Asianet Suvarna News Asianet Suvarna News

'ಯೇ ಮೆಮೊರಿ ಹೈ, ಕ್ಯಾ ಬೇಕಾಗ್ತಾ ಹೈ?' ಪಂಜಾಬ್​ ಗಾಯಕನ ಜೊತೆ ಏನಮ್ಮಾ ಅನುಶ್ರೀ ಇದು?

ಆ್ಯಂಕರ್​ ಅನುಶ್ರೀ ಸರಿಗಮಪ ಷೋನಲ್ಲಿ ಪಂಜಾಬ್​ ಗಾಯಕನೊಂದಿಗೆ ಇಂಗ್ಲಿಷ್​,ಹಿಂದಿ ಹಾಗೂ ಕನ್ನಡ ಮಿಕ್ಸ್​ ಮಾತನಾಡಿದ್ದ ಪ್ರೊಮೋ ಕಚಗುಳಿ ಇಡುವಂತಿದೆ!
 

Anchor Anushree English Hindi Kannada mix speech in Saregamapa show suc
Author
First Published Dec 7, 2023, 5:53 PM IST

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್‌ ನಟಿ (Sandalwood star) ಅನುಶ್ರೀ ಮನೆಮಾತಾಗಿರುವ ನಟಿ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಸರಿಗಮಪ ಸಂಗೀತದ ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ.  ಜೀ ಕನ್ನಡ ಚಾನೆಲ್​ನಲ್ಲಿ  (Zee Kannada Channel) ವಾರಾಂತ್ಯದಲ್ಲಿ ಎಲ್ಲರ ಮೆಚ್ಚುಗೆ ಗಳಿಸುತ್ತಿರುವ ಸರಿಗಮಪ ಸಂಗೀತ ರಿಯಾಲಿಟಿ ಷೋ ಈಗ 20ನೇ ಕಂತಿಗೆ ಕಾಲಿಟ್ಟಿದೆ. ಅಪಾರ ಪ್ರಮಾಣದಲ್ಲಿ ಜನ ಮೆಚ್ಚುಗೆ ಗಳಿಸಿರುವ ಈ ಷೋದಲ್ಲಿ ರಾಜ್ಯಗಳ ವಿವಿಧ ಮೂಲೆಗಳ ಸಂಗೀತ ಪ್ರತಿಭೆಗಳನ್ನು ವಾಹಿನಿ ಪರಿಚಯಿಸಿದೆ. ಇದಾಗಲೇ 19 ಸರಣಿಗಳನ್ನು (season) ಪೂರೈಸಿದ್ದು, ಇದೀಗ 20ನೇ ಸೀಸನ್​ ಶುರುವಾಗಿ ಕೆಲವು ವಾರಗಳೇ ಕಳೆದಿವೆ. 

ಇಲ್ಲಿಯವರೆಗೆ ಕರ್ನಾಟಕದಲ್ಲಿ ಆಡಿಷನ್​ ನಡೆದಿದೆ. ಇಲ್ಲಿ ಆಡಿಷನ್​ ನಡೆದಿರುವ ಸಂದರ್ಭದಲ್ಲಿ ಕರ್ನಾಟಕದ ಹೊರ ರಾಜ್ಯಗಳ ಪ್ರತಿಭೆಗಳೂ ಪಾಲ್ಗೊಂಡಿದ್ದು, ಹಲವರಿಗೆ ಈ ಕಾರ್ಯಕ್ರಮದಲ್ಲಿ ಹಾಡುವ ಅವಕಾಶ ದೊರಕಿದೆ. ಇದೀಗ ಹೊಸ ಪ್ರಯತ್ನಕ್ಕೆ ಕೈಹಾಕಿರುವ ತಂಡ, ಕನ್ನಡದ ಕಂಪನ್ನು ಹೊರ ದೇಶಗಳಿಗೂ ಬಿತ್ತರಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇದಾಗಲೇ ಷೋ ಆರಂಭಗೊಂಡಿದ್ದು, ಇದನ್ನು ಎಂದಿನಂತೆ ಆ್ಯಂಕರ್​ ಅನುಶ್ರೀ ನಡೆಸಿಕೊಡುತ್ತಿದ್ದಾರೆ. ಹೇಳಿ ಕೇಳಿ ಅವರು ಅನುಶ್ರೀ. ಅವರ ಆ್ಯಂಕರಿಂಗ್​ ಶೈಲಿಗೆ ಅವರೇ ಸಾಟಿ. ಸದಾ ಹಾಸ್ಯ ಮಾಡುತ್ತಾ, ಪ್ರೇಕ್ಷಕರನ್ನು ತಮ್ಮ ಕಡೆಗೆ ಸೆಳೆದಿಟ್ಟುಕೊಳ್ಳುವ ಗುಣ ಅವರಿಗೆ ಚೆನ್ನಾಗಿ ಕರಗತವಾಗಿದೆ. ಇದೇ ಕಾರಣಕ್ಕೆ ಅವರಿಗೆ ಎಲ್ಲಾ ವಾಹಿನಿಗಳಿಂದಲೂ ಸಕತ್​ ಬೇಡಿಕೆ ಇದೆ.

ಕುಲುಮೆಯಲ್ಲಿ ಬೆವರು ಹರಿಸಿದ ಆನಂದ್-ಚೈತ್ರಾ; ಬಳೆಗಾರರಾಗಿ ಮನೆಗೆ ಬಂದ ಚಿದಾನಂದ್-ಕವಿತಾ!

ಇದೀಗ ಪಂಜಾಬ್​ ಗಾಯಕನೊಬ್ಬನ ಜೊತೆ ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಅನುಶ್ರೀ ಅವರು ಮಾತನಾಡಿರುವ ಕುರಿತು ಜೀ ಕನ್ನಡ ವಾಹಿನಿ ಪ್ರೊಮೋ ರಿಲೀಸ್​ ಮಾಡಿದೆ. ಇದರಲ್ಲಿ ಪಂಜಾಬ್​ ಮತ್ತು ಆಸ್ಟ್ರೇಲಿಯಾದ ಗಾಯಕರು ಪಾಲ್ಗೊಂಡಿದ್ದಾರೆ. ತೀರ್ಪುಗಾರರಾಗಿರುವ ವಿಜಯ್​ ಪ್ರಕಾಶ್​ ಮತ್ತು ಅನುಶ್ರೀ ಅವರು ಪಂಜಾಬ್​ ಗಾಯಕ ಜಸ್ಕರನ್​ ಜೊತೆ ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಮಾತನಾಡಿರುವ ವಿಡಿಯೋ ಇದಾಗಿದೆ. ವಿಜಯ್​ ಪ್ರಕಾಶ್​ ಅವರು ಜಸ್ಕರನ್​ ನಿಮಗೊಂದು ಪ್ರಶ್ನೆ. ಇವರಿಗೆ ಎಷ್ಟು ದಿನದ ಮುಂಚೆ ಹಾಡು ಕೊಡ್ತಿರಾ ಎಂದು ಹಿಂದಿಯಲ್ಲಿ ಕೇಳಿ ಎಂದರು. ಅದಕ್ಕೆ ಅನುಶ್ರೀ, ಕಿತನೇ ದಿನ್​ ಕಿತನೇ ದಿನ್​ ಎಂದು ನಗಿಸುತ್ತಾ ನಂತರ ಇಂಗ್ಲಿಷ್​ನಲ್ಲಿ ಮಾತನಾಡಿದರು. ಹೀಗೆ ಇವರ ಹಿಂದಿ-ಇಂಗ್ಲಿಷ್​ ಮತ್ತು ಕನ್ನಡ ಮಿಕ್ಸ್​ ಮಾತು ಮುಂದುವರೆದಿದ್ದು ಪ್ರೊಮೋ ನೋಡಿ ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಲಿರಿಕ್ಸ್​ ಬರೆದು ಜಸ್ಕರನ್​ ಅವರು ಕೆಲವೇ ಗಂಟೆಗಳಲ್ಲಿ ಹಾಡನ್ನು ಪ್ರಾಕ್ಟೀಸ್ ಮಾಡುತ್ತಾರೆ ಎಂಬುದನ್ನು ಕೇಳಿ ವಿಜಯ್​ ಪ್ರಕಾಶ್​ ಅವರು, ಈ ರೀತಿ ಮೆಮೊರಿ ಇರಬೇಕು ಎಂದರೆ ಏನು ಮಾಡಬೇಕು ಎಂದು ಕೇಳಿದ್ದಾರೆ. ಅದನ್ನು ಹಿಂದಿಯಲ್ಲಿ ಕೇಳುವಂತೆ ಅನುಶ್ರೀ ಅವರಿಗೆ ಕೇಳಿದಾಗ, ಅವರು ಯೇ ಮೆಮೊರಿ ಹೈ, ಕ್ಯಾ ಬೇಕಾಗ್ತಾ ಹೈ ಎಂದು ಕೇಳಿದಾಗ ಎಲ್ಲರೂ ಗೊಳ್ಳೆಂದು ನಕ್ಕಿದ್ದಾರೆ. ಅಷ್ಟಕ್ಕೂ ಅನುಶ್ರೀಗಾಗಲಿ, ವಿಜಯ್​ ಪ್ರಕಾಶ್​ ಅವರಿಗಾಗಲಿ ಹಿಂದಿ ಮತ್ತು ಇಂಗ್ಲಿಷ್​ ಬರುವುದಿಲ್ಲವೆಂದೇನಲ್ಲ. ಸದಾ ಎಲ್ಲರನ್ನೂ ನಗಿಸುವಲ್ಲಿ ಫೇಮಸ್​ ಆಗಿರೋ ಇವರಿಬ್ಬರೂ ಪ್ರೇಕ್ಷಕರನ್ನು ರಂಜಿಸಲು ಹೀಗೆ ಮಾಡಿರುವುದು ಎಲ್ಲರಿಗೂ ತಿಳಿದದ್ದೇ. ಒಟ್ಟಿನಲ್ಲಿ ಈ ಪ್ರೊಮೋ ತುಂಬಾ ಖುಷಿಕೊಡುವಂತಿದೆ. 
 

ಸಂಪೂರ್ಣ ಬೆತ್ತಲಾಗಿ ರಶ್ಮಿಕಾರ 'ನ್ಯಾಷನಲ್​ ಕ್ರಷ್'​ ಪಟ್ಟ ಕಿತ್ತುಕೊಂಡ ತೃಪ್ತಿ: ಬೂಟು ನೆಕ್ಕುವ ದೃಶ್ಯ ನೆನಪಿಸಿಕೊಂಡ ನಟಿ

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios