‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಗೆ ಹೆರಿಗೆ ಆಗೋ ಟೈಮ್‌ ಬಂದಾಯ್ತು. ಈ ಹೆರಿಗೆ ಮಾಡಿಸಲು ವಿಶೇಷ ಅತಿಥಿಗಳೇ ಬಂದಿದ್ದಾರೆ. ಅವರು ಯಾರು? ಯಾರು? 

‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಗೆ ಹೆರಿಗೆ ಆಗೋ ಟೈಮ್‌ನಲ್ಲಿ ಒಂದು ಸಂಕಷ್ಟ ಎದುರಾಗಿದೆ. ಭೂಮಿ ಮಗುವನ್ನು ಸಾಯಿಸಬೇಕು ಅಂತ ಶಕುಂತಲಾ ಹಾಲಿಗೆ ವಿಷ ಹಾಕಿದ್ದಳು. ಅದರ ಪರಿಣಾಮ ಭೂಮಿಗೆ ಜಾಯಿಂಡೀಸ್‌ ಆಗಿದೆ. ಈಗ ಅವಳಿಗೆ ನಾಟಿ ವೈದ್ಯರ ಚಿಕಿತ್ಸೆ ಬೇಕು. ಭೂಮಿ ಮಗುವನ್ನು ಉಳಿಸಲು ಅಣ್ಣಯ್ಯ ಧಾರಾವಾಹಿ ಶಿವು-ಪಾರು, ಕರ್ಣ ಧಾರಾವಾಹಿ ಕರ್ಣ ಕೂಡ ಬಂದಿದ್ದಾನೆ. ಒಟ್ಟಿನಲ್ಲಿ ಈ ಎಪಿಸೋಡ್‌ ಧೂಳೆಬ್ಬಿಸಲಿರೋದಂತೂ ಪಕ್ಕಾ.

ರೌಡಿಗಳ ವಿರುದ್ಧ ಫೈಟ್!‌

ಭೂಮಿಗೆ ಹೆರಿಗೆ ಮಾಡಿಸಲು ನಿರ್ಜನ ಪ್ರದೇಶದಲ್ಲಿರೋ ನಾಟಿ ವೈದ್ಯರ ಬಳಿ ಹೋಗಬೇಕಿತ್ತು. ಭೂಮಿ ಮಗು ಸಾಯಬೇಕು ಅಂತ ಶಕುಂತಲಾ, ಜಯದೇವ್‌ ಕುತಂತ್ರದ ಬಾಣ ಬಿಡುತ್ತಿದ್ದಾರೆ. ಇವರಿಂದ ಮಗು ಬಚಾವ್‌ ಆಗುತ್ತಾ? ಇಲ್ಲವೇ ಎನ್ನೋದನ್ನು ಕಾದು ನೋಡಬೇಕಿದೆ. ರೌಡಿಗಳ ವಿರುದ್ಧ ಶಿವು ಹಾಗೂ ಗೌತಮ್‌ ಫೈಟ್‌ ಮಾಡಿದ್ದರು.

ಭೂಮಿ ಮಗು ಉಳಿಯತ್ತಾ?

ಇನ್ನೊಂದು ಕಡೆ ಕರ್ಣ ಹಾಗೂ ಪಾರ್ವತಿ ಸೇರಿಕೊಂಡು ಭೂಮಿಗೆ ಹೆರಿಗೆ ಮಾಡಿಸಬಹುದು. ಜಾಯಂಡೀಸ್‌ ಬಂದಿರೋದಿಕ್ಕೆ ಭೂಮಿಗೆ ಹೆರಿಗೆ ಮಾಡಿಸಿ, ತಾಯಿ-ಮಗುವಿನ ಜೀವ ಉಳಿಸೋದು ದೊಡ್ಡ ಟಾಸ್ಕ್‌ ಆಗಿದೆ. ಭೂಮಿಗೆ ಗಂಡು ಮಗು ಹುಟ್ಟುತ್ತೋ ಅಥವಾ ಹೆಣ್ಣಾಗತ್ತೋ ಅಥವಾ ಅವಳಿಯೋ ಎಂಬ ಚರ್ಚೆ ಶುರು ಆಗಿದೆ. ಒಟ್ಟಿನಲ್ಲಿ ಭೂಮಿ ಮಗು ಉಳಿಯೋದು ದೊಡ್ಡ ವಿಷಯವಾಗಿದೆ.

ಜಯದೇವ್‌ ಪ್ಲ್ಯಾನ್‌ ಏನು?

ಮಲ್ಲಿಯನ್ನು ಮದುವೆಯಾಗಿದ್ರೂ ಕೂಡ ಅವಳಿಗೆ ಮೋಸ ಮಾಡಿ, ಜಯದೇವ್‌ ಇನ್ನೊಂದು ಹುಡುಗಿ ದಿಯಾಳನ್ನು ಮದುವೆ ಆಗಿದ್ದಾನೆ. ಇದು ಗೌತಮ್-ಭೂಮಿಗೆ ಸಿಟ್ಟು ತರಿಸಿತ್ತು. ಹೀಗಾಗಿ ಅವನ ಪಾಲಿನ ಆಸ್ತಿಯನ್ನು ಅವನಿಗೆ ಕೊಟ್ಟು ಮನೆಯಿಂದ ಹೊರಗಡೆ ಹಾಕಲಾಗಿದೆ. ಇನ್ನೊಂದು ಕಡೆ ರಾಜೇಂದ್ರ ಭೂಪತಿ ಮಗಳು ಮಲ್ಲಿ ಎನ್ನೋದು ಈಗ ಎಲ್ಲರಿಗೂ ಗೊತ್ತಾಗಿದೆ. ಮಲ್ಲಿ ಹೆಸರಿನಲ್ಲಿ ಈಗ ಸಾವಿರಾರು ಕೋಟಿ ರೂಪಾಯಿ ಆಸ್ತಿ ಬಂದಿದೆ. ಈಗ ಅವನು ಆಸ್ತಿಗೋಸ್ಕರ ಬೇರೆ ನಾಟಕ ಮಾಡ್ತಾನಾ? ಇಲ್ಲವಾ ಎಂದು ಕಾದು ನೋಡಬೇಕಿದೆ.

ಧಾರಾವಾಹಿ ಕತೆ ಏನು?

ಆಗರ್ಭ ಶ್ರೀಮಂತ ಗೌತಮ್‌ ದಿವಾನ್‌ಗೆ ವಯಸ್ಸು 45 ಆದರೂ ಕೂಡ ಮದುವೆ ಆಗಿರಲಿಲ್ಲ. ಇವನಿಗೆ ಮದುವೆ ಆಗಿ ಮಗು ಆದರೆ ಆಸ್ತಿ ಎಲ್ಲವೂ ಆ ಮಗುಗೆ ಸಿಗುತ್ತದೆ ಅಂತ ಶಕುಂತಲಾಳೇ ಈ ರೀತಿ ಮಾಡಿದ್ದಳು. ಇನ್ನೊಂದು ಕಡೆ ವಿಧಿಯ ಆಟದಿಂದ ಗೌತಮ್‌ ಹಾಗೂ ಭೂಮಿಕಾ ಮದುವೆ ಆಗಿ, ಇವರಿಬ್ಬರು ಪ್ರೀತಿಯಲ್ಲಿ ಬಿದ್ದರು, ಭೂಮಿ ಗರ್ಭಿಣಿಯೂ ಆದಳು. ಶಕುಂತಲಾ ಕೆಟ್ಟವಳು, ಅವಳಿಂದ, ಅವಳ ಮಗ ಜಯದೇವ್‌ನಿಂದ ಸಾಕಷ್ಟು ನೀಚ ಕೃತ್ಯ ಆಗಿದೆ ಎನ್ನೋದು ಭೂಮಿಗೆ ಗೊತ್ತಿದೆ. ಇದೆಲ್ಲವೂ ಯಾವಾಗ ಹೊರಗಡೆ ಬರುತ್ತದೆ ಎಂದು ಕಾದು ನೋಡಬೇಕಿದೆ.

ಪಾತ್ರಧಾರಿಗಳು

ಭೂಮಿ-ಛಾಯಾ ಸಿಂಗ್‌

ಗೌತಮ್‌ ದಿವಾನ್‌- ರಾಜೇಶ್‌ ನಟರಂಗ

ಜಯದೇವ್-‌ ರಾಣವ್‌

ಮಲ್ಲಿ- ಅನ್ವಿತಾ ಸಾಗರ್‌

ಕರ್ಣ- ಕಿರಣ್‌ ರಾಜ್‌

ಶಿವು-ವಿಕಾಶ್‌ ಉತ್ತಯ್ಯ

ಪಾರು-ನಿಶಾ ರವಿಕೃಷ್ಣನ್‌