ಬಿಗ್‌ಬಾಸ್ 19ರ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಭಾರೀ ಅನಾಹುತ ತಪ್ಪಿದೆ. ಸ್ಪರ್ಧಿಗಳ ನಿರ್ಲಕ್ಷ್ಯದಿಂದ ರಾತ್ರಿಯಿಡೀ ಗ್ಯಾಸ್ ಸೋರಿಕೆಯಾಗಿದ್ದು, ಕ್ಯಾಪ್ಟನ್ ಬಸೀರ್ ಅಲಿ ಕೋಪಗೊಂಡಿದ್ದಾರೆ. ಹಿಂದಿನ ಸೀಸನ್‌ಗಳಲ್ಲೂ ಇದೇ ರೀತಿಯ ಅಪಾಯಕಾರಿ ಘಟನೆಗಳು ನಡೆದಿವೆ.
ಪ್ರಖ್ಯಾತ ರಿಯಾಲಿಟಿ ಶೋ ಬಿಗ್‌ಬಾಸ್‌ನ ಹಿಂದಿಯ 19ನೇ ಆವೃತ್ತಿ ಈಗಾಗಲೇ ಪ್ರಸಾರ ಆರಂಭವಾಗಿದೆ. ಪ್ರತಿ ದಿನ ಒಂದಲ್ಲಾ ಒಂದು ವಿಚಾರದಿಂದ ಸುದ್ದಿಯಲ್ಲಿರುವ ಬಿಗ್‌ಬಾಸ್ ಮನೆಯಲ್ಲಿ ದೊಡ್ಡ ದುರಂತವೊಂದು ತಪ್ಪಿಹೋಗಿದೆ. ಬಿಗ್‌ಬಾಸ್ ಸೆಟ್‌ನಲ್ಲಿ ಗ್ಯಾಸ್ ಸೋರಿಕೆಯಾಗಿದ್ದು, ಅದೃಷ್ಟವಶಾತ್ ಎಲ್ಲಾ ಸ್ಪರ್ಧಿಗಳು ಅಪಾಯದಿಂದ ಪಾರಾಗಿದ್ದಾರೆ. ಬಿಗ್‌ಬಾಸ್ ಸೆಟ್‌ನಲ್ಲಿ ಗ್ಯಾಸ್ ಲೀಕ್‌ನಿಂದ ಭಾರೀ ಅಪಘಾತ ಆಗುವ ಎಲ್ಲಾ ಲಕ್ಷಣಗಳಿದ್ದವು. ರಾತ್ರಿಯಿಡೀ ಗ್ಯಾಸ್ ಸೋರಿಕೆಯಾದರೂ ಯಾವುದೇ ಅಪಾಯ ಸಂಭವಿಸಿಲ್ಲ ಅನ್ನೋದೇ ಸಮಾಧಾನದ ವಿಚಾರವಾಗಿದೆ.
ಬಿಗ್ ಬಾಸ್ ನ್ಯೂಸ್ ಇನ್ಸ್‌ಟಾಗ್ರಾಮ್ ಪೇಜ್ ಪ್ರಕಾರ, ಭಾನುವಾರ ನಡೆದ ವೀಕೆಂಡ್ ಕಾ ವಾರ್ ಸಂಚಿಕೆಯ ನಂತರ, ಕೆಲವು ಸ್ಪರ್ಧಿಗಳು ಬಿಗ್ ಬಾಸ್ ಮನೆಯ ಅಡುಗೆಮನೆಯಲ್ಲಿ ಗ್ಯಾಸ್ ಸ್ಟೌವ್ ಅನ್ನು ಆನ್ ಆಗಿ ಇಟ್ಟಿದ್ದರು. ಸ್ಪರ್ಧಿಯ ನಿರ್ಲಕ್ಷ್ಯದಿಂದಾಗಿ, ರಾತ್ರಿಯಿಡೀ ಗ್ಯಾಸ್ ಸೋರಿಕೆಯಾಗುತ್ತಲೇ ಇತ್ತು, ಇದರಿಂದಾಗಿ ಮನೆಯಾದ್ಯಂತ ಗ್ಯಾಸ್ ಹರಡಿತು.
ಬಿಗ್‌ಬಾಸ್ ಮನೆಯ ಒಳಗಿನವರ ಪ್ರಕಾರ, ಗ್ಯಾಸ್ ಲೀಗ್ ಆಗುತ್ತಿರುವ ಬಗ್ಗೆ ತಿಳಿದಾಗ ಸ್ಪರ್ಧಿ ಬಸೀರ್ ಅಲಿ ಕೋಪಗೊಂಡು ಎಲ್ಲಾ ಸ್ಪರ್ಧಿಗಳು ಭಾರೀ ನಿಂದಿಸಿದ್ದಾರೆ.ಬಿಗ್‌ಬಾಸ್ 19ಯಲ್ಲಿ ಮನೆಗೆ ಪ್ರಸ್ತುತ ಬಸೀರ್ ಅಲಿ ಕ್ಯಾಪ್ಟನ್. ಸ್ಪರ್ಧಿಯೊಬ್ಬರ ನಿರ್ಲಕ್ಷ್ಯದ ಬಗ್ಗೆ ಅವರು ಕ್ಲಾಸ್ ತೆಗೆದುಕೊಂಡಿದ್ದು,ಯಾವುದೇ ಹಾನಿ ಸಂಭವಿಸಿಲ್ಲ, ಮನೆಯ ಎಲ್ಲಾ ಸದಸ್ಯರು ಸುರಕ್ಷಿತವಾಗಿದ್ದಾರೆ.
ಹಿಂದೆಯೂ ಆಗಿತ್ತು ಈ ರೀತಿಯ ಘಟನೆ
ಈ ಸೀಸನ್‌ಗೂ ಮುಂಚೆಯೇ, ಬಿಗ್ ಬಾಸ್ 15 ಸೆಟ್‌ನಲ್ಲಿ ಸ್ಪರ್ಧಿಗಳು ಅಡುಗೆ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿತ್ತು. ನಂತರ, ತಂಡವು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತು. ಹೆಚ್ಚುವರಿಯಾಗಿ, ಸೀಸನ್ ಮುಗಿದ ನಂತರ, ಸೆಟ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು, ಅದನ್ನು ನಂದಿಸಲು 4 ಅಗ್ನಿಶಾಮಕ ವಾಹನಗಳನ್ನು ಕರೆಯಲಾಗಿತ್ತು.
ಈ ವೀಕೆಂಡ್ ಕಾ ವಾರ್ ಕಾರ್ಯಕ್ರಮದಲ್ಲಿ, ಸಲ್ಮಾನ್ ಖಾನ್ ಅನೇಕ ಸ್ಪರ್ಧಿಗಳಿಗೆ ಅವರ ವರ್ತನೆಯ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದರು. ಇತ್ತೀಚೆಗೆ, ಫರ್ಜಾನಾ ಆಹಾರವನ್ನು ಅಗೌರವಿಸಿದ್ದರು, ನಂತರ ಸಲ್ಮಾನ್ ಖಾನ್ ಪಂಜಾಬ್ ಪ್ರವಾಹವನ್ನು ಉಲ್ಲೇಖಿಸಿ, ಆಹಾರಕ್ಕೆ ಬೆಲೆ ನೀಡುವಂತೆ ಸಲಹೆ ನೀಡಿದ್ದರು. ವೀಕೆಂಡ್ ಕಾ ವಾರ್ ಕಾರ್ಯಕ್ರಮದಲ್ಲಿ ಈ ಪ್ರಮುಖ ನಿರ್ಲಕ್ಷ್ಯಕ್ಕೆ ಸಲ್ಮಾನ್ ಖಾನ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ನಿರ್ಲಕ್ಷ್ಯಕ್ಕೆ ಕಾರಣರಾದ ವ್ಯಕ್ತಿಗೆ ಬಿಗ್ ಬಾಸ್ ಶಿಕ್ಷೆ ಕೂಡ ವಿಧಿಸಬಹುದು ಎನ್ನಲಾಗುತ್ತಿದೆ.
ಈ ವಾರ ಯಾರೂ ಹೊರಗೆ ಹೋಗುತ್ತಿಲ್ಲ
ಬಿಗ್ ಬಾಸ್ 19 ಪ್ರಾರಂಭವಾಗಿ ಎರಡು ವಾರಗಳು ಕಳೆದಿವೆ ಮತ್ತು ಕಳೆದ ವಾರದಂತೆ, ಈ ವಾರ ಯಾವುದೇ ಸದಸ್ಯರನ್ನು ಮನೆಯಿಂದ ಹೊರಹಾಕಲಾಗಿಲ್ಲ. ಈ ವಾರ ಕುನಿಕಾ ಸದಾನಂದ ಇತರ ನಾಮಿನೇಟ್ ಸ್ಪರ್ಧಿಗಳೀಗೆ ಹೋಲಿಸಿದರೆ ಕಡಿಮೆ ಮತಗಳನ್ನು ಪಡೆದಿದ್ದಾರೆ ಎಂದು ಸಲ್ಮಾನ್ ಬಹಿರಂಗಪಡಿಸಿದ್ದಾರೆ, ಆದರೆ ಅವರು ವಿಶೇಷ ಶಕ್ತಿಯನ್ನು ಬಳಸಿಕೊಂಡು ಹೊರಹಾಕುವಿಕೆಯಿಂದ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾರೆ.
