Asianet Suvarna News Asianet Suvarna News

ಅಮ್ಮನಿಗೆ ಕೊಟ್ಟ ಮಾತು ನೆರವೇರಿಸಿದ ಪುತ್ರ: ಸರಿಗಮಪ ಆಡಿಷನ್​ನಲ್ಲಿ ಭಾವುಕ ಕ್ಷಣ

ಸರಿಗಮಪ ವೇದಿಕೆಯಲ್ಲಿ ಮಂಗಳೂರಿನ ಅಮಿಶ್​ ಕುಮಾರ್​ ಅವರ ಕಂಠ ಮಾಧುರ್ಯಕ್ಕೆ ಎಲ್ಲರೂ ಮನಸೋತಿದ್ದು, ಅಮ್ಮನ ಆಸೆ ಈಡೇರಿಸಿ ಭಾವುಕರಾದರು. 
 

Amish Kumar  on the Sarigamapa  got emotional  fulfilling   mothers wish suc
Author
First Published Oct 15, 2023, 4:30 PM IST

ಜೀ ಕನ್ನಡ ಚಾನೆಲ್​ನಲ್ಲಿ  (Zee Kannada Channel) ವಾರಾಂತ್ಯದಲ್ಲಿ ಎಲ್ಲರ ಮೆಚ್ಚುಗೆ ಗಳಿಸುತ್ತಿರುವ ಸರಿಗಮಪ ಸಂಗೀತ ರಿಯಾಲಿಟಿ ಷೋ ಈಗ 20ನೇ ಕಂತಿಗೆ ಕಾಲಿಟ್ಟಿದೆ. ಅಪಾರ ಪ್ರಮಾಣದಲ್ಲಿ ಜನ ಮೆಚ್ಚುಗೆ ಗಳಿಸಿರುವ ಈ ಷೋದಲ್ಲಿ ರಾಜ್ಯಗಳ ವಿವಿಧ ಮೂಲೆಗಳ ಸಂಗೀತ ಪ್ರತಿಭೆಗಳನ್ನು ವಾಹಿನಿ ಪರಿಚಯಿಸಿದೆ. ಇದಾಗಲೇ 19 ಸರಣಿಗಳನ್ನು (season) ಪೂರೈಸಿದ್ದು, ಇದೀಗ 20ನೇ ಸೀಸನ್​ ಶುರುವಾಗಿದೆ.  ಈ ಬಾರಿ, ಹೊಸತನಕ್ಕೆ ಕೈಹಾಕಲಾಗಿದೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ ಆಡಿಷನ್​ ನಡೆದಿದೆ. ಇಲ್ಲಿ ಆಡಿಷನ್​ ನಡೆದಿರುವ ಸಂದರ್ಭದಲ್ಲಿ ಕರ್ನಾಟಕದ ಹೊರ ರಾಜ್ಯಗಳ ಪ್ರತಿಭೆಗಳೂ ಪಾಲ್ಗೊಂಡಿದ್ದು, ಹಲವರಿಗೆ ಈ ಕಾರ್ಯಕ್ರಮದಲ್ಲಿ ಹಾಡುವ ಅವಕಾಶ ದೊರಕಿದೆ. ಇದೀಗ ಹೊಸ ಪ್ರಯತ್ನಕ್ಕೆ ಕೈಹಾಕಿರುವ ತಂಡ, ಕನ್ನಡದ ಕಂಪನ್ನು ಹೊರ ದೇಶಗಳಿಗೂ ಬಿತ್ತರಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಈಗ ಈ ಕನ್ನಡದ ಸ್ವರ ಸಂಭ್ರಮ ಈಗ ವಿಶ್ವ ಸಂಭ್ರಮವಾಗಲಿದೆ, ಕನ್ನಡದ ಸರಿಗಮಪ ಈಗ ವಿಶ್ವಕ್ಕೆ ವಿಸ್ತರಿಸಲಿದೆ.  ಸರಿಗಮಪ ಸೀಸನ್ 19ರ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣುಸೂರು (Raghavendra Hunusuru) ಹೊಸ ಘೋಷಣೆ ಮಾಡಿದ್ದರು. ಇಂಗ್ಲೆಂಡ್​, ಅಮೆರಿಕ ಸೇರಿದಂತೆ  ಬೇರೆ ಬೇರೆ ದೇಶದಲ್ಲಿ ಇರೋ ಕನ್ನಡಿಗರಿಗೆ ಅವಕಾಶ ಕೊಡುವುದಾಗಿ ಹೇಳಿದ್ದರು. ಅಲ್ಲಿ ಇರುವವರು ಕನ್ನಡದ ಹಾಡು ಹೇಳುವ ಚಾನ್ಸ್ ಇದೆ ಎಂದಿದ್ದರು. ಅದರಂತೆಯೇ ಈಗ ತಂಡ ಕಾರ್ಯಪ್ರವೃತ್ತವಾಗಿದೆ. ಈ 19 ಸೀಸನ್​ನಲ್ಲಿ ಹಾಡಿರುವ ಹಲವು ಗಾಯಕರು ಸಂಗೀತ ಆಲ್ಬಂಗಳಿಗೆ ಆಯ್ಕೆಯಾದವರಿದ್ದಾರೆ. ಹಿನ್ನೆಲೆ ಗಾಯಕರಾಗಿಯೂ ಅವರಿಗೆ ಅವಕಾಶ ಸಿಕ್ಕಿದೆ. ಇದೀಗ ಹೊರ ದೇಶಗಳ ಪ್ರತಿಭೆಗಳನ್ನು ಹುಡುಕಿ ಅವರಿಗೆ ಅವಕಾಶ ನೀಡಲಾಗುತ್ತಿದ್ದು ಇದರ ಮೆಗಾ ಆಡಿಷನ್​ ಶುರುವಾಗಿದೆ. 

ಬಿಗ್​ಬಾಸ್​ ನಡೆಸಿಕೊಡಲು ಸುದೀಪ್​ ಹಾಗೂ ಬೇರೆ ಭಾಷೆ ನಟರು ಪಡೆಯುವುದೆಷ್ಟು? ಅತಿ ಹೆಚ್ಚು ಯಾರಿಗೆ, ಇಲ್ಲಿದೆ ವಿವರ

 ಇದಾಗಲೇ ಮೆಗಾ ಆಡಿಷನ್​ ಆರಂಭಗೊಂಡಿದ್ದು, ಇದನ್ನು ಎಂದಿನಂತೆ ಆ್ಯಂಕರ್​ ಅನುಶ್ರೀ ನಡೆಸಿಕೊಡುತ್ತಿದ್ದಾರೆ.  ಇದರಲ್ಲಿ ಇದಾಗಲೇ ಕೆಲವು ಗಾಯಕರು ತಮ್ಮ ಸುಮಧುರ ಕಂಠದಿಂದ ಜನರನ್ನು ಮೋಡಿ ಮಾಡಿದ್ದಾರೆ. ಇದೀಗ ಮಂಗಳೂರಿನ ಪ್ರತಿಭೆ ಅಮಿಶ್​ ಕುಮಾರ್​ ಹಾಡಿದ್ದು, ಅವರ ಸ್ವರದಿಂದ ಜನರು ಮಂತ್ರಮುಗ್ಧರಾಗಿದ್ದಾರೆ. ಗೋಲ್ಡನ್​ ಸ್ಟಾರ್​ ಗಣೇಶ್​ ಅವರ ಅಭಿನಯದ ಅರಮನೆ ಚಿತ್ರದ ಕೊಲ್ಲೆ ನನ್ನನ್ನೇ ಹಾಡನ್ನು ಹಾಡಿರುವ ಅಮಿಶ್​ ಅವರು ಜಡ್ಜ್​ಸ್​ ಮನಗೆದ್ದಿದ್ದಾರೆ. ಅವರ ಕಂಠ ಮಾಧುರ್ಯಕ್ಕೆ, ತೀರ್ಪುಗಾರರು ಮಾತ್ರವಲ್ಲದೇ ಪ್ರೇಕ್ಷಕರನ್ನೂ ಮರಳುಗೊಳಿಸುವಂತಿದೆ.

ಹಾಡಿನ ಬಳಿಕ ಅವರನ್ನು ತೀರ್ಪುಗಾರರು ಮುಂದಿನ ಸಂಚಿಕೆಗೆ ಆಯ್ಕೆ ಮಾಡುತ್ತಿದ್ದಂತೆಯೇ ಅಮ್ಮನಿಗೆ ಆನಂದಬಾಷ್ಪವಾಗಿದೆ. ಆಗ ಅಮಿಶ್​ ಅವರ ಅಮ್ಮ ಒಮ್ಮೆಯಾದರೂ ಈ ವೇದಿಕೆ ಮೇಲೆ ಬರುತ್ತೇನೆ ಎಂದು ಮಗ ಪ್ರಾಮಿಸ್​ ಮಾಡಿದ್ದ. ಇಂದು ಅದು ನೆರವೇರಿದೆ ಎಂದು ಭಾವುಕರಾದರು. ಜೀ ಕನ್ನಡವನ್ನು ನಾನು ಯಾವಾಗಲೂ ನೋಡುತ್ತಿದ್ದೆ. ಅಲ್ಲಿಯ ಹಾಡುಗಾರರನ್ನು ನೋಡಿದಾಗ ಮಗ ನೀನು ಯಾವಾಗ ಹೀಗೆ ಬರೋದು ಎಂದಿದ್ದೆ. ಆಗ ಅವನು,  ಒಂದು ಸಲ ಆದ್ರೂ ಬಂದು ತೋರಿಸ್ತೀನಿ ಅಂದಿದ್ದ ಅಮ್ಮ ಎಂದಿದ್ದ. ಅದು ಇಂದು ನೆರವೇರಿದೆ ಎಂದರು. ಈ ಬಗ್ಗೆ ಕಣ್ಣೀರು ಸುರಿಸುತ್ತಲೇ ಮಾತನಾಡಿದ ಅಮಿಶ್​, ನನ್ನ ಅಪ್ಪ ವಿದೇಶದಲ್ಲಿ ಇರುವುದು, ಮೂರು ವರ್ಷಕ್ಕೊಮ್ಮೆ ಬರುತ್ತಾರೆ. ನನಗೆ ಎಲ್ಲವೂ ನನ್ನ ಅಮ್ಮನೇ. ಒಮ್ಮೆಯಾದರೂ ಕೊನೆಯ ಪಕ್ಷ ಆಡಿಷನ್​ ಮಟ್ಟಿಗಾದರೂ ಈ ವೇದಿಕೆ ಮೇಲೆ ಬರುವ ಕನಸು ಕಂಡಿದ್ದೆ. ಇದಕ್ಕಾಗಿಯೇ ಅಮ್ಮನಿಗೆ ಮಾತೂ ಕೊಟ್ಟಿದ್ದೆ. ಅದು ನೆರವೇರಿದೆ ಎಂದಿದ್ದಾರೆ. 

ಶ್ರೀರಸ್ತು ಶುಭಮಸ್ತು ವಿಲನ್​ ಶಾರ್ವರಿ ಇಷ್ಟು ಚಿಕ್ಕವರಾ? ಸೀರಿಯಲ್​ ತಂಡದ ಜೊತೆ ಬೊಂಬಾಟ್​ ರೀಲ್ಸ್​

 

Follow Us:
Download App:
  • android
  • ios