ಲೇಯ್, ಅಮೃತಧಾರೆ ಬಿಲಿಯನೇರ್ ಗೌತಮ್ ದಿವಾನ್ ಮನೆಗೆ ಯುಪಿಎಸ್‌ ಹಾಕಿಸ್ರೋ.. ನೆಟ್ಟಿಗರ ಟಾಂಗ್

ಅಮೃತಧಾರೆಯ ಗೌತಮ್‌ ದಿವಾನ್ ಬಿಲಿಯನೇರ್. ಆದರೂ ಮನೇಲಿ ಯುಪಿಎಸ್‌ ಇಲ್ವಾ? ಇವ್ರ ಮನೇಲಿ ಪದೇ ಪದೇ ಕರೆಂಟ್‌ ಹೋಗೋದು ಅಂದ್ರೇನ್? ಅಂತ ಆವಾಜ್ ಹಾಕ್ತಿದ್ದಾರೆ ನೆಟ್ಟಿಜನ್ಸ್.

 

amruthadhare serial updates bhoomika goes mothers home for ashada gautham alone bni

ಕೆಲವೊಮ್ಮೆ ಕೆಲವೊಂದು ಸೀರಿಯಲ್‌ಗಳ ಕಥೆಯಲ್ಲಿ ಏನೋ ಹೇಳಲು ಹೋಗಿ ಸೀರಿಯಲ್ ಟೀಮ್‌ ಯಡವಟ್ಟು ಮಾಡ್ಕೊಳ್ಳೋದಿದೆ. ಆದರೆ ಈಗಿನ ವೀಕ್ಷಕರೋ ಬಲೇ ಐನಾತಿ ನನ್‌ಮಕ್ಳು. ಒಂಚೂರು ಎಡವಟ್ಟಾದ್ರೂ ಲಬಕ್ಕನೆ ಹಿಡ್ಕೊಂಡು ಬಿಡ್ತಾರೆ. ಈ ಹಿಂದೆ ಜನಪ್ರಿಯ ನಿರ್ದೇಶಕ ರಾಮ್‌ಜಿ 'ರಾಮಾಚಾರಿ' ಸೀರಿಯಲ್‌ನಲ್ಲಿ ವಿಎಫ್‌ಎಕ್ಸ್‌ ಮಾಡಲು ಹೋಗಿ ಇವರ ಕೈಯಿಂದ ಅನ್ನಿಸಿಕೊಳ್ಳಬಾರದ್ದೆಲ್ಲ ಅನಿಸಿಕೊಳ್ಳಬೇಕಾಯ್ತು. ಸೋ ಈಗಿನ ಈ ಡಿಜಿಟಲ್‌ ಯುಗದಲ್ಲಿ ಯಾವ ಲೆವೆಲ್‌ಗೆ ಸೂಕ್ಷ್ಮ ಇದ್ದರೂ ಸಾಲದು. ಸದ್ಯಕ್ಕೆ 'ಅಮೃತಧಾರೆ' ಸೀರಿಯಲ್‌ ಟೀಮ್‌ ಮತ್ತೆ ಮತ್ತೆ ಕರೆಂಟ್‌ ಕಾರಣಕ್ಕೆ ವೀಕ್ಷಕರ ಕೈಲಿ ತಗಲಾಕ್ಕೊಳ್ತಿದೆ.

ಒಂದು ಕಾಮನ್‌ ಸೆನ್ಸ್‌. ಇವತ್ತು ಶ್ರೀಮಂತರು ಬಿಡಿ, ಮಧ್ಯಮ ವರ್ಗದ ಮನೆಗಳಲ್ಲೂ ಯುಪಿಎಸ್‌ ಇದ್ದೇ ಇರುತ್ತೆ. ಹಾಗಿರುವಾಗ ಬಿಲಿಯನೇರ್ ಗೌತಮ್‌ ದಿವಾನ್ ಮನೆಯಲ್ಲಿ ಇರಲ್ವಾ? ಕರ್ನಾಟಕದ ಅಂಬಾನಿ ಲೆವೆಲ್‌ಗೆ ಬಿಲ್ಡಪ್‌ ತಗೊಳ್ಳೋ ಈ ಬ್ಯುಸಿನೆಸ್‌ಮ್ಯಾನ್ ರಾತ್ರಿ ಕರೆಂಟ್ ಹೋಯ್ತು ಅಂತ ಒದ್ದಾಡೋದು ಅಂದ್ರೆ ಅದರಲ್ಲೊಂದು ಲಾಜಿಕ್ ಇದೆಯಾ?

 ಕನ್ನಡದ ಕಿನ್ನರಿ ಯುರೋಪ್ ಕಾಡಲ್ಲಿ ಪತ್ತೆ; ಬೆಟ್ಟಗುಡ್ಡ ಸುತ್ತಾಡಿ ಕಿವೀಲಿ ಹೂಮುಡಿದ ಬಂದ ಭೂಮಿ ಶೆಟ್ಟಿ!

ಹಾಗಂತ ಇದು ಮೊದಲನೇ ಸಲ ಅಲ್ಲ. ಈ ಹಿಂದೆಯೂ ಸಾಕಷ್ಟು ಸಲ ಈ ಸೀರಿಯಲ್‌ ವೀಕ್ಷಕರು ಗಿಣಿ ಪಾಠ ಮಾಡಿದಂತೆ ಹೇಳಿದ್ರು. ಲೇಯ್ ಅದು ಗೌತಮ್ ದಿವಾನ್ ಮನೆ ಕಣ್ರಣ್ಣಾ, ಅಲ್ಲೊಂದು ಯುಪಿಎಸ್‌ ಇಲ್ಲ ಅಂದರೆ ಹೇಗೆ ಅಂತ. ಆದರೆ ಕೋಟಿ ಗಟ್ಟಲೆ ಮನೆ ತೋರಿಸೋ ಟೀಮ್‌ಗೆ (team) ಆ ಮನೆಗೊಂದು ಯುಪಿಎಸ್‌ ಹಾಕಿಸೋ ಐಡಿಯಾ ಬಂದ ಹಾಗಿಲ್ಲ. ಇಲ್ಲಿ ಮತ್ತೆ ಮತ್ತೆ ಕರೆಂಟ್ ಹೋಗೋ ಸೀನ್‌ ಬರುತ್ತಲೇ ಇದೆ. ಈ ಕಾರಣಕ್ಕೆ ವೀಕ್ಷಕರ ಕೆಂಗಣ್ಣಿಗೂ ಗುರಿಯಾಗುತ್ತಿದೆ.

ಅಂದಹಾಗೆ ಅಮೃತಧಾರೆ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಹಲವರ ಮೆಚ್ಚಿನ ಸೀರಿಯಲ್‌. ಈ ಸೀರಿಯಲ್‌ನಲ್ಲಿ ಸದ್ಯಕ್ಕೆ ವಿರಹ ವೇದನೆ ತಾರಕಕ್ಕೆ ಏರಿದೆ. ಇದಕ್ಕೆ ಕಾರಣ ಆಷಾಡ. ಭೂಮಿಕಾಳನ್ನು ಆಷಾಢಕ್ಕೆ ತವರು ಮನೆಗೆ ಗೌತಮ್‌ ಕರೆ ತರುತ್ತಾನೆ. ಆದರೆ, ಭೂಮಿಕಾಳಿಗೆ ಮನಸ್ಸೇ ಇರುವುದಿಲ್ಲ. ಅವರೇ ಕಾಳು ಉಪ್ಪಿಟ್ಟು ಸಿಗುತ್ತೆ ಎಂದು ಅತ್ತೆ ಮನೆಗೆ ಬಂದೆ ಎಂದು ಗೌತಮ್‌ ಹೇಳುತ್ತಾರೆ. ನನ್ನನ್ನು ಬಿಡಲು ಬಂದಿಲ್ಲ, ಉಪ್ಪಿಟ್ಟು ತಿನ್ನಲು ಬಂದಿದ್ದಾರೆ ಎಂದುಕೊಳ್ಳುತ್ತಾಳೆ ಭೂಮಿಕಾ. ಚೆನ್ನಾಗಿ ತಿಂದು ವಾಪಸ್‌ ಹೊರಡುತ್ತಾರೆ. ಭೂಮಿಕಾಳಿಗೆ ಗೌತಮ್‌ನನ್ನು ಹಗ್‌ ಮಾಡಬೇಕು ಎನಿಸುತ್ತದೆ. ಐ ಮಿಸ್‌ ಯು ಎನ್ನುತ್ತಾಳೆ. ಮಿಸ್‌ ಯೂ ಟೂ (miss you too) ಎನ್ನುತ್ತಾರೆ ಗೌತಮ್‌. ಖುಷಿ ಖುಷಿಯಾಗಿ ಕಳುಹಿಸಿ ಕೊಡಿ ಎಂದು ಹೇಳಿ ಗೌತಮ್‌ ಹೊರಡುತ್ತಾರೆ.

ಅಬ್ಬಬ್ಬಾ ಸೀರಿಯಲ್​ ಮಹಿಮೆಯೆ? ಮೊದಲ ಎಪಿಸೋಡ್​ಗೆ 5 ಸಾವಿರ ಮುಗಿಯುವಾಗ ದಿನಕ್ಕೆ ಎರಡೂವರೆ ಲಕ್ಷ ಸಂಬಳ!

ಹಾಗಿದ್ರೆ ಹೆಂಡ್ತಿ ತವರಿಗೆ ಹೋದ್ರೆ ಗೌತಮ್‌ಗೆ ಬೇಜಾರಿಲ್ವಾ ಅನ್ನೋ ಪ್ರಶ್ನೆ ಬರುತ್ತೆ. ಕೆಲವೊಂದು ಸನ್ನಿವೇಶ ಹಾಗೇ ಇರುತ್ತೆ. ಮನೆಯಿಂದ ಕಳಿಸಿಕೊಡಬೇಕು ಅನ್ನುವಾಗ ಏನೂ ಅನಿಸೋದಿಲ್ಲ. ಆದರೆ ಅವರು ಹೋದ ಮೇಲೆ ಮನೆಯಲ್ಲಿ ಆವರಿಸೋ ಖಾಲಿತನ ಇದೆಯಲ್ಲಾ ಇದು ಕಾಡೋದು ಅಷ್ಟಿಷ್ಟಲ್ಲ. ಅದು ಹೇಗಿರುತ್ತೆ ಅಂತ ಇಲ್ಲಿ ಭೂಮಿ ಹೋದಮೇಲೆ ಗೌತಮ್‌ ದಿವಾನ್‌ ಗಮನಕ್ಕೆ ಬಂದಿದೆ. ಸೋ ಇಂಥಾ ಸೂಕ್ಷ್ಮ ಟ್ರೀಟ್‌ಮೆಂಟ್‌ಗಳಲ್ಲೆಲ್ಲ ಟೀಮ್‌ ಚೆನ್ನಾಗಿಯೇ ಕೆಲಸ ಮಾಡಿದೆ. ಆದರೆ ಸ್ಕ್ರಿಪ್ಟ್‌ ರೈಟರ್‌ ಮನೆಯಲ್ಲಿ ಕರೆಂಟ್‌ ಪ್ರಾಬ್ಲೆಮ್ಮೋ ಏನೋ, ಈ ಸೀರಿಯಲ್‌ನಲ್ಲೂ ಅದನ್ನು ತಂದು ಸೇಡು ತೀರಿಸಿಕೊಳ್ಳೋ ಹಾಗಾಗಿದೆ. ಸದ್ಯಕ್ಕೆ ಪಾಪದ ವೀಕ್ಷಕರು ದೇವರ ಹಾಗೆ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡು ಅಡ್ಜೆಸ್ಟ್ ಮಾಡ್ಕೊಳ್ತೀವಿ ಬಿಡಿ ಅಂತಿದ್ದಾರೆ ವಿಧಿಯಿಲ್ಲದೇ..

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios