ಸಂಸಾರದಲ್ಲಿ ಅಹಂ ಇರಲಿ ಪಕ್ಕ, ಕ್ಷಮೆಯೇ ಮುಖ್ಯವಾಗಲಿ: ಸ್ನೇಹಾ ನೋಡಿ ನೆಟ್ಟಿಗರು ಹೇಳಿದ್ದೇನು?

ಸಂಸಾರದಲ್ಲಿ ತಪ್ಪು ಮಾಡಿದಾಗ ಕ್ಷಮೆ ಕೋರುವುದು ಮುಖ್ಯವಾಗುತ್ತದೆ. ಅಹಂ ಅಡ್ಡಬಂದರೆ ಸಂಸಾರ ಛಿದ್ರವಾಗುತ್ತದೆ ಎನ್ನುತ್ತಿದ್ದಾರೆ ಪುಟ್ಟಕ್ಕನ ಮಕ್ಕಳು ಫ್ಯಾನ್ಸ್​. 
 

asking sorry is important in happy family life says Puttakkana Makkalu fans suc

ಪುಟ್ಟಕ್ಕನ ಮಗಳು ಸ್ನೇಹಾಳಿಗೆ ತಾನು ಮಾಡಿರುವ ತಪ್ಪಿನ ಅರಿವಾಗಿದೆ. ದುಡುಕಿ ನಿರ್ಧಾರ ತೆಗೆದುಕೊಂಡು ಬಿಟ್ಟೆ ಎಂದು ಗೊತ್ತಾಗಿದೆ. ಇಂಥ ಸನ್ನಿವೇಶಗಳು ಸಂಸಾರದಲ್ಲಿ ಬರುವುದು ಸಹಜ. ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಏನೋ ಎಡವಟ್ಟು ಆಗಿ ಬಿಡುತ್ತದೆ. ನಾವು ಮಾಡಿದ್ದೇ ಸರಿ ಎಂದುಕೊಂಡೋ, ಇಲ್ಲವೇ ಸ್ನೇಹಾಳ ರೀತಿ ಯಾರಿಗೋ ನ್ಯಾಯ ಒದಗಿಸಿಕೊಡುತ್ತೇವೆ ಎಂದೋ ಎಡವಿ ಬೀಳುವುದು ಇದೆ. ಇಂಥ ಸಮಯದಲ್ಲಿ ಕ್ಷಮೆ ಎನ್ನುವುದು ಒಂದೇ ಸಹಾಯಕ್ಕೆ ಬರುವುದು ಎನ್ನುವ ಮಾತಿದೆ. ಅದರೆ ಎಷ್ಟೋ ಸಮಯದಲ್ಲಿ ನಾವು ಮಾಡಿದ್ದು ತಪ್ಪು ಎಂದು ತಿಳಿದರೂ ಅಹಂ ಅಡ್ಡಿ ಬಂದು ಬಿಡುತ್ತದೆ. ಇದೇ ಕಾರಣಕ್ಕೆ ಸಾರಿ ಎಂದು ಹೇಳಲು ಹೋಗುವುದೇ ಇಲ್ಲ. ಆದರೆ ಪುಟ್ಟಕ್ಕನ ಮಗಳು ಸ್ನೇಹಾಳನ್ನು ನೋಡಿ ಕ್ಷಮೆ ಕೋರುವುದನ್ನು ಕಲಿಯಿರಿ ಎನ್ನುತ್ತಿದ್ದಾರೆ ಪುಟ್ಟಕ್ಕನ ಮಕ್ಕಳು ಅಭಿಮಾನಿಗಳು. 

ಅಷ್ಟಕ್ಕೂ, ಸ್ನೇಹಾಗೆ ದುಡುಕು ಬುದ್ಧಿ. ಅವಳೇ ಒಪ್ಪಿಕೊಂಡಿರುವಂತೆ ಅವಳಿಗೆ ಇದು ಚಿಕ್ಕಂದಿನಿಂದಲೂ ಬಂದಿರುವ ಕೆಟ್ಟ ಬುದ್ಧಿಯೇ. ಅನ್ಯಾಯವನ್ನು ಕಂಡಾಕ್ಷಣ ಹಿಂದೆ ಮುಂದೆ ಯೋಚಿಸದೇ ದುಡುಕು ಬುದ್ಧಿಯಿಂದ ನ್ಯಾಯ ಒದಗಿಸಲು ಹೋಗುವುದು ಅವಳ ಚಾಳಿ. ಕೆಲವು ಸಂದರ್ಭದಲ್ಲಿ ಇದು ಸರಿ ಎನ್ನಿಸಿದ್ದು ಉಂಟು. ಕೆಟ್ಟದ್ದನ್ನು ಕಂಡಾಗ ರೋಷ ಉಕ್ಕಿ ಅನ್ಯಾಯ ಆದವರಿಗೆ ನ್ಯಾಯ ಕೊಡಿಸಿದ್ದೂ ಇದೆ. ಆದರೆ ದುಡುಕು ಬುದ್ಧಿ ಎಲ್ಲಾ ಸಂದರ್ಭದಲ್ಲಿಯೂ ಸರಿ ಹೊಂದುವುದಿಲ್ಲ ಎನ್ನುವುದು ಈ ಸ್ನೇಹಾಳಿಗೂ ತಿಳಿದಿದೆ. ತನ್ನ ತಪ್ಪಿನ ಅರಿವಾಗಿರೋ ಸ್ನೇಹಾ ಅತ್ತೆ ಬಂಗಾರಮ್ಮನ ಕಾಲು ಹಿಡಿದುಕೊಂಡಿದ್ದಾಳೆ. ಕ್ಷಮೆ ಕೇಳಿದ್ದಾಳೆ. ಚಿಕ್ಕ ವಯಸ್ಸಿನಿಂದಲೇ ನನಗೆ ಈ ರೀತಿ ದುಡುಕು ಬುದ್ಧಿ ಇದೆ. ಅದು ತಪ್ಪು ಎನ್ನುವುದು ನನಗೆ ಗೊತ್ತಾಗಿದೆ ಎಂದು ಕೇಳಿಕೊಂಡಿದ್ದಾಳೆ. ಆದರೆ ಬಂಗಾರಮ್ಮ ಮತ್ತು ಕಂಠಿ ಆಕೆಯನ್ನು ಕ್ಷಮಿಸುತ್ತಾರೋ ಇಲ್ಲವೋ ಎನ್ನುವುದು ಈಗಿರುವ ಪ್ರಶ್ನೆ. 

ಆ್ಯಕ್ಸಿಡೆಂಟ್​ ರಹಸ್ಯ ಬಯಲಾಗೋ ಕಾಲ ಬಂದೇ ಬಿಡ್ತು! ವಿಲನ್​ಗೇ ತಿರುಗೇಟು ಅಂದ್ರೆ ಇದೇ ನೋಡಿ..!

ಅಂದಹಾಗೆ,  ಯಾರಿಗೋ ನ್ಯಾಯ ಕೊಡಿಸಲು ಹೋಗಿ ಹೀಗೆ ಎಡವಟ್ಟು ಆಗಿದೆ. ರಾಜಿಯ ಕುತಂತ್ರದಿಂದ ಮಹಿಳೆಯೊಬ್ಬಳು ತನ್ನ ಗಂಡನ ಸಾವಿಗೆ ಬಂಗಾರಮ್ಮನೇ ಕಾರಣ ಎಂದಿದ್ದಳು. ಅದನ್ನು ಕೇಳಿದ ಸ್ನೇಹಾ ಅತ್ತೆ ಬಂಗಾರಮ್ಮನ ವಿರುದ್ಧ ಕಿಡಿ ಕಾರಿ ಆಕೆಯನ್ನು ಜೈಲಿಗೆ ಕಳುಹಿಸಿದ್ದಳು. ಕೊನೆಗೆ ಪುಟ್ಟಕ್ಕನ ನೆರವಿನಿಂದ ಸತ್ಯ ಬಹಿರಂಗಗೊಂಡಿದೆ. ಆದರೆ ಇದಕ್ಕೆ ರಾಜಿ ಕಾರಣ ಎನ್ನುವ ಸತ್ಯ ಮಾತ್ರ ತಿಳಿದಿಲ್ಲ. ಆದರೆ ಬಂಗಾರಮ್ಮನ ತಪ್ಪಿಲ್ಲ ಎನ್ನುವ ಅರಿವು ಸ್ನೇಹಳಿಗೆ ಆಗುತ್ತಿದ್ದಂತೆಯೇ ಆಕೆ ಬಂಗಾರಮ್ಮನ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿದ್ದಾಳೆ. ಮುಂದೇನು ಎನ್ನುವುದು ಈಗಿರುವ ಪ್ರಶ್ನೆ. 

ಅದೇ ಇನ್ನೊಂದೆಡೆ ಸಹನಾ ತವರು ಸೇರಿದ್ದಾಳೆ. ಆಗ ಸಹನಾ, ಈಗ ಸ್ನೇಹಾ. ಪುಟ್ಟಕನ್ನ ಇಬ್ಬರೂ ಮಕ್ಕಳ ಜೀವನ ಅಲ್ಲೋಲ ಕಲ್ಲೋಲ ಆಗ್ತಿದೆ. ಆದರೆ ಸಹನಾ ದೌರ್ಜನ್ಯದ ವಿರುದ್ಧ ದನಿ ಎತ್ತಿ ತವರು ಸೇರಿದ್ದರೆ, ಸ್ನೇಹಾ ಬೇರೆಯವರಿಗೆ ನ್ಯಾಯ ಒದಗಿಸಲು ಹೋಗಿ ಹಿಂದೆ ಮುಂದೆ ಯೋಚಿಸದೇ ಅತಿಬುದ್ಧಿ ಉಪಯೋಗಿಸಿ ತವರು ಸೇರುವವಳಿದ್ದಳು. ಸಹನಾ ಬಗ್ಗೆ ಜನರು ಭೇಷ್‌ ಭೇಷ್‌ ಎನ್ನುತ್ತಿದ್ದರೆ, ಸ್ನೇಹಾಳನ್ನು ಬೈಯುತ್ತಿದ್ದಾರೆ. ಈಕೆ ಓದಿದ್ದು ಅತಿಯಾಯ್ತು, ತಲೆ ಉಪಯೋಗ ಮಾಡದೇ ಏನೇನೋ ಮಾಡುತ್ತಿದ್ದಾಳೆ. ಇವಳಿಗೆ ತಕ್ಕ ಶಾಸ್ತಿಯಾಗಿದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಹೆಣ್ಣು ದೌರ್ಜನ್ಯದ ವಿರುದ್ಧ ತಲೆ ಎತ್ತಿದರೂ ಕಷ್ಟ, ಬೇರೆಯವರಿಗೆ ನ್ಯಾಯ ಒದಗಿಸಲು ಹಿಂದೆ ಮುಂದೆ ಯೋಚಿಸದೇ ಮನೆಯವರನ್ನು ಎದುರು ಹಾಕಿಕೊಂಡರೂ ಕಷ್ಟ. ಆದ್ದರಿಂದ ಹೆಣ್ಣುಮಕ್ಕಳು ಸ್ವಲ್ಪ ತಲೆ ಉಪಯೋಗಿಸಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. 

ಅಂದು ಸೌಂದರ್ಯ, ಇಂದು ದ್ವಾರಕೀಶ್​: ಸಾವಿನಲ್ಲಿ ಸಾಮ್ಯತೆ- ಮತ್ತೆ ಸದ್ದು ಮಾಡ್ತಿದೆ ಆಪ್ತಮಿತ್ರ!

Latest Videos
Follow Us:
Download App:
  • android
  • ios