ಸೆಪ್ಟೆಂಬರ್ 28ರಂದು ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಶುರುವಾಗಲಿದೆ. ಕನ್ನಡದ ಖ್ಯಾತ ನಿರೂಪಕರೊಬ್ಬರಿಗೆ ಬಿಗ್ ಬಾಸ್ ಆಫರ್ ಹೋಗಿದ್ದು ಹೌದು ಎನ್ನಲಾಗಿದೆ. ಹಾಗಿದ್ರೆ ಅವರು ಹೋಗ್ತಾರಾ?
ಬಿಗ್ ಬಾಸ್ ಕನ್ನಡ ಸೀಸನ್ 12 ( Bigg Boss Kannada Season 12 ) ಶುರುವಾಗಲು ಇನ್ನು 20 ದಿನಗಳು ಬಾಕಿ ಉಳಿದಿವೆ. ಈಗಾಗಲೇ ಸ್ಪರ್ಧಿಗಳ ಆಯ್ಕೆಗೆ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಕೆಲವರು ಬಿಗ್ ಬಾಸ್ ಮನೆಗೆ ಹೋಗೋದು ಫಿಕ್ಸ್ ಆಗಿದೆ. ಹೀಗಿದ್ದಾಗ್ಯೂ ಕೊನೇ ಗಳಿಗೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗೋದುಂಟು. ಈಗ ಖ್ಯಾತ ಪತ್ರಕರ್ತರೊಬ್ಬರು “ಆಫರ್ ಬಂದಿದ್ದು ಸತ್ಯ, ಆದರೆ ಹೋಗೋದಿಲ್ಲ” ಎಂದು ಹೇಳಿದ್ದಾರೆ.
ಕಿಚ್ಚ ಸುದೀಪ್ ನಿರೂಪಣೆ ಮಾಡ್ತಾರೆ
ಕಳೆದ ಸೀಸನ್ ಪ್ರಸಾರ ಆಗುವ ಟೈಮ್‌ನಲ್ಲಿ ಕೆಲವೊಂದು ವಿಚಾರಕ್ಕೆ ಈ ಬಾರಿಯೂ ಕಿಚ್ಷ ಸುದೀಪ್ ಅವರೇ ‘ಬಿಗ್ ಬಾಸ್ ಕನ್ನಡ 12’ ನಡೆಸಿಕೊಡ್ತಾರೆ. ಬೇಸರಕೊಂಡು, ಮನಸ್ತಾಪದಿಂದ, ನಾನು ಇನ್ಮುಂದೆ ಬಿಗ್ ಬಾಸ್ ಶೋ ನಡೆಸಿಕೊಡೋದಿಲ್ಲ ಎಂದು ಸುದೀಪ್ ಹೇಳಿದ್ದರು. ಕನ್ನಡಕ್ಕೆ ಆದ್ಯತೆ ಕೊಡ್ತೀನಿ ಎಂದು ವಾಹಿನಿಯವರು ಒಪ್ಪಿಕೊಂಡಮೇಲೆ ಮುಂದಿನ ನಾಲ್ಕು ಸೀಸನ್‌ಗಳ ನಿರೂಪಣೆ ಮಾಡಲು ಅವರು ಸಹಿ ಹಾಕಿದ್ದಾರಂತೆ
ಬಿಗ್ ಬಾಸ್ ಮನೆ ಪಕ್ಕಾ!
ಈ ಬಾರಿ ಬೆಂಗಳೂರಿನ ಬಿಡದಿ ಬಳಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ನಡೆಯೋದು ಪಕ್ಕಾ ಎನ್ನಲಾಗಿದೆ. ದೊಡ್ಡ ಆಲದಮರಿ ಬಳಿ ಈ ಹಿಂದಿನ ಸೀಸನ್ ಶೂಟ್ ಆಗಿತ್ತು. ಪ್ರತಿ ಬಾರಿ ಮನೆ ರೆಡಿ ಮಾಡುವಾಗ ಒಂದಿಷ್ಟು ಬದಲಾವಣೆ ಆಗುವುದು. ಹಿಂದಿನ ಸೀಸನ್ ಮನೆಯಂತೂ ಎಲ್ಲ ಭಾಷೆಗಳ ಬಿಗ್ ಬಾಸ್ ಮನೆಗಳಿಗಿಂತ ದೊಡ್ಡದಾಗಿತ್ತು.
ನಾನು ಹೋಗಲ್ಲ
ಖ್ಯಾತ ಸುದ್ದಿ ನಿರೂಪಕ ಜಯಪ್ರಕಾಶ್ ಶೆಟ್ಟಿ ಅವರು “ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲು ಆಫರ್ ಬಂದಿದ್ದು ಸತ್ಯ, ಆದರೆ ನಾನು ಹೋಗ್ತಿಲ್ಲ” ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಕೆಲ ಸೀಸನ್‌ಗಳಿಂದ ಪತ್ರಕರ್ತರು ಕೂಡ ಬಿಗ್ ಬಾಸ್ ಮನೆಗೆ ಹೋಗಿದ್ದುಂಟು. ಕಿರಿಕ್ ಕೀರ್ತಿ, ಗೌರೀಶ್ ಅಕ್ಕಿ ಅವರು ದೊಡ್ಮನೆಗೆ ಹೋಗಿದ್ದರು. ಅಂದಹಾಗೆ ಜಯಪ್ರಕಾಶ್ ಶೆಟ್ಟಿ ಅವರು Asianet Suvarna News ಸೇರಿದಂತೆ ಅನೇಕ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ಬಿಗ್ ಬಿ ಯಂತಹ ಸಾಮಾಜಿಕ ಕಳಕಳಿ ಇರುವ ಕಾರ್ಯಕ್ರಮಗಳ ರೂವಾರಿ ಕೂಡ ಹೌದು. ಇವರು ದೊಡ್ಮನೆಗೆ ಹೋದರೆ ಆಟ ಇನ್ನೊಂದು ತಿರುವು ಪಡೆದುಕೊಳ್ಳೋದಂತೂ ಹೌದು. ಆದರೆ ಅವರು ಹೋಗೋದಿಲ್ಲ ಎಂದಿದ್ದಾರೆ. ಅಂದಹಾಗೆ ಜಯಪ್ರಕಾಶ್ ಶೆಟ್ಟಿ ಅವರು ಈಗ ಯಾವುದೇ ಸುದ್ದಿ ವಾಹಿನಿಯಲ್ಲಿಯೂ ಇಲ್ಲ. ಮುಂದೆ ಅವನ ನಡೆ ಏನು ಎಂದು ಕಾದು ನೋಡಬೇಕಿದೆ.
ಯಾವಾಗ ಶುರು?
ಸೆಪ್ಟೆಂಬರ್ 28ರಿಂದ ಬಿಗ್ ಬಾಸ್ ಕನ್ನಡ 12 ಶೋ ಶುರು ಆಗುವುದು. ಯುಟ್ಯೂಬರ್ಸ್ ವರುಣ್ ಆರಾಧ್ಯ, ವರ್ಷಾ ಕಾವೇರಿ, ಸಮೀರ್ ಸ್ಯಾಮ್, ಡಾ ಬ್ರೋ ಅವರಿಗೂ ಆಫರ್ ಹೋಗಿದೆ ಎನ್ನಲಾಗಿದೆ. ಜಾಹ್ನವಿ ನಿರೂಪಕಿ ಕೂಡ ದೊಡ್ಮನೆಗೆ ಹೋಗಲಿದ್ದಾರಂತೆ. ಈ ಶೋಗೋಸ್ಕರ ಕಲರ್ಸ್ ಕನ್ನಡ ವಾಹಿನಿಯ ಎರಡು ಧಾರಾವಾಹಿಯು ಅಂತ್ಯ ಕಾಣಲಿದೆ ಎನ್ನಲಾಗಿದೆ.


