ಕಿರುತೆರೆ ವೀಕ್ಷಕರ ನೆಚ್ಚಿನ ನಿರೂಪಕ, ಬೆಳ್ಳಿ ತೆರೆಯ ಲವರ್ ಬಾಯ್, ಉದ್ಯಮಿ ಅಕುಲ್ ಬಾಲಾಜಿ ತುಂಬಾನೇ ಡಿಫರೆಂಟ್‌ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲವಾದರೂ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುತ್ತಾರೆ. ಈಗ ಅಕುಲ್ ಪತ್ನಿ ಜೋ ಶೇರ್ ಮಾಡಿರುವ ಫೋಟೋ ನೋಡಿ...

ಮಾತಿನ ಮಲ್ಲ ಅಕುಲ್‌ ಬಾಲಾಜಿ ಫಿಟ್ನೆಸ್‌ ಫ್ರೀಕ್‌ ಪತ್ನಿ ನೋಡಿ! 

'ನನ್ನ ಹೃದಯಕ್ಕೆ ಹತ್ತಿರವಾಗಿರುವ ಕಲೆ. ಹಳೆ ಜಾಕೆಟಿಗೆ ಹೊಸ ಲುಕ್ ನೀಡಲಾಗಿದೆ.  ಮಾಡುವುದನ್ನು ನೋಡಲು ಎಷ್ಟು ಸಂತೋಷ ನೀಡುತ್ತದೆ ಗೊತ್ತಾ?' ಎಂದು ಜೋ ಬರೆದುಕೊಂಡಿದ್ದಾರೆ.  ಬ್ಲಾಕ್ ಕಲರ್‌ ಡೆನಿಮ್ ಜಾಕೆಟ್‌ಗೆ ಕಲರ್ ಕಲರ್ ಸ್ಟೋನ್‌ಗಳನ್ನು ಅಂಟಿಸಲಾಗಿದೆ. ಈಗಿನ ಟ್ರೆಂಡ್‌ಗೆ ಅಕುಲ್ ಮಾಡಿರುವ ಡಿಸೈನ್ ಸೂಕ್ತ ಎಂದೆನಿಸುತ್ತಿದೆ. 

ಸಾಮಾನ್ಯವಾಗಿ ಅಕುಲ್ ಉಡುಪು ಕೂಡ ತುಂಬಾನೇ ಫಂಕಿಯಾಗಿರುತ್ತದೆ. ಅನೇಕ ಖಾಸಗಿ ಕಾರ್ಯಕ್ರಮಗಳಲ್ಲಿ ನೀವು ನೋಡಿರಬಹುದು ಬಣ್ಣಗಳ ಆಯ್ಕೆನೂ ಏನೋ ವಿಚಿತ್ರವಾಗಿರುತ್ತದೆ. ಇಷ್ಟೆಲ್ಲಾ ಆ್ಯಕ್ಟಿವಿಟಿ ಮಾಡಿಕೊಂಡು ಬ್ಯುಸಿಯಾಗಿರುವ ಅಕುಲ್ ಬಾಲಾಜಿ ಸಿನಿಮಾ ಅವಾರ್ಡ್‌ ಕಾರ್ಯಕ್ರಮಗಳಲ್ಲಿ ಬಿಟ್ಟರೆ ಬೇರೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ, ಯಾಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Jo Akul (@joakul)