ಆರೋಗ್ಯ ವಿಚಾರದಲ್ಲಿ 33 ಮಿಲಿಯನ್ ಫಾಲೋವರ್ಸ್ ದಾರಿ ತಪ್ಪಿಸಿದ್ರಾ ನಟಿ ಸಮಂತಾ? ವೈದ್ಯರು ಕಿಡಿಕಿಡಿ!
ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪಾಡ್ಕಾಸ್ಟ್ನಲ್ಲಿ ಲಿವರ್ ಕುರಿತು ತಪ್ಪು ಮಾಹಿತಿ ನೀಡಿದ್ರಾ ನಟಿ ಸಮಂತಾ ರುತ್ ಪ್ರಭು? ಈ ವೈದ್ಯರು ಹೇಳ್ತಿರೋದೇನು?
ಸಿನಿ ಪ್ರಿಯರಿಗೆ ತಿಳಿದಿರುವಂತೆ ನಟಿ ಸಮಂತಾ ರುತ್ ಪ್ರಭು ಮಯೋಸೈಟಿಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಅದರ ನಡುವೆಯೇ ಚಿತ್ರಗಳಲ್ಲಿಯೂ ಬಿಜಿಯಾಗಿದ್ದಾರೆ. ಈಚೆಗಷ್ಟೇ ನಟಿ ತಮ್ಮ ಮಯೋಸೈಟಿಸ್ ಕಾಯಿಲೆ ಹಾಗೂ ತಾವು ಅನುಭವಿಸಿದ ತೊಂದರೆ ಕುರಿತು ಮಅತನಾಡಿದ್ದರು. ಮಯೋಸೈಟಿಸ್ ಸಮಸ್ಯೆ ಎದುರಿಸುವುದು ನನಗೆ ಅತ್ಯಂತ ಕಷ್ಟಕರವಾಗಿತ್ತು. ಪ್ರತಿ ವರ್ಷವೂ ಹಿಂಸೆ ಅನುಭವಿಸಿದ್ದೇನೆ. ನನ್ನ ಮ್ಯಾನೇಜರ್ ಹಿಮಾಂಕ್ ಮತ್ತು ನಾನು ಮುಂಬೈನಿಂದ ಹಿಂತಿರುಗುತ್ತಿದ್ದ ದಿನ ಅದು. ನನಗೆ ಬಹಳ ಸಮಯದಿಂದ ಶಾಂತಿ ಎಂಬುದೇ ಇರಲಿಲ್ಲ. ಅಂತಿಮವಾಗಿ ನಾನು ಹಾಯಾಗಿ ನಿದ್ರೆ ಮಾಡಬಹುದು ಎಂದು ನನಗೆ ಅನಿಸಿತ್ತು. ಹೀಗೆ ಎಂದುಕೊಳ್ಳುವಾಗಲೇ ನನಗೆ ಮಯೋಸೈಟಿಸ್ ಕಾಣಿಸಿಕೊಂಡಿತು ಎಂದು ಸಮಂತಾ ಹೇಳುವ ಮೂಲಕ ನೋವನ್ನು ತೋಡಿಕೊಂಡಿದ್ದರು. ಇದರ ನಡುವೆಯೇ ನಟಿ, ಅವರ ಪಾಡ್ಕಾಸ್ಟ್ ‘ಟೇಕ್ 20’ (Take 20) ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು, ಇದರ ವಿರುದ್ಧದ ಈಗ ಗಂಭೀರ ಆರೋಪ ಕೇಳಿಬಂದಿದೆ.
ಅಷ್ಟಕ್ಕೂ, ನಟಿ ಟೇಕ್ 20: ಹೆಲ್ತ್ ಪಾಡ್ ಕ್ಯಾಸ್ಟ್ ಸೀರಿಸ್ ನಲ್ಲಿ ಪಾಡ್ ಕ್ಯಾಸ್ಟ್ ನ ಮೊದಲ ಸಂಚಿಕೆ ಆಟೊ ಇಮ್ಯುನಿಟಿಯ ಕುರಿತಂತೆ ಒಂದು ಸಂಚಿಕೆ ಮಾಡಿದ್ದರು. ಅದು ಕಳೆದ ಫೆಬ್ರವರಿ 19 ರಂದು ಬಿಡುಗಡೆಯಾಗಿತ್ತು. ನಂತರ ಡಿಟಾಕ್ಸ್ ಪಾಥ್ ವೇಸ್ ಎಂಬ 2ನೇ ಸಂಚಿಕೆ ಮಾಡಿದ್ದರು. ಅದು ಫೆಬ್ರವರಿ 29 ರಂದು ಪ್ರಸಾರವಾಗಿದೆ. ಇದರಲ್ಲಿ ಯಕೃತ್ತು ಅಂದರೆ ಲಿವರ್ ಆರೋಗ್ಯದ ಬಗ್ಗೆ ಕೆಲವೊಂದು ಮಾಹಿತಿ ಶೇರ್ ಮಾಡಿಕೊಳ್ಳಲಾಗಿದೆ. ನಟಿ ಸಮಂತಾ ಅವರು ಪಾಡ್ಕಾಸ್ಟ್ಗೆ ಬಂದಿರುವ ಅತಿಥಿ ಜೊತೆ ಇದರ ವಿಷಯದ ಬಗ್ಗೆ ಮಾತನಾಡಿದ್ದಾರೆ. ಆದರೆ ಇದರ ವಿರುದ್ಧ ವೈದ್ಯರೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಈ ಪಾಡ್ಕಾಸ್ಟ್ನಲ್ಲಿ ಹೇಳಿರುವ ಮಾಹಿತಿಗಳು ಸಂಪೂರ್ಣ ತಪ್ಪು ಎಂದಿದ್ದಾರೆ.
ಡಿವೋರ್ಸ್ ಆದ್ಮೇಲೆ ಡೇಟಿಂಗ್ ಶುರು ಮಾಡಿದ್ವಿ: ಆಮೀರ್ ಖಾನ್ 2ನೇ ಮಾಜಿ ಪತ್ನಿ ಕಿರಣ್ ಓಪನ್ ಮಾತು!
ಟ್ವಿಟ್ಟರ್ ನಲ್ಲಿ ದಿ ಲಿವರ್ ಡಾಕ್ ಎಂದು ಕರೆಯಲ್ಪಡುವ ಹೆಪ್ಟೋಲಾಜಿಸ್ಟ್ ಡಾ. ಸಿರಿಯಾಕ್ ಅಬ್ಬಿ ಅವರು ಈ ಬಗ್ಗೆ ತಕರಾರು ತೆಗೆದಿದ್ದಾರೆ. ನಟಿ ಸಮಂತಾ 33 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಲಿವರ್ನಂಥ ಸಮಸ್ಯೆಗಳ ಬಗ್ಗೆ ಇಷ್ಟು ತಪ್ಪು ಮಾಹಿತಿ ಕೊಟ್ಟು ಎಲ್ಲರನ್ನೂ ತಪ್ಪು ದಾರಿಗೆ ಎಳೆಯುವುದು ಎಷ್ಟು ಸರಿ ಎಂದು ಅವರುಪ್ರಶ್ನಿಸಿದ್ದಾರೆ‘ಇವರು ಸಾಕಷ್ಟು ಖ್ಯಾತಿ ಪಡೆದಿರುವ ನಟಿ. ತಮ್ಮ 33 ಮಿಲಿಯನ್ ಫಾಲೋವರ್ಸ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ವಿಜ್ಞಾನದ ಕುರಿತು ಅನಕ್ಷರಸ್ತರಾಗಿರುವ ಇಬ್ಬರು ವ್ಯಕ್ತಿಗಳು ತಮ್ಮ ಅಜ್ಞಾನವನ್ನು ಹರಡುತ್ತಿದ್ದಾರೆ. ಸಮಂತಾ ಜೊತೆ ಇರುವ ಈ ತರಬೇತುದಾರ ನಿಜವಾಗಿ ವೈದ್ಯಕೀಯ ಕ್ಷೇತ್ರದ ವ್ಯಕ್ತಿ ಅಲ್ಲ. ಲಿವರ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದೂ ಈತನಿಗೆ ಗೊತ್ತಿಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಲಿವರ್ ಆರೋಗ್ಯಕ್ಕೆ ದಾಂಡೇಲಿಯನ್ ಮೂಲಿಕೆ ಅತ್ಯುತ್ತಮ ಔಷಧ ಎಂದು ಆ ಪಾಡ್ ಕ್ಯಾಸ್ಟ್ನಲ್ಲಿ ಚರ್ಚಿಸುವುದು ಸೂಕ್ತವಲ್ಲ. ಯಾವುದೇ ಅರಿವಿಲ್ಲದೆ ಫಾಲೋವರ್ಸ್ ಗಳನ್ನು ದಾರಿ ತಪ್ಪಿಸಲಾಗುತ್ತಿದೆ ಎಂದಿದ್ದಾರೆ. ಅಂದಹಾಗೆ ತಾವು ಲಿವರ್ ವೈದ್ಯ ಎಂದಿರುವ ಇವರು, ಕಳೆದ 10 ವರ್ಷಗಳಿಂದ ಈ ನಿಟ್ಟಿನಲ್ಲಿ ಚಿಕಿತ್ಸೆ ಕೊಡುತ್ತಿದ್ದೇನೆ. ಅದರೆ ನಟಿಯ ಪಾಡ್ಕಾಸ್ಟ್ ಜನರ ದಾರಿ ತಪ್ಪಿಸುತ್ತಿದೆ ಎಂದಿದ್ದಾರೆ. ಇದಕ್ಕೆ ಸಮಂತಾ ಫ್ಯಾನ್ಸ್ ವಿರೋಧಿಸಿರುವಕ್ಕೆ ತಿರುಗೇಟು ನೀಡಿರುವ ವೈದ್ಯರು, ‘ಸಮಂತಾ ಫ್ಯಾನ್ಗಳೇ.. ನೀವು ಅವರ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ ಎಂಜಾಯ್ ಮಾಡಿ. ಆದರೆ ವೈದ್ಯಕೀಯ ವಿಚಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ತಜ್ಞರಿಗೆ ಬಿಡಿ. ಅದನ್ನು ನೀವು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ ಎಂದಿದ್ದಾರೆ.
ಮದ್ವೆಯಾದ 7 ತಿಂಗಳಿಗೇ ಅಮ್ಮನಾದ ಆಲಿಯಾ ಭಟ್ ಕುರಿತ ಇಂಟರೆಸ್ಟಿಂಗ್ ವಿಷ್ಯ ಇದೀಗ ರಿವೀಲ್!