ಕನ್ನಡದ ಕಿನ್ನರಿ ಯುರೋಪ್ ಕಾಡಲ್ಲಿ ಪತ್ತೆ; ಬೆಟ್ಟಗುಡ್ಡ ಸುತ್ತಾಡಿ ಕಿವೀಲಿ ಹೂಮುಡಿದು ಬಂದ ಭೂಮಿ ಶೆಟ್ಟಿ!
ಬೆಂಗಳೂರು (ಜು.09): ಕನ್ನಡದ ಕಿನ್ನರಿ ಖ್ಯಾತಿಯ ನಟಿ ಭೂಮಿ ಶೆಟ್ಟಿ ಯುರೋಪಿನ ಕಾಡಿನಲ್ಲಿ ಪತ್ತೆಯಾಗಿದ್ದಾಳೆ. ಅದು ಕೂಡಿನ ಬೆಟ್ಟದಂಚಿನಲ್ಲಿ ಒಬ್ಬಳೇ ನಡೆದುಕೊಂಡು ಹೋಗಿದ್ದು, ಅಲ್ಲಿಂದ ಕಾಡಿನ ಹೂವೊಂದನ್ನು ಕಿವಿಯಲ್ಲಿ ಮುಡಿದುಕೊಂಡು ಬಂದು ಫೋಟೋಗೆ ಪೋಸ್ ಕೊಟ್ಟಿದ್ದಾಳೆ.
ಕನ್ನಡದ ಕಿನ್ನರಿ ಧಾರಾವಾಹಿ ಮೂಲಕ ಎಲ್ಲರ ಮನೆ, ಮನದಲ್ಲಿ ಮಗಳಿದ್ದರೆ ಹೀಗಿರಬೇಕು ಎಂದು ಮೆಚ್ಚಿಗೆ ಪಡೆದಿದ್ದ ಬಾಲನಟಿ ಭೂಮಿಕಾ ಶೆಟ್ಟಿ ಪ್ರಸ್ತುತ ವಯಸ್ಕಳಾಗಿದ್ದಾಳೆ. ಕನ್ನಡ ಬೆಳ್ಳಿತೆರೆಯಲ್ಲಿ ನಟಿಯಾಗಿಯೂ ಕಾಣಿಸಿಕೊಂಡಿದ್ದಾಳೆ.
ಸಿನಿಮಾ ಶೂಟಿಂಗ್ ನಡುವೆ ಬಿಡುವು ಪಡೆದು ಯುರೋಪಿನ ಪ್ರವಾಸಕ್ಕೆ ತೆರಳಿರುವ ನಟಿ ಭೂಮಿ ಶೆಟ್ಟಿ ಕೊಟಾರ್ ಎಂಬ ನಗರದಲ್ಲಿ ಸುತ್ತಾಡುತ್ತಿದ್ದಾಳೆ. ಆಕೆಯೊಂದಿಗೆ ಪ್ರವಾಸಕ್ಕೆ ಹೋದವರಾರು, ಫೋಟೋ ತೆಗೆದವರಾರು ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ.
ಸುತ್ತಲೂ ಬೆಟ್ಟ ಗುಡ್ಡಗಳಿಂದ ಸುತ್ತುವರಿದ ಹಾಗೂ ಒಂದು ಕಡೆ ಸಮುದ್ರ ತೀರವನ್ನು ಹೊಂದಿರುವ ಕೊಟಾರ್ ನಗರ 1944ರ ಕೋಟೆಯೊಳಗೆ ಸುತ್ತಾಡಿದ್ದಾರೆ. ನಂತರ ಕೋಟೆಯ ಪಕ್ಕದಲ್ಲಿದ್ದ ಗುಡ್ಡದಲ್ಲಿ ಒಬ್ಬಳೇ ಸುತ್ತಾಡಿ ಬಂದಿದ್ದಾಳೆ.
ಕೊಟಾರ್ ಕೋಟೆಯ ಹಿಂಬದಿಯ ಗುಡ್ಡಗಾಡು ಸುತ್ತಾಡಿಕೊಂಡು ಬೆವರಿಳಿಸಿಕೊಂಡು ಫೋಟೋಗೆ ಪೋಸ್ ಕೊಟ್ಟಿರುವ ಭೂಮಿ ಶೆಟ್ಟಿ ಇಲ್ಲಿ ಪ್ರಶಾಂತ ವಾತಾವರಣ ಇದೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಕೊಟಾರ್ ನಗರದ ಗುಡ್ಡದಲ್ಲಿ ಸುತ್ತಾಡಿ ಅಲ್ಲಿ ಸ್ಥಳೀಯವಾಗಿ ಬೆಳೆದಿರುವ ಕಾಡಿನ ಹೂವೊಂದನ್ನು ತನ್ನ ಕಿವಿಯಲ್ಲಿ ಮುಡಿದು ಫೋಟೋ ಪೋಸ್ ಕೊಟ್ಟಿದ್ದಾಳೆ. ನೀವು ಪ್ರವಾಸ ಮಾಡುತ್ತಿರುವುದು ಓಕೆ, ತಲೆಯಲ್ಲಿ ಮುಡಿಯುವ ಹೂವನ್ನು ಕಿವಿಯಲ್ಲಿ ಮುಡಿದುಕೊಂಡಿದ್ಯಾಕೆ ಎಂದು ನೆಟ್ಟಿಗರು ಕೇಳಿದ್ದಾರೆ.
ಆದರೆ, ಧಾರಾವಾಹಿ ಪಾತ್ರಕ್ಕೂ ಈಗಿರುವ ಭೂಮಿಶೆಟ್ಟಿಗೂ ಹೋಲಿಕೆ ಮಾತ್ರ ಮಾಡಬೇಡಿ. ಏಕೆಂದರೆ ಲಂಗ ದಾವಣಿ ಧರಿಸಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಕಿನ್ನರಿಗೂ, ಮಾಡೆಲ್ಗಳೂ ಮಿಂಚುವಂತೆ ತುಂಡು ಬಟ್ಟೆ ಧರಿಸುವ ಭೂಮಿ ಶೆಟ್ಟಿಗೂ ಅಜಗಜಾಂತರ ವ್ಯತ್ಯಾಸವಿದೆ.
ಬಿಗ್ ಬಾಸ್ ಸೀಸನ್-7 ಸ್ಪರ್ಧಿಯಾಗಿ ಹೋಗಿಬಂದ ನಂತರ ಕೃಷ್ಣಸುಂದರಿ ಭೂಮಿ ಶೆಟ್ಟಿ ನಸೀಬು ಬಲಾಗಿದೆ. ಪಡ್ಡೆಗಳ ನಿದ್ದೆ ಕದಿಯೋ ಹಾಟ್ ಬಾಂಬ್ ಆಗಿ ಪರಿವರ್ತನೆ ಆಗಿದ್ದಾಳೆ.
ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಶೈನ್ ಶೆಟ್ಟಿಯೊಂದಿಗೆ ಕೆಲವೊಂದಿಷ್ಟು ಕಾರ್ಯಕ್ರಮಗಳ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಭೂಮಿ ಶೆಟ್ಟಿ ಈಗ ಸಿಂಗಲ್ ಸಿಂಹಿಣಿ ಆಗಿದ್ದಾಳೆ.
ಕನ್ನಡದಲ್ಲಿ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟ ಭೂಮಿ ಶೆಟ್ಟಿ, ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಆದರೆ, ಕಿರುತೆರೆಯಲ್ಲಿ ಸಿಕ್ಕಂತಹ ಯಶಸ್ಸು ಬೆಳ್ಳಿ ಪರದೆಯಲ್ಲಿ ಸಿಕ್ಕಿಲ್ಲ. ಆದರೆ, ಸಿನಿಮಾಗಳಲ್ಲಿ ದೊಡ್ಡ ಮಟ್ಟದ ಯಶಸ್ಸಿಗಾಗಿ ಕಾಯುತ್ತಿದ್ದಾರೆ.