Aly Goni jasmin bhasin ಸೀರಿಯಲ್ ನಟ ಅಲಿ ಗೋನಿ ಮತ್ತು ಜಾಸ್ಮಿನ್ ಭಾಸಿನ್ ಲಿವ್-ಇನ್ ರಿಲೇಷನ್‌ಷಿಪ್‌ನಲ್ಲಿದ್ದಾರೆ. ಆದರೆ, ಈ ನಿರ್ಧಾರಕ್ಕೆ ಮುನ್ನ ಅಲಿ ವಿಚಿತ್ರ ಷರತ್ತು ವಿಧಿಸಿದ್ದರು. ಪ್ರತ್ಯೇಕ ಕೊಠಡಿಗಳಲ್ಲಿ ವಾಸಿಸುವುದು ಈ ಷರತ್ತಿನ ಭಾಗ.
ಬೆಂಗಳೂರು (ಸೆ.12): ಸೀರಿಯಲ್ ನಟ ಅಲಿ ಗೋನಿ ಮತ್ತು ಅವರ ಗೆಳತಿ ಜಾಸ್ಮಿನ್ ಭಾಸಿನ್ ಇತ್ತೀಚೆಗೆ ಲಿವ್-ಇನ್ ರಿಲೇಷನ್‌ಷಿಪ್‌ನಲ್ಲಿರೋದು ಗೊತ್ತಾಗಿತ್ತು. ಆದರೆ, ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ಅಲಿ ಒಂದು ವಿಚಿತ್ರವಾದ ಷರತ್ತು ವಿಧಿಸಿದ್ದರು ಎನ್ನುವುದು ಬಹಿರಂಗವಾಗಿದೆ. ಅಲಿ ಗೋನಿ 'ಯೇ ಹೈ ಮೊಹಬ್ಬತೇ' ಸೀರಿಯಲ್‌ನಿಂದ ಖ್ಯಾತಿ ಪಡೆದವರು. ಕಳೆದ ಕೆಲವು ದಿನಗಳಿಂದ ಅವರು ಹಲವು ಕಾರಣಗಳಿಗೆ ಸುದ್ದಿಯಲ್ಲಿದ್ದಾರೆ. ಗಣೇಶ ಹಬ್ಬದ ಸಮಯದಲ್ಲಿ 'ಗಣಪತಿ ಬಪ್ಪಾ ಮೋರಿಯಾ' ಎಂದು ಹೇಳದಿದ್ದಕ್ಕಾಗಿ ಹಾಗೂ ಅವರ ಗೆಳತಿ ಜಾಸ್ಮಿನ್ ಬುರ್ಖಾ ಧರಿಸಿದ್ದ ಫೋಟೋ ವೈರಲ್ ಆದಾಗ ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಅಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ತಾನು ಮುಸ್ಲಿಂ ಆಗಿರುವುದರಿಂದ ದೇವರನ್ನು ಪೂಜಿಸುವ ವಿಧಾನ ಸರಿಯಾಗಿ ತಿಳಿದಿಲ್ಲ, ಏನಾದರೂ ತಪ್ಪು ಆಗಬಾರದು ಎಂಬ ಕಾರಣಕ್ಕೆ ದೂರ ಉಳಿದಿದ್ದೆ ಎಂದು ಅಲಿ ಹೇಳಿದ್ದಾರೆ. ಜಾಸ್ಮಿನ್ ಧರಿಸಿದ್ದು ಬುರ್ಖಾ ಅಲ್ಲ, ಅದು ಅಬಯಾ. ಅಬುದಾಬಿಯ ಶೇಖ್ ಜಾಯೆದ್ ಮಸೀದಿಗೆ ಹೋಗುವಾಗ ಅದನ್ನು ಧರಿಸುವುದು ಕಡ್ಡಾಯವಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.
ಅಲಿಯ ವಿಚಿತ್ರ ಷರತ್ತು!
ಅಲಿ ಮತ್ತು ಜಾಸ್ಮಿನ್ ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಈಗ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಅವರು ಹೊಸ ಮನೆಗೆ ಸ್ಥಳಾಂತರಗೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ ಅಲಿ, ಜಾಸ್ಮಿನ್‌ಗೆ ಲಿವ್-ಇನ್ ಸಂಬಂಧಕ್ಕೂ ಮುನ್ನ ಒಂದು ಷರತ್ತು ಹಾಕಿದ್ದರು.
ಅಲಿ ಪ್ರಕಾರ, ಇಬ್ಬರೂ ಒಂದೇ ಮನೆಯಲ್ಲಿ ವಾಸಿಸಿದರೂ, ಅವರಿಗೆ ಪ್ರತ್ಯೇಕ ಕೊಠಡಿಗಳು ಇರಬೇಕು. ಏಕೆಂದರೆ, ತಮ್ಮ ವೈಯಕ್ತಿಕ ಜಾಗವನ್ನು ಕಳೆದುಕೊಳ್ಳಲು ಅವರು ಇಷ್ಟಪಡುವುದಿಲ್ಲ ಎಂದಿದ್ದರು. ಈ ಷರತ್ತನ್ನು ಜಾಸ್ಮಿನ್ ಒಪ್ಪಿಕೊಂಡಿದ್ದು, ಅವರ ಯೂಟ್ಯೂಬ್ ವಿಡಿಯೋಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ನೋಡಬಹುದಾಗಿದೆ.
ಈ ಬಗ್ಗೆ 'ಫಿಲ್ಮಿಗ್ಯಾನ್' ಸಂದರ್ಶನದಲ್ಲಿ ಮಾತನಾಡಿದ ಅಲಿ, "ನಾನು ಮನೆಗೆ ಬಂದ ನಂತರ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜಾಸ್ಮಿನ್‌ಗೆ ನಾನು ಪ್ರತ್ಯೇಕ ಕೊಠಡಿಯ ಷರತ್ತು ಹಾಕಿದ್ದೆ. ಇದು ಒಳ್ಳೆಯದು" ಎಂದು ಹೇಳಿಕೊಂಡಿದ್ದಾರೆ. ಅಲಿ ಮತ್ತು ಜಾಸ್ಮಿನ್ ಮೊದಲು 'ಖತ್ರೋನ್ ಕೆ ಖಿಲಾಡಿ' ಕಾರ್ಯಕ್ರಮದಲ್ಲಿ ಭೇಟಿಯಾಗಿ ಸ್ನೇಹಿತರಾದರು. ನಂತರ 'ಬಿಗ್ ಬಾಸ್ 14' ರಿಯಾಲಿಟಿ ಶೋನಲ್ಲಿ ಅವರ ಸ್ನೇಹ ಪ್ರೀತಿಯಾಗಿ ಬದಲಾಯಿತು. ಅಲ್ಲಿಂದ ಈ ಜೋಡಿ ಜೊತೆಯಾಗಿದೆ.
