Asianet Suvarna News Asianet Suvarna News

ಆ್ಯಂಕರ್​ ಶ್ವೇತಾ-ಕಾಮಿಡಿಯನ್​ ಜಗ್ಗಪ್ಪ ಸಕತ್​ ಸ್ಟೆಪ್​: ವೇದಿಕೆ ಮೇಲೆ ಕಿಚ್ಚು ಹೊತ್ತಿಸಿದ ಜೋಡಿ

ಆ್ಯಂಕರ್​ ಶ್ವೇತಾ ಜೊತೆ ಕಾಮಿಡಿಯನ್​ ಜಗ್ಗಪ್ಪ ವೇದಿಕೆ ಮೇಲೆ ಸಕತ್​ ಸ್ಟೆಪ್​ ಹಾಕಿದ್ದಾರೆ. ಕುಡಿ ನೋಟದ ಸಿಹಿ ಸೋಕಿಸಿ ಹಾಡಿಗೆ  ಕಿಚ್ಚು ಹಚ್ಚಿದ್ದಾರೆ. ವಿಡಿಯೋ ವೈರಲ್​ ಆಗಿದೆ.  

Anchor Shweta Changappa and comedian Jagappa romance in Comedy Khiladigalu show suc
Author
First Published Aug 29, 2024, 2:07 PM IST | Last Updated Aug 29, 2024, 3:17 PM IST

ಜೀ ಕನ್ನಡದ ಕಾಮಿಡಿ ಕಿಲಾಡಿಗಳು ವೇದಿಕೆಯ ಮೇಲೆ ಆ್ಯಂಕರ್​ ಶ್ವೇತಾ ಚಂಗಪ್ಪ ಮತ್ತು ಕಾಮಿಡಿಯನ್​ ಜಗ್ಗಪ್ಪ ಅವರು ವೇದಿಕೆ ಮೇಲೆ ಕಿಚ್ಚು ಹೊತ್ತಿಸಿದ್ದಾರೆ. 2021ರಲ್ಲಿ ಬಿಡುಗಡೆಯಾದ ಶ್ರೀಕೃಷ್ಣ ಆ್ಯಟ್​ ಜಿ ಮೇಲ್​ ಡಾಟ್​ ಕಾಮ್​ ಚಿತ್ರದ ಕುಡಿ ನೋಟದ ಸಿಹಿ ಸೋಕಿಸಿ ಹಾಡಿಗೆ ಸ್ಟೆಪ್​ ಮಾಡಿದ್ದಾರೆ. ಇಲ್ಲಿಯವರೆಗೆ ಕೇವಲ ಕಾಮಿಡಿ ಮೂಲಕ ರಂಜಿಸುತ್ತಿದ್ದ ಜಗ್ಗಪ್ಪ ಅವರ ಈ ಪರಿಯ ಡಾನ್ಸ್​​ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಆ್ಯಂಕರ್​ ಶ್ವೇತಾ ಅವರು ಇದಾಗಲೇ ಹಲವಾರು ನೃತ್ಯಗಳ ಮೂಲಕ ವೀಕ್ಷಕರ ಗಮನ ಸೆಳೆದಿದ್ದು, ಇದೀಗ ಇವರಿಬ್ಬರ ಪ್ರೇಮದ ನೃತ್ಯಕ್ಕೆ ಪ್ರೊಮೋ ನೋಡಿದ ನೆಟ್ಟಿಗರು ಭೇಷ್​ ಭೇಷ್​ ಎನ್ನುತ್ತಿದ್ದಾರೆ. 

ಆ್ಯಂಕರ್ ಶ್ವೇತಾ ಕುರಿತು ಹೇಳುವುದಾದರೆ, ಇನ್ನು ಶ್ವೇತಾ ಅವರು, ಎಸ್. ನಾರಾಯಣ ನಿರ್ದೇಶನದ ಸುಮತಿ  ಧಾರಾವಾಹಿಯ ಮೂಲಕ ಕಿರುತೆರೆ ಎಂಟ್ರಿ ಕೊಟ್ಟವರು.  2006 ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ಕಾದಂಬರಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದವರು. ಅಲ್ಲಿಂದ ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಫೇಮಸ್​ ಆಗಿದ್ದಾರೆ. ‘ಸುಮತಿ’, ‘ಕಾದಂಬರಿ’, ‘ಸುಕನ್ಯಾ’, ‘ಅರುಂಧತಿ’, ‘ಸಂಗೀತಾ’ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಶ್ವೇತಾ ಚಂಗಪ್ಪ ಅವರು ವೀಕ್ಷಕರನ್ನು ರಂಜಿಸಿದ್ದಾರೆ.  ಧಾರಾವಾಹಿ ಮಾತ್ರವಲ್ಲದೇ ಅನೇಕ ರಿಯಾಲಿಟಿ ಶೋಗಳಲ್ಲೂ ಅವರು ಭಾಗವಹಿಸಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 2’, ‘ಹಾಕು ಹೆಜ್ಜೆ ಹಾಕು’, ‘ಕುಣಿಯೋಣು ಬಾರ’, ‘ಡಾನ್ಸಿಂಗ್ ಸ್ಟಾರ್​’, ‘ಮಜಾ ಟಾಕೀಸ್​’ ಮುಂತಾದ ಕಾರ್ಯಕ್ರಮಗಳಿಂದ ಅವರು ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.   ಕನ್ನಡ ಬಿಗ್ ಬಾಸ್ 2 ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಶ್ವೇತಾ ಚಂಗಪ್ಪ ಭಾಗವಹಿಸಿದ್ದರು. ಇವರು ನಾಲ್ಕನೇ ಸ್ಥಾನಗಳಿಸಿದರು. ನಂತರ ಮಜಾ ಟಾಕೀಸ್ ರಾಣಿಯಾಗಿ ಎಲ್ಲರಿಗೂ ಇಷ್ಟವಾಗಿದ್ದರು. ಮೂರು ಬಾರಿ ಜೀ ಕನ್ನಡದ ಬೆಸ್ಟ್ ಆ್ಯಂಕರ್ ಪ್ರಶಸ್ತಿ ಪಡೆದಿದ್ದಾರೆ.

 ಚಿತ್ರರಂಗದಲ್ಲಿಯೂ ಶ್ವೇತಾ ಸಾಕಷ್ಟು ಹೆಸರು ಮಾಡಿದ್ದಾರೆ. ತಂಗಿಗಾಗಿ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ನಟಿ,   ವಿಷ್ಣುವರ್ಧನ ಅವರ ಅಭಿನಯದ ವರ್ಷ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ.  ಕೃಷ್ಣನ್ ಮ್ಯಾರೇಜ್ ಸ್ಟೋರಿ, ಗನ್ ಮುಂತಾದ ಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿಯೂ ವಿಶೇಷ ಮನ್ನಣೆ ಗಿಟ್ಟಿಸಿಕೊಂಡಿದ್ದಾರೆ.  ಇಷ್ಟೇ ಅಲ್ಲದೇ ಶಿವರಾಜ್​ ಕುಮಾರ್​  ಅವರ 125ನೇ ಸಿನಿಮಾ ವೇದಾದಲ್ಲಿಯೂ ನಟಿಸಿರೋ ಶ್ವೇತಾ ಅವರು ಅಲ್ಲಿ ಪಾರಿ ಆಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.   ಅರುಂಧತಿ ಧಾರಾವಾಹಿಯ ನಟನೆಗೆ ಶ್ವೇತಾ ಅವರಿ,  ಕರ್ನಾಟಕ ಸರಕಾರದ ಮಧ್ಯಂಸನ್ಮಾನ ಪ್ರಶಸ್ತಿ ಲಭಿಸಿದೆ.


ಮಜಾಭಾರತ, ಗಿಚ್ಚಿ ಗಿಲಿಗಿಲಿ ಕಾಮಿಡಿ ಷೋ ವೀಕ್ಷಕರಿಗೆ  ಜಗಪ್ಪ (Jagappa) ಅವರು ಚಿರಪರಿಚಿತರು. ಇವರು ಹಾಗೂ ನಟಿ ಸುಶ್ಮಿತಾ  ಭರ್ಜರಿ ಬ್ಯಾಚುಲರ್ಸ್‌  ಕಾರ್ಯಕ್ರಮದಲ್ಲಿ  ತಮ್ಮ ಪ್ರೀತಿಯ ಬಗ್ಗೆ ರಿವೀಲ್ ಮಾಡಿದ್ದರು.   ಈ ಕಾರ್ಯಕ್ರಮದಲ್ಲಿ ಜಗಪ್ಪ 5 ಗುಲಾಬಿಗಳನ್ನು ಹಿಡಿದುಕೊಂಡು ಒಂದೊಂದಾಗಿ ಸುಶ್ಮಿತಾಗೆ ಕೊಡುತ್ತಾ ಪ್ರಪೋಸ್ ಮಾಡಿದ್ದರು. ಅಂದಹಾಗೆ ಸುಶ್ಮಿತಾ - ಜಗಪ್ಪ ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.  ಮೊದಲೆಲ್ಲ ಜಗಪ್ಪ ಹಾಗೂ ಸುಶ್ಮಿತಾ ಜೋಡಿಯನ್ನು ನೋಡಿದ ಅಭಿಮಾನಿಗಳು ಇವರು ನಿಜ ಜೀವನದಲ್ಲಿ ಕೂಡ ಒಂದಾಗಲಿ ಎಂದು ಹಾರೈಸಿದ್ದರು. ಅವರ ಹಾರೈಕೆ ಫಲಿಸಿದ್ದು, ಕಳೆದ ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲ ತಿಂಗಳ ಹಿಂದೆ ದಂಪತಿ ಹೊಸ ಕಾರನ್ನು ಖರೀದಿ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಸುದ್ದಿಯಾಗಿದ್ದರು. 

ಶ್ವೇತಾ-ಜಗ್ಗಪ್ಪ ​ ವಿಡಿಯೋಗೆ ಈ ಕೆಳಗಿನ ಲಿಂಕ್​ ಕ್ಲಿಕ್​ ಮಾಡಿ

ಆ್ಯಂಕರ್​ ಶ್ವೇತಾ- ಕಮೀಡಿಯನ್​ ಜಗ್ಗಪ್ಪ ಸ್ಟೆಪ್
 

Latest Videos
Follow Us:
Download App:
  • android
  • ios