ಆ್ಯಂಕರ್ ಸುಷ್ಮಾ ರಾವ್ ಸೀರಿಯಲ್‌ಗೆ ರೀ ಎಂಟ್ರಿ! ಶೀಘ್ರದಲ್ಲಿ ಭಾಗ್ಯಲಕ್ಷ್ಮಿ ಆರಂಭ
ಸುಷ್ಮಾ ಕೆ ರಾವ್ ಈ ಮೊದಲು ಭಾವನಾ ಅಂತನೇ ಕರೆಸಿಕೊಳ್ಳುತ್ತಿದ್ದವರು. ಆಮೇಲೆ ಆಂಕರ್ ಸುಷ್ಮಾ ಆಗ್ಬಿಟ್ರು. ಸೀರಿಯಲ್‌ನಿಂದ ಕೆಲಕಾಲ ಬ್ರೇಕ್ ತೆಗೆದುಕೊಂಡ ಅವರು ಇದೀಗ ಭಾಗ್ಯಲಕ್ಷ್ಮೀ ಸೀರಿಯಲ್‌ನ ಭಾಗ್ಯ ಪಾತ್ರದಲ್ಲಿ ಕಂ ಬ್ಯಾಕ್ ಮಾಡ್ತಿದ್ದಾರೆ.
'ಭಾಗ್ಯಲಕ್ಷ್ಮೀ' ಅನ್ನೋ ಹೊಸ ಸೀರಿಯಲ್‌ನ ಪ್ರೋಮೋ ಕಳೆದ ಕೆಲವು ದಿನಗಳಿಂದ ಕಲರ್ಸ್ ಕನ್ನಡಸಲ್ಲಿ ಪ್ರಸಾರವಾಗ್ತಿದೆ. ಈ ಪ್ರೋಮೋ ನೋಡ್ತಿದ್ರೆ ಇದು ಪಕ್ಕಾ ಅಕ್ಕ ತಂಗಿ ಕಥೆ ಅನ್ನೋದು ಗೊತ್ತಾಗುತ್ತೆ. ಜೊತೆಗೆ ಇಲ್ಲಿರುವ ಲೀಡ್ ಪಾತ್ರಗಳ ಸ್ವಭಾವ ಎಂಥಾದ್ದು ಅನ್ನೋದನ್ನೂ ಈ ಪ್ರೊಮೋ ರಿವೀಲ್ ಮಾಡಿದೆ. ಈ ಸೀರಿಯಲ್ ಮೂಲಕ ಸುಷ್ಮಾ ರಾವ್ ಸೀರಿಯಲ್ ಜಗತ್ತಿಗೆ ಮರಳಿ ಬಂದಿದ್ದಾರೆ. ಹಾಗೆ ನೋಡಿದರೆ ಅವರು ಬಹಳ ಫೇಮಸ್ ಆಗಿದ್ದೇ ಸೀರಿಯಲ್‌ಗಳಿಂದ. ದಶಕಗಳ ಹಿಂದೆ ಎಸ್ ನಾರಾಯಣ್ ನಿರ್ದೇಶನದಲ್ಲಿ 'ಭಾಗೀರಥಿ' ಅನ್ನೋ ಸೀರಿಯಲ್ ಬರ್ತಿತ್ತು. ಇದು ಸುಷ್ಮಾ ಅವರ ಮೊದಲ ಸೀರಿಯಲ್. ಇದರಲ್ಲಿ ಅವರು ವೀಣಾ ಅನ್ನೋ ಪಾತ್ರ ಮಾಡ್ತಿದ್ರು. ಆ ನಂತರ ಸ್ವಾತಿ ಮುತ್ತು ಸೀರಿಯಲ್‌ನ ಪಲ್ಲವಿ ಆದ್ರು. 'ಬಿದಿಗೆ ಚಂದ್ರಮ'ದ ಶಶಿಕಲಾ ಆದ್ರು. ಇದನ್ನೆಲ್ಲ ನೆನಪಿಟ್ಟು ಕೊಂಡಿರುವವರು ಕಡಿಮೆ. ಆದರೆ 'ಯಾವ ಜನ್ಮದ ಮೈತ್ರಿ' ಸೀರಿಯಲ್‌ನ ಅನನ್ಯಾ, 'ಗುಪ್ತಗಾಮಿನಿ' ಸೀರಿಯಲ್‌ನ ಭಾವನಾ ಪಾತ್ರವನ್ನು ಜನ ಇಂದಿಗೂ ಮರೆತಿಲ್ಲ. ಈ ಸೀರಿಯಲ್ ಬಂದು ಆಗಲೇ ಹದಿನೇಳು ವರ್ಷಗಳು ಕಳೆದಿವೆ. ಆದರೂ ಜನ ಸುಷ್ಮಾ ಅವರನ್ನು ಭಾವನಾ ಪಾತ್ರದ ಮೂಲಕ ಗುರುತಿಸೋದನ್ನು ಮರೆತಿಲ್ಲ. ಸುಷ್ಮಾ ಅವರು ಒಂದೆರಡು ರಿಯಾಲಿಟಿ ಶೋಗಳಲ್ಲಿ ಆಂಕರಿಂಗ್ ಮಾಡಿದ್ಮೇಲೆ ಆಂಕರ್ ಸುಷ್ಮಾ ಆಗಿಬಿಟ್ರು. ಈಗ ಇದೇ ಸುಷ್ಮಾ ಭಾಗ್ಯಲಕ್ಷ್ಮೀ ಸೀರಿಯಲ್‌ನ ಭಾಗ್ಯ ಆಗಿದ್ದಾರೆ.
ಭಾಗ್ಯ ಪಾತ್ರ ಎಂಥಾದ್ದು?
ಈಗಾಗಲೇ ಚಾನೆಲ್‌ನಲ್ಲಿ ಪ್ರೊಮೋದಲ್ಲಿ ಪ್ರಸಾರವಾಗಿರುವ ದೃಶ್ಯಗಳನ್ನು ನೋಡಿದರೆ ಇದೊಂದು ಅಕ್ಕ ತಂಗಿ ಕಥೆ ಅನ್ನೋದು ಗೊತ್ತಾಗುತ್ತೆ. 'ಭಾಗ್ಯಲಕ್ಷ್ಮೀ' ಅನ್ನೋ ಟೈಟಲ್‌ನಲ್ಲಿ ಭಾಗ್ಯ ಅನ್ನೋದು ಅಕ್ಕನ ಹೆಸರಾದ್ರೆ ಲಕ್ಷ್ಮೀ ಅನ್ನೋದು ತಂಗಿ ಹೆಸರು. ಅಕ್ಕನಾದ ಭಾಗ್ಯ ಪಾತ್ರವನ್ನು ಸುಷ್ಮಾ ನಿಭಾಯಿಸುತ್ತಾರೆ. ಈ ಪಾತ್ರ ಯಾವ ರೀತಿ ಇರುತ್ತೆ ಅನ್ನೋದನ್ನೂ ಈ ಪ್ರೊಮೋ ರಿವೀಲ್ ಮಾಡಿದೆ. ಭಾಗ್ಯ ಮಾರ್ಕೆಟ್ ಗೆ ತಂಗಿ ಲಕ್ಷ್ಮಿ ಜೊತೆ ಹೋಗಿರುತ್ತಾಳೆ. ಆಕೆಯ ಗಂಡ ಕಾರಿನಲ್ಲಿ ಕಾಯುತ್ತಾ ಇರುತ್ತಾನೆ. ಹೆಂಡ್ತಿ ಲೇಟ್ ಆಗಿ ಬರುತ್ತಾಳೆ. ಅದಕ್ಕೆ ಅವನು ಕೋಪ ಮಾಡಿಕೊಂಡಿರುತ್ತಾಳೆ. ಆಗ ಲಕ್ಷ್ಮಿ ನನ್ನಿಂದ ಲೇಟ್ ಆಗಿಲ್ಲ ಎನ್ನುತ್ತಾಳೆ.
Ramachari serial: ಪ್ರಪಾತದಲ್ಲಿ ರಾಮಾಚಾರಿ ಸಾಹಸ ಕಂಡು ಬಿದ್ದೂ ಬಿದ್ದೂ ನಗ್ತಿದ್ದಾರೆ ಜನ!
ಕೋಪ ಮಾಡಿಕೊಂಡ ಭಾವನನ್ನು, ಪತ್ನಿ ಭಾಗ್ಯ ಮದುವೆ ಬ್ರೋಕರ್ ಬಳಿ ಹೋಗಬೇಕು ಬರ್ತಿರಾ ಅಂತಾಳೆ. ಅದಕ್ಕೆ ಭಾವ ಗೆಟ್ ಲಾಸ್ಟ್ ಭಾಗ್ಯ ಎಂದು ಹೋಗುತ್ತಾನೆ. ಆಗ ತಂಗಿ ಲಕ್ಷ್ಮಿ ಭಾವನಿಗೆ ಕೋಪ ಜಾಸ್ತಿನಾ? ಅಥವಾ ನಿನಗೆ ತಾಳ್ಮೆ ಜಾಸ್ತಿಯಾ ಗೊತ್ತಿಲ್ಲ ಅಂತಾಳೆ. ಅದಕ್ಕೆ ಅಕ್ಕ ಸುಮ್ಮನೆ ಬಾ ಎಂದು ಕರೆದುಕೊಂಡು ಹೋಗುತ್ತಾಳೆ. ಇದನ್ನು ನೋಡಿದರೆ ತಾಳ್ಮೆಯ ಮೃದು ಸ್ವಭಾವದ ಭಾಗ್ಯಾ ಪಾತ್ರದಲ್ಲಿ ಸುಷ್ಮಾ ಕಾಣಿಸಿಕೊಳ್ತಿದ್ದಾರೆ ಅನ್ನೋದು ಗೊತ್ತಾಗಿದೆ. ಈ ಭಾಗ್ಯಳಿಗೆ ತಂಗಿ ಮೇಲೆ ಬಹಳ ಪ್ರೀತಿ. ಬಹುಶಃ ತಾಯಿಯಂತೆ ತಂಗಿಯನ್ನು ಪೊರೆಯುವ ಪಾತ್ರ ಇದಿರಬೇಕು. ಸದ್ಯಕ್ಕೀಗ ತಂಗಿ ಲಕ್ಷ್ಮೀಗೆ ಅಕ್ಕ ಹುಡುಗನ ಶೋಧದಲ್ಲಿದ್ದಾಳೆ. ಬ್ರೋಕರ್ ಹತ್ರ ತನ್ನ ತಂಗಿ ಲಕ್ಷ್ಮಿಗೆ ಶ್ರೀ ರಾಮನಂತ ಗಂಡ ಬೇಕು ಅಂತ ಕೇಳ್ತಾಳೆ. ಅಂಥಾ ಹುಡುಗ ಯಾರು ಅನ್ನೋದು ಗೊತ್ತಿಲ್ಲ. ಸಿಡುಕುವ ಗಂಡನ ಜೊತೆ ಬದುಕುತ್ತಾ ತಂಗಿ ತನ್ನ ಮನೆಯವರನ್ನು ಸಂಭಾಳಿಸುವ ಪಾತ್ರದಲ್ಲಿ ಸುಷ್ಮಾ ಇದ್ದಾರೆ.
ಹೆಂಡ್ತಿಗೆ ಪೀರಿಯಡ್ಸ್ ಆದಾಗ ಗಂಡ ಹೇಗಿರ್ಬೇಕು? ಅಮೂಲ್ ಬೇಬಿ ನೋಡಿ ಕಲೀರಿ!
ಆಂಕರ್ ಸುಷ್ಮಾ ಅವರನ್ನು ಭಾಗ್ಯ ಪಾತ್ರದಲ್ಲಿ ನೋಡಲು ವೀಕ್ಷಕರೂ ಕಾಯ್ತಿದ್ದಾರೆ. ಈ ಸೀರಿಯಲ್‌ನ ದಿನಾಂಕ ಸದ್ಯದಲ್ಲೇ ಘೋಷಣೆ ಆಗಲಿದೆ.