ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಅಮೃತಧಾರೆʼ ಧಾರಾವಾಹಿಯಲ್ಲಿ ಭೂಮಿ ಪಾತ್ರದ ಬಗ್ಗೆ ಕೆಲವರಿಗೆ ಅಸಮಾಧಾನ ಉಂಟಾಗಿದೆ. ಇದಕ್ಕೆ ಕಾರಣ ಏನು? 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಅಮೃತಧಾರೆʼ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ಕುಟುಂಬಕ್ಕೆ ನಿತ್ಯ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ಇಷ್ಟುದಿನ ಭಾಗ್ಯ ಬದುಕಿಲ್ಲ ಎಂದು ಕೊರಗುತ್ತಿದ್ದ ದಿವಾನ್‌ಗೆ ಈಗ ಅಮ್ಮ ಸಿಕ್ಕಿದ್ದಾಳೆ. ಈಗ ಅಮ್ಮ ಮನೆಗೆ ಬಂದರೂ ಕೂಡ ಗೌತಮ್‌ಗೆ ನೆಮ್ಮದಿ ಇಲ್ಲದ ಹಾಗೆ ಆಗಿದೆ. ಇನ್ನೊಂದು ಕಡೆ ಭೂಮಿ ಪಾತ್ರಧಾರಿ ಮೇಕಪ್‌ ನೋಡಿ ವೀಕ್ಷಕರು ಬೇಸರಮಾಡಿಕೊಂಡಿದ್ದಾರೆ. 

ಸದ್ಯ ಹೇಗೆ ಕಥೆ ಸಾಗ್ತಿದೆ? 
‘ಅಮೃತಧಾರೆ’ ಧಾರಾವಾಹಿಯಲ್ಲಿ ಮಹಿಮಾ, ಜೀವನ್‌ ಇಬ್ಬರೂ ಮನಸ್ತಾಪ ಬಗೆಹರಿಸಿಕೊಂಡು ಸರಿ ಹೋಗಿದ್ದಾರೆ. ಈಗ ಗೌತಮ್‌ ತಾಯಿ ಭಾಗ್ಯ ಕೂಡ ಮನೆಗೆ ಬಂದಿರೋದು ಶಾಕುಂತಲಾಗೆ ತಲೆಬಿಸಿಯಾಗಿದೆ. ಭಾಗ್ಯಳಿಗೆ ಹಳೆಯ ನೆನಪು ಬಂದರೆ ತನಗೆ ಸಂಕಷ್ಟ ತಪ್ಪಿದ್ದಲ್ಲ ಅಂತ ಶಾಕುಂತಲಾ ಯೋಚಿಸಿದ್ದಾಳೆ. ಈಗ ಶಾಕುಂತಲಾ ತನ್ನ ಮನೆಯಲ್ಲಿ ಯಾರಿಗೂ ಗೊತ್ತಿಲ್ಲದಂತೆ ಭಾಗ್ಯಳನ್ನು ಕೊಲ್ಲಲು ಪ್ರಯತ್ನಪಟ್ಟಿದ್ದಳು. ಈ ಎಪಿಸೋಡ್‌ ನೋಡಿ ವೀಕ್ಷಕರು ಮುಂದೆ ಏನಾಗಬಹುದು ಎಂಬ ಕುತೂಹಲದಲ್ಲಿದ್ದರೆ, ಇನ್ನೊಂದು ಕಡೆ ಭೂಮಿಕಾ ಮೇಕಪ್‌ ಜಾಸ್ತಿ ಆಯ್ತು ಅಂತ ಬೇಸರ ಮಾಡಿಕೊಳ್ಳುತ್ತಿದ್ದಾರೆ.

ಮತ್ತೆ ಹೃದಯ ಗೆದ್ದ ಗೌತಮ್ ದಿವಾನ್... ಹೆಂಡ್ತಿ ಕೋಪ ಮಾಡ್ಕೊಂಡು ತವರಿಗೆ ಹೋದ್ರೆ ನೀವು ಹೀಗೆ ಮಾಡ್ತೀರಾ?

ಭೂಮಿಕಾಗೆ ಇಷ್ಟೆಲ್ಲ ಮೇಕಪ್‌ ಬೇಕಾ? 
ಆರಂಭದಲ್ಲಿ ಭೂಮಿಕಾ ಸದಾಶಿವ ಮಧ್ಯಮ ವರ್ಗಕ್ಕೆ ಸೇರಿದವಳಾಗಿದ್ದಳು. ಈಗ ಅವಳು ಗೌತಮ್‌ ದಿವಾನ್‌ ಪತ್ನಿ. ಆದರೆ ಭೂಮಿಕಾ ಇತ್ತೀಚೆಗೆ ದಿವಾನ್‌ ಕುಟುಂಬಕ್ಕೆ ತಕ್ಕ ಹಾಗೆ ಡ್ರೆಸ್‌ ಮಾಡಿಕೊಳ್ಳೋದು ತಪ್ಪಲ್ಲ, ಆದರೆ ಮೇಕಪ್‌ ಜಾಸ್ತಿ ಆಗಬಾರದು ಅಲ್ವಾ? ಹೌದು, ಸದ್ಯದ ಎಪಿಸೋಡ್‌ಗಳನ್ನು ನೋಡಿದ ವೀಕ್ಷಕರಿಗೆ ಭೂಮಿಕಾ ಮೇಕಪ್‌ ಇಷ್ಟವೇ ಆಗಿಲ್ಲ. 

ನಿಜಕ್ಕೂ ಏನಾಗಿರಬಹುದು? 
ಭೂಮಿಕಾ ಲಿಪ್‌ಸ್ಟಿಕ್‌ ಹೆಚ್ಚಾಯ್ತು, ಇತ್ತೀಚೆಗೆ ಮೇಕಪ್‌ ಜಾಸ್ತಿ ಆಗ್ತಿದೆ, ದಯವಿಟ್ಟು ಕಡಿಮೆ ಮಾಡಿಕೊಳ್ಳಿ ಅಂತ ವೀಕ್ಷಕರು ಜೀ ಕನ್ನಡ ವಾಹಿನಿಯ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಭೂಮಿಕಾಗೆ ಲಿಪ್‌ಸ್ಟಿಕ್‌ ಜಾಸ್ತಿ ಆಗಿರಬಹುದು ಅಥವಾ ಮುಖದ ಮೇಲೆ ಹೆಚ್ಚು ಬೆಳಕು ಬಿದ್ದಾಗ, ಎಡಿಟಿಂಗ್‌ನಲ್ಲಿಯೂ ಲಿಪ್‌ಸ್ಟಿಕ್‌ ಜಾಸ್ತಿ ಆದಹಾಗೆ ಕಾಣಬಹುದು. ಕೆಲ ಧಾರಾವಾಹಿಗಳಲ್ಲಿ ಹುಡುಗರ ತುಟಿಯೂ ಕೂಡ ಲಿಪ್‌ಸ್ಟಿಕ್‌ ಹಚ್ಚಿದಂತೆ ಕಾಣುತ್ತದೆ ಎಂದು ವೀಕ್ಷಕರು ಹೇಳಿದ್ದರು. ಆದರೆ ಎಡಿಟಿಂಗ್‌ನಲ್ಲಿ ಈ ರೀತಿ ಆಗುತ್ತದೆ ಅಂತ ಕೆಲ ಸೀರಿಯಲ್‌ಗಳು ಹೇಳಿದ್ದುಂಟು. 

ಪಾರು ಗೊಂದಲಕ್ಕೆ ಉತ್ತರವಾದ ಭೂಮಿ... ಫೇವರಿಟ್ ನಾಯಕಿಯರ ಸಮಾಗಮದಿಂದ ವೀಕ್ಷಕರು ಖುಷ್!

ಕಥೆ ಏನು?
ಗೌತಮ್‌ ಹಾಗೂ ಭೂಮಿಕಾ ತಮ್ಮ ಒಡಹುಟ್ಟಿದವರಿಗೋಸ್ಕರ ಮದುವೆ ಆಗ್ತಾರೆ. ಹೌದು, ಗೌತಮ್‌ ತಂಗಿ ಮಹಿಮಾ, ಭೂಮಿಕಾ ತಮ್ಮ ಜೀವನ್‌ ಇಬ್ಬರೂ ಪ್ರೀತಿ ಮಾಡುತ್ತಿರುತ್ತಾರೆ. ನನಗೆ ಮದುವೆ ಆಗೋ ಮುಂಚೆ ನನ್ನ ಅಕ್ಕನ ಮದುವೆ ಆಗಬೇಕು ಅಂತ ಜೀವನ್‌ ಬಯಸುತ್ತಾನೆ. ಹೀಗಾಗಿ ಗೌತಮ್-ಭೂಮಿಕಾ ಮದುವೆ ನಡೆಯುತ್ತದೆ. ಗೌತಮ್‌ಗೆ ಶಾಕುಂತಲಾ ಎನ್ನುವ ಮಲತಾಯಿ ಇರುತ್ತಾಳೆ. ಶಾಕುಂತಲಾಗೆ ನಾಲ್ವರು ಮಕ್ಕಳಿದ್ದಾರೆ. ಗೌತಮ್‌ ತಾಯಿಯನ್ನು ಶಾಕುಂತಲಾಳೇ ಪ್ಲ್ಯಾನ್‌ ಮಾಡಿ ಮನೆಯಿಂದ ಓಡಿಸಿರುತ್ತಾಳೆ. ಈಗ ಈ ಸತ್ಯ ಎಲ್ಲವೂ ರಿವೀಲ್‌ ಆಗಬೇಕಿದೆ. ಶಾಕುಂತಲಾ ಕುತಂತ್ರಕ್ಕೆ ಭೂಮಿಕಾ ಅಡ್ಡಗಾಲು ಆಗಿದ್ದಾಳೆ. ಗೌತಮ್-ಭೂಮಿಕಾ ಚೆನ್ನಾಗಿರೋದು, ಇವರಿಬ್ಬರಿಗೂ ಮಕ್ಕಳಾಗೋದು ಶಾಕುಂತಲಾಗೆ ಇಷ್ಟವೇ ಇಲ್ಲ. ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ. 

ಪಾತ್ರಧಾರಿಗಳು
ಗೌತಮ್‌ ಪಾತ್ರದಲ್ಲಿ ರಾಜೇಶ್‌ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್‌, ಶಾಕುಂತಲಾ ಪಾತ್ರದಲ್ಲಿ ವನಿತಾ ವಾಸು, ಮಹಿಮಾ ಪಾತ್ರದಲ್ಲಿ ಇಷಿತಾ ವರ್ಷ ನಟಿಸುತ್ತಿದ್ದಾರೆ. ಈ ಧಾರಾವಾಹಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ. ನಿಮಗೆ ಈ ಧಾರಾವಾಹಿ ಬಗ್ಗೆ ಇರುವ ಅಭಿಪ್ರಾಯ ಏನು?