ಅನಿಮಲ್​ ಚಿತ್ರದಲ್ಲಿ ಸಂಪೂರ್ಣವಾಗಿ ಬೆತ್ತಲಾಗಿರುವ ನಟಿ ತೃಪ್ತಿ ದಿಮ್ರಿಗೆ ಈಗ ನ್ಯಾಷನಲ್​ ಕ್ರಷ್​ ಪಟ್ಟ ಸಿಕ್ಕಿದೆ. ನಟಿ ಹೇಳಿದ್ದೇನು? 

ಈಗ ಬಿ-ಟೌನ್​ನಲ್ಲಿ ನಟಿ ತೃಪ್ತಿ ದಿಮ್ರಿಯದ್ದೇ ಹವಾ. ಕೆಲ ದಿನಗಳ ಹಿಂದೆ ಹೀಗೊಬ್ಬ ನಟಿ ಇದ್ದಳೆಂದು ತಿಳಿಯದವರೂ ಇದೀಗ ಈಕೆಯ ಬಗ್ಗೆ ಗೂಗಲ್​ನಲ್ಲಿ ಸರ್ಚ್​ ಶುರುವಿಟ್ಟುಕೊಂಡಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಸೋಷಿಯಲ್​ ಮೀಡಿಯಾದಲ್ಲಿ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗದಿದ್ದ ತೃಪ್ತಿ ರಾತ್ರೋರಾತ್ರಿ 20 ಲಕ್ಷ ಫಾಲೋವರ್ಸ್​ ಅಭಿಮಾನಿಯಾಗಿದ್ದಾರೆ. ಇದಕ್ಕೆಲ್ಲಾ ಕಾರಣ, ಮೊನ್ನೆಯಷ್ಟೇ ಬಿಡುಗಡೆಯಾದ ರಣಬೀರ್​ ಕಪೂರ್​ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್​ ಚಿತ್ರ. ಈ ಚಿತ್ರದಲ್ಲಿ ರಶ್ಮಿಕಾ ಅರೆಬೆರೆ ಬೆತ್ತಲಾಗಿ ಕಾಣಿಸಿಕೊಂಡಿದ್ದರೆ, ತೃಪ್ತಿ ದಿಮ್ಮಿ ಸಂಪೂರ್ಣ ಬೆತ್ತಲಾಗಿದ್ದರಿಂದ ರಸಿಕರು ಜೊಲ್ಲು ಸುರಿಸುತ್ತಿದ್ದಾರೆ. ಈಕೆಯ ಕೆಲವು ದೃಶ್ಯಗಳನ್ನು ಸೆನ್ಸಾರ್​ ಮಂಡಳಿ ಕತ್ತರಿ ಹಾಕಿದ್ದರೂ, ಸೋಷಿಯಲ್​ ಮೀಡಿಯಾದಲ್ಲಿ ಕತ್ತರಿ ಹಾಕಿರುವ ದೃಶ್ಯಗಳ ವಿಡಿಯೋ ವೈರಲ್​ ಆಗುತ್ತಿರುವ ಕಾರಣ, ಫಾಲೋವರ್ಸ್​ ಸಂಖ್ಯೆ ದಿಢೀರ್​ ಏರಿಕೆಯಾಗಿದೆ. ಸಾಲದು ಎಂಬುದಕ್ಕೆ, ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರಿದ್ದ ನ್ಯಾಷನಲ್​ ಕ್ರಷ್​ ಪಟ್ಟವೂ ಇದೀಗ ಸಂಪೂರ್ಣ ಬೆತ್ತಲಾದ ತೃಪ್ತಿ ದಿಮ್ಮಿ ಪಾಲಾಗಿದೆ.

ಅಂದಹಾಗೆ ಇದೇ ಡಿಸೆಂಬರ್​1 ರಂದು ಬಿಡುಗಡೆಯಾಗಿರುವ ನಟ ರಣಬೀರ್‌ ಕಪೂರ್‌ (Ranbir Kapoor) ಮತ್ತು ರಶ್ಮಿಕಾ ಮಂದಣ್ಣ ಅವರ ಅನಿಮಲ್‌ ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಇದಾಗಲೇ ಐದಾರು ದಿನಗಳಲ್ಲಿಯೇ ಜಗತ್ತಿನಾದ್ಯಂತ 500 ಕೋಟಿ ರೂಪಾಯಿ ಗಳಿಸಿದೆ. ಅಡಲ್ಟ್​ ಸರ್ಟಿಫಿಕೇಟ್​ ಪಡೆದಿರುವ ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇದಾಗಲೇ ಕತ್ತರಿ ಹಾಕಿದ್ದರೂ ನಾಗಾಲೋಟದಿಂದ ಓಡುತ್ತಿದೆ.

ಅನಿಮಲ್​ ಚಿತ್ರಕ್ಕಾಗಿ ಸಂಪೂರ್ಣ ಬೆತ್ತಲಾದ ನಟಿ ತೃಪ್ತಿ: ಸಿನಿಮಾದಲ್ಲಿ ಕತ್ತರಿ ಹಾಕಿದ್ದ ವಿಡಿಯೋ ವೈರಲ್​!

ಚಿತ್ರದಲ್ಲಿ ನಟಿ ರಶ್ಮಿಕಾ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ನಟಿ ತೃಪ್ತಿ ಸಂಪೂರ್ಣ ನಗ್ನಳಾಗಿದ್ದ ವಿಡಿಯೋ ವೈರಲ್​ ಆಗಿತ್ತು. ಸೆನ್ಸಾರ್​ ಮಂಡಳಿ ಹಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದರೂ ರಶ್ಮಿಕಾ ಮಂದಣ್ಣ ಜೊತೆಗಿನ ಬೆಡ್​ರೂಮ್​ ಸೀನ್​ ಲೀಕ್​ ಆಗಿರುವ ಬೆನ್ನಲ್ಲೇ, ತೃಪ್ತಿ ಡಿಮ್ರಿಯ ವಿಡಿಯೋ ಕೂಡ ವೈರಲ್​ ಆಗಿದೆ. 2017 ರಲ್ಲಿ ಶ್ರೀದೇವಿ ಅಭಿನಯದ ಮಾಮ್ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡ ತೃಪ್ತಿ ಡಿಮ್ರಿ ಇದೀಗ ರಣಬೀರ್​ ಕಪೂರ್​ ಜೊತೆ ಬೆತ್ತಲಾಗಿ ಚಿತ್ರೀಕರಣ ಮಾಡಿದ್ದಾರೆ. ಅಂದಹಾಗೆ, ಈ ಹಿಂದೆ ತೃಪ್ತಿ ನಾಗಿನ್ ಸೀರೀಸ್ 3ರಲ್ಲಿ ಕಾಣಿಸಿಕೊಂಡಿದ್ದರು. ಈಗ ಬೆಳ್ಳಿತೆರೆ ಮೇಲೆ ಆಫರ್ ಗಳು ಬರುತ್ತಿವೆ. ಆದರೆ ಸೆನ್ಸಾರ್‌ ಬಿಡುಗಡೆಗೂ ಮುನ್ನ ಅತಿಯಾದ ರೋಮ್ಯಾಂಟಿಕ್ ಬೋಲ್ಡ್ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಲಾಗಿತ್ತು. ಆದರೂ ಇದೆಲ್ಲದರ ಹೊರತಾಗಿ ತೃಪ್ತಿ ಅವರ ಗ್ಲಾಮರ್ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 

 ಈ ಕುರಿತು ಮಾತನಾಡಿರುವ ನಟಿ, ನಾನು ಚಿತ್ರಕ್ಕೆ ಏನು ಬೇಕೋ ಅದನ್ನು ಮಾಡಿದ್ದೇನೆ. ಜನ ಈ ಪರಿ ಇಷ್ಟಪಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ. ನನ್ನ ಫಾಲೋವರ್ಸ್​ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಹಲವರು ನನಗೆ ನ್ಯಾಷನಲ್​ ಕ್ರಷ್​ ಪಟ್ಟ ಕೊಟ್ಟಿದ್ದಾರೆ. ಇದು ನನಗೆ ತುಂಬಾ ಖುಷಿ ತಂದಿದ್ದು, ನಾನು ಅವರಿಗೆ ಕೃತಜ್ಞನಾಳಿದ್ದೇನೆ ಎಂದು ಭಾವುಕರಾಗಿ ಮಾತನಾಡಿದ್ದ ನಟಿ ತೃಪ್ತಿ. ಈ ಚಿತ್ರದಲ್ಲಿ ನನ್ನ ಪ್ರೀತಿಯನ್ನು ತೋರಿಸಲು ನಾಯಕ ತನ್ನ ಶೂಸ್​ ನೆಕ್ಕುವಂತೆ ಹೇಳುತ್ತಾನೆ. Lick My Shoes ಡೈಲಾಗ್​ ಸಕತ್​ ಹಿಟ್ ಆಗಿದೆ. ಈ ದೃಶ್ಯ ಮಾಡಲು ನಾನು ತುಂಬಾ ಕಷ್ಟಪಟ್ಟಿದ್ದೇನೆ. ಕೊನೆಗೆ ಎಲ್ಲವೂ ಯಶಸ್ವಿಯಾಯಿತು ಎಂದಿದ್ದಾರೆ ನಟಿ. 

'ಅನಿಮಲ್'​ ಚಿತ್ರದ ಹಸಿಬಿಸಿ ದೃಶ್ಯದ ಬಳಿಕ ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಮ್​ನಲ್ಲಿ ಬರೆದ್ರು ದಾಖಲೆ!