Asianet Suvarna News Asianet Suvarna News

ಏಷ್ಯಾನೆಟ್‌ ಸುವರ್ಣಗೆ ರಂಜಿತ್ ಎಕ್ಸ್‌ಕ್ಲೂಸಿವ್ ಮಾತು: ನನಗಾದ ನಷ್ಟ ಯಾರು ಕೊಡ್ತಾರೆ?

ಹೌದು, ಅವರು ‌ಕ್ಷಮೆ ಕೇಳಿದ್ದಾರೆ. ಅವರನ್ನು ಕ್ಷಮಿಸುತ್ತೇವೆ. ಆದ್ರೆ ನನಗಾದ ನಷ್ಟು ಯಾರು ಕೊಡ್ತಾರೆ? ಇನ್ಮುಂದೆ ಆದ್ರೂ ಲಾಯರ್ ಜಗದೀಶ್ ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು....

Bigg Boss kannada 11 contestant Ranjith Exclusive talks for Asianet Suvarna Channel srb
Author
First Published Oct 20, 2024, 3:41 PM IST | Last Updated Oct 20, 2024, 3:44 PM IST

ಬಿಗ್ ಬಾಸ್‌ ಮನೆಯಿಂದ ಹೊರಗೆ ಬಂದಿರುವ ಸ್ಪರ್ಧಿ ರಂಜಿತ್ ಅವರು 'ಏಷ್ಯಾನೆಟ್ ಸುವರ್ಣ ನ್ಯೂಸ್'ಗೆ ಎಕ್ಸ್ ಕ್ಲೂಸಿವ್ ಆಗಿ ಹೇಳಿಕೆ ನೀಡಿದ್ದಾರೆ. 'ನನಗೆ ಇಷ್ಟು ಬೇಗ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಕ್ಕೇ ಬೇಸರ ಇದೆ. ಲಾಯರ್ ಜಗದೀಶ್ ಹೆಣ್ಣು ಮಕ್ಕಳು ಹಾಗೂ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆಯೇ ಕೀಳಾಗಿ ಮಾತನಾಡಿದ್ದಾರೆ. ಆದ್ರೆ ಜನ ಹೊರಗಡೆ ಅವರನ್ನ ಈ ರೀತಿ ಪೊಟ್ರೆ ಮಾಡಿರೋದು ಸರಿಯಲ್ಲ. 

Bigg Boss kannada 11 contestant Ranjith Exclusive talks for Asianet Suvarna Channel srb

ದಿನದ 24 ಗಂಟೆ ಮನೆಯಲ್ಲಿ ಜಗದೀಶ್ ಏನೆಲ್ಲಾ ಮಾತನಾಡಿದ್ದಾರೆ ಅದನ್ನ ತೋರಿಸಿಲ್ಲ. ಕೇವಲ ಒಂದೂವರೆ ಗಂಟೆ ಕಾರ್ಯಕ್ರಮ ಎಷ್ಟು ತೋರಿಸಲು ಸಾಧ್ಯ ಅಷ್ಟು ತೋರಿಸಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆನೇ ಜಗದೀಶ್ ‌ಕೀಳಾಗಿ ಮಾತನಾಡಿದ್ದಾರೆ. ಎಲ್ಲೋ ಒಂದು ಕಡೆ‌ ನಾನು ತಾಳ್ಮೆ ಕಳೆದುಕೊಳ್ಳಬಾರದಿತ್ತು. ಮತ್ತೆ‌ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಮತ್ತೆ ಕರೆದ್ರೆ ಹೋಗ್ತೇನೆ..' ಎಂದಿದ್ದಾರೆ. 

ಸುದೀಪ್ ಹಳೆಯ ಪೋಸ್ಟ್ ಈಗ ಭಾರೀ ವೈರಲ್, ಅಮ್ಮನ ಬಗ್ಗೆ ಏನ್ ಹೇಳಿದ್ರು ಕಿಚ್ಚ?!

ಜಗದೀಶ್ ಕ್ಷಮೆ ಕೇಳಿರುವ ವಿಚಾರಕ್ಕೆ ಕೂಡ ರಂಜಿತ್ ಮಾತನಾಡಿದ್ದಾರೆ. ಹೌದು, ಅವರು ‌ಕ್ಷಮೆ ಕೇಳಿದ್ದಾರೆ. ಅವರನ್ನು ಕ್ಷಮಿಸುತ್ತೇವೆ. ಆದ್ರೆ ನನಗಾದ ನಷ್ಟು ಯಾರು ಕೊಡ್ತಾರೆ? ಇನ್ಮುಂದೆ ಆದ್ರೂ ಲಾಯರ್ ಜಗದೀಶ್ ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು.. 'ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಬಿಗ್ ಬಾಸ್ ಕನ್ನಡ ಸೀಸನ್ 11'ರ ಸ್ಪರ್ಧಿ ರಂಜಿತ್ ಹೇಳಿದ್ದಾರೆ. 

ಇನ್ನು, ಲಾಯರ್ ಜಗದೀಶ್ ಅವರು ಕೂಡ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜತೆ ಎಕ್ಸ್‌ಕ್ಲೂಸಿವ್‌ ಆಗಿ ಮಾತನಾಡಿದ್ದಾರೆ. 'ಬಿಗ್ ಬಾಸ್ ಒಂದು ಕನ್ನಡಿ ಇದ್ದ ಹಾಗೆ. ನಮ್ಮನ್ನ ನೋಡಿಕೊಳ್ಳೋಕೆ ಸಹಾಯವಾಗುತ್ತದೆ. ನಾನು ಹೊರಗಡೆ ಬಂದ ಮೇಲೆ ಎಲ್ಲಾ ವಿಡಿಯೋ ನೋಡಿದೆ. ಬಿಗ್ ಬಾಸ್ ಒಂದು ಉತ್ತಮ ಜರ್ನಿಯಾಗಿದೆ. ಬಿಗ್ ಬಾಸ್ ಮನೆಯಿಂದ ನಾನು ತುಂಬಾ ಕಲಿತಿದ್ದೇನೆ. ಬಿಗ್ ಬಾಸ್ ಮನೆಯೊಳಗೆ ಹೋಗೋದಕ್ಕೆ ಎಲ್ಲರಿಗೂ ಚಾನ್ಸ್ ಸಿಗಲ್ಲ. ನನಗೆ ಸಿಕ್ಕಿರೋದು ಖುಷಿ ತಂದಿದೆ.

ಮುಗಿಲು ಮುಟ್ಟಿದ ಕಿಚ್ಚನ ಆಕ್ರಂದನ, ಅಮ್ಮನ ಪಾದ ಹಿಡಿದು ಕಣ್ಣೀರಾದ ನಟ ಸುದೀಪ್

ಬಿಗ್ ಬಾಸ್ ಮನೆಯಲ್ಲಿ ಇರುವ ಎಲ್ಲಾ ಸ್ಪರ್ಧಿಗಳು ಸೂಪರ್. ಅವರೆಲ್ಲಾ ಫಿಲಂ ಫೀಲ್ಡ್ ನಿಂದ ಬಂದಿರೋರು. ನಾನು 15 ವರ್ಷ ವಕೀಲ ವೃತ್ತಿಯಲ್ಲಿ ಮಾಡಿದ್ದೇನೆ ಎಂದು ಹೇಳಿದರು. ಬಿಗ್ ಬಾಸ್ ಮನೆಯಲ್ಲಿ ನಟರಾದ ರಂಜಿತ್ ಹಾಗೂ ತ್ರಿವಿಕ್ರಂ ಮಾಡಿದ್ದು ಸರಿ ಇಲ್ಲ. ಬಿಗ್ ಬಾಸ್ ನಿಯಮಗಳಲ್ಲಿಯೇ ದೈಹಿಕವಾಗಿ ಯಾರೊಬ್ಬರೂ ಯಾರಿಗೂ ಹಲ್ಲೆ ಮಾಡಬಾರದು (ಮ್ಯಾನ್ ಹ್ಯಾಡಿಲಿಂಗ್) ಅಂತ ಇದೆ. ಆದರೆ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅವರಿಗೆ ಎಲ್ಲಾ ಒಳ್ಳೆದಾಗಲಿ. 

ನನಗೆ ಯಾರ ಬಗ್ಗೆಯು ಕೋಪ ಇಲ್ಲ. ಮುಖ್ಯವಾಗಿ ಹಂಸ, ಭವ್ಯ ಗೌಡ, ಮಾನಸ, ಚೈತ್ರಾ ಕುಂದಾಪುರ ಎಲ್ಲಾರ ಬಗ್ಗೆ ದ್ವೇಷ ಇಲ್ಲ‌. ಬಿಗ್ ಬಾಸ್ ನನ್ನನ್ನು ನಾನು ತಿದ್ದಿಕೊಳ್ಳೋದಕ್ಕೆ ಒಳ್ಳೇ ವೇದಿಕೆ ಆಗಿತ್ತು. ಮೊದಮೊದಲು ನನಗೆ ಬಿಗ್ ಬಾಸ್ ಧ್ವನಿ ಕೇಳಿದರೇ ಭಯ ಆಗುತ್ತಿತ್ತು:  ಬಿಗ್ ಬಾಸ್ ಬಗ್ಗೆ ಮೊದ ಮೊದಲು ನೆಗೆಲೆಟ್ ಮಾಡಿದ್ದೆ. ಮನೆಯಲ್ಲಿದ್ದ 3 ದಿನದ ಬಳಿಕ ನನಗೆ ಭಯ ಆರಂಭವಾಯಿತು. ಬಿಗ್ ಬಾಸ್ ವಾಯ್ಸ್ ಕೇಳಿದ್ರೆ ಭಯ ಆಯ್ತು. ಬಿಗ್ ಬಾಸ್ ಕರೆದು ತುಂಬಾ ಸಲಹೆ ಹಾಗೂ ಸೂಚನೆ ಕೊಟ್ಟರು. 

ಅಮ್ಮನ ಸಾವಿನ ಸೂಚನೆ ಸುದೀಪ್‌ಗೆ ಮೊದಲೇ ಸಿಕ್ಕಿತ್ತಾ? ಬದುಕಿಸಲು ಹರಕೆ ಹೊತ್ತಿದ್ರಾ?

ಇನ್ನು, ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದ ಕಿಚ್ಚ ಸುದೀಪ್ ಸಾರ್ ಅವರು ತುಂಬಾ ಗ್ರೇಟ್. ಮತ್ತೆ ವಾಪಸ್ ಬಿಗ್ ಬಾಸ್ ಹೋಗುವ ಬಗ್ಗೆ ಯೋಚನೆ ಮಾಡಿಲ್ಲ. ಕರ್ನಾಟಕ ಜನತೆಗೆ ನನ್ನ ಧನ್ಯವಾದಗಳು. ಬಿಗ್ ಬಾಸ್ ನಲ್ಲಿ ಅವಕಾಶಕೊಟ್ಟ ಎಲ್ಲಾರಿಗೂ ಧನ್ಯವಾದ.. ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios