'ನಮ್ಮ ಲಚ್ಚಿ' ಧಾರಾವಾಹಿಯಿಂದ ಸಾರಾ ಔಟ್; ದೀಪಿಕಾ ಪಾತ್ರಕ್ಕೆ ಎಂಟ್ರಿ ಕೊಟ್ಟ ನಟಿ ಇವರೆ
'ನಮ್ಮ ಲಚ್ಚಿ' ಧಾರಾವಾಹಿಯಿಂದ ನಟಿ ಸಾರಾ ಅಣ್ಣಯ್ಯ ಹೊರ ನಡೆದಿದ್ದಾರೆ. ದೀಪಿಕಾ ಪಾತ್ರಕ್ಕೆ ಮತ್ತೋರ್ವ ಖ್ಯಾತ ಎಂಟ್ರಿ ಕೊಟ್ಟಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ನಮ್ಮ ಲಚ್ಚಿ ಕೂಡ ಒಂದು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಹೃದಯ ಗೆದ್ದಿದೆ. ಇದೀಗ ಈ ಧಾರಾವಾಹಿಯಿಂದ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ನಮ್ಮ ಲಚ್ಚಿಯಲ್ಲಿ ದೀಪಿಕಾ ಪಾತ್ರ ಮಾಡುತ್ತಿದ್ದ ಸಾರಾ ಅಣ್ಣಯ್ಯ ಧಾರಾವಾಹಿಯಿಂದ ಹೊರನಡೆದಿದ್ದಾರೆ. ಈ ಧಾರಾವಾಹಿಯಲ್ಲಿ ಸಾರಾ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಧಾರಾವಾಹಿ ನಾಯಕ ಸಂಗಮ್ ಪತ್ನಿ ದೀಪಿಕಾ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.
ಹೈ ಪ್ರೋಫೆಲ್ ಮನೆತನದ ತಾಯಿ ಪಾತ್ರ ಇದಾಗಿತ್ತು. ದೀಪಿಕಾ ಆಗಿ ಸಾರಾ ಅಭಿಮಾನಿಗಳ ಹೃದಯ ಗೆದ್ದಿದ್ದರು. ಆ ಪಾತ್ರಕ್ಕೆ ಅವರಿಗೆ ಹೇಳಿ ಮಾಡಿಸಿದ ಹಾಗಿತ್ತು. ಆದರೀಗ ಅಭಿಮಾನಿಗಳಿಗೆ ಸಾರಾ ಶಾಕ್ ನೀಡಿದ್ದಾರೆ. ಧಾರಾವಾಹಿಯಿಂದ ಸಾರಾ ಪ್ರಾರಂಭದಲ್ಲೇ ಹೊರನಡೆದಿದ್ದಾರೆ. ಈ ಮೊದಲು ಸಾರಾ ವಿಲನ್ ಶೇಡ್ ಪಾತ್ರಗಳಲ್ಲಿ ಮಿಂಚಿದ್ದರು. ಈ ಧಾರಾವಾಹಿಯಲ್ಲೂ ಸಾರಾ ನೆಗೆಟಿವ್ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ನಮ್ಮ ಲಚ್ಚಿಯಿಂದನೂ ಹೊರ ಹೋಗಿದ್ದಾರೆ.
ಕ್ರಶ್ ಆದ ಹುಡುಗನ ಜೊತೆನೇ ಹಸೆಮಣೆ ಏರಲು ರೆಡಿಯಾದ ಸಹನಾ ಶೆಟ್ಟಿ
ಸಾರಾ ಜಾಗಕ್ಕೆ ಐಶ್ವರ್ಯಾ ಎಂಟ್ರಿ
ಸಾರಾ ಅಣ್ಣಯ್ಯಾ ಹೊರ ನಡೆದ ಜಾಗಕ್ಕೆ ಮತ್ತೋರ್ವ ಖ್ಯಾತ ನಟಿ ಎಂಟ್ರಿ ಕೊಟ್ಟಿದ್ದಾರೆ. ನಟಿ ಐಶ್ವರ್ಯಾ ಸಿಂಧೋಗಿ ನಮ್ಮ ಲಚ್ಚಿ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ದೀಪಿಕಾ ಪಾತ್ರದಲ್ಲಿ ಐಶ್ವರ್ಯಾ ಮಿಂಚಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ. ಈ ಮೊದಲು ಐಶ್ವರ್ಯಾ ನಾಗಿನಿ 2 ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಮತ್ತೆ ಕಿರುತೆರೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದು ದೀಪಿಕಾ ಆಗಿ ಹೇಗೆ ಇಂಪ್ರೆಸ್ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.
ಜೀ ಕನ್ನಡದಲ್ಲಿ ಮತ್ತೊಂದು ಮಧ್ಯ ವಯಸ್ಸಿನ ಲವ್‌ಸ್ಟೋರಿ ಅಮೃತಧಾರೆ
ಧಾರಾವಾಹಿ ಬಗ್ಗೆ
ತಾಯಿಯನ್ನು ಕಳೆದುಕೊಂಡ ಪುಟ್ಟ ಬಾಲಕಿ ಲಚ್ಚಿ ಮನೆ ಬಿಟ್ಟು ಸಿಟಿ ಸೇರಿದ್ದಾಳೆ. ಲಚ್ಚಿ ಹಿಡುಗನ ವೇಷ ಧರಿಸಿ ಸಂಗಮ್ ಮನೆ ಸೇರಿದ್ದಾಳೆ. ತಂದೆಯ ಮನೆಯಲ್ಲಿದ್ದರೂ ಆಕೆಗೆ ತನ್ನ ತಂದೆ ಸಂಗಮ್ ಎನ್ನುವ ಸತ್ಯ ಗೊತ್ತಿಲ್ಲ. ಸಂಗಮ್ ಪತ್ನಿ ದೀಪಿಕಾ ತನ್ನ ಮಗಳಿಗಾಗಿ ಲಚ್ಚಿಯನ್ನು ಬಳಿಸಿಕೊಳ್ಳುತ್ತಿದ್ದಾಳೆ. ಲಚ್ಚಿ ಅದ್ಭುತ ಗಾಯಕಿ. ಲಚ್ಚಿ ಧ್ವನಿಯನ್ನು ರೆಕಾರ್ಡ್ ಮಾಡಿ ತನ್ನ ಮಗಳೇ ಹಾಡಿದ್ದು ಎಂದು ಬಿಂಬಿಸುತ್ತಿದ್ದಾಳೆ. ಲಚ್ಚಿ ಹಾಡುವ ವಿಚಾರ ಜಗತ್ತಿಗೆ ಗೊತ್ತಾಗುತ್ತಾ? ಸಂಗಮ್ ಮಗಳು ಎನ್ನುವ ಸತ್ಯ ಯಾವಾಗ ಬಹಿರಂಗವಾಗಲಿದೆ. ಈ ಎಲ್ಲಾ ಕುತೂಹಲಗಳೊಂದಿದೆ ಧಾರಾವಾಹಿ ಮುನ್ನುಗ್ಗುತ್ತಿದೆ.