Asianet Suvarna News Asianet Suvarna News

Amruthadhaare : ಆನಂದನಿಗೆ ಗೌತಮ್‌ನ ಗೊರಕೆ ಕೇಳಿಸಲು ಹೇಳಿದ ಭೂಮಿಕಾ, ಲೋ ಆನಂದ ಮನೆಗೆ ಹೋಗೋ ಎಂದ ನೆಟ್ಟಿಗರು!

ಝೀ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗ್ತಿರುವ  ಅಮೃತಧಾರೆ ಧಾರಾವಾಹಿ ಮತ್ತಷ್ಟು ಟ್ವಿಸ್ಟ್ ಪಡೆದಿದೆ. ಮನೆಯಲ್ಲಿದ್ದುಕೊಂಡೇ ರೋಮ್ಯಾನ್ಸ್ ಮಾಡ್ತಿದ್ದ ಜೋಡಿ ಈಗ ಬೇರೆಯಾಗಿದ್ದು, ಗೌತಮ್ ಗೊರಕೆಯನ್ನು ಭೂಮಿ ಮಿಸ್ ಮಾಡಿಕೊಳ್ತಿದ್ದಾಳೆ. 
 

Amrutadhare Bhumika Requests Gautham Snoring Sound For Sleep In Romantic Twist roo
Author
First Published Jul 9, 2024, 2:52 PM IST

ಆಷಾಢ ಶುರುವಾಗಿದೆ. ಮದುವೆಯಾದ ಮೊದಲ ವರ್ಷ ದಂಪತಿ ದೂರ ಇರ್ಬೇಕು. ಹೊಸ ಜೋಡಿಗೆ ವಿರಹ ವೇದನೆ ಕಾಡ್ತಿದೆ. ಅದಕ್ಕೆ ಅಮೃತಧಾರೆಯ ಗೌತಮ್ ಹಾಗೂ ಭೂಮಿಕಾ ಕೂಡ ಸೇರಿದ್ದಾರೆ. ಅತ್ತೆ ಮಾತಿಗೆ ಮಣಿದು, ಭೂಮಿಕಾಳನ್ನು ತವರಿಗೆ ಬಿಟ್ಟು ಹೋದ ಗೌತಮ್, ರೂಮಿನಲ್ಲಿ ಆರಾಮವಾಗಿ ನಿದ್ರೆ ಮಾಡ್ತಿದ್ದಾನೆ. ಆದ್ರೆ ಆತನ ಗೊರಕೆ ಸದ್ದು ಕೇಳದೆ ಭೂಮಿಕಾಗೆ ನಿದ್ರೆಯೇ ಬರ್ತಿಲ್ಲ. ಹಾಸಿಗೆ ಮೇಲೆ ಮಲಗಿದ್ರೂ ನಿದ್ರೆ ಬರದೆ ಒದ್ದಾಡುತ್ತಿರುವ ಭೂಮಿಕಾ ನಾಚಿಕೆ ಬಿಟ್ಟು ಆನಂದ್ ಮುಂದೆ ಒಂದು ಬೇಡಿಕೆ ಇಟ್ಟಿದ್ದಾಳೆ. 

ಮಧ್ಯ ವಯಸ್ಕರ ಪ್ರೇಮ (Love) ಕಥೆಯಾಗಿರುವ ಅಮೃತಧಾರೆಯಲ್ಲಿ ಭೂಮಿಕಾ (Bhumika) ಹಾಗೂ ಗೌತಮ್ (Gautham) ಪ್ರೀತಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಡೇಟಿಂಗ್ ಅದು ಇದು ಅಂತಾ ಖುಷಿಯಾಗಿದ್ದ ದಂಪತಿಯನ್ನು ಬೇರೆ ಮಾಡ್ತಿದ್ದಂತೆ ಅಭಿಮಾನಿಗಳು ಬೇಸರಗೊಂಡಿದ್ದರು. ತೆರೆ ಮೇಲೆ ಇಬ್ಬರ ರೊಮ್ಯಾನ್ಸ್ ನೋಡೋಕೆ ಸಿಗಲ್ವಲ್ಲ ಎನ್ನುವ ಬೇಸರವಿತ್ತು. ಆದ್ರೀಗ ಧಾರಾವಾಹಿಗೆ ಭಿನ್ನ ಟ್ವಿಸ್ಟ್ ನೀಡಲಾಗಿದೆ. ಮನೆಯ ಬೇರೆ ರೂಮಿನಲ್ಲಿ ಯಾರಾದ್ರೂ ಗೊರಕೆ ಹೊಡೆದ್ರೇ ನಮಗೆ ನಿದ್ರೆ ಬರೋದಿಲ್ಲ. ಇನ್ನು ಪಕ್ಕದಲ್ಲಿ ಮಲಗಿದ ವ್ಯಕ್ತಿ ಗೊರಕೆ ಹೊಡೆದ್ರೆ ನಿದ್ದೆ ಇಲ್ಲದೆ ಕೋಪ ನೆತ್ತಿಗೇರುತ್ತೆ. ಆದ್ರೆ ಪ್ರೀತಿಯಲ್ಲಿ ಬಿದ್ದಿರುವ ಭೂಮಿಕಾಗೆ ಮಾತ್ರ ಗೌತಮ್ ಗೊರಕೆ ಕೂಡ ಹಿತವೆನ್ನಿಸಿದೆ. ಗೊರಕೆ ಶಬ್ಧದಲ್ಲಿಯೇ ನಿದ್ರೆ ಮಾಡೋದನ್ನು ಕಲಿತಿರುವ ಭೂಮಿಗೆ ಈಗ ಗೊರಕೆ ಇಲ್ಲದೆ ನಿದ್ರೆ ಬರ್ತಿಲ್ಲ. 

ಇಳಕಲ್ ಸೀರೆಯುಟ್ಟು ಬಾಳ ಬಂಗಾರ ನೀನು ಅಂತ ಸುಧಾರಾಣಿ ಹೇಳಿದ್ಯಾರಿಗೆ?

ಹಾಸಿಗೆ ಮೇಲೆ ಚಡಪಡಿಸಿದ ಭೂಮಿಕಾ ಗೌತಮ್ ಸ್ನೇಹಿತ ಆನಂದ್ ಗೆ ಕರೆ ಮಾಡ್ತಾಳೆ. ಗೌತಮ್ ಗೊರಕೆ ಹೊಡಿತಿರ್ತಾರೆ. ಆ ಗೊರಕೆ ಸೌಂಡ್ ರೆಕಾರ್ಡ್ ಮಾಡಿ ಕಳಸ್ತೀರಾ ಅಂತಾ ರಿಕ್ವೆಸ್ಟ್ ಮಾಡ್ತಾರೆ. ಅಲ್ಲೇ ಇದ್ದ ಆನಂದ್, ಗೌತಮ್ ರೂಮಿಗೆ ಹೋಗಿ, ಗೊರಕೆ ಶಬ್ಧ ರೆಕಾರ್ಡ್ ಮಾಡಿ ಅದನ್ನು ಭೂಮಿಕಾಗೆ ಕಳಿಸ್ತಾರೆ. ಅವರು ಗೊರಕೆ ಸೌಂಡ್ ಕಳಿಸುವವರೆಗೂ ಚಡಪಡಿಕೆಯಲ್ಲಿದ್ದ ಭೂಮಿಕಾ,ರೆಕಾರ್ಡ್ ಬರ್ತಿದ್ದಂತೆ ಖುಷಿಯಾಗಿ ನಿದ್ರೆ ಮಾಡ್ತಾರೆ.

ಇಂದು ಪ್ರಸಾರವಾಗಲಿರುವ ಈ ಪ್ರೋಮೋ ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಇವರ ರೋಮ್ಯಾನ್ಸ್ ನೋಡೋಡೋ ಮಜ ಎನ್ನುತ್ತಿದ್ದಾರೆ. ಆನಂದ್ ಗೊರಕೆ ಶಬ್ಧ ರೆಕಾರ್ಡ್ ಮಾಡ್ತಿದ್ದಂತೆ ಆನಂದ್ ನನ್ನು ಜನರು ಕಾಲೆಳೆಯುತ್ತಿದ್ದಾರೆ. ಲೋ ಆನಂದ್ ಮನೆಗೆ ಹೋಗೋ, ರಾತ್ರಿನೂ ಅವರ ಮನೆಯಲ್ಲೇ ಇರಬೇಕಾ, ನಿನ್ನ ಹೆಂಡತಿ ಕಾಯ್ತಿರುತ್ತಾರೆ ನೋಡಿ ಎಂದು ವೀಕ್ಷಕರು ಆನಂದ್ ಗೆ ಸಲಹೆ ನೀಡಿದ್ದಾರೆ. 

ಆಷಾಢದಲ್ಲಿ ಅತ್ತೆ – ಸೊಸೆ ಮುಖ ನೋಡ್ಬಾರದು. ಗಂಡ – ಹೆಂಡತಿಯದ್ದಲ್ಲ. ಗೌತಮ್ ನೋಡೋಕೆ ನೀನು ಹೋಗಮ್ಮ ಅಂತ ವೀಕ್ಷಕರು ಹೇಳ್ತಿದ್ದಾರೆ. ಅಷ್ಟೇ ಅಲ್ಲ, ಗೊರಕೆ ಹೊಡೆದ್ರೆ ಎಷ್ಟೋ ಜನಕ್ಕೆ ನಿದ್ರೆಯೇ ಬರಲ್ಲ. ಇದು ಡೈವೋರ್ಸ್ ತನಕ ಹೋಗಿದ್ದಿದೆ. ನಿಮ್ಮದೇನು ವಿಚಿತ್ರ ಎನ್ನುತ್ತಿದ್ದಾರೆ ವೀಕ್ಷಕರು. ಸೀರಿಯಲ್ ಚೆನ್ನಾಗಿದೆ ಅಂದಿದ್ದೇ ನಿಮ್ಮ ಬಾಲ ಬಿಚ್ಚುತ್ತಿದ್ದೀರಾ ಅಂತ ಕೆಲ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆನಂದ್, ಭೂಮಿ ಕಷ್ಟ ನೋಡೋಕೆ ಆಗ್ತಿಲ್ಲ. ಆಷಾಢ ಮುಗಿಯೋವರೆಗೂ ನಿಮ್ಮ ಮನೆಯಲ್ಲಿ ಇಬ್ಬರನ್ನು ಇಟ್ಕೊಂಡು ಬಿಡಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ. 

2 ವರ್ಷ ಆದ್ರೂ ಗಂಡನಿಂದ ಆ ಆಸೆ ಈಡೇರಿಲ್ಲ ಎಂದ ಶುಭಾ ಪೂಂಜಾ; ಮ್ಯಾಟರ್‌ ಬಿಟ್ಕೊಡ್ಬೇಕಾ ಕಣ್ಣಮ್ಮ ಎಂತಾರೆ ನೆಟ್ಟಿಗರು

ಝೀನಲ್ಲಿ ಪ್ರಸಾರವಾಗ್ತಿರುವ ಧಾರಾವಾಹಿಯಲ್ಲಿ ಅಮೃತಧಾರೆ ಎಲ್ಲರನ್ನು ಆಕರ್ಷಿಸಿದ್ದು ಸುಳ್ಳಲ್ಲ. ಆರಂಭದಿಂದಲೂ ಅವರ ಅಭಿನಯ ಅಭಿಮಾನಿಗಳನ್ನು ಸೆಳೆದಿದೆ. ಜಗಳ, ಒಳ ಹುಳುಕಿಲ್ಲದೆ ದಂಪತಿ ಮಧ್ಯೆ ಹೊಂದಾಣಿಕೆ, ಪ್ರೀತಿ, ರೋಮ್ಯಾನ್ಸ್ ತೋರಿಸುತ್ತಿರುವ ಧಾರಾವಾಹಿಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಇನ್ನಷ್ಟು ಭೂಮಿಕಾ, ಗೌತಮ್ ಪ್ರೀತಿ ನೋಡೋಕೆ ಸಿಗಲಿ ಅನ್ನೋದು ಅಭಿಮಾನಿಗಳ ಬಯಕೆ.  

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios