗೇಶ್: ಕಾಮಿಡಿ ಕಿಲಾಡಿಯಲ್ಲಿ ಏನಿದು ಹೊಸ ವಿಷ್ಯ?
ಕಾಮಿಡಿ ಕಿಲಾಡಿಗಳಲ್ಲಿ ನಿರೂಪಕರು ತೀರ್ಪುಗಾರರಾಗಿದ್ದು, ತೀರ್ಪುಗಾರರು ನಿರೂಪಕರಾಗಿದ್ದಾರೆ. ಏನಿದು ಹೊಸ ಕಾನ್ಸೆಪ್ಟ್?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಡ್ರಾಮಾ ಜೂನಿಯರ್ಸ್ ಸೀಸನ್ 5 ಈ ವಾರ ಮುಗಿಯಲಿದೆ. ಮುಂದಿನ ವಾರ ಅಂದ್ರೆ ಏ.27ರಿಂದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋ ಆರಂಭವಾಗಲಿದೆ. ರಾತ್ರಿ 9 ಗಂಟೆಯಿಂದ ಇದು ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಇದಾಗಲೇ ಹಲವಾರು ರೀತಿಯ ಪ್ರೊಮೋಗಳೊಂದಿಗೆ ಜೀ ವಾಹಿನಿ ಮನರಂಜಿಸುತ್ತಿದೆ. ಈ ಬಾರಿಯ ವಿಶೇಷತೆ ಏನೆಂದರೆ, ಈ ಬಾರಿ ಆ್ಯಂಕರ್ಗಳು ತೀರ್ಪುಗಾರರಾಗಿರಲಿದ್ದಾರೆ ಹಾಗೂ ತೀರ್ಪುಗಾರರು ಆ್ಯಂಕರ್ಗಳಾಗಲಿದ್ದಾರೆ. ಹೌದು! ಕಾಮಿಡಿ ಕಿಲಾಡಿಗಳಲ್ಲಿ ಈ ಬಾರಿ ಸಕತ್ ಎಂಜಾಯ್ಮೆಂಟ್ ಇರಲಿದೆ ಎನ್ನುವುದು ಇದರಿಂದ ತಿಳಿದು ಬರಲಿದೆ. ಅಷ್ಟಕ್ಕೂ ಈ ಹಿಂದಿನ ಸಂಚಿಕೆಗಳಲ್ಲಿ ಕಾಮಿಡಿ ಕಿಲಾಡಿಯಲ್ಲಿ, ನಟ ಜಗ್ಗೇಶ್, ರಕ್ಷಿತಾ ಪ್ರೇಮ್, ನೆನಪಿರಲಿ ಪ್ರೇಮ್ ತೀರ್ಪುಗಾರರಾಗಿದ್ದರು. ಮಾಸ್ಟರ್ ಆನಂದ್ ನಿರೂಪಕರಾಗಿದ್ದರು.
ಆದರೆ ಈ ಸಲ ಉಲ್ಟಾ ಪಲ್ಟಾ ಆಗಲಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಬಾರಿ ಆರು ಮಂದಿ ತೀರ್ಪುಗಾರರು ಕಾಮಿಡಿ ಷೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಪೈಕಿ ಜೀ ಕನ್ನಡದಲ್ಲಿ ಎಲ್ಲ ರಿಯಾಲಿಟಿ ಶೋಗಳ ನಿರೂಪಕರಾಗಿರುವ ಅನುಶ್ರೀ, ಮಾಸ್ಟರ್ ಆನಂದ್, ಅಕುಲ್ ಬಾಲಾಜಿ, ಕುರಿ ಪ್ರತಾಪ್, ಶ್ವೇತಾ ಚಂಗಪ್ಪ ಈ ಸಲದ ಕಾಮಿಡಿ ಕಿಲಾಡಿಗಳು ಶೋನಲ್ಲಿ ನಿರೂಪಣೆ ಮಾಡುವ ಬದಲು ತೀರ್ಪುಗಾರರಾಗಲಿದ್ದಾರೆ ಎನ್ನಲಾಗಿದೆ.
ಅಂದು ಸೌಂದರ್ಯ, ಇಂದು ದ್ವಾರಕೀಶ್: ಸಾವಿನಲ್ಲಿ ಸಾಮ್ಯತೆ- ಮತ್ತೆ ಸದ್ದು ಮಾಡ್ತಿದೆ ಆಪ್ತಮಿತ್ರ!
ಇದಾಗಲೇ ಇನ್ನೊಂದು ಪ್ರೊಮೋದಲ್ಲಿ ಜಗ್ಗೇಶ್ ಅವರು ಕುತೂಹಲವ ವಿಷಯ ಹೇಳಿದ್ದರು. ಇದರಲ್ಲಿ ನಗೋ ಹಾಗೆ ಇಲ್ವಂತೆ. ನಕ್ಕರೆ ಲಾಸು, ನಗಿಸೋರಿಗೆ ಕೈತುಂಬಾ ಕಾಸು ಎನ್ನುತ್ತಲೇ ನವರಸ ನಾಯಕ ಜಗ್ಗೇಶ್ ವೀಕ್ಷಕರಿಗೆ ಕುತೂಹಲ ಕೆರಳಿಸಿದ್ದಾರೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್ ಮಾಡಿಕೊಂಡಿದ್ದಾರೆ. ಇನ್ಮುಂದೆ ನೀವು ನಗೋ ಹಾಗಿಲ್ಲ. ಕಾಮಿಡಿ ಶೋದಲ್ಲಿ ನಗಲೇ ಬಾರದು ಎಂದು ಜಗ್ಗೇಶ್ ಹೇಳಿದಾದೆ. ಕಾಮಿಡಿ ಕಿಲಾಡಿಗಳು ಮುಂದಿನ ಸೀಸನ್ ಬರುವುದು ಸ್ಪಷ್ಟವಾಗಿದ್ದರೂ, ಈ ಬಾರಿ ಏನೋ ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ಬಂದಿರುವುದು ಸ್ಪಷ್ಟವಾಗಿದೆ. ದುಡ್ಡು-ಕಾಸು ಅಂತ ಹೇಳ್ತವ್ರೆ. ಗನ್ ಹಿಡಿದು ಇವರ ಹಿಂದೆ ನಿಂತವ್ರು ಸೀರಿಯೆಸ್ ಆಗಿದ್ದಾರೆ. ಜಗ್ಗಣ್ಣ ನಕ್ಕು ಬಿಡಿ ಅಂದಾಗ, ಇವರೆಲ್ಲ ಗುಂಡು ಹಾರಿಸಿ ಇಡೀ ವಾತಾವರಣ ರಣರಂಗ ಮಾಡಿ ಬಿಡ್ತಾರೆ ಎನ್ನುವ ಡೈಲಾಗ್ ಅನ್ನೂ ಈ ಪ್ರೊಮೋದಲ್ಲಿ ನೋಡಬಹುದು. ಕಾಮಿಡಿ ಶೋ ಇರೋದೇ ನಗೋಕೆ ಮತ್ತು ನಗಿಸೋಕೆ. ಆದರೆ ಈ ಸಲ ನಗೋ ಹಾಗಿಲ್ಲ ಅನ್ನೋದೇ ಕಾನ್ಸೆಪ್ಟ್ ಅನಿಸುತ್ತದೆ. ಹಾಗಾಗಿಯೇ ಈ ಶೋದ ಮೊದಲ ಫ್ರೋಮೋ ಇದೀಗ ವಿಶೇಷವಾಗಿಯೇ ಕಾಣಿಸುತ್ತಿದೆ.
ಅಂದಹಾಗೆ, ವಿಭಿನ್ನತೆಗೆ ಹೆಸರಾದ ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಾಮಿಡಿ ಕಿಲಾಡಿಗಳು ಕೂಡಾ ಒಂದು. ನಿತ್ಯದ ಜಂಜಾಟದಲ್ಲಿ ಒದ್ದಾಡುವ ಅದೆಷ್ಟೋ ಮನಸ್ಸುಗಳಿಗೆ ಹಾಸ್ಯದ ಮೂಲಕ ಸಾಂತ್ವನದ ಕಚಗುಳಿ ಇಡುವ ಉದ್ದೇಶದಿಂದ ಆರಂಭವಾದ ಮಹಾ ವೇದಿಕೆಯೇ ಕಾಮಿಡಿ ಕಿಲಾಡಿಗಳು. "ಸೈಡ್ಗಿಡ್ರಿ ನಿಮ್ ಟೆನ್ಶನ್‌ಗಳು, ಮತ್ತೆ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು" ಎಂಬ ಸ್ಲೋಗನ್ ಮೂಲಕ ವಾರಾಂತ್ಯದಲ್ಲಿ ಕರುನಾಡನ್ನೇ ನಗೆಗಡಲಲ್ಲಿ ತೇಲಿಸಿ, ಕನ್ನಡಿಗರ ಹೃದಯದಲ್ಲಿ ಪ್ರೀತಿಯ ಸ್ಥಾನ ಗಳಿಸಿಕೊಂಡ ಕೀರ್ತಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಸಲ್ಲುತ್ತದೆ.
ಸಂಸಾರದಲ್ಲಿ ಅಹಂ ಇರಲಿ ಪಕ್ಕ, ಕ್ಷಮೆಯೇ ಮುಖ್ಯವಾಗಲಿ: ಸ್ನೇಹಾ ನೋಡಿ ನೆಟ್ಟಿಗರು ಹೇಳಿದ್ದೇನು?