- Home
- Entertainment
- TV Talk
- ಮತ್ತೆ ಹೃದಯ ಗೆದ್ದ ಗೌತಮ್ ದಿವಾನ್... ಹೆಂಡ್ತಿ ಕೋಪ ಮಾಡ್ಕೊಂಡು ತವರಿಗೆ ಹೋದ್ರೆ ನೀವು ಹೀಗೆ ಮಾಡ್ತೀರಾ?
ಮತ್ತೆ ಹೃದಯ ಗೆದ್ದ ಗೌತಮ್ ದಿವಾನ್... ಹೆಂಡ್ತಿ ಕೋಪ ಮಾಡ್ಕೊಂಡು ತವರಿಗೆ ಹೋದ್ರೆ ನೀವು ಹೀಗೆ ಮಾಡ್ತೀರಾ?
ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಮತ್ತು ಜೀವನನ್ನು ಒಂದು ಮಾಡೋಕೆ ಗೌತಮ್ ಮತ್ತು ಭೂಮಿಕಾ ಕೋಪದ ನಾಟಕ ಮಾಡುತ್ತಿದ್ದು, ಇದೀಗ ಹೆಂಡತಿಗೆ ಸಾರಿ ಕೇಳಲು ಗೌತಮ್ ಮಾಡುತ್ತಿರುವ ಐಡಿಯಾಗಳು ವೀಕ್ಷಕರ ಹೃದಯ ಗೆಲ್ಲುತ್ತಿದೆ.

ಝೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿ ತನ್ನ ವಿಭಿನ್ನ ಹಾಗೂ ಎಲ್ಲೂ ಕಥೆಯನ್ನು ಎಳೆಯದೇ ಹೋಗುವ ರೀತಿಯಿಂದಲೇ ಜನರಿಗೆ ಇಷ್ಟವಾಗಿದೆ. ಇದೀಗ ಸೀರಿಯಲ್ ನಲ್ಲಿ ಮಹಿಮಾ ಮತ್ತು ಜೀವಾ ನಡುವೆ ಮಾತಿಗೆ ಮಾತು ಬೆಳೆದು, ಜೀವಾ ಹಂಗಿಸಿ ಮಾತನಾಡಿದಕ್ಕಾಗಿ ಮಹಿಮಾ ಮನೆ ಬಿಟ್ಟು ಬಂದು ತವರು ಮನೆ ಸೇರಿಕೊಂಡಿದ್ದಾಳೆ.
ಮಹಿಮಾ ಮತ್ತು ಜೀವಾರನ್ನು ಒಂದು ಮಾಡೋಕೆ ಗೌತಮ್ ದಿವಾನ್ ಹಾಗೂ ಭೂಮಿಕಾ ಇಬ್ಬರು ಸೇರಿ ಕೋಪ ಮಾಡಿಕೊಂಡಂತೆ ನಾಟಕ ಮಾಡಿ, ಭೂಮಿ ಕೂಡ ಬ್ಯಾಗ್ ಹಿಡಿದು ಮನೆಗೆ ಬಂದು ಬಿಟ್ಟಿದ್ದಾಳೆ. ಹಾಗಾದ್ರು ತಮ್ಮ, ತಂಗಿಯ ಜೀವನದಲ್ಲಿ ವಿರಸ ಮರೆಯಾಗಿ ಮತ್ತೆ ಒಂದಾಗಲಿ ಅನ್ನೋದೆ ಅವರ ಆಶಯ.
ಇದೀಗ ಕೋಪದಿಂದ ತವರಿಗೆ ಹೋದ ಅತ್ತಿಗೆಯನ್ನು ವಾಪಾಸ್ ಮನೆಗೆ ಕರೆಯಿಸೋದಕ್ಕೆ ಪಾರ್ಥ ತನ್ನ ಅಣ್ಣನನ್ನು ಕರೆದುಕೊಂಡು ಭೂಮಿಕಾ ಮನೆಗೆ ತೆರಳಿದ್ದಾನೆ. ಅಲ್ಲಿ ಗೌತಮ್ ಭೂಮಿಕಾಗೆ ಸಾರಿ ಕೇಳೋದಕ್ಕಾಗಿ ಮುದ್ದು ಮುದ್ದಾದ ಐಡಿಯಾಗಳನ್ನು ಮಾಡಿ, ಭೂಮಿಕಾ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ.
ಎಲ್ಲರೆದುರು ನಾಟಕ ಮಾಡುತ್ತಿದ್ದರೂ, ಹೆಂಡತಿಯನ್ನು ಒಲಿಸಿಕೊಳ್ಳೋದಕ್ಕಾಗಿ ಗೌತಮ್ ಸಾರಿ ಕೇಳುತ್ತಿರುವ ರೀತಿಯನ್ನು ನೋಡಿ ವೀಕ್ಷಕರು ಖುಷಿ ಪಟ್ಟಿದ್ದಾರೆ. ಗೌತಮ್ ಮತ್ತು ಭೂಮಿಕಾ ನಡುವಿನ ಪ್ರೀತಿ, ಹುಸಿ ಕೋಪವನ್ನು ನೋಡಿ ಎಂಜಾಯ್ ಮಾಡ್ತಿದ್ದಾರೆ ಜನ.
ಮೊದಲನೆಯದಾಗಿ ಕೆಂಪು ಬಲೂನ್ ಗಳನ್ನೆಲ್ಲಾ ಕಟ್ಟಿ ಮೇಲಕ್ಕೆ ಬಿಟ್ಟು, ಅದರಲ್ಲಿ ಸಾರಿ ಎಂದು ಬರೆದು ಪಾರ್ಥನ ಕೈಯಲ್ಲಿ ಕಳುಹಿಸಿದ್ದಾರೆ ಗೌತಮ್. ಇದನ್ನ ನೋಡಿ ಭೂಮಿಕಾಗೆ ಖುಷಿಯಾಗಿದೆ. ಆದರೂ ಜೀವಾ ಎದುರು ಹುಸಿ ಮುನಿಸು ತೋರಿ ಬೈಯೋದೆಲ್ಲ ಬೈದು ಈಗ ಸಾರಿ ಕೇಳಿದ್ರೆ ಹೇಗೆ ಎಂದು ಒಳ ನಡೆದಿದ್ದಾಳೆ.
ಇದೀಗ ಎರಡನೇಯದಾಗಿ ಇನ್ನೇನಾದ್ರೂ ಮಾಡ್ಬೇಕು ಎಂದು ಪಾರ್ಥ ಹೇಳಿದ ನಂತರ ಗೌತಮಿ, ಫ್ಲವರ್ ಬುಕೆಯನ್ನು ಭೂಮಿಕಾಗೆ ಕಳುಹಿಸಿ, ಅದರಲ್ಲೂ ಸಾರಿ ಎಂದು ಬರೆದಿರುತ್ತಿದೆ. ಅದನ್ನ ನೋಡಿದ ಭೂಮಿ, ಸ್ವಲ್ಪ ಏನಾದ್ರು ಸಿಕ್ಕಿದ್ರೆ ಸಾಕು ನಮ್ ಯಜಮಾನ್ರು ಲವರ್ ಬಾಯ್ ಆಗ್ಬಿಡ್ತಾರೆ. ಒಂದೇ ಹಾರ್ಟ್ ಇರೋದು ಎಷ್ಟು ಸಲ ಅಂತ ಗೆಲ್ತೀರಾ ಗೌತಮ್ ಸರ್ ಎನ್ನುತ್ತಾಳೆ ಭೂಮಿಕಾ.
ಹಳೆ ಕಾಲದಲ್ಲಿ ರಾಜರು ಪಕ್ಕದ ರಾಜ್ಯದ ಮೇಲೆ ದಾಳಿ ಮಾಡಿ, ಎಲ್ಲಾ ದೋಚಿಕೊಂಡು ಹೋಗುವಂತೆ, ಇಲ್ಲಿ ನೀವು ಆವಾಗವಾಗ ನನ್ನ ಹಾರ್ಟ್ ಮೇಲೆ ದಾಳಿ ಮಾಡಿ ಇರೋ ಬರೋ ಪ್ರೀತಿನೆಲ್ಲಾ ದೋಚಿಕೊಂಡು ಹೋಗ್ತೀರಾ. ಐ ಲವ್ ಯೂ ಗೌತಮ್ ಅವರೇ, ಮಿಸ್ ಯೂ ಸೋ ಮಚ್ ಎನ್ನುತ್ತಾರೆ. ನೀವು ಕೂಡ ನಿಮ್ಮ ಹೆಂಡ್ತಿ ಕೋಪಿಸಿಕೊಂಡು ತವರು ಮನೆಗೆ ಹೋದಾಗ ಹೀಗೇ ಹೂವು ಕೊಟ್ಟು ಸಾರಿ ಕೇಳಿ ಸಾರಿ ಕೇಳ್ತೀರಾ? ಹೇಳಿ…