ಓ ಮೈ ಗಾಡ್..! 'ಗೀತಾ' ನಟಿಯ ಮೈ ಮೇಲೆ ಹೆಬ್ಬಾವು ನೋಡಿ ಹೌಹಾರಿದ ಫ್ಯಾನ್ಸ್
ಓ ಮೈ ಗಾಡ್..! 'ಗೀತಾ' ನಟಿಯ ಮೈ ಮೇಲೆ ಹೆಬ್ಬಾವು ನೋಡಿ ಅಭಿಮಾನಿಗಳು ಹೌಹಾರಿದ್ದಾರೆ. ವಿಯಾಟ್ನಂ ಪ್ರವಾಸದಲ್ಲಿರುವ ನಟಿ ಶರ್ಮಿತಾ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕನ್ನಡ ಕಿರುತೆರೆಯ ಖ್ಯಾತ ನಟಿ ಶರ್ಮಿತಾ ಗೌಡ ಸದ್ಯ ಗೀತಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗೀತಾ ಧಾರಾವಾಹಿಯಲ್ಲಿ ಬಾನುಮತಿಯಾಗಿ ಶರ್ಮಿತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಖತ್ ಸ್ಟೈಲಿಶ್ ಖಳನಟಿಯಾಗಿರುವ ಶರ್ಮಿತಾ ಗೌಡ ಆಗಾಗ ಪ್ರವಾಸ, ಟ್ರಿಪ್ ಅಂತ ಎಂಜಾಯ್ ಮಾಡುತ್ತಿರುತ್ತಾರೆ.
ಧಾರಾವಾಹಿಯಲ್ಲಿ ನೋಡುವ ಶರ್ಮಿತಾಗು ನಿಜ ಜೀವನದ ಶರ್ಮಿತಾಗೂ ತುಂಬಾ ವ್ಯತ್ಯಾಸವಿದೆ.
ಸೀರಿಯಲ್‌ನಲ್ಲಿ ಸೀರೆಯಲ್ಲಿ ಕಾಣಿಸಿಕೊಳ್ಳುವ ನಟಿ ನಿಜ ಜೀವನದಲ್ಲಿ ಬಿಕಿನಿ ಧರಿಸಿ ಮಿಂಚುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಅಕ್ಟೀವ್ ಆಗಿರುವ ನಟಿ ಶರ್ಮಿತಾ ಸಿಕ್ಕಾಪಟ್ಟೆ ಹಾಟ್ ಪೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಇದೀಗ ನಟಿ ಶರ್ಮಿತಾ ವಿಯಾಟ್ನಂ ಪ್ರವಾಸದಲ್ಲಿದ್ದಾರೆ. ಶೂಟಿಂಗ್ ನಿಂದ ಬ್ರೇಕ್ ಪಡೆದು ವಿಯಾಟ್ನಂಗೆ ಹಾರಿದ್ದಾರೆ. ವಿಯಾಟ್ನಂನಿಂದ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಶರ್ಮಿತಾ ಶೇರ್ ಮಾಡಿರುವ ಪೋಟೋಗಳಲ್ಲಿ ಮೈ ಮೇಲೆ ಹೆಬ್ಬಾವು ಹಾಕಿಕೊಂಡಿದ್ದಾರೆ. ಹೆಬ್ಬಾವಿನ ಜೊತೆ ಇರುವ ಶರ್ಮಿತಾ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಕುತ್ತಿಗೆಯಿಂದ ದೊಡ್ಡದಾದ ಹೆಬ್ಬಾವನ್ನು ನೇತು ಹಾಕಿಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ಶರ್ಮಿತಾ ಫೋಟೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಯೊಬ್ಬ ಕಾಮೆಂಟ್ ಮಾಡಿ, ನಿಮ್ಮನ್ನ ನೋಡಿದ್ರೆ ಎಂಥ ಹಾವಾದರೂ ಮೈ ಮರೆಯುತ್ತೆ ಎಂದಿದ್ದಾರೆ. ಇನ್ನು ಕೆಲವರು ಗ್ರೇಟ್ ಎಂದು ಹೇಳುತ್ತಿದ್ದಾರೆ.
ಶರ್ಮಿತಾ ಗೀತಾ ಧಾರಾವಾಹಿಯಲ್ಲಿ ನಾಯಕ ವಿಜಯ್ ಮಲತಾಯಿ ಬಾನುಮತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೀತಾ ಮತ್ತು ವಿಜಯ್‌ನನ್ನು ದೂರ ಮಾಡಲು ಹರಸಾಹಸ ಪಡುತ್ತಿದ್ದಾಳೆ ಬಾನುಮತಿ.
ನಟಿ ಶರ್ಮಿತಾ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನೆಗೆಟಿವ್ ಪಾತ್ರಗಳ ಮೂಲಕವೇ ಖ್ಯಾತಿಗಳಿಸಿರುವ ಶರ್ಮಿತಾ 'ಮನೆಯೇ ಮಂತ್ರಾಲಯ', 'ನೀಲಾ', 'ಯಾರಿವಳು' ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಸದ್ಯ ಕನ್ನಡದ 'ಗೀತಾ' ಧಾರಾವಾಹಿ ಜೊತೆಗೆ ತೆಲುಗಿನ 'ಬ್ರಹ್ಮ ಮುಡಿ' ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ.