Asianet Suvarna News Asianet Suvarna News

ಇಳಕಲ್ ಸೀರೆಯುಟ್ಟು ಬಾಳ ಬಂಗಾರ ನೀನು ಅಂತ ಸುಧಾರಾಣಿ ಹೇಳಿದ್ಯಾರಿಗೆ?

ನಟಿ ಸುಧಾರಾಣಿ ಡಾನ್ಸ್ ಮಾಡೋದ್ರಲ್ಲಿ ಸೂಪರ್. ಎಲ್ಲ ರೀತಿಯ ಡಾನ್ಸ್ ಅಧ್ಬುತವಾಗಿ ಮಾಡುವ ಸುಧಾರಾಣಿ ಈಗ ಡಾಕ್ಟರ್ ರಾಜ್ ಕುಮಾರ್ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಅವರ ಡಾನ್ಸ್ ನೋಡಿ ನೀವು ಗೊಂಬೆ ಎಂದು ಅಭಿಮಾನಿಗಳು ಹೇಳಿದ್ದಾರೆ.
 

Kannada Actress Sudharani Dance Video For Dr Rajkumar Song roo
Author
First Published Jul 9, 2024, 12:56 PM IST

ಸ್ಯಾಂಡಲ್ವುಡ್ ನಟಿ ಸುಧಾರಾಣಿ ಸದ್ಯ ಝೀ ಕನ್ನಡದ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮಾಧವನ ಪತ್ನಿಯಾಗಿ ಎಲ್ಲರಿಗೂ ತುಳಸಿ ಅಮ್ಮನಾಗಿ ಪ್ರೇಕ್ಷಕರ ಮನ – ಮನೆಯಲ್ಲಿ ನೆಲೆಸಿರುವ ಸುಧಾರಾಣಿ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದಾರೆ. ಶೂಟಿಂಗ್ ಮಧ್ಯೆ, ಟ್ರಾಫಿಕ್ ನಲ್ಲಿ, ಸ್ನೇಹಿತರ ಜೊತೆ ಹೀಗೆ ಎಲ್ಲ ಕಡೆ ಆಗಾಗ ವಿಡಿಯೋ ಮಾಡುವ ಸುಧಾರಾಣಿ ಅದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ತಿರುತ್ತಾರೆ. ಈಗ ಸುಧಾರಾಣಿಯವರ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಇಳಕಲ್ ಸೀರೆ ಉಟ್ಟುಕೊಂಡು ಸುಧಾರಾಣಿ, ಮಾಧವ್ ಜೊತೆ ಹೆಜ್ಜೆ ಹಾಕಿದ್ದಾರೆ. ಗದ್ದೆಯಲ್ಲಿ ಮಾಧವ್ ಜೊತೆ ನಡೆದುಕೊಂಡು ಬಂದು, ಸ್ಯಾಂಡಲ್ವುಡ್ ನ ಸೂಪರ್ ಹಿಟ್ ಹಾಡಿಗೆ ಡಾನ್ಸ್ ಮಾಡಿದ್ದಾರೆ ಸುಧಾರಾಣಿ.

ನಟಿ ಸುಧಾರಾಣಿ (sudharani) ತಮ್ಮ ಇನ್ಸ್ಟಾಗ್ರಾಮ್ (Instagram) ನಲ್ಲಿ ಈ ಡಾನ್ಸ್ (dance) ವಿಡಿಯೋ ಹಂಚಿಕೊಂಡಿದ್ದಾರೆ. ಶುಭೋದಯ ಜನರೇ! ಕಾಫಿ ಜೊತೆಗೆ ನಮ್ಮ ಕ್ಲಾಸಿಕ್ ಐಕಾನಿಕ್ ಹಾಡಿನ ಸಣ್ಣ ಡೋಸ್ ಹೇಗೆ!? ಶೂಟಿಂಗ್ ಮಧ್ಯೆ ಈ ರೀಲ್ಸ್ ಮಾಡಲು ತುಂಬಾ ಖುಷಿಯಾಯ್ತು ಎಂದು ಸುಧಾರಾಣಿ ಶೀರ್ಷಿಕೆ ಹಾಕಿದ್ದಾರೆ.  

ಸಿನಿ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಸೆಳೆಯಲು ಹೊಸ ಪ್ಲ್ಯಾನ್‌: ಇಷ್ಟ ಆದ್ರೆ ಮಾತ್ರ ಇಂಟರ್‌ವಲ್‌ನಲ್ಲಿ ಟಿಕೆಟ್‌ ಖರೀದಿಸಿ!

ಸುಧಾರಾಣಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ಶ್ರೀರಸ್ತು – ಶುಭಮಸ್ತು ನಟ ಮಾಧವ್ ಕೂಡ ಕಾಣಿಸಿಕೊಂಡಿದ್ದಾರೆ. ಸುಧಾರಾಣಿ ಇಳಕಲ್ ಸೀರೆಯುಟ್ಟು, ಕೂದಲನ್ನು ಕಟ್ಟಿ, ಹೂ ಮುಡಿದಿದ್ದಾರೆ. ಪಕ್ಕಾ ಹಳ್ಳಿ ಹೆಂಗಸಿನಂತೆ ಕಾಣುವ ಸುಧಾರಾಣಿ ಈ ಉಡುಗೆಯಲ್ಲೂ ಆಕರ್ಷಕವಾಗಿ ಕಾಣ್ತಿದ್ದಾರೆ. ಇನ್ನು ಮಾಧವ್ ಬಿಳಿ ಪಂಜೆ ಧರಿಸಿ, ತಲೆಗೆ ಟವೆಲ್ ಕಟ್ಟಿದ್ದಾರೆ.

ಆರಂಭದಲ್ಲಿ ಇಬ್ಬರೂ ನಡೆದು ಬರ್ತಾರೆ. ನಂತ್ರ ಬಾಳಾ ಬಂಗಾರ ನೀನು ಹಾಡಿಗೆ ಸುಧಾರಾಣಿ ಡಾನ್ಸ್ ಮಾಡ್ತಾರೆ. ಅದಕ್ಕೆ ಮಾಧವ್ ಸಾತ್ ನೀಡ್ತಿದ್ದಾರೆ. ಈ ವಿಡಿಯೋಕ್ಕೆ ಅಭಿಮಾನಿಗಳು ಲೈಕ್ ಮೇಲೆ ಲೈಕ್ ಒತ್ತಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, ಅನೇಕರು ಕಮೆಂಟ್ ಮಾಡಿದ್ದಾರೆ.

ನೀವು ಗೊಂಬೆಯೇ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ರೀಲ್ ನಲ್ಲೂ ರಿಯಲ್ ನಲ್ಲೂ ಸೂಪರ್ ಜೋಡಿ ಎಂದು ಅಭಿಮಾನಿಗಳು ಹೇಳಿದ್ದಾರೆ. ನಿಮಗೆ ವಯಸ್ಸಾಗೋದೇ ಇಲ್ವಾ, ಲವ್ ಯು ಮೇಡಂ ಹೀಗೆ ನಾನಾ ಕಮೆಂಟ್ ಗಳು ಬಂದಿವೆ. 

ಸುಧಾರಾಣಿಗೆ ಈಗ 54 ವರ್ಷ. ಸಿನಿಮಾ ಜೊತೆ ಸುಧಾರಾಣಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಸುಧಾರಾಣಿ ಪಾತ್ರ ಎಲ್ಲರ ಅಚ್ಚುಮೆಚ್ಚು. ಹಿಂದಿನ ಎಪಿಸೋಡ್ ಗಳಲ್ಲಿ ಸುಧಾರಾಣಿ ಭರತನಾಟ್ಯ ಮಾಡಿ ಎಲ್ಲರನ್ನು ಮತ್ತಷ್ಟು ಬೆರಗುಗೊಳಿಸಿದ್ದರು. ಅವರ ಡಾನ್ಸ್ ನೋಡಿ ಅಭಿಮಾನಿಗಳು ಸಾಕಷ್ಟು ಕಮೆಂಟ್ ಮಾಡಿದ್ದರು. ಈ ವಿಷ್ಯವನ್ನು ಕೂಡ ಸುಧಾರಾಣಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ನನ್ನ ಡಾನ್ಸ್ ಗೆ ನೀವು ಸಂಪೂರ್ಣ ಬೆಂಬಲ ನೀಡಿದ್ದು, ಧನ್ಯವಾದಗಳು ಎಂದು ಸುಧಾರಾಣಿ ಹೇಳಿದ್ದರು. ಶೂಟ್ ನಲ್ಲಿ ಏನಾಗ್ತಿದೆ, ಮನೆಯಲ್ಲಿ ಖಾಲಿ ಟೈಂನಲ್ಲಿ ಏನು ಮಾಡ್ತೇನೆ ಎಂಬುದನ್ನೆಲ್ಲ ಸುಧಾರಾಣಿ ಹೇಳ್ತಿರುತ್ತಾರೆ. 

ಇಷ್ಟು ಬೇಗ ಒಟಿಟಿಗೆ ಬರ್ತಿದ್ಯಾ ಕಲ್ಕಿ 2898 ಎಡಿ? ಇಲ್ಲಿದೆ ದಿನಾಂಕ, ಪ್ಲ್ಯಾಟ್‌ಫಾರಂ ವಿವರ..

ಸುಧಾರಾಣಿ ಭರತನಾಟ್ಯ ಕಲಾವಿದೆ ಕೂಡ ಹೌದು. ಭರತನಾಟ್ಯ ಮಾತ್ರವಲ್ಲದೇ ಕೂಚುಪುಡಿ ಕಲಾವಿದೆ.  ಇವರು ಕನ್ನಡ ಚಿತ್ರರಂಗವಲ್ಲದೇ, ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ನಟಿಸಿದ್ದಾರೆ. ತಮ್ಮ 13ನೇ ವಯಸ್ಸಿನಲ್ಲೇ  ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ  ರಾಜ್ ನಿರ್ಮಾಣ ಸಂಸ್ಥೆಯ ಮೂಲಕವಾಗಿ ಶಿವರಾಜಕುಮಾರ್ ನಟನೆಯ  'ಆನಂದ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.  ಸದ್ಯ ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ 'ಫೈರ್ ಫ್ಲೈ' ಸಿನಿಮಾ   ಬಳಗವನ್ನು ಸುಧಾರಾಣಿ ಸೇರಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಹಾಗೂ ಡಬ್ಬಿಂಗ್ ಎರಡೂ ಪೂರ್ಣಗೊಂಡಿದೆ.

Latest Videos
Follow Us:
Download App:
  • android
  • ios