ಕಾಯಾ ವಾಚಾಮನಸಾ ನಾತಿಚರಾಮಿ; ರಾಮಾಚಾರಿ ಹೇಳಿದ್ದೇನು?
'ಕಾಯಾ, ವಾಚಾ, ಮನಸಾ ನಾತಿ ಚರಾಮಿ ಅಂತ ಪ್ರಕೃತಿ ಸಾಕ್ಷಿಯಾಗಿ ಮದುವೆಯಾಗಿರುವಾಗ ಆ ಹೆಣ್ಣನ್ನು ಹೇಗೆ ಬಿಡ್ತೀಯಾ' ಎಂದು ರಾಮಾಚಾರಿಯ ಆತ್ಮಸಾಕ್ಷಿ ಕುಟುಕುತ್ತದೆ. ಈ ನಾತಿಚರಾಮಿ ಎಂದರೇನು, ಈ ಬಗ್ಗೆ ರಾಮಾಚಾರಿ ಹೇಳಿದ್ದೇನು?
ರಾಮಾಚಾರಿ ಧಾರಾವಾಹಿಯ ಜೂನ್ 2ರ ಎಪಿಸೋಡ್‌ನಲ್ಲೊಂದು ಮಾತಿದೆ- 'ಕಾಯಾ, ವಾಚಾ, ಮನಸಾ ನಾತಿ ಚರಾಮಿ ಅಂತ ಪ್ರಕೃತಿ ಸಾಕ್ಷಿಯಾಗಿ ಮದುವೆಯಾಗಿರುವಾಗ ಆ ಹೆಣ್ಣನ್ನು ಹೇಗೆ ಬಿಡ್ತೀಯಾ' ಎಂದು ರಾಮಾಚಾರಿಯ ಆತ್ಮಸಾಕ್ಷಿ ಕುಟುಕುತ್ತದೆ. ಯಾರು ಒಪ್ಪಲಿ, ಬಿಡಲಿ- ಚಾರುನೇ ನನ್ನ ಹೆಂಡತಿ ಎಂದು ಹೇಳಿಕೊಳ್ತಾನೆ ರಾಮಾಚಾರಿ.
ಈ ಕಾಯಾ ವಾಚಾಮನಸಾ ನಾತಿಚರಾಮಿ ಎಂದೋ ಅಥವಾ 'ಧರ್ಮೇಚ ಅರ್ಥೇಚ ಕಾಮೇಚ ಮೋಕ್ಷೇಚ ಅಹಮೇವಮ್ ನಾತಿಚರಾಮಿ' ಎಂದು ಮದುವೆಯಲ್ಲಿ ಹೇಳುವ ಈ ಮಾತಿನ ಅರ್ಥವೇನು, ಪ್ರಾಮುಖ್ಯತೆ ಏನು ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಈ ಮಾತನ್ನು ವರನು ವಧುವಿಗೆ ವಾಗ್ದಾನವಾಗಿ ಹೇಳುತ್ತಾನೆ. ಆದರೆ, ಆತನಿಗಾದರೂ ಅದರ ಸಂಪೂರ್ಣ ಅರ್ಥ ತಿಳಿದಿರುತ್ತದೆಯೇ ಎಂಬುದು ಅನುಮಾನವೇ ಸರಿ. ಏಕೆಂದರೆ, ಮಂತ್ರಗಳು ಸಂಸ್ಕೃತದಲ್ಲಿರುತ್ತವೆ. ಪುರೋಹಿತರು ಹೇಳಿಕೊಟ್ಟಿದ್ದನ್ನು ಗಿಣಿಪಾಠದಂತೆ ಹೇಳುವವರೇ ಹಲವರು. ಹಾಗಾಗಿ, ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕೆಂಬ ನೈತಿಕ ಪ್ರಜ್ಞಯೂ ಅವರನ್ನು ಕಾಡುವುದಿಲ್ಲ. ಆದರೆ, ಅರ್ಥ ತಿಳಿದು ಹೇಳಿದಾಗ, ಆ ಮಾತಿಗೆ ಬಹಳಷ್ಟು ಮಹತ್ವ ಬರುತ್ತದೆ.
ಈ ನಿಟ್ಟಿನಲ್ಲಿ ಧರ್ಮೇಚ ಅರ್ಥೇಚ ಕಾಮೇಚ ಮೋಕ್ಷೇಚ ಅಹಮೇವಮ್ ನಾತಿಚರಾಮಿ ಎಂಬ ವಾಗ್ದಾನದ ಅರ್ಥವೇನೆಂದು ನೋಡೋಣ.
ವಿದ್ಯಾರ್ಥಿಗಳ ಆಹಾರ ಎಂಥದಿರಬೇಕು? Bhagavadgita ಏನನ್ನುತ್ತೆ ಕೇಳಿ..
ಧರ್ಮ = ಕರ್ತವ್ಯಗಳು; ಜವಾಬ್ದಾರಿಗಳು
ಅರ್ಥ = ಸಂಪತ್ತು; ಸಮೃದ್ಧಿ
ಕಾಮ = ಬಯಕೆಗಳು
ಮೋಕ್ಷ = ವಿಮೋಚನೆ; ಸ್ವಾತಂತ್ರ್ಯ (ಜೀವನ ಮತ್ತು ಸಾವಿನ ಬಂಧನದಿಂದ)
ಚ = ಮತ್ತು; ಸಹ…
ಅಹಂ+ಏವಂ = ಹೀಗೆ ಮಾಡುತ್ತೇನೆ...
ನ + ಅತಿ + ಚರಾಮಿ = ಆಚೆಗೆ ಚಲಿಸುವುದಿಲ್ಲ, ಅತಿಕ್ರಮಿಸುವುದಿಲ್ಲ
https://www.facebook.com/watch/?v=782748696643886
ಪೂರ್ಣ ಅರ್ಥ:
ನನ್ನ ಕರ್ತವ್ಯಗಳ ನಡವಳಿಕೆಯಲ್ಲಿ, ಸಂಪತ್ತು ಮತ್ತು ಸಮೃದ್ಧಿಯ ಸ್ವಾಧೀನದಲ್ಲಿ, ನನ್ನ ಆಸೆಗಳನ್ನು ಪೂರೈಸುವಲ್ಲಿ ಮತ್ತು ನನ್ನ ವಿಮೋಚನೆಯ ಅನ್ವೇಷಣೆಯಲ್ಲಿಯೂ ಸಹ, ನಾನು ನಿನ್ನ ಮಾತನ್ನು ಉಲ್ಲಂಘಿಸುವುದಿಲ್ಲ.
ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಧರ್ಮದ ವಿಷಯದಲ್ಲಿ, ಹಣ ಗಳಿಸುವ ವಿಷಯದಲ್ಲಿ, ಸಂಭೋಗಾದಿ ವಿಷಯದಲ್ಲಿ ನಿನ್ನ ಒಪ್ಪಿಗೆ ಇಲ್ಲದೆ ಕಾರ್ಯ ಪ್ರವೃತ್ತವಾಗುವುದಿಲ್ಲ ಎಂದರ್ಥ.
ತಾನು ಮದುವೆಯಾಗುವ ವಧುವಿಗೆ ವರನು ನಂಬಿಕಸ್ಥನಾಗಿ ಉಳಿಯುತ್ತೇನೆಂದು ನೀಡುವ ವಾಗ್ದಾನ ಇದಾಗಿದೆ.
ನಿಮ್ಮ ಮಕ್ಕಳು ಶಾಲೇಲಿ ಪಾಠ ಮಾಡ್ತಾ ನಿದ್ರೆ ಮಾಡ್ತಾರಾ? ಈ ಗ್ರಹ ದೋಷವಿರಬಹುದು!
ಧರ್ಮ, ಅರ್ಥ, ಕಾಮ, ಮೋಕ್ಷವೆಂಬುದು ನಾಲ್ಕು ಪುರುಷಾರ್ಥಗಳಾಗಿವೆ. ಆದರೆ, ಇವುಗಳ ಸಾಧನೆಯಲ್ಲಿ ನಾನು ನಿನ್ನನ್ನು ಬಿಡುವುದಿಲ್ಲ. ಎಲ್ಲವನ್ನೂ ಸಂಭಾಳಿಸುತ್ತೇನೆ ಎಂದು ಪತ್ನಿಯಾಗುವವಳಿಗೆ ವರ ಹೇಳುವ ಮಾತು ಈ ಮಂತ್ರ.
ಇನ್ನು ಕಾಯಾ ವಾಚಾ ಮನಸಾ ನಾತಿಚರಾಮಿ ಎಂದರೆ- ದೈಹಿಕವಾಗಿ, ಮಾನಸಿಕವಾಗಿ, ಮಾತಿನಲ್ಲಿ ಕೂಡಾ ಅತಿಕ್ರಮಿಸುವುದಿಲ್ಲ, ಮಿತಿ ಮೀರುವುದಿಲ್ಲ ಎಂದು ಕೊಡುವ ವಚನವಾಗಿದೆ.