- Home
- Entertainment
- TV Talk
- 'ಐಶ್ವರ್ಯಾ ರೈಗಿಂತ ನಾನೇ ಬ್ಯೂಟಿಫುಲ್..' ಬಿಗ್‌ಬಾಸ್ ಸ್ಪರ್ಧಿಯ ಮಾತಿಗೆ ತಲೆ ಚಚ್ಚಿಕೊಂಡ್ರು ವೀಕ್ಷಕರು!
'ಐಶ್ವರ್ಯಾ ರೈಗಿಂತ ನಾನೇ ಬ್ಯೂಟಿಫುಲ್..' ಬಿಗ್‌ಬಾಸ್ ಸ್ಪರ್ಧಿಯ ಮಾತಿಗೆ ತಲೆ ಚಚ್ಚಿಕೊಂಡ್ರು ವೀಕ್ಷಕರು!
ಬಿಗ್‌ಬಾಸ್ ಸ್ಪರ್ಧಿ ತಾನ್ಯಾ ಮಿತ್ತಲ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ಅವರು ಐಶ್ವರ್ಯಾ ರೈಗಿಂತ ತಾವು ಸುಂದರಿ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಅವರ 2022ರ ಜೋಶ್ ಟಾಕ್ಸ್ ಸೆಷನ್‌ನಿಂದ ಬಂದಿದ್ದು, ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿವಾದಾತ್ಮಕ ರಿಯಾಲಿಟಿ ಶೋ ಬಿಗ್‌ಬಾಸ್‌ನ 19ನೇ ಆವೃತ್ತಿ ಆರಂಭವಾಗಿ ಒಂದು ವಾರ ಕಳೆದಿದೆ. ತಮ್ಮ ಎಂಟರ್‌ಟೇನಿಂಗ್ ಹಾಗೂ ಎಕ್ಸೈಟಿಂಗ್ ಎಪಿಸೋಡ್‌ಗಳ ಮೂಲಕ ಜನರನ್ನು ರಂಜಿಸುತ್ತಿದೆ.
ಗಲಾಟೆ, ಡ್ರಾಮಾ ಜೊತೆಗೆ ಒಂದಷ್ಟು ಫ್ರೆಂಡ್‌ಶಿಪ್ ಸೇರಿದಂತೆ ಮನುಷ್ಯ ಜೀವನದ ಎಲ್ಲಾ ಸಂಗತಿಗಳು ಈ ರಿಯಾಲಿಟಿ ಶೋನಲ್ಲಿದೆ. ಈ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ತಾನ್ಯಾ ಮಿತ್ತಲ್ ಕುರಿತಾಗಿ ಭಾರೀ ಕುತೂಹಲ ಉಂಟಾಗಿದೆ.
ಅದಕ್ಕೆ ಕಾರಣ ಆಕೆ ತನ್ನ ಲೈಫ್‌ಸ್ಟೈಲ್ ಬಗ್ಗೆ ಆಡುವ ಬಡಾಯಿ ಮಾತುಗಳು. ಪ್ರತಿ ವಾರದಲ್ಲೂ ತನ್ನದೊಂದು ವೈರಲ್ ಸಂಗತಿಗಳ ಮೂಲಕ ತಾನ್ಯಾ ಮಿತ್ತಲ್ ವೈರಲ್ ಆಗುತ್ತಲೇ ಇದ್ದಾರೆ. ಆಕೆ ಇಲ್ಲದ ವೈರಲ್ ಕ್ಲಿಪ್‌ಗಳು ಬಿಗ್‌ಬಾಸ್‌ನಿಂದ ಬರೋದೇ ಇಲ್ಲ.
ಇತ್ತೀಚೆಗೆ ತನ್ನ ಲೈಫ್‌ಸ್ಟೈಲ್ ವಿಚಾರವಾಗಿ ಸಿಕ್ಕಾಪಟ್ಟೆ ಪುಂಗಿ ಊದಿದ್ದ ತಾನ್ಯಾ ಮಿತ್ತಲ್, ಈಗ ತಾನು ಐಶ್ವರ್ಯಾ ರೈಗಿಂತ ಸುಂದರವಾಗಿದ್ದೇನೆ ಎಂದು ಹೇಳಿರುವ ಮಾತು ವೈರಲ್ ಆಗಿದೆ.
ತನ್ನ ವಿವಾದಾತ್ಮಕ ಮಾತುಗಳಿಂದಲೇ ಲೈಮ್‌ಲೈಟ್‌ನಲ್ಲಿರುವ ತಾನ್ಯಾ ಮಿತ್ತಲ್ ಅವರ ಹಳೆಯ ಕ್ಲಿಪ್ ಈಗ ವೈರಲ್ ಆಗಿದೆ. ಈಗ ಆಕೆ ಬಿಗ್‌ಬಾಸ್‌ಗೆ ಹೋಗಿರುವ ಹೊತ್ತಿನಲ್ಲಿ ಮತ್ತೆ ವೈರಲ್ ಆಗಿದೆ. ಇದರಲ್ಲಿ ಆಕೆ, ನಾನು ಐಶ್ವರ್ಯಾ ರೈಗಿಂತ ಹೆಚ್ಚು ಸುಂದರವಾಗಿದ್ದೇನೆ ಎಂದು ಹೇಳಿದ್ದಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದ್ದು, ಅಭಿಮಾನಿಗಳು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದಲ್ಲದೆ, ಬಿಗ್ ಬಾಸ್ 19 ರ ಇತ್ತೀಚಿನ ಸಂಚಿಕೆಯು ಕೆಲವು ಫನ್ ಕ್ಲಿಪ್‌ನೊಂದಿಗೆ ಅಭಿಮಾನಿಗಳನ್ನು ರಂಜಿಸಿತು.
ಈ ವೀಡಿಯೊ ಕ್ಲಿಪ್ ಮೂಲತಃ ಅವರ 2022 ರ ಜೋಶ್ ಟಾಕ್ಸ್ ಸೆಷನ್‌ನಿಂದ ಬಂದಿದೆ, ಅಲ್ಲಿ ಅವರು ತಮ್ಮ ಕನಸುಗಳು, ಅವರ ಅಸಾಂಪ್ರದಾಯಿಕ ಪ್ರಯಾಣ ಮತ್ತು ಇನ್ನೂ ಹೆಚ್ಚಿನದನ್ನು ಕುರಿತು ಮಾತನಾಡಿದರು. ನೆಟಿಜನ್‌ಗಳು ಈಗ ವೀಡಿಯೊಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ಅದಕ್ಕೆ ತಮ್ಮ ಮಿಶ್ರ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಆಕೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 'ನನಗೆ ತುಂಬಾ ವಿಲಕ್ಷಣವಾದ ಕನಸುಗಳು ಬೀಳುತ್ತಿದ್ದಳು. ನಾನು ಐಶ್ವರ್ಯಾ ರೈಗಿಂತ ಸುಂದರವಾಗಿದ್ದೇನೆ ಎನ್ನುವ ಕಾರಣಕ್ಕೆ ಸುಶ್ಮಿತಾ ಸೇನ್ ನನಗೆ ಕಿರೀಟ ತೊಡಿಸಿದ್ದ ರೀತಿಯ ಕನಸುಗಳು ಬೀಳುತ್ತಿದ್ದವು. ಆದರೆ, ಇದು ಹೇಗೆ ಆಗಲು ಸಾಧ್ಯ' ಎಂದು ಹೇಳಿದ್ದಾರೆ.
ಮನೆಯಿಂದ ಸಂಜೆ 6 ಗಂಟೆಯ ನಂತರ ಹೊರಹೋಗೋಕೆ ಸಾಧ್ಯವಿಲ್ಲ. ಫೋನ್‌ನಲ್ಲಿ ಹುಡುಗರ ಜೊತೆ ಮಾತನಾಡುವಂತಿಲ್ಲ. ಅಡುಗೆಯ ಹೊರತಾಗಿ ಮನೆಯಲ್ಲಿ ಬೇರೆ ಯಾವುದನ್ನೂ ಕೂಡ ಕಲಿಯಬಾರದು. ಇದೇ ಕಾರಣಕ್ಕಾಗಿ ನಾನು ಸುಂದರವಾಗಿರಬೇಕು ಎನ್ನುವ ಇಚ್ಛೆಯೇ ನನ್ನ ಆದ್ಯತೆಯಾಯಿತು ಎಂದು ಹೇಳಿದ್ದಾರೆ.
ಇದೇ ವೇಳೆ ತಾನು ಕಲಿತದ್ದು 12ನೇ ಕ್ಲಾಸ್ ಮಾತ್ರ ಎಂದು ತಾನ್ಯಾ ಮಿತ್ತಲ್ ಹೇಳಿರುವುದೂ ವೈರಲ್ ಆಗಿದೆ. 'ಇಂದಿಗೂ ಕೂಡ ಹಲವರು ನನ್ನ ಶಿಕ್ಷಣದ ಬಗ್ಗೆ ಕೇಳುತ್ತಾರೆ. ಆದರೆ, ನಾನು ವಿಶ್ವಾಸದಿಂದ ಹೇಳಬಲ್ಲೆ ನಾನು 12ನೇ ಕ್ಲಾಸ್ ಪಾಸ್ ಆಗಿದ್ದೇನಷ್ಟೇ. ನಾನು ಪದವಿಯನ್ನೂ ಪೂರೈಸಿದವಳಲ್ಲ' ಎಂದು ಹೇಳಿದ್ದಾರೆ.