Amruthadhaare Kannada Serial Episode: 'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿ ಮುಂದೆ ಸತ್ಯ ಬಯಲಾಗೋ ಥರ ಕಾಣಿಸ್ತಿದ್ದು, ಇನ್ನೊಂದು ಡಿವೋರ್ಸ್‌ ಆಗಬಹುದು. 

Amruthadhaare Kannada Serial: 'ಅಮೃತಧಾರೆ' ಧಾರಾವಾಹಿಯಲ್ಲಿ ಸುಧಾ-ಸೃಜನ್‌ ಮದುವೆ ಆಯ್ತು. ಆದರೆ ಗೌತಮ್‌ ಮಗಳು ಮಾತ್ರ ಸಿಗ್ತಿಲ್ಲ. ಆಸ್ಪತ್ರೆಯಲ್ಲಿ ಡೆಲಿವರಿ ಸೆರ್ಟಿಫಿಕೇಟ್‌ನಲ್ಲಿ ಅವಳಿ ಅಂತ ಬರೆದಿರೋದು ಭೂಮಿಗೆ ಗೊತ್ತಾದ್ರೆ ಏನ್‌ ಕಥೆ ಅಂತ ಗೌತಮ್‌ಗೆ ಚಿಂತೆ ಶುರುವಾಗಿದೆ. ಅತ್ತ ಮಗನಿಗೆ ವ್ಯಾಕ್ಸಿನೇಶನ್‌ ಮಾಡಿಸಲು ಭೂಮಿ, ಸುಧಾ ಜೊತೆಗೆ ಆಸ್ಪತ್ರೆಗೆ ಬಂದಿದ್ದಳು. ಅಲ್ಲಿ ಅವಳಿಗೆ ಮಹಾ ಸತ್ಯ ಗೊತ್ತಾಗಿದೆಯಾ ಎಂಬ ಪ್ರಶ್ನೆ ಎದುರಾಗಿದೆ.

ಒದ್ದಾಡಿದ ಭೂಮಿಕಾ!

ವಾಹಿನಿಯು ಹೊಸ ಪ್ರೋಮೋ ರಿಲೀಸ್‌ ಮಾಡಿದ್ದು, ಅದರಲ್ಲಿ ಭೂಮಿ ಆಸ್ಪತ್ರೆಗೆ ಬಂದಿದ್ದಾಳೆ. ಅಲ್ಲಿ ಮಗನಿಗೆ ವ್ಯಾಕ್ಸಿನೇಶನ್‌ ಮಾಡಿಸಬೇಕಿದೆ. ವ್ಯಾಕ್ಸಿನೇಶನ್‌ ಮಾಡಿಸಿದ್ರೆ ಮಗನಿಗೆ ನೋವಾಗತ್ತೆ ಅಂತ ಭೂಮಿ ಒದ್ದಾಡುತ್ತಿದ್ದಳು. ಅಷ್ಟು ಅವಳಿಗೆ ಮಗನ ಕಂಡ್ರೆ ಪ್ರೀತಿ. ಭೂಮಿ ಒದ್ದಾಡೋದನ್ನು ನೋಡಲಾಗದೆ, ಸುಧಾ ಅವಳನ್ನು ರೂಮ್‌ನಿಂದ ಹೊರಗಡೆ ಕಳಿಸಿದ್ದಾಳೆ.

ಗೌತಮ್‌ಗೆ ಚಿಂತೆ!

ಆಸ್ಪತ್ರೆಯಲ್ಲಿ ಗೌತಮ್‌ ದಿವಾನ್‌ ಹಾಗೂ ಆನಂದ್‌ ಡೆಲಿವರಿ ಸೆರ್ಟಿಫಿಕೇಟ್‌ ಬದಲಾಯಿಸಲು ಪ್ಲ್ಯಾನ್‌ ಮಾಡುತ್ತಿದ್ದರು. ಅವಳಿ ಅಂತ ಸೆರ್ಟಿಫಿಕೇಟ್‌ನಲ್ಲಿರೋದು ಭೂಮಿಗೆ ಗೊತ್ತಾದರೆ ಇನ್ನೊಂದು ಮಗು ಎಲ್ಲಿ ಅಂತ ಕೇಳ್ತಾಳೆ, ಆಗ ಏನು ಮಾಡೋದು ಅಂತ ಗೌತಮ್‌ಗೆ ಚಿಂತೆಯಾಗಿದೆ. ಆಸ್ಪತ್ರೆಯಲ್ಲಿ ಆಗ ತಾನೇ ಹುಟ್ಟಿದ ಮಗಳನ್ನು ಕಾಪಾಡಿಕೊಳ್ಳೋಕೆ ಆಗಲಿಲ್ಲ, ನನ್ನ ಹತ್ತಿರ ವಿಷಯವನ್ನು ಮುಚ್ಚಿಟ್ರಿ ಅಂತ ಭೂಮಿ ಪ್ರಶ್ನೆ ಮಾಡ್ತಾಳೆ ಅಂತ ಗೌತಮ್‌ ಯೋಚಿಸುತ್ತಿದ್ದಾನೆ.

ಮಗಳು ಸಿಗ್ತಾಳಾ?

ಮಗಳನ್ನು ಹುಡುಕೋಕೆ ಗೌತಮ್‌ ಸಿಕ್ಕಾಪಟ್ಟೆ ಪರದಾಡುತ್ತಿದ್ದಾನೆ. ಹೇಗಾದರೂ ಮಾಡಿ ಮಗಳನ್ನು ಹುಡುಕ್ತೀನಿ ಅಂತ ಅವನು ಪಣ ತೊಟ್ಟಿದ್ದಾನೆ. ಇದರ ಮಧ್ಯೆ ನಟಿ ಮಿಲನಾ ನಾಗರಾಜ್‌ ಅವರು ಈ ಧಾರಾವಾಹಿಯ ಪ್ರಚಾರದ ವಿಡಿಯೋ ಮಾಡಿದ್ದು, ಅದರಲ್ಲಿ ಅವರು ಗೌತಮ್‌ಗೆ ಸಾಥ್‌ ಕೊಡಬಹುದು. ಒಟ್ಟಿನಲ್ಲಿ ಈ ಧಾರಾವಾಹಿಯ ಎಪಿಸೋಡ್‌ಗಳು ಭಾರೀ ಕುತೂಹಲ ಮೂಡಿಸಿವೆ.

ಭೂಮಿಗೆ ಸತ್ಯ ಗೊತ್ತಾದರೆ?

ಭೂಮಿಕಾಗೆ ಮಗಳು ಕಾಣೆಯಾಗಿದ್ದಾಳೆ, ಈ ವಿಷಯವನ್ನು ಗೌತಮ್‌ ಮುಚ್ಚಿಟ್ಟಿದ್ದಾನೆ ಅಂತ ಗೊತ್ತಾದರೆ ಅವನ ಮೇಲೆ ಅವಳು ನಂಬಿಕೆ ಕಳೆದುಕೊಳ್ಳಬಹುದು ಅಥವಾ ಡಿವೋರ್ಸ್‌ಗೆ ಮುಂದಾಗಲೂಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕೌತುಕತೆ ಕಾಯ್ದುಕೊಂಡಿವೆ. ಮಗಳು ಸಿಕ್ಕಿ, ಎಲ್ಲ ಸರಿಹೋದರೆ ಈ ಜೋಡಿ ಚೆನ್ನಾಗಿಯೂ ಬದುಕಬಹುದು.

ಧಾರಾವಾಹಿ ಕಥೆ ಏನು?

ಆಗರ್ಭ ಶ್ರೀಮಂತ ಗೌತಮ್‌ ದಿವಾನ್ ವಯಸ್ಸು 45 ಆದ್ಮೇಲೆ‌ ಭೂಮಿಕಾಳನ್ನು ಮದುವೆ ಆಗ್ತಾನೆ. ಮನೆಯವರ ಖುಷಿಗೋಸ್ಕರ ಈ ಮದುವೆ ನಡೆಯುತ್ತದೆ. ಗೌತಮ್‌ಗೆ ಒಂಟಿತನ ಕಾಡಿದ್ದರೂ ಆತ ಮದುವೆ ಆಗದೆ ಸುಮ್ಮನಿದ್ದನು, ಅವನಿಗೆ ಮದುವೆಯಾಗಿ, ಮಕ್ಕಳಾಗೋದು ಮಲತಾಯಿಗೆ ಶಕುಂತಲಾಗೆ ಬೇಕಿರಲಿಲ್ಲ. ಮದುವೆ ಬಳಿಕ ಈ ಜೋಡಿ ಪ್ರೀತಿಯಲ್ಲಿ ಬಿದ್ದು ಈಗ ಪಾಲಕರಾಗಿದ್ದಾರೆ. ಶಕುಂತಲಾ ಹಾಗು ಅವಳ ಮಗ ಜಯದೇವ್‌ಗೆ ಗೌತಮ್‌ ಆಸ್ತಿ ಹೊಡೆಯಬೇಕು ಎನ್ನೋದು ಜೀವನದ ಮಹಾ ಉದ್ದೇಶ. ಹೀಗಾಗಿ ಅವರಿಬ್ಬರು ಸೇರಿಕೊಂಡು ಗೌತಮ್‌ ಕುಟುಂಬದ ವಿರುದ್ಧ ದಿನಕ್ಕೊಂದು ಕುತಂತ್ರ ಮಾಡುತ್ತಿರುತ್ತಾರೆ.

ಗೌತಮ್‌ಗೆ ಮೊದಲು ಮಗಳು ಹುಟ್ಟಿದಳು, ಭೂಮಿ ಹೊಟ್ಟೆಯಲ್ಲಿ ಅವಳಿ ಮಕ್ಕಳಿರೋದು ಯಾರಿಗೂ ಗೊತ್ತಿರಲಿಲ್ಲ. ಆ ಮಗಳನ್ನು ಜಯದೇವ್‌ ಹೊತ್ತೊಯ್ದು ಕಾಡಿನಲ್ಲಿ ಎಸೆದಿದ್ದಾನೆ. ಗೌತಮ್‌ ಹುಡುಕಿದರೂ ಕೂಡ, ಮಗಳು ಕಾಣಿಸಿಲ್ಲ. ಮಗಳು ಹುಟ್ಟಿರುವ ವಿಷಯ ಜಯದೇವ್‌, ಶಕುಂತಲಾ, ಆನಂದ್‌, ಗೌತಮ್‌ಗೆ ಬಿಟ್ಟರೆ ಉಳಿದವರಿಗೆ ಗೊತ್ತೇ ಇಲ್ಲ. ಈ ವಿಷಯ ಗೊತ್ತಾಗುವ ಮುಂಚೆ ಮಗಳನ್ನು ಹುಡುಕಿ ಮನೆಗೆ ಕರೆತರಬೇಕು ಅಂತ ಅವನು ಪ್ಲ್ಯಾನ್‌ ಮಾಡುತ್ತಿದ್ದಾನೆ.

ಪಾತ್ರಧಾರಿಗಳು

ಭೂಮಿ ಪಾತ್ರದಲ್ಲಿ ನಟಿ ಛಾಯಾ ಸಿಂಗ್‌, ಗೌತಮ್‌ ದಿವಾನ್‌ ಪಾತ್ರದಲ್ಲಿ ನಟ ರಾಜೇಶ್‌ ನಟರಂಗ, ಜಯದೇವ್ ಪಾತ್ರದಲ್ಲಿ ರಾಣವ್‌, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು ಅವರು ನಟಿಸುತ್ತಿದ್ದಾರೆ.