ಮದುವೆ ಆಗಲು ಮನಸ್ಸು ಮಾಡಿದ್ದೀನಿ, ಮುಂದಿನ ವರ್ಷವೇ ಮದುವೆ ಅಂದ್ರು ಅನುಶ್ರೀ, ಮದುವೆ ಗಂಡು ಇವ್ರೇನಾ?
ದೇಶವೇ ಬಯಸೋ ಉತ್ತರ ಅನುಶ್ರೀ ಯಾವಾಗ ಮದ್ವೆ ಆಗ್ತಾರೆ ಅನ್ನೋದು. ಇಲ್ಲೀವರೆಗೆ ನೋಡಾಣ ಅಂತಿದ್ದ ಅನುಶ್ರೀ ಈಗ ಮದುವೆ ಆಗ್ತೀನಿ ಅಂತಿದ್ದಾರೆ. ಮದುವೆ ಗಂಡು ಇವ್ರೇನಾ?
ಆಂಕರ್ ಅನುಶ್ರೀ ಫೈನಲೀ ಫೈನಲೀ. 'ನಾನು ಮದ್ವೆ ಆಗ್ತಿದ್ದೀನಿ' ಅಂತ ಘೋಷಿಸಿಬಿಟ್ಟಿದ್ದಾರೆ. ಅದು ಜೀ ಕನ್ನಡ ಅವಾರ್ಡ್ ಫಂಕ್ಷನ್‌ನಲ್ಲಿ. ಅದಕ್ಕೂ ಮೊದಲು ಅನುಶ್ರೀ ಅವರ ಮುಖದಲ್ಲಿ ಆತಂಕ, ಭಯ ಎಲ್ಲ ಕಾಣಿಸಿಕೊಂಡಿತ್ತು. ಅದ್ಯಾಕೆ ಅಂದರೆ ಆಕೆ ಮದುವೆ ಆಗೋ ಹುಡುಗನನ್ನು ಇಡೀ ಜನರ ಮುಂದೆ ತಂದು ನಿಲ್ಲಿಸಲು ಜೀ ಕನ್ನಡ ಹಾಗೂ ನಿರೂಪಕ ಅಕುಲ್ ಬಾಲಾಜಿ ಮುಂದಾಗಿದ್ರು. ತಂದು ನಿಲ್ಲಿಸಿಯೇ ಬಿಡ್ತಾರೇನೋ ಅನ್ನೋ ಭಯದಲ್ಲಿ ಉಗುಳು ನುಂಗಿಕೊಂಡು ಅನುಶ್ರಿ ಕಾಯ್ತಿದ್ರು. ಅಕುಲ್ ಅನೌನ್ಸ್‌ಮೆಂಟ್ ಕೇಳಿ ಅಲ್ಲಿ ನೆರೆದಿದ್ದ ಜನರೂ ಆ ಹುಡುಗ ಯಾರಿರಬಹುದು ಅಂತ ಬಹಳ ಕಾತರ, ಕೌತುಕದಿಂದ ಎದೆ ಮುಚ್ಚದೆ ಕಾಯುತ್ತಿದ್ದರು.
ಕಾಯದೇ ಮತ್ತೇನು ಮಾಡ್ತಾರೆ. ಅನುಶ್ರೀ ಆಂಕರಿಂದ ಫೀಲ್ಡ್‌ಗೆ ಬಂದು ಸಾಕಷ್ಟು ಕಾಲವಾಯ್ತು. ಈಗೀಗ ಹಲವಾರು ಮಂದಿ ಯುವಕ, ಯುವತಿಯರು ನಾನು ಚಿಕ್ಕವನಿದ್ದಾಗಿಂದಲೂ, ಚಿಕ್ಕವಳಿದ್ದಾಗಿಂದಲೂ ನಿಮ್ಮ ಆಂಕರ್ ನೋಡ್ತಿದ್ದೀನಿ ಅಂತೆಲ್ಲ ಯಾವ್ಯಾವುದೋ ವೇದಿಕೆಯಲ್ಲಿ ಡೈಲಾಗ್ ಹೊಡೀತಾರೆ. ಆದರೆ ಆಗೆಲ್ಲ ಅನುಶ್ರೀ ಹಾಗಿದ್ರೆ ನಾನು ಈ ಫೀಲ್ಡಿಗೆ ಬಂದು ಐವತ್ತಕ್ಕೂ ಹೆಚ್ಚು ವರ್ಷಗಳಾಯ್ತಾ ಅಂತ ವಾಪಾಸ್ ಕಾಲೆಳೆಯುತ್ತಾರೆ. ಅಲ್ಲದೆ ಕನ್ನಡದ ಸ್ಟಾರ್ ನಿರೂಪಕಿ ಆಂಕರ್ ಅನುಶ್ರೀ ಅವರನ್ನು ಯೂಟ್ಯೂಬರ್‌ಗಳು ಈಗಾಗಲೇ ಸಾಕಷ್ಟು ಬಾರಿ ಮದುವೆ ಮಾಡಿಸಿದ್ದಾರೆ. ಅವರು, ಇವರು ಎಂದೆಲ್ಲ ಬಗೆಬಗೆ ಫೋಟೋಗಳನ್ನು ಹಾಕಿ, ಕೊನೆಗೂ ಅನುಶ್ರೀ ಮದುವೆ ಆದರು ಎಂದೆಲ್ಲ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಈ ವದಂತಿಗಳು ಅನುಶ್ರೀ ಗಮನಕ್ಕೂ ಬಂದಿವೆ. ಅವುಗಳನ್ನು ನೋಡಿ ನಕ್ಕು ಸುಮ್ಮನಾಗುತ್ತಿದ್ದಾರೆ. ಇತ್ತ ತಮ್ಮದೇ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗಲೂ ಇದೇ ಮದುವೆ ಬಗ್ಗೆಯೇ ಚರ್ಚೆ ನಡೆದ ಉದಾಹರಣೆಗಳಿವೆ. ಈಗ ಇದೇ ವಿಚಾರದ ಬಗ್ಗೆ ಅನುಶ್ರೀ ಕೊನೆಗೂ ಮೌನ ಮುರಿದಿದ್ದಾರೆ.
ಸೋಲು ಕನಸಲ್ಲಿ ಇರಲಿ, ಗೆಲುವು ಮನಸಲ್ಲಿ ಇರಲಿ ಎನ್ನುತ್ತಾ ಹೂನಗು ಚೆಲ್ಲಿದ ನಿರೂಪಕಿ ಅನುಶ್ರೀ
ಜೀ ಕುಟುಂಬ ಅವಾರ್ಡ್ ಫಂಕ್ಷನ್‌ನಲ್ಲಿ ಅಕುಲ್ ಬಾಲಾಜಿ ಅನುಶ್ರೀ ಮದುವೆ ವಿಚಾರ ತೆಗೆದಿದ್ದಾರೆ. 'ಇಡೀ ಭಾರತ ಅನುಶ್ರೀ ಮದುವೆ ಯಾವಾಗ ಅಂತ ತಿಳಿಯಲು ತುದಿಗಾಲಲ್ಲಿ ನಿಂತಿದೆ. ಅವರೆಲ್ಲರ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ತಾ ಇದೆ. ಆಂಕರ್ ಅನುಶ್ರೀ ಕೊನೆಗೂ ಮದುವೆ ಆಗ್ತೀನಿ ಅಂದಿದ್ದಾರೆ. ಆ ಹುಡುಗ ಯಾರು ಅಂತ ಎಲ್ಲರಿಗೂ ಗೊತ್ತು. ಈಗ ಅವರನ್ನು ನಿಮ್ಮ ಮುಂದೆ ತೋರಿಸ್ತೀವಿ' ಅಂದಿದ್ದಾರೆ. ಅನುಶ್ರೀ ಆಗ ಇಲ್ಲೇನಾದ್ರೂ ಚಾಕು ಇದ್ಯಾ ಅಂತ ಅಕುಲ್ ಕಾಲೆಳೆದಿದ್ದಾರೆ. ಆಗ ಅಕುಲ್ 'ಆ ಹುಡುಗನ್ನ ಈಗ ನಿಮ್ಮೆದುರು ತಂದು ನಿಲ್ಲಿಸ್ತೀವಿ ಅನ್ನುತ್ತಲೇ ಅನುಶ್ರೀ ಮದುವೆ ಆಗೋ ಹುಡುಗನ ಚಿತ್ರ ಈಗ ಬಿಗ್‌ಸ್ಕ್ರೀನ್ ಮೇಲೆ ಬರ್ತಾ ಇದೆ' ಎಂದಾಗ ಅನುಶ್ರೀ ಮುಖ ಸೀರಿಯಸ್ ಆಗಿದೆ. ಅವರು ಗಾಬರಿಯಿಂದ ಸ್ಕ್ರೀನ್‌ನತ್ತ ನೋಡಿದ್ದಾರೆ. ಆದರೆ ಅಲ್ಲಿ ಯಾವ ಹುಡುಗನ ಚಿತ್ರವೂ ಬರಲಿಲ್ಲ.
ಅಕುಲ್ ಹುಡುಗನನ್ನು ಸ್ಕ್ರೀನ್ ಮೇಲೆ ತೋರಿಸ್ತಾರೆ ಅಂತ ಕಾದಿದ್ದ ಜನಕ್ಕೆ ತೀವ್ರ ನಿರಾಸೆಯಾಯ್ತು. ಅನುಶ್ರೀ ಅವರ ಖಾಸಗಿತನಕ್ಕೆ ಗೌರವ ನೀಡಿ ಅವರ ಹುಡುಗನ ಫೋಟೋ ಹಾಕಿಲ್ಲ ಅಂದರು.
ಆದರೆ ಅನುಶ್ರೀ, ಮದುವೆ ವಿಚಾರದಲ್ಲಿ, ಎಲ್ಲ ಹುಡುಗೀರಿಗೆ ಇರೋ ಹಾಗೇ ನನಗೂ ಆಸೆಗಳಿವೆ. ನನಗೂ ಜೀವನದಲ್ಲಿ ಬಾಳ ಸಂಗಾತಿ ಬರಬೇಕು ಅನ್ನೋ ಆಸೆ ಇದೆ. ಆದರೆ, ಎಲ್ಲದಕ್ಕೂ ತನ್ನದೇ ಆದ ಟೈಮ್ ಇರುತ್ತದೆ. ಅದರದೇ ಆದ ಗಳಿಗೆ ಇರುತ್ತೆ. ಸರಿಯಾದ ಸಮಯದಲ್ಲಿ, ಸರಿಯಾದ ವ್ಯಕ್ತಿ ಬರಬೇಕಾಗುತ್ತೆ. ಫಾರ್ ದಿ ಫಸ್ಟ್ ಟೈಮ್ ನಾನು ಮದುವೆ ಆಗಲು ಮನಸು ಮಾಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಮನಸು ಮಾಡಬೇಕಾಗುತ್ತೆ, ಈಗ ನಾನು ಮನಸು ಮಾಡಿದ್ದೇನೆ. ಮುಂದಿನ ವರ್ಷವೇ ನಾನು ಮದುವೆ ಆಗಲಿದ್ದೇನೆ. ಆ ಸರದಾರ ನನ್ನ ಬದುಕಲ್ಲಿ ಬರಲಿ, ಅವನನ್ನು ಪರಿಚಯಿಸಿಕೊಡುವಂತಹ ಅವಕಾಶ ಸಿಗಲಿ ಎಂದು ನಾನು ಕಾಯ್ತಿದ್ದೀನಿ" ಎಂದಿದ್ದಾರೆ.
ಝೀ ಸ್ಟೈಲ್ ಐಕಾನ್ ಪ್ರಶಸ್ತಿ ಪಡೆದ ಬ್ರಹ್ಮಗಂಟು ಸಂಜನಾ… ವೈದ್ಯೆಯಾಗಿರುವ ಇವರು ರಿಯಲ್ ಲೈಫಲ್ಲೂ ಸಖತ್ ಸ್ಟೈಲಿಶ್
ಈಗ ಅನುಶ್ರೀ ಕೈ ಹಿಡಿಯುವ ಹುಡುಗನ ಬಗ್ಗೆ ಏನೇನೋ ಚರ್ಚೆಗಳು ನಡೆಯುತ್ತಿವೆ. ಹೆಚ್ಚಿನವರು ಅನುಶ್ರೀ ಹಾಗೂ ರಾಜ್ ಬಿ ಶೆಟ್ಟಿ ಮದುವೆ ಆಗಬಹುದು ಅಂತ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಎಷ್ಟೋ ಕಡೆ ಅನುಶ್ರೀ ಅವರೇ, ನನಗೆ ಬಹಳ ಇಷ್ಟವಾದ ವ್ಯಕ್ತಿ ರಾಜ್ ಬಿ ಶೆಟ್ಟಿ ಅಂತಿದ್ದಿದ್ದರು. ಸೋ, ಗೆಸ್ ಲಿಸ್ಟ್ ನಲ್ಲಿ ಫಸ್ಟ್ ಹೆಸರು ಅವರದ್ದಿದ್ದೆ. ಇದಕ್ಕೆ ಸರಿಯಾದ ಉತ್ತರ ಅನುಶ್ರೀ ಶೀಘ್ರ ನೀಡಲಿದ್ದಾರೆ ಅಂತ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.