Amruthadhaare Kannada Serial Shwetha Gowda: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ದಿಯಾ ಮನೆ ಬಿಟ್ಟು ಹೋಗಿದ್ದಾಳೆ, ಜಯದೇವ್‌ಗೆ ಚಂಬು ಕೊಟ್ಟಿದ್ದಾಳೆ. ಆದರೆ ರಿಯಲ್‌ ಲೈಫ್‌ನಲ್ಲಿ ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರು ಮದುವೆ ಆಗುತ್ತಿದ್ದಾರೆ. 

ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Kannada Serial ) ದಿಯಾ ಪಾತ್ರದಲ್ಲಿ ಶ್ವೇತಾ ಗೌಡ ಅವರು ( Shwetha Gowda ) ನಟಿಸುತ್ತಿದ್ದಾರೆ. ಸದ್ಯ ಅವರು ಧಾರಾವಾಹಿಯಲ್ಲಿ ವಿದೇಶಕ್ಕೆ ಹಾರಿದ್ದಾರೆ, ರಿಯಲ್‌ ಲೈಫ್‌ನಲ್ಲಿ ಮದುವೆ ಆಗುತ್ತಿದ್ದಾರೆ. ಹೌದು, ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಗುಡ್‌ನ್ಯೂಸ್‌ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಲ್ಲಿ ಜೀವನ ಹಾಳು ಮಾಡಿದಳು

ಶ್ವೇತಾ ಗೌಡ ಅವರು ಈ ಧಾರಾವಾಹಿಯಲ್ಲಿ ನೆಗೆಟಿವ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಮದುವೆ ಆಗಿರುವ ಜಯದೇವ್‌ ದಿವಾನ್‌ನನ್ನು ಪ್ರೀತಿಸಿದಂತೆ ನಾಟಕ ಮಾಡಿ, ಯಾರು ಎಷ್ಟೇ ಹೇಳಿದರೂ ಕೂಡ ಕೇಳದೆ, ಅವನನ್ನೇ ಮದುವೆ ಆಗುತ್ತಾಳೆ. ಇದರಿಂದ ಜಯದೇವ್‌ ಮೊದಲ ಪತ್ನಿ ಮಲ್ಲಿ ಜೀವನ ಹಾಳಾಯಿತು. ಆರಂಭದಲ್ಲಿ ಜಯದೇವ್‌ ತನ್ನ ಲವ್‌, ಜೀವನ ಎಂದು ಹೇಳಿ, ಆಮೇಲೆ ಅವನಿಗೆ ಬತ್ತಿ ಇಟ್ಟಳು.

ಮನೆಯಿಂದ ಓಡಿ ಹೋದ ದಿಯಾ

ಹೌದು, ಜಯದೇವ್‌ ಈಗ ಸಾಲದ ಸುಳಿಯಲ್ಲಿ ಸಿಲುಕಿದ್ದಾನೆ, ಅವನು ಒಂದಿಷ್ಟು ಹಣ, ಬಂಗಾರವನ್ನು ಇಟ್ಟುಕೊಂಡಿದ್ದು, ಅದನ್ನು ಬಳಸಿ ಅವನು ವಿದೇಶಕ್ಕೆ ಹೋಗಿ ಸೆಟಲ್‌ ಆಗಬೇಕು ಎಂದುಕೊಂಡಿದ್ದನು. ಆದರೆ ದಿಯಾ ಅವನಿಗೆ ಸಿಕ್ಕಾಪಟ್ಟೆ ಮದ್ಯ ಕುಡಿಸಿ, ಅವನಿಗೆ ನಶೆಯಲ್ಲಿ ತೇಲಾಡುವಂತೆ ಮಾಡಿ, ಮನೆಯಲ್ಲಿದ್ದ ಹಣ, ಬಂಗಾರ ಎಲ್ಲವನ್ನು ತಗೊಂಡು ಮನೆ ಬಿಟ್ಟು ಹೋಗಿದ್ದಾಳೆ. ಅವಳೀಗ ವಿದೇಶದಲ್ಲಿದ್ದಾಳೆ.

ಮದುವೆ ಆಗಲು ರೆಡಿ

ದಿಯಾ ಪಾತ್ರಧಾರಿ ಈಗ ಸೀರಿಯಲ್‌ಗೆ ಬರ್ತಾರಾ? ಇಲ್ಲವಾ ಎನ್ನುವ ಸಂದೇಹ ಶುರು ಆಗಿದೆ. ಹೌದು, ದಿಯಾ ವಿದೇಶಕ್ಕೆ ಹೋದಳು ಎಂದು ತೋರಿಸಲಾಗಿದೆ. ಇನ್ನೊಂದು ಕಡೆ ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರು ಎಂಗೇಜ್‌ ಆಗಿದ್ದಾರೆ, ಮದುವೆ ಆಗಲು ರೆಡಿ ಆಗಿದ್ದಾರೆ. ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದ್ದಾರೆ.

ಯಾವಾಗ ಮದುವೆ ಆಗಲಿದೆ?

ಮೇ 14ರಂದು ಇವರು ಮದುವೆ ಆಗಲಿದ್ದಾರೆ. ಯದುವೀರ್‌ ಸುನೀಲ್‌ ಚಂದ್ರ ಜೊತೆ ಇವರು ಎಂಗೇಜ್‌ ಆಗಿದ್ದಾರೆ ಎನ್ನಲಾಗಿದೆ. ಇದು ಅರೇಂಜ್?‌ ಲವ್‌ ಎಂಬ ಬಗ್ಗೆ ಮಾಹಿತಿ ಇಲ್ಲ. ಅಂದಹಾಗೆ ಯದುವೀರ್‌ ಯಾರು? ವೃತ್ತಿ ಏನು ಎನ್ನೋದು ಕೂಡ ರಿವೀಲ್‌ ಆಗಿಲ್ಲ. ಈ ಬಗ್ಗೆ ಶ್ವೇತಾ ಅವರೇ ಮಾಹಿತಿ ಕೊಡಬೇಕಿದೆ. ಇನ್ನೊಂದು ಕಡೆ ಮದುವೆ ಬಳಿಕ ಅವರು ನಟಿಸ್ತಾರಾ? ಇಲ್ಲವಾ ಎಂದು ಕೂಡ ಮಾಹಿತಿ ಇಲ್ಲ.