ಲಂಡನ್ ಬ್ರಿಡ್ಜ್ ಮೇಲೆ ನಿಂತು ಹೃದಯ ಅರಳಿ ನಲಿದಿದೆ ಅಂತ ಹಾಡ್ತಿದ್ದಾರೆ ಆಂಕರ್ ಅನುಶ್ರೀ, ಪಕ್ಕದಲ್ಲಿರೋರು ಯಾರವ್ವಾ ಅಂತ ಕೇಳ್ತಿದ್ದಾರೆ ನೆಟ್ಟಿಗರು.
ಆಂಕರ್ ಅನುಶ್ರೀ ಲಂಡನ್ ಟೂರ್‌ನಲ್ಲಿದ್ದಾರೆ. ಅಷ್ಟೇ ಆಗಿದ್ರೆ ನೆಟ್ಟಿಗರು ಈ ಪಾಟಿ ಸೌಂಡ್ ಮಾಡ್ತಿರಲಿಲ್ಲ. ಆಕೆ ಲಂಡನ್ ಬ್ರಿಡ್ಜ್ ಮೇಲೆ ನಿಂತು ಒಂದು ಹಾಡನ್ನ ಹಾಡಿದ್ದಾರೆ. ಅದರಲ್ಲಿ 'ಹೃದಯ ಅರಳಿ ನಲಿದಿದೆ' ಅನ್ನೋ ಸಾಲೂ ಇದೆ. ಅದರ ಮೇಲೆ ನೆಟ್ಟಿಗರ ಕಣ್ಣು. ಜೊತೆಗೆ 'ಪಕ್ಕದಲ್ಲಿರೋರು ಯಾರವ್ವಾ' ಅಂತಲೂ ಪ್ರಶ್ನೆ ಮಾಡುತ್ತಿದ್ದಾರೆ. ಕಳೆದ ವರ್ಷ ತಾನು ನಡೆಸಿಕೊಡುವ ಮ್ಯೂಸಿಕಲ್ ರಿಯಾಲಿಟಿ ಶೋದ ಗ್ರ್ಯಾಂಡ್ ಫಿನಾಲೆ ವೇಳೆ ಪ್ರಶಸ್ತಿ ವಿಜೇತರಿಗಿಂತ ಹೆಚ್ಚು ಸೌಂಡ್ ಮಾಡಿದ್ದು ಅನುಶ್ರೀ ಆಡಿದ ಮಾತು. ಇಡೀ ಕರ್ನಾಟಕವೇ, 'ಅನುಶ್ರೀ ನಿಮ್ ಮದುವೆ ಯಾವಾಗ?' ಅಂತ ಕೇಳುವಾಗ ಮೊಟ್ಟ ಮೊದಲ ಬಾರಿ, ಯೆಸ್ ನಾನು ಮದುವೆ ಆಗುತ್ತೇನೆ ಎಂದು ಘೋಷಿಸಿದರು. ಆದರೆ ಆಂಕರ್ ಅಕುಲ್ ಇಂಥಾ ವಿಚಾರಗಳಲ್ಲೆಲ್ಲ ಕೊಂಚ ಕಿಲಾಡಿ. 'ಅನುಶ್ರೀ ಅವರು ಮದುವೆ ಆಗೋ ಹುಡುಗನನ್ನು ಈಗ ರಿವೀಲ್ ಮಾಡ್ತೀವಿ' ಅಂದೇ ಬಿಟ್ಟರು. ವೀಕ್ಷಕರು ಕುತೂಹಲದ ಕಣ್ಣಲ್ಲಿ ಅನುಶ್ರೀ ಮದುವೆ ಆಗೋ ಹುಡುಗನನ್ನು ನೋಡಲು ಕಾತರರಾಗಿ ನಿಂತಾಗ ಅನುಶ್ರೀ ಮುಖ ಇದ್ದಕ್ಕಿದ್ದ ಹಾಗೆ ಸೀರಿಯಸ್ ಆಯ್ತು. ಪೆಚ್ಚು ನಗೆ ಮುಖವನ್ನ ಆವರಿಸಿತು. ಕ್ಯಾಮರ ಏಕಕಾಲಕ್ಕೆ ಸ್ಕ್ರೀನ್ ಮೇಲೂ ಅನುಶ್ರೀ ಮುಖದ ಮೇಲೂ ಫೋಕಸ್ ಆಗ್ತಿತ್ತು. ಇನ್ನೇನು ಘೋಷಣೆ ಆಗಿಯೇ ಬಿಟ್ಟಿತು ಅನ್ನುವಾಗ, 'ಅನುಶ್ರೀ ಅವರ ಪ್ರೈವೆಸಿಗೆ ಗೌರವ ಕೊಟ್ಟು ಅವರ ಹುಡುಗನನ್ನು ನಾವಿಲ್ಲಿ ತೋರಿಸುತ್ತಿಲ್ಲ' ಅಂತ ಅಕುಲ್ ಹೇಳಿದಾಗ ಅನುಶ್ರೀ ಮುಖದಲ್ಲಿ ದೊಡ್ಡ ರಿಲೀಫು. ವೀಕ್ಷಕರ ಮುಖದಲ್ಲಿ ದೊಡ್ಡ ನಿರಾಸೆ.
ಆದರೂ ಕೊನೆಗೂ ಅನುಶ್ರೀ ಮದುವೆ ಆಗೋದಾಗಿ ಹೇಳಿದ್ರಲ್ಲ ಅಂತ ಸಣ್ಣ ಸಮಾಧಾನ. ಆದರೆ ಹೊಸ ವರ್ಷ ಆರಂಭದಿಂದ ಇವರು ಮದುವೆ ಡೇಟ್ ಯಾವಾಗ ಅನೌನ್ಸ್ ಮಾಡ್ತಾರೆ, ಯಾರನ್ನು ಮದುವೆ ಆಗ್ತಿದ್ದಾರೆ ಅಂತೆಲ್ಲ ಇವರ ಲಕ್ಷಾಂತರ ಅಭಿಮಾನಿಗಳು ಕೊರಳುದ್ದ ಮಾಡಿ ಕಾದದ್ದೇ ಬಂತು. ಅವತ್ತು ಮದುವೆ ಆಗ್ತೇನೆ ಅಂದ ಅನುಶ್ರೀ ಆಮೇಲೆ ತುಟಿ ಬಿಚ್ಚಲಿಲ್ಲ. ಅವರು ಕ್ಲೋಸ್ ಇರುವ ನಟ, ಚಿತ್ರರಂಗದ ಕೆಲವರೊಂದಿಗೆಲ್ಲ ಒಂದು ರೌಂಡ್ ಇವರ ಹೆಸರು ಹರಿದಾಡಿತು. ಆಗಲೂ ಅನುಶ್ರೀ ಕಮಕ್ ಕಿಮಕ್ ಅನ್ನಲಿಲ್ಲ. ಆಮೇಲೂ ಯಾವ ಸುದ್ದಿಯೂ ಇರಲಿಲ್ಲ. ಅನುಶ್ರೀ ಎಂದಿನಂತೆ ಆಂಕರಿಂಗ್, ಕುಂಭಮೇಳ, ಕಾಶಿ ಅಂತ ಸುತ್ತಾಟದಲ್ಲಿ ಬ್ಯುಸಿ ಆದರು.
ನಿವೇದಿತಾ ಎದುರೇ ಬಾಡಿ ಬಿಲ್ಡ್ ಗುಟ್ಟು ರಟ್ಟು ಮಾಡಿದ ಚಂದನ್ ಶೆಟ್ಟಿ -ಹೊಸ ಜೀವನದ ಬಗ್ಗೆ ಹೇಳಿದ್ದೇನು?
ಇದೀಗ ಅನುಶ್ರೀ ಲಂಡನ್‌ನಲ್ಲಿದ್ದಾರೆ. ಅಲ್ಲಿನ ಫೋಟೋ, ವೀಡಿಯೋಗಳನ್ನು ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅನೇಕ ರೀಲ್ಸ್‌ಗಳನ್ನೂ ಮಾಡುತ್ತಿದ್ದಾರೆ. ಅದರಲ್ಲೊಂದು ರೀಲ್ಸ್‌ನಲ್ಲಿ 'ಹೃದಯ ಅರಳಿ ಹಾಡಿದೆ..' ಎಂಬ ಸಾಲು ವೀಕ್ಷಕರ ಹುಬ್ಬೇರುವ ಹಾಗೆ ಮಾಡಿದೆ. ಆದರೆ ಅನುಶ್ರೀ ಈ ಹಾಡು ಹಾಡಿದ್ದು ಲಂಡನ್ ಸೇತುವೆ ಬಗೆಗೆ. 'ಲವ್ಲೀ ಲಂಡನ್ ಮೋಡಿಗೆ ಹೃದಯ ಅರಳಿ ನಲಿದಿದೆ. ಮೋಹಕ ಚುಂಬಕ ನಾಡಿಗೆ ಮನಸು ಜಿಗಿದು ಹಾರಿದೆ' ಎಂಬ ಸುಪ್ರಸಿದ್ಧ ಗೀತೆಗೆ ಅವರು ಲಂಡನ್ ಬ್ರಿಡ್ಜ್ ಮೇಲಿಂದಲೇ ರೀಲ್ಸ್ ಮಾಡಿ ಹಾಕಿದ್ದಾರೆ. ಗಾಯಕಿ ಐಶ್ವರ್ಯಾ ರಂಗರಾಜ್ ಕೂಡ ಜೊತೆಗಿದ್ದಾರೆ. ಅಂದಹಾಗೆ ಅನುಶ್ರೀ ಲಂಡನ್‌ಗೆ ಹೋಗಿದ್ದು ಗಾಯಕ ವಿಜಯ ಪ್ರಕಾಶ್ ತಂಡದೊಂದಿಗೆ. ಕಾರ್ಯಕ್ರಮ ನಿರೂಪಣೆಗಾಗಿ. ಸೋ ಇದಕ್ಕೆ ಬೇರೇನೂ ಅರ್ಥ ಕಲ್ಪಿಸೋ ಹಾಗಿಲ್ಲ. ಲವ್ಲೀ ಲಂಡನ್‌ನಲ್ಲಾದರೂ ಅನುಶ್ರೀ ತನ್ನ ಹುಡುಗನ ಹೆಸರನ್ನು ಗಾಳಿಯಲ್ಲಿ ಕೂಗಿ ಹೇಳ್ತಾರ ಅಂತ ಕಾದುನೋಡಬೇಕು.
ಕನ್ನಡತಿ ಪೂಜಾ ಹೆಗ್ಡೆ ತಮಿಳು ಸಿನಿಮಾ 'ರೆಟ್ರೊ'ಗಾಗಿ ಮೊದಲ ಬಾರಿಗೆ ಹೊಸ ಪ್ರಯತ್ನ!
