ವೈಂಡ್‌ಅಪ್ ಆಗ್ತಿದೆಯಾ ಜೊತೆ ಜೊತೆಯಲಿ ಸೀರಿಯಲ್?
ಅನಿರುದ್ಧ ಜತ್ಕರ್ ಹೊರಬಿದ್ದ ಮೇಲೆ ಜೊತೆ ಜೊತೆಯಲಿ ಸೀರಿಯಲ್ ಬಗ್ಗೆ ಜನ ಆಸಕ್ತಿ ಕಳೆದುಕೊಂಡ ಹಾಗಿದೆ. ಹೊಸ ತಿರುವು, ಬದಲಾವಣೆ ಯಾಕೋ ವೀಕ್ಷಕರಿಗೆ ರುಚಿಸಿದ ಹಾಗಿಲ್ಲ. ಹೀಗಾಗಿ ಈ ಸೀರಿಯಲ್ ವೈಂಡ್‌ಅಪ್ ಆಗ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ. ಇದು ನಿಜನಾ?
ಕನ್ನಡದಲ್ಲಿ ಸಾಲು ಸಾಲು ಸೀರಿಯಲ್‌ಗಳು ವೈಂಡ್‌ಅಪ್ ಆಗ್ತಿವೆ. ಅದರ ಬದಲಾಗಿ ಹೊಸ ಹೊಸ ಸೀರಿಯಲ್‌ಗಳು ಆರಂಭ ಆಗ್ತಿವೆ. ಬಹಳ ಜನಪ್ರಿಯವಾದ 'ಕನ್ನಡತಿ'ಯಂಥಾ ಸೀರಿಯಲ್ ಸಹ ಮುಕ್ತಾಯವಾಗುತ್ತಿರುವುದು ವೀಕ್ಷಕರಿಗೆ ಬೇಸರ ತಂದಿದೆ. ಇದೀಗ ಆ ಪಟ್ಟಿಗೆ ಜೊತೆ ಜೊತೆಯಲಿ ಸೀರಿಯಲ್ ಸೇರಿದೆ. ಈ ಸೀರಿಯಲ್ ಸಹ ಶೀಘ್ರವೇ ವೈಂಡ್ ಅಪ್ ಆಗ್ತಿದೆ ಅನ್ನೋ ಮಾತುಗಳು ಈ ಸೀರಿಯಲ್ ಟೀಮ್‌ನಿಂದಲೇ ಕೇಳಿಬಂದಿದೆ. ಮಧ್ಯ ವಯಸ್ಕ ಬಾಸ್ ಹಾಗೂ ಚಿಕ್ಕ ವಯಸ್ಸಿನ ಹುಡುಗಿ ಜೊತೆಗಿನ ಪ್ರೇಮದ ಬಗೆಗೆ ಈ ಸೀರಿಯಲ್ ಇದೆ. ವರ್ಧನ್ ಕಂಪನಿಗಳ ಮುಖ್ಯಸ್ಥ ಆರ್ಯವರ್ಧನ್ ಹಾಗೂ ಮಧ್ಯಮ ವರ್ಗದ ಮುಗ್ಧ ಹುಡುಗಿ ಅನು ಸಿರಿಮನೆ ನಡುವಿನ ಸ್ನೇಹ ಕ್ರಮೇಣ ಪ್ರೇಮವಾಗುತ್ತೆ. ಅನೇಕ ಅಡೆತಡೆಗಳ ನಡುವೆ ಇವರಿಬ್ಬರೂ ವಿವಾಹ ಆಗುತ್ತಾರೆ. ವಿವಾಹವರೆಗಿನದ್ದು ಒಂದು ಬಗೆಯ ಕಥೆಯಾದರೆ ಆ ಬಳಿಕ ಈ ಕಥೆಗೆ ಪುನರ್ಜನ್ಮ, ಮರ್ಡರ್ ಮಿಸ್ಟ್ರಿ ಟರ್ನ್ ಸಿಗುತ್ತೆ. ಒಂದು ಹಂತದಲ್ಲಿ ಹೀರೋನೇ ವಿಲನ್ ಆಗ್ತಾನೆ.
ಆರಂಭದಲ್ಲಿ ಬಹಳ ಜನಪ್ರಿಯವಾದ ಈ ಸೀರಿಯಲ್ ವಿವಾದಗಳಿಂದಲೂ ಹೆಸರು ಮಾಡಿತು. ನಾಯಕಿ ಮೇಘಾ ಶೆಟ್ಟಿ ಸೀರಿಯಲ್‌ನಿಂದ ಆಚೆ ಹೋಗ್ತಾರೆ ಅನ್ನೋ ಸುದ್ದಿ ಆರಂಭದಲ್ಲಿ ಸುದ್ದಿಯಾಗಿತ್ತು. ಇದರ ವಿರುದ್ದ ಜನ ತಿರುಗಿಬಿದ್ದರು. ಹೀರೋನೆ ವಿಲನ್ ಆದಾಗ ಸಾಕಷ್ಟು ವಿರೋಧಗಳು ಬಂದವು. ಆದರೆ ಭಾರೀ ಹೊಡೆತ ಕೊಟ್ಟಿದ್ದು ನಟ ಅನಿರುದ್ಧ ಅವರ ನಿರ್ಗಮನ. ಆ ಬಳಿಕ ಅವರ ಪಾತ್ರಕ್ಕೆ ಹರೀಶ್ ರಾಜ್ ಬಂದರೂ ಹಳೆಯ ಮ್ಯಾಜಿಕ್ ನಡೆಯಲಿಲ್ಲ. ಹೀರೋನಂಥಾ ಪಾತ್ರವೇ ಬದಲಾದಾಗ ಜನ ಅದನ್ನು ಒಪ್ಪಿಕೊಳ್ಳೋದು ಅಷ್ಟು ಸುಲಭ ಅಲ್ಲ. ಆದರೆ ಕೆಲವೊಮ್ಮೆ ಕಥೆ ಸಾಕಷ್ಟು ಪವರ್‌ಫುಲ್ ಆಗಿದ್ದರೆ ಸೀರಿಯಲ್ ಸಕ್ಸಸ್ ಆಗೋದುಂಟು. ಆದರೆ ಜೊತೆ ಜೊತೆಯಲಿ ಸೀರಿಯಲ್ ಟೀಮ್ ಕತೆಯಲ್ಲಿ ಏನೇನೆಲ್ಲ ತಿರುವು ತಂದು ಟಿಆರ್‌ಪಿ ಹೆಚ್ಚಿಸಲು ಪ್ರಯತ್ನಿಸಿದರೂ ಅದು ವರ್ಕೌಟ್(Workout) ಆಗಿಲ್ಲ.
ಅನಿರುದ್ಧ ಜತ್ಕರ್ ಬದಲಿಗೆ ಆ ಪಾತ್ರಕ್ಕೆ ಬಂದ ಹರೀಶ್ ರಾಜು ಅವರನ್ನು ಜನ ಒಪ್ಪಿಕೊಂಡ ಹಾಗಿಲ್ಲ. ಜೊತೆಗೆ ಅವರ ಎಂಟ್ರಿ(Entry)ಯಾದ ಮೇಲೆ ಆ ಪಾತ್ರವೂ ಮೇಲಕ್ಕೇರಲಿಲ್ಲ. ಜೋಶ್ ತರುವಂಥಾ ಅಂಶಗಳೇ ಈ ಪಾತ್ರಕ್ಕೆ ಸಿಗಲಿಲ್ಲ. ವರ್ಧನ್ ಕಂಪನಿಯ ಮುಖ್ಯಸ್ಥ ಆರ್ಯವರ್ಧನ್ ಪಾತ್ರಕ್ಕೆ ಬೇಕಾದ ಠೀವಿಯೇ ಬರಲಿಲ್ಲ.
Ramachari serial ಕಣ್ಣಿಲ್ಲದ ಚಾರುವಿಗೀಗ ಚಾರಿಯೇ ಕಣ್ಣು, ಇದೇ ಪರ್ಮನೆಂಟಾ?
ಟಿಆರ್‌ಪಿ ಕಡಿಮೆ ಆದಮೇಲೆ, ಜನ ಒಪ್ಪಿಕೊಳ್ಳದ ಮೇಲೆ ಆ ಸೀರಿಯಲ್ ಅನಾವಶ್ಯಕ ಹೊರೆಯಾಗುತ್ತೆ. ಚಾನಲ್‌ನವರೇ ಸೀರಿಯಲ್ (Serial) ಮುಕ್ತಾಯಗೊಳಿಸಲು ಸೂಚನೆ ನೀಡುತ್ತಾರೆ. ಅಂಥದ್ದೊಂದು ಸೂಚನೆಯನ್ನ ಸದ್ಯ ಚಾನಲ್‌ನವರು ಈ ಸೀರಿಯಲ್ ಟೀಮ್‌ಗೆ ನೀಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಸದ್ಯಕ್ಕೀಗ ಈ ಸೀರಿಯಲ್‌ನಲ್ಲಿ ಅನುವಿಗೆ ಆರ್ಯವರ್ಧನ್‌ನೇ ಸಂಜು ಅನ್ನೋ ಸತ್ಯ ಗೊತ್ತಾಗಿದೆ. ಆದರೆ ಅವಳು ವಿಶ್ವಾಸ್ ಪತ್ನಿಗೆ ಮಾತುಕೊಟ್ಟಂತೆ ತನ್ನ ಗಂಡನನ್ನು ಅವಳಿಗೆ ಬಿಟ್ಟುಕೊಡಲು ತೀರ್ಮಾನಿಸಿದ್ದಾಳೆ. ಈ ನಡುವೆ ಹುಷಾರು ತಪ್ಪಿದ ಆರ್ಯವರ್ಧನ್ ಒಬ್ಬನನ್ನೇ ಬಿಟ್ಟು ಹೊರಡುತ್ತಾಳೆ.
ಸದ್ಯಕ್ಕೆ ಆರ್ಯವರ್ಧನ್ ಮತ್ತು ಸಂಜು ಒಬ್ಬರೇ ಅನ್ನೋದು ರಿವೀಲ್(Reveal) ಆಗಿದೆ. ಇನ್ನು ಅನು ಆರ್ಯ ಒಂದಾದರೆ ಈ ಸೀರಿಯಲ್‌ಗೆ ಹ್ಯಾಪಿ ಎಂಡಿಂಗ್. ಸದ್ಯಕ್ಕೀಗ ಅನು ಪ್ರೆಗ್ನೆಂಟ್. ಈ ಹಂತದಲ್ಲೂ ಒಂದಲ್ಲ ಒಂದು ನೋವಿಂದ ಒದ್ದಾಡುತ್ತಿರುವ ಅವಳಿಗೆ ಅವಳ ಆರ್ಯ ಸರ್ ಸಿಕ್ಕರೆ ಎಲ್ಲ ನೋವಿಗೂ ಮುಕ್ತಿ. ಸೋ ಸೀರಿಯಲ್ ಶೀಘ್ರದಲ್ಲೇ ಮುಗಿಯಲಿದೆ ಅನ್ನೋದಕ್ಕೆ ಈ ಸ್ಟೋರಿಲೈನ್ ಸಹ ಪೂರಕವಾಗಿ ಸಾಗುತ್ತಿದೆ.
ಸೆಟ್ಟಲ್ಲೇ ಮೀಟ್ ಅಗಿ ಲವಲ್ಲಿ ಬಿದ್ದ ಖ್ಯಾತ ಜೋಡಿಗಳು: ಸೀ'ರಿಯಲ್' ಲವ್ ಸ್ಟೋರಿ