Asianet Suvarna News Asianet Suvarna News

ನಿಮ್ಮಪ್ಪ ಪಟಾಕಿ ಫ್ಯಾಕ್ಟರಿ ಇಟ್ಟಿದ್ದಾರಾ? ನೀವೊಂದು ಬಾಂಬ್​ ಎಂದ ಅಮೃತಧಾರೆ ಗೌತಮ್​!

ಅಮೃತಧಾರೆ ಸೀರಿಯಲ್​ ಭೂಮಿಕಾ ಮತ್ತು ಗೌತಮ್​ ಅವರನ್ನು ಜೀ ಕುಟುಂಬ ಅವಾರ್ಡ್​ನಲ್ಲಿ ಸಂದರ್ಶನ ಮಾಡಿದ್ದಾಗ ಹೇಳಿದ್ದೇನು? 
 

Amritdhare Serial Bhumika  Gautham  interviewed at Zee Kudumba Awards suc
Author
First Published Nov 10, 2023, 9:30 PM IST

  ಜೀ ಕುಟುಂಬ ಅವಾರ್ಡ್​ಗೆ ಅಮೃತಧಾರೆ ಸೀರಿಯಲ್​ ಗೌತಮ್​ ಮತ್ತು ಭೂಮಿಕಾ ಜೋಡಿ ಎಂಟ್ರಿ ಕೊಟ್ಟಿದೆ. ಇದು ಇಬ್ಬರಿಗೂ ಜೀ ಕುಟುಂಬ ಅವಾರ್ಡ್​ ಕಾರ್ಯಕ್ರಮ. ಈ ಹಿನ್ನೆಲೆಯಲ್ಲಿ ಇವರಿಗೆ ಪ್ರಶ್ನೆ ಕೇಳಲಾಯಿತು. ಇದು ಮೊದಲ ಸಲದ ಅವಾರ್ಡ್​, ಹೇಗೆ ಅನ್ನಿಸತ್ತೆ ಎಂದು. ಅದಕ್ಕೆ ಭೂಮಿಕಾ, ಮೊದಲ ಟೈಂ ಅಂತ ತುಂಬಾ ಖುಷಿಯಾಗಿದೆ. ಎಲ್ಲಾ ಕಲಾವಿದರನ್ನೂ ಒಂದೇ ವೇದಿಕೆಯಲ್ಲಿ ನೋಡಲು ಖುಷಿ ಆಗುತ್ತದೆ. ಇಷ್ಟು ದಿನ ಶೂಟಿಂಗ್ ಸಮಯದಲ್ಲಿ ನೋಡಬೇಕಿತ್ತು. ಈಗ ತುಂಬಾ ಒಳ್ಳೆಯದು ಅನ್ನಿಸ್ತಿದೆ ಎಂದರೆ, ಗೌತಮ್​, ಒಬ್ಬ ಆರ್ಟಿಸ್ಟ್​ಗೆ ಈ ಅವಾರ್ಡ್​ ಮುಖ್ಯವಾಗುತ್ತದೆ. ಮಾಡಿದ  ಕೆಲಸಕ್ಕೆ ಒಳ್ಳೆಯ ರಿಕಗ್ನಿಷನ್​ ಸಿಕ್ಕಿರೆ ಖುಷಿ. ಧಾರಾವಾಹಿಯ ಎಲ್ಲರೂ ಉತ್ತಮ ಕಲಾವಿದರೇ. ಎಲ್ಲರೂ ತುಂಬಾ ಶ್ರಮ ಪಟ್ಟು ಕೆಲಸ ಮಾಡಿರುತ್ತೇವೆ. ಅವರ ಪಾತ್ರಕ್ಕೆ ನ್ಯಾಯ ಒದಗಿಸುವವರೇ. ಅವಾರ್ಡ್​ ಬಂದರೆ ಇನ್ನೂ ಖುಷಿಯಾಗುತ್ತದೆ. ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಬೇಕು ಎನ್ನುವ ಹುಮ್ಮಸ್ಸು ಉಂಟಾಗುತ್ತದೆ ಎಂದರು. 
 
ಯಾರಿಗೆ ಅವಾರ್ಡ್​ ಸಿಗತ್ತೆ ಎಂದು ಟೆನ್ಷನ್​ ಆಗತ್ತಾ ಎಂದಾಗ ಇಬ್ಬರೂ ಇಲ್ಲ, ಟೆನ್ಷನ್​ ಏನೂ ಇಲ್ಲ. ಯಾರಿಗೆ ಅವಾರ್ಡ್​ ಬಂದರೂ ಅದು ಖುಷಿಯೇ. ಇದು ನಮ್ಮ ಕುಟುಂಬ ಇದ್ದಂತೆ. ಒಂದು ಫ್ಯಾಮಿಲಿಯ ಯಾರಿಗೆ ಪ್ರಶಸ್ತಿ ಬಂದರೂ ಅದು ಖುಷಿಯೇ ಎಂದಿದ್ದಾರೆ.  ಇದೇ ವೇಳೆ ಇಬ್ಬರಿಗೂ ಆಟ ಆಡಿಸಲಾಗಿದೆ. ಆಡು ಆಟ ಆಡು ಹೆಸರಿನಲ್ಲಿ ಆಟವಾಡಿಸಿ ಯಾರು ಗೆಲ್ಲುತ್ತಾರೆ ಎಂದು ನೋಡಿದರೆ ಇಬ್ಬರೂ ವಿನ್​ ಆಗಿಬಿಟ್ಟಿದ್ದಾರೆ. ಅಷ್ಟಕ್ಕೂ ಭೂಮಿಕಾದ ಮೂವರು ಸಿನಿಮಾ ನಿರ್ದೇಶಕರ ಹೆಸರು ಕೇಳಲಾಯಿತು, ಗೌತಮ್​ ಅವರಿಗೆ  ಅತಿ ಹೆಚ್ಚು ಪ್ರದರ್ಶನ ಕಂಡ ಕನ್ನಡ ಚಿತ್ರ ಯಾವುದು ಎಂದಾಗ ಅವರು ಬಂಗಾರದ ಮನುಷ್ಯ ಎಂದರು. ಮೂವರು ಹೀರೋಯಿನ್​ ಹೆಸರನ್ನು ಭೂಮಿಕಾ ಪಟಾಪ್​ ಹೇಳಿದರೆ, ಶಿವರಾಜ್​ ಕುಮಾರ್​ ಅಭಿನಯದ ಐದು ಚಿತ್ರಗಳನ್ನು ಗೌತಮ್​ ಹೇಳಿದರು.  ಸ್ಯಾಂಡಲ್​ವುಡ್​ ಕಪಲ್​ ಹೆಸರನ್ನು ಭೂಮಿಕಾ ಹೇಳಿದರೆ, ಕರ್ನಾಟಕ ಅತ್ಯುನ್ನತ ನಾಗರಿಕೆ ಪ್ರಶಸ್ತಿ ಬಗ್ಗೆ ಗೌತಮ್​ ಹೇಳಿದರು. ಎಲ್ಲರಿಗೂ ಸಮನಾದ ಮಾರ್ಕ್ಸ್​ ಬಂತು.
ದುಡ್ಡಿನ ಆಟದಲ್ಲಿ ಶ್ರೀಮಸ್ತು ಶುಭಮಸ್ತು ಸೀರಿಯಲ್​ನಲ್ಲಿ ಗೆದ್ದೋರು ಯಾರು?

ಕೊನೆಗೆ ಒಂದು ಪಿಕಪ್​ ಡೈಲಾಗ್​ ಹೇಳಿ ಎಂದು ಗೌತಮ್​ ಅವರಿಗೆ ಹೇಳಿದಾಗ ಅವರು, ನಿಮ್ಮಪ್ಪ ಪಟಾಕಿ ಫ್ಯಾಕ್ಟರ್​ ಇಟ್ಟಿದ್ದಾರೆ, ಯೂ ಆರ್​ ಎ ಬಾಂಬ್​ ಎಂದಾಗ ಭೂಮಿಕಾ ಓ ಎಂದಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಕೂಡ ಫುಲ್​ ಖುಷಿಯಾಗಿದ್ದಾರೆ. 
 
ಇನ್ನು ಅಮೃತಧಾರೆ ಸೀರಿಯಲ್​ ಬಗ್ಗೆ ಹೇಳುವುದಾದರೆ, ಭೂಮಿಕಾ (Bhoomika)  ಅಮೃತಧಾರೆ ಸೀರಿಯಲ್​ ನಾಯಕಿ. ವಯಸ್ಸಾದರೂ ಮದುವೆಯಾಗದೇ ಉಳಿದ ಮಧ್ಯಮ ಕುಟುಂಬದ ಹೆಣ್ಣುಮಗಳೊಬ್ಬಳು ಒತ್ತಾಯಪೂರ್ವಕವಾಗಿ ವಯಸ್ಸಾಗಿರುವ ಕೋಟ್ಯಧಿಪತಿ ಬಿಜಿನೆಸ್​ಮೆನ್​ ಜೊತೆ ಮದುವೆಯಾಗಿ ಸಂಸಾರದಲ್ಲಿ ಹೊಂದಿಕೊಳ್ಳಲು ಪರದಾಡುತ್ತಿರುವ ಪಾತ್ರ ಈ ಭೂಮಿಕಾಳದ್ದು. ಭೂಮಿಕಾ ಪಾತ್ರಕ್ಕೆ ಜೀವ ತುಂಬಿರೋ ನಟಿಯ ಅಸಲಿ ಹೆಸರು ಛಾಯಾ ಸಿಂಗ್​. ಕೋಟ್ಯಧೀಶ್ವರ ಬಿಜಿನೆಸ್​ಮೆನ್​ ಆಗಿ ನಟಿಸುತ್ತಿರುವವರು ಗೌತಮ್​. ಇವರ ನಿಜವಾದ ಹೆಸರು ರಾಜೇಶ್​. ಟಿಆರ್​ಪಿಯಲ್ಲಿಯೂ ಮುಂದಿರೋ ಈ ಸೀರಿಯಲ್​ನಲ್ಲಿ ಈ ಜೋಡಿಯನ್ನು ಪ್ರೇಕ್ಷಕರು ಸಕತ್​ ಇಷ್ಟಪಡುತ್ತಿದ್ದಾರೆ. 
 

ಕ್ಯೂಟ್‌ ಲೇಡಿ ವಿಲನ್ಸ್‌ ಅಬ್ಬರದ ನಗು ಕೇಳಿದ್ರೆ ನೀವೂ ನಗೋದು ಗ್ಯಾರೆಂಟಿ!

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios